ಬಿಡುಗಡೆಯಾಗಲಿರುವ ಹೊಸ ಬಜಾಜ್ ಪಲ್ಸರ್ 125 ಬೈಕ್ ಇದೇನೆ

ದೇಶದಲ್ಲಿ ಆಟೋಮೊಬೈಲ್ ಉದ್ಯಮವು ತಿಂಗಳಿಂದ ತಿಂಗಳಿಗೆ ತೀವ್ರ ನಷ್ಟವನ್ನು ಕಾಣುತ್ತಿದ್ದು, ಇದಕ್ಕೆ ಕಾರಣ ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೆಂಬಲ ಮತ್ತು ಅವುಗಳ ಖರೀದಿಯ ಮೇಲೆ ನೀಡಲಾಗುತ್ತಿರುವ ದುಬಾರಿ ಬೆಲೆಯ ಸಬ್ಸಿಡಿ. ಹೀಗಾಗಿ ಸಧ್ಯ ವಾಹನ ಉತ್ಪದಕರು ಎಲೆಕ್ಟ್ರಿಕ್ ವಾಹನಳ ತಯಾರಿಯಲ್ಲಿ ನಿರತರಾಗಿದ್ದಾರೆ.

ಬಿಡುಗಡೆಯಾಗಲಿರುವ ಹೊಸ ಬಜಾಜ್ ಪಲ್ಸರ್ 125 ಬೈಕ್ ಇದೇನೆ

ಹೀಗಿರುವಾಗ ಎವರ್ ಗ್ರೀನ್ ಪಲ್ಸರ್ ಬೈಕ್ ಮಾತ್ರ ಪ್ರತೀ ತಿಂಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಾ ಬಜಾಜ್ ಸಂಸ್ಥೆಯ ತಿಂಗಳ ಮಾರಾಟವನ್ನು ಕಾಪಾಡುತ್ತಿದೆ ಎಂತಾನೇ ಹೇಳ್ಬೋದು. ಸಧ್ಯ ಬಜಾಜ್ ಪಲ್ಸರ 150 ಬೈಕ್‍ಗಳು ಪ್ರತೀ ತಿಂಗಳು ಸುಮಾರು 60,000 ಯೂನಿಟ್ ಮಾರಾಟವಾಗುತ್ತಿದ್ದು, ಪಲ್ಸರ್ ಸರಣಿಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಬೈಕ್ ಇದಾಗಿದೆ.

ಬಿಡುಗಡೆಯಾಗಲಿರುವ ಹೊಸ ಬಜಾಜ್ ಪಲ್ಸರ್ 125 ಬೈಕ್ ಇದೇನೆ

ಇದರಿಂದಾಗಿ ಬಜಾಜ್ ಆಟೋ ಸಂಸ್ಥೆಯು ತಮ್ಮ ಮಾರಾಟವನ್ನು ಇನ್ನು ಅಧಿಕಗೊಳಿಸಲು ಕಡಿಮೆ ಸಾಮರ್ಥ್ಯದ ಬೈಕ್‍ಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಈಗ ಕಡಿಮೆ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಬೈಕ್‍ಗಳ ಮಾರಾಟವನ್ನು ಮತ್ತು ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗುತ್ತಿದೆ.

ಮೇಲೆ ಹೇಳಿರುವ ಹಾಗೆ ಬಜಾಜ್ ಆಟೋ ಸಂಸ್ಥೆಯು ಇನ್ನೇನು ತಮ್ಮ ಪಲ್ಸರ್ ಸರಣಿಯಲ್ಲಿ ಕಡಿಮೆ ಸಾಮರ್ಥ್ಯವನ್ನು ಹೊಂದಿರುವ ಪಲ್ಸರ್ 125 ಬೈಕ್ ಅನ್ನು ಬಿಡುಗಡೆ ಮಾಡಲಿದ್ದು, ಬಿಡುಗಡೆಗು ಮುನ್ನ ಡೀಲರ್ ಯಾರ್ಡ್ ತಲುಪುತ್ತಿದೆ. ಡೀಲರ್ ಯಾರ್ಡ್ ತಲುಪುತ್ತಿರುವ ಬಜಾಜ್ ಪಲ್ಸರ 125 ಬೈಕಿನ ಚಿತ್ರಗಳು ಮತ್ತು ವಿಡಿಯೋ ಇದೀಗ ಬಹಿರಂಗಗೊಂಡಿದೆ.

ಬಿಡುಗಡೆಯಾಗಲಿರುವ ಹೊಸ ಬಜಾಜ್ ಪಲ್ಸರ್ 125 ಬೈಕ್ ಇದೇನೆ

ಯೂಟ್ಯೂಬ್‍ ಚಾನಲ್ ತ್ರಿಲೊಗ್ ಸಿಂಗ್ ವಿಲೋಗ್‍ನಲ್ಲಿ ಬಹಿರಂಗಗೊಂಡ ಹೊಸ ಬಜಾಜ್ ಪಲ್ಸರ್ 125 ಬೈಕಿನ ವಿಡಿಯೋವನ್ನು ಗಮನಿಸಿದ್ದಲ್ಲಿ, ಸಾಧಾರಣ ಬಜಾಜ್ ಪಲ್ಸರ್ ಬೈಕ್‍ಗಳಂತೆಯೆ ಈ ಬೈಕ್ ಕೂಡಾ ವಿನ್ಯಾಸವನ್ನು ಪಡೆದುಕೊಂಡಿದೆ. ಮಾಹಿತಿಗಳ ಪ್ರಕಾರ ಬಜಾಜ್ ಪಲ್ಸರ 125 ಬೈಕ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 65,000 ಬೆಲೆಯನ್ನು ಪಡೆಯಬಹುದಾಗಿದೆ.

ಬಿಡುಗಡೆಯಾಗಲಿರುವ ಹೊಸ ಬಜಾಜ್ ಪಲ್ಸರ್ 125 ಬೈಕ್ ಇದೇನೆ

ಎಂಜಿನ್ ಸಾಮರ್ಥ್ಯ

ಹೊಸ ಬಜಾಜ್ ಪಲ್ಸರ್ 125 ಬೈಕ್ 124.5ಸಿಸಿ ಏರ್ ಕೂಲ್ಡ್, ಕಾರ್ಬೋರೇಟೆಡ್ ಎಂಜಿನ್ ಸಹಾಯದಿಂದ 13.5 ಬಿಹೆಚ್‍ಪಿ ಮತ್ತು 11.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣಾವನ್ನು ಹೊಂದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದೇ ಎಂಜಿನ್ ಅನ್ನು ಬಜಾಜ್ ಡಿಸ್ಕವರ್ 125 ಬೈಕಿನಲ್ಲಿ ನೀಡಲಾಗಿರುವುದು ಗಮನಾರ್ಹ.

ಬಿಡುಗಡೆಯಾಗಲಿರುವ ಹೊಸ ಬಜಾಜ್ ಪಲ್ಸರ್ 125 ಬೈಕ್ ಇದೇನೆ

ಬಜಾಜ್ ಸಂಸ್ಥೆಯು ಈ ಬೈಕಿಗಾಗಿ ಪ್ರತ್ಯೇಕವಾದ ಡಿಸೈನ್ ಮಾಡಲಿಲ್ಲ. ಏಕೆಂದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಪಲ್ಸರ್ 125 ಬೈಕ್ ಈಗಾಗಲೇ ಮೆಕ್ಸಿಕನ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು, 12 ಬಿಹೆಚ್‍ಪಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗು ಕಾಂಬಿ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿರುತ್ತದೆ ಎನ್ನಲಾಗುತ್ತಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಬಿಡುಗಡೆಯಾಗಲಿರುವ ಹೊಸ ಬಜಾಜ್ ಪಲ್ಸರ್ 125 ಬೈಕ್ ಇದೇನೆ

ಇನ್ನು ಡಿಸೈನ್ ಬಗ್ಗೆ ಹೇಳುವುದಾದ್ರೆ ಪಲ್ಸರ 125 ಬೈಕ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಪಲ್ಸರ 150 ಬೈಕಿನಂತೆಯೆ ಕಾಣುತ್ತಿದ್ದು, ಇನ್ನೇನು ದೇಶದಲ್ಲಿ ಬಿಎಸ್-6 ಎಮಿಷನ್ ನಿಯಮಾವಳಿಗಳು ಪ್ರಾರಂಭವಾಗುತ್ತಿರುವ ಕಾರಣ ಸಂಸ್ಥೆಯು ಈ ಬೈಕಿನಲ್ಲಿ ಬಿಎಸ್-6 ಆಧಾರಿತ ಎಂಜಿನ್ ಅನ್ನು ನೀಡುವ ಬಹುತೇಕ ಸಾಧ್ಯತೆಗಳಿವೆ.

MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

ಬಿಡುಗಡೆಯಾಗಲಿರುವ ಹೊಸ ಬಜಾಜ್ ಪಲ್ಸರ್ 125 ಬೈಕ್ ಇದೇನೆ

ಇನ್ನು ಬಜಾಜ್ ಸಂಸ್ಥೆಯು ಏಕೆ ಕಡಿಮೆ ಸಾಮರ್ಥ್ಯದ ಬೈಕ್ ಬಿಡುಗಡೆ ಮಾಡುತ್ತಿದೆ ಎಂದರೆ ಮೊದಲಿಗೆ ಎಬಿಎಸ್ ಕಾಯ್ದೆ, ನಂತರ ವಿಮೆ ಹಣದಲ್ಲಿ ಏರಿಕೆ ಮತ್ತು ಇದೀಗ ಕೊನೆಯದಾಗಿ ಬಿಎಸ್-6 ಎಮಿಷನ್ ನಿಯಮಾವಳಿಗಳು. ಇದರಿಂದ ದ್ವಿಚಕ್ರ ವಾಹನ ಗ್ರಾಹಕರು ಕಳೆದ ಎರಡು ಮೂರು ವರ್ಷದಲ್ಲಿ ಶೇಕಡ 30 ಅಥವಾ ಶೇಕಡ 30,000ಕ್ಕು ಅಧಿಕವಾದ ಬೆಲೆಯ ಏರಿಕೆಯಿಂದಾಗಿ ವಾಹನಗಳನ್ನು ಖರೀದಿ ಮಾಡುವುದನ್ನೆ ನಿಲ್ಲಿಸುತ್ತಿದ್ದಾರೆ ಎನ್ನಬಹುದು.

MOST READ: ರೈಲ್ವೆ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

ಬಿಡುಗಡೆಯಾಗಲಿರುವ ಹೊಸ ಬಜಾಜ್ ಪಲ್ಸರ್ 125 ಬೈಕ್ ಇದೇನೆ

ಈಗಾಗಲೇ ಸ್ಪಾಟ್ ಟೆಸ್ಟಿಂಗ್‍ನಲ್ಲಿ ಕಾಣಿಸಿಕೊಂಡ ಬಜಾಜ್ ಪಲ್ಸರ್ 125 ಬೈಕ್ ಸಿಂಗಲ್ ಪೀಸ್ ಸೀಟ್ ಅನ್ನು ಹೊಂದಿದ್ದು, ಈ ಬೈಕ್ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗದಲ್ಲಿ ಟ್ವಿನ್ ಗ್ಯಾಸ್ ಚಾರ್ಜೆಡ್ ಶಾಕ್ ಅಬ್ಸಾರ್ಬರ್ ಅನು ನೀಡಲಾಗಿದೆ. ಬಜಾಜ್ ಪಲ್ಸರ್ 125 ಬೈಕ್ ಮಾರುಕಟ್ಟೆಗೆ ಒಮ್ಮೆ ಎಂಟ್ರಿ ಕೊಟ್ಟಲ್ಲಿ ಹೀರೋ ಗ್ಲಾಮರ್ ಎಫ್ಐ ಮತ್ತು ಹೋಂಡಾ ಸಿಬಿ ಶೈನ್ ಎಸ್‍ಪಿ ಬೈಕ್‍‍ಗಳಿಗೆ ತೀವ್ರ ಪೈಪೋಟಿ ನೀಡಲಿದೆ.

Most Read Articles

Kannada
English summary
All New Bajaj Pulsar 125 Started Arriving Dealership Launch Ahead. Read In Kannada
Story first published: Tuesday, August 13, 2019, 9:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X