ನಮ್ಮ ವಿದ್ಯಾರ್ಥಿಗಳನ್ನು ಮೆಚ್ಚಲೇಬೇಕು: ಇನ್ನೂ ಅಪಘಾತವಾಗುವುದಿಲ್ಲ, ಈ ಕೆಲಸ ಮಾಡಿದರೆ ಬೈಕ್ ಮುಂದೆ ಹೋಗಲ್ಲ!

ಭಾರತದಲ್ಲಿ ಹೊಸ ಆವಿಷ್ಕಾರಗಳಿಗೆ ಕೊರತೆಯಿಲ್ಲ. ನಮ್ಮಲ್ಲಿರುವ ಬುದ್ದಿವಂತ ಯುವ ಪ್ರತಿಭೆಗಳು ಸದಾ ಹೊಸದನ್ನು ಸಂಶೋಧನೆ ಮಾಡುತ್ತಿರುತ್ತಾರೆ. ಈ ಮೂಲಕ ವಿಶ್ವಕ್ಕೆ ಮಾದರಿಯಾಗಿಯೂ ನಿಲ್ಲುತ್ತಾರೆ. ಉತ್ತರ ಪ್ರದೇಶದ ವಿದ್ಯಾರ್ಥಿಗಳ ತಂಡವೊಂದು ನವೀನ ವೈಶಿಷ್ಟ್ಯ ಹೊಂದಿರುವ ಎಲೆಕ್ಟ್ರಿಕ್ ಬೈಕ್‌ವೊಂದನ್ನು ಅಭಿವೃದ್ಧಿಪಡಿಸಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಅಲಹಾಬಾದ್‌‌ನ ಮೋತಿಲಾಲ್ ನೆಹರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಎನ್‌ಎನ್‌ಐಟಿ - MNNIT) ಹಾಗೂ ಸೊಸೈಟಿ ಆಫ್ ಆಟೋಮೋಟಿವ್ ಇಂಜಿನಿಯರ್ಸ್ (ಎಸ್‌ಎಇ - SAE) ಕ್ಲಬ್‌ನ ಸಹಯೋಗದಲ್ಲಿ ಉದಯೋನ್ಮುಖ ವಿದ್ಯಾರ್ಥಿಗಳ ತಂಡ ವಿನೂತನ ಎಲೆಕ್ಟ್ರಿಕ್ ಬೈಕ್‌ನ್ನು ತಯಾರಿಸಿದೆ. ಇದು ಆಲ್ಕೋಹಾಲ್ ಡಿಟೆಕ್ಷನ್ ಸಿಸ್ಟಮ್ ಹೊಂದಿದ್ದು, ಸವಾರ ಮದ್ಯಪಾನ ಮಾಡಿ ಬಂದು ಬೈಕ್ ಚಾಲು ಮಾಡಿದರೆ, ಕೊಂಚವು ಮುಂದೆ ಹೋಗುವುದಿಲ್ಲ.

Indian Students Achievement Invented New E-Bike With Alcohol Detection System

ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಈ ಎಲೆಕ್ಟ್ರಿಕ್ ಬೈಕ್ (E - bike) ಗಂಟೆಗೆ 70 ಕಿಲೋಮೀಟರ್‌ ಗರಿಷ್ಠ ವೇಗ (ಟಾಪ್ ಸ್ವೀಡ್)ವನ್ನು ಹೊಂದಲಿದ್ದು, ಕೇವಲ 4 ಗಂಟೆ ಚಾರ್ಜ್ ಮಾಡಿದರೆ 60 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಆಲ್ಕೋಹಾಲ್ ಡಿಟೆಕ್ಷನ್ ಸಿಸ್ಟಮ್ ಹೊರತಾಗಿ ಇದು ಹತ್ತಾರು ವೈಶಿಷ್ಟ್ಯಗಳನ್ನು ಕೂಡ ಪಡೆದಿದೆ. ಆಂಟಿ ಥೆಫ್ಟ್ ಅಲಾರಾಂ, ಸ್ಮೋಕ್ ಸೇನಾರ್ಸ್ ಅನ್ನು ಒಳಗೊಂಡಿದೆ.

ಈ ಎಲೆಕ್ಟ್ರಿಕ್ ಬೈಕ್ ಅಪಘಾತದ ಸಂದರ್ಭದಲ್ಲಿಯೂ ತನ್ನ ಸವಾರರಿಗೆ ಸೂಕ್ತ ರಕ್ಷಣೆಯನ್ನು ಒದಗಿಸುತ್ತದೆ. ಒಂದೊಮ್ಮೆ ಚಾಲಕರಿಗೆ ಅಪಾಯವಾದಾಗ ಇದರಲ್ಲಿರುವ ಅತ್ಯಾಧುನಿಕ ವ್ಯವಸ್ಥೆ ಸಹಾಯಕ್ಕಾಗಿ ತುರ್ತು ಸೇವೆಯನ್ನು ಸಂಪರ್ಕಿಸುತ್ತದೆ. ಎಂಎನ್‌ಎನ್‌ಐಟಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರ ಮೇಲ್ವಿಚಾರಣೆಯಲ್ಲಿ ವಿದ್ಯಾರ್ಥಿಗಳ ತಂಡ ಇ-ಬೈಕ್‌ನ್ನು ಹೊರತಂದಿದೆ.

ಎಂಎನ್‌ಎನ್‌ಐಟಿಯ ಪ್ರಾಧ್ಯಾಪಕರು ವಿದ್ಯಾರ್ಥಿಗಳ ಸಂಶೋಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಎಲೆಕ್ಟ್ರಿಕ್ ಬೈಕ್‌ನಲ್ಲಿರುವ ಸೇನಾರ್ಸ್ ಸವಾರ ಮದ್ಯಪಾನ ಮಾಡಿರುವುದನ್ನು ಪತ್ತೆ ಹಚ್ಚುತ್ತದೆ. ಜೊತೆಗೆ ಕಡಿದಾಗಿರುವ ಎತ್ತರದ ರಸ್ತೆಯನ್ನು ಸುಲಭವಾಗಿ ಏರಲು ಸಾಧ್ಯವಾಗುವಂತೆ ಹಿಲ್ ಅಸಿಸ್ಟ್ ಎಂಬ ಅತ್ಯಾಧುನಿಕ ವೈಶಿಷ್ಟ್ಯವನ್ನು ಹೊಂದಿದೆ ಎಂದು ವಿವರಿಸಿದ್ದಾರೆ. ಸುಮಾರು 1.30 ಲಕ್ಷ ರೂಪಾಯಿ ವೆಚ್ಚದಲ್ಲಿ ಇ-ಬೈಕ್‌ನ್ನು ತಯಾರಿಸಲಾಗಿದೆ.

ಇತ್ತೀಚೆಗೆ ಭೋಪಾಲ್‌ನಲ್ಲಿ ಇಂಪೀರಿಯಲ್ ಸೊಸೈಟಿ ಆಫ್ ಇನ್ನೋವೇಟಿವ್ ಇಂಜಿನಿಯರ್ಸ್ (ISIE) ಆಯೋಜಿಸಿದ್ದ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಈ ಎಲೆಕ್ಟ್ರಿಕ್ ಬೈಕ್‌ನ್ನು ಪ್ರದರ್ಶಿಸಲಾಗಿತ್ತು. ದೇಶಾದ್ಯಂತದ ವಿವಿಧ ಕಾಲೇಜುಗಳ 70 ತಂಡಗಳು ಭಾಗವಹಿಸಿದ್ದವು. ಎಂಎನ್‌ಎನ್‌ಐಟಿ ಅತ್ಯುತ್ತಮ ವಿನ್ಯಾಸ (ಬೆಸ್ಟ್ ಡಿಸೈನ್) ಹಾಗೂ ಭವಿಷ್ಯದ ಪ್ರಶಸ್ತಿ (ಫ್ಯೂಚರ್ ಅವಾರ್ಡ್)ಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಟಾಪ್ 10 ತಂಡಗಳಲ್ಲಿ ಸ್ಥಾನವನ್ನು ಪಡೆದುಕೊಂಡಿತ್ತು.

ಈ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸುವಲ್ಲಿ ಎಂಎನ್‌ಎನ್‌ಐಟಿಯ 3ನೇ ಮತ್ತು ಅಂತಿಮ ವರ್ಷದ ಬಿಟೆಕ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಪುಲ್ಕಿತ್ ಸಿಂಘಾಲ್, ಹರ್ಷ ಮಹರ್ಷಿ, ಆದರ್ಶ್ ಕುಮಾರ್, ಸುಮಿತ್ ಮಿಶ್ರಾ, ಯಶವ್ ಭಾರತಿ, ಸಂದೀಪ್ ಯಾದವ್, ಸೂರ್ಯಾಂಶ್ ಪಾಠಕ್, ಪ್ರಶಾಂತ್ ಸೇರಿದಂತೆ ಹಲವಾರು ಶ್ರಮಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, March 6, 2024, 10:47 [IST]
English summary
Indian students achievement invented new e bike with alcohol detection system
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+