ಭಾರತದ ಸೂಪರ್ ಮ್ಯಾನ್ ನೋಡಿದ್ರಾ ?
ನೀವು ಎಲ್ಲಾದರೂ ಇಂಡಿಯನ್ ಸೂಪರ್ ಮ್ಯಾನ್ ನೋಡಿದ್ದೀರಾ? ಹೋಗ್ಲಿ ಬಿಡಿ ಹುಡುಕುವ ಪ್ರಯತ್ನವನ್ನಾದರೂ ಮಾಡಿದ್ರಾ? ನಾವೇನು ತಮಾಷೆ ಮಾಡ್ತಿಲ್ಲ. ಭಾರತದ ಸೂಪರ್ ಮ್ಯಾನ್ ಇಲ್ಲಿ ಪ್ರತ್ಯಕ್ಷವಾಗಿದ್ದಾರೆ.
ಇಲ್ಲಿ ಕೊಡಲಾಗಿರುವ ವೀಡಿಯೋವನ್ನೊಮ್ಮೆ ಗಮನವಿಟ್ಟು ನೋಡಿ. ದೇಶದ ದಿನಗೂಲಿ ಕಾರ್ಮಿಕರು ತಮ್ಮ ದೈನಂದಿನ ಜೀವನಕ್ಕಾಗಿ ಕುಟುಂಬ ಪಾಲನೆಗಾಗಿ ಎಷ್ಟೊಂದು ದಯನೀಯ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬುದು ಇದರಿಂದಲೇ ವ್ಯಕ್ತವಾಗಲಿದೆ.
ಮೋದಿ ಸರಕಾರದ 'ಅಚ್ಚೇ ದಿನ್ ಅನೇ ವಾಲೆ ಹೇ' ಎಂಬ ವಾಕ್ಯ ಇಲ್ಲಿ ಅರ್ಥ ಶೂನ್ಯವೆನಿಸುತ್ತದೆ. ಇಲ್ಲಿನ ವೀಡಿಯೋದಲ್ಲಿ ಮಹಾರಾಷ್ಟ್ರದ ದಿನಗೂಲಿ ಕಾರ್ಮಿಕರೊಬ್ಬರು ಬಜಾಜ್ ಪಲ್ಸರ್ ಬೈಕನ್ನೇ ತಮ್ಮ ತಲೆಗೆ ಮೇಲೆ ಹೊತ್ತುಕೊಂಡು ಬಸ್ ಮೇಲೆ ಹತ್ತಿಸುವ ಪ್ರಯತ್ನ ಮಾಡುತ್ತಾರೆ. ಇದರಲ್ಲಿ ಈತ ಯಶಸ್ಸನ್ನು ಕಾಣುತ್ತಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಿರುವ ಈ ವೀಡಿಯೋ ರೋಚಕತೆ ಸೃಷ್ಟಿಸಿದರೂ ಒಂದು ಕ್ಷಣ ನಮ್ಮೆಲ್ಲರಲ್ಲಿ ಭಾವುಕರಾಗುವಂತೆ ಮಾಡುತ್ತದೆ.
ಇಲ್ಲಿದೆ ನೋಡಿ ರೋಚಕ ವೀಡಿಯೋ


Click it and Unblock the Notifications








