ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಪಲ್ಸರ್ 125 ಬೈಕ್

ಬಜಾಜ್ ಆಟೋ ಸಂಸ್ಥೆಯು ತಮ್ಮ ಪಲ್ಸರ್ ಬೈಕ್‍ಗಳಲ್ಲಿ ಎಂಟ್ರಿ ಲೆವೆಲ್ ಬೈಕ್ ಆದ ಪಲ್ಸರ್ 125 ಬೈಕ್ ಅನ್ನು ಬಿಡುಗಡೆ ಮಾಡುವ ಯೋಜನೆಯಲಿದ್ದು, ಇದೀಗ ಸ್ಪಾಟ್ ಟೆಸ್ಟಿಂಗ್ ನಡೆಸುವಾಗ ಪಲ್ಸರ್ 150 ಬೈಕಿನ ವಿನ್ಯಾಸವನ್ನು ಆಧರಿಸಿದ ಮಾದರಿಯಲ್ಲಿ ಕಾಣಿಸಿಕೊಂಡಿದೆ. ಬಿಡುಗಡೆಯಾಗಲಿರುವ ಹೊಸ ಪಲ್ಸರ್ 125 ಬೈಕ್ ಈ ಬಾರಿ ಸ್ಪ್ಲಿಟ್ ಸೀಟ್ಸ್, ಹೆಚ್ಚು ಸ್ಪೋರ್ಟಿ ಲುಕ್ ಮತ್ತು ಕಾರ್ಬೊರೆಟೆಡ್ ಎಂಜಿನ್ ಅನ್ನು ಹೊತ್ತು ಬರಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಪಲ್ಸರ್ 125 ಬೈಕ್

ಆದರೆ ವಿದೇಶಿ ಮಾರುಕಟ್ಟೆಯಲ್ಲಿ ಪಲ್ಸರ್ ಎನ್ಎಸ್ ಸರಣಿಯಲ್ಲಿ ಬಿಡುಗಡೆಯಾಗುವ ಬೈಕ್‍ಗಳು ಹೆಚ್ಚಿನ ಜನಪ್ರೀಯತೆಯನ್ನು ಪಡೆಯುತ್ತಿದ್ದು, ಎನ್‍ಎಸ್ ಬ್ರ್ಯಾಂಡ್ ಅಲ್ಲಿ ಹೆಚ್ಚಿನ ಜನಪ್ರೀಯತೆಯನ್ನ ಪಡೆದಿದೆ. ಆದರೆ ನಮ್ಮ ಭಾರತದ ಮಾರುಕಟ್ಟೆಯಲ್ಲಿ ಮಾತ್ರ ಪಲ್ಸರ್ ಎಂದರೆಯೆ ಒಂದು ಬ್ರ್ಯಾಂಡ್ ಎನ್ನುವ ಭಾವನೆ ಇಲ್ಲಿದೆ. ಆದುದರಿಂದ ದೇಶಿಯ ಮಾರುಕಟ್ಟೆಯಲ್ಲಿ ಎನ್ಎಸ್ 125 ಅಲ್ಲದೆಯೆ ಸಾಧಾರಣ ಪಲ್ಸರ್ 125 ಬೈಕ್ ಆಗಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಕೂಡಾ ಲಭ್ಯವಾಗಿತ್ತು.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಪಲ್ಸರ್ 125 ಬೈಕ್

ಇವುಗಳ ಜೊತೆಗೆ ಬಜಾಜ್ ಸಂಸ್ಥೆಯು ತಮ್ಮ ಪಲ್ಸರ್ 125 ಬೈಕ್ ಅನ್ನು ನಿಯಾನ್ ವರ್ಷನ್‍ನಲ್ಲಿ ಬಿಡುಗಡೆ ಮಾಡುವ ಅವಕಾಶವಿದ್ದು, ಸಾಧಾರಣ ಪಲ್ಸರ್ 150 ನಿಯಾನ್ ಬೈಕ್ ಎಕ್ಸ್ ಶೋರುಂ ಪ್ರಕಾರ ರೂ. 71,200 ಬೆಲೆಯನ್ನು ಪಡೆದುಕೊಂಡಿದೆ. ಮತ್ತೆ 125ಸಿಸಿ ಸಾಮರ್ಥ್ಯಕ್ಕಿಂತಲೂ ಕಡಿಮೆ ಇರುವ ಬೈಕ್‍‍ಗಳನ್ನು ಸಂಸ್ಥೆಯು ಇನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾದುವ ಯೋಜೆನೆ ಇದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಪಲ್ಸರ್ 125 ಬೈಕ್

ಟೆಸ್ಟ್ ಡ್ರೈವ್‍ನಲ್ಲಿ ಕಾಣಿಸಿಕೊಂಡ ಬಜಾಜ್ ಪಲ್ಸರ್ 125 ಬೈಕ್ ಸಿಂಗಲ್ ಪೀಸ್ ಸೀಟ್ ಅನ್ನು ಹೊಂದಿದ್ದು, ಇದು ಕೇವಲ ಪರಿಕ್ಷಾ ಅನುಸಾರ ನೀಡಲಾಗಿದೆ ಎನ್ನಲಾಗಿದೆ. ಹಾಗೆಯೆ ಮೇಲೆ ಹೇಳಿರುವ ಹಾಗೆ ಪಲ್ಸರ್ 125 ಬೈಕ್ ಸ್ಪ್ಲಿಟ್ ಸೀಟ್ ಅನ್ನು ಹೊಂದಿರಲಿದೆ. ಈ ಬೈಕ್ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗದಲ್ಲಿ ಟ್ವಿನ್ ಗ್ಯಾಸ್ ಚಾರ್ಜೆಡ್ ಶಾಕ್ ಅಬ್ಸಾರ್ಬರ್ ಅನು ನೀಡಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಪಲ್ಸರ್ 125 ಬೈಕ್

18ವರ್ಷದ ನಂತರ ಬಜಾಜ್ ಸಂಸ್ಥೆಯು 125ಸಿಸಿ ಬೈಕ್ ಅನ್ನು ಬಿಡುಗಡೆಗೊಳಿಸುತ್ತಿದೆ ಅಂತಾನೇ ಹೇಳ್ಬೋದು. ಬಜಾಜ್ ಸಂಸ್ಥೆಯು ಏಕೆ ಕಡಿಮೆ ಸಾಮರ್ಥ್ಯದ ಬೈಕ್ ತಯಾರಿಸಲು ಮುಂದಾಗಿದೆ ಎಂಬುದಕ್ಕೆ ಕಾರಣವೆಂದರೆ ನಿಯಂತ್ರಣ ಬದಲಾವಣೆಗಳು ವಸ್ತುಗಳನ್ನು ದುಬಾರಿಯನ್ನಾಗಿ ಮಾಡುತ್ತಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಪಲ್ಸರ್ 125 ಬೈಕ್

ಮೊದಲಿಗೆ ಎಬಿಎಸ್ ಕಾಯ್ದೆ, ನಂತರ ವಿಮೆ ಹಣದಲ್ಲಿ ಏರಿಕೆ ಮತ್ತು ಇದೀಗ ಕೊನೆಯದಾಗಿ ಬಿಎಸ್-6 ಎಮಿಷನ್ ನಿಯಮಾವಳಿಗಳು. ಇದರಿಂದ ದ್ವಿಚಕ್ರ ವಾಹನ ಗ್ರಾಹಕರು ಕಳೆದ ಎರಡು ಮೂರು ವರ್ಷದಲ್ಲಿ ಶೇಕಡ 30 ಅಥವಾ ಶೇಕಡ 30ಕ್ಕು ಅಧಿಕವಾದ ಬೆಲೆಯ ಏರಿಕೆಯಿಂದಾಗಿ ವಾಹನಗಳನ್ನು ಖರೀದಿ ಮಾಡುವುದನ್ನೆ ನಿಲ್ಲಿಸುತ್ತಿದ್ದಾರೆ ಎನ್ನಬಹುದು.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಪಲ್ಸರ್ 125 ಬೈಕ್

ಇದೇ ಗುರಿಯನ್ನಾಗಿಟ್ಟುಕ್ಕೊಂಡು ಬಜಾಜ್ ಆಟೋ ಸಂಸ್ಥೆಯು ತಮ್ಮ 125ಸಿಸಿ ಪಲ್ಸರ್ ಬೈಕ್ ಅನ್ನು ಬಿಡಗಡೆ ಮಾಡಲಿದೆ. ಏಕೆಂದರೆ 125ಸಿಸ್ಸಿ ಸೆಗ್ಮೆಂಟ್ ಬೈಕ್‍ಗಳಿಗೆ ಎಬಿಎಸ್ ಬೇಕಿಲ್ಲವಾದ ಕಾರಣ ಇದು ಅಗ್ಗದ ಬೆಲೆಯಲ್ಲಿ ದೊರೆಯಲಿದೆ. ವರದಿ ಪ್ರಕಾರ 125ಸಿಸಿ ಪಲ್ಸರ್ ಬೈಕ್ ಪಲ್ಸರ್ 150 ಬೈಕ್‍ನಂತೆಯೆ ವಿನ್ಯಾಸವನ್ನು ಪಡೆಯಬಹುದಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಪಲ್ಸರ್ 125 ಬೈಕ್

ಅಂದರೆ ಬಜಾಜ್ ಸಂಸ್ಥೆಯು ಇತ್ಟೀಚೆಗೆ ಪಲ್ಸರ್ 150 ಬೈಕಿನ ನಿಯಾನ್ ಮಾದರಿಗಳನ್ನು ಬಿಡುಗಡೆ ಮಾಡಿದ ವಿನ್ಯಾಸವನ್ನು 125 ಬೈಕಿನಲ್ಲಿಯು ಸಹ ನೀಡಲಾಗಿದ್ದು, ಸಿಂಗಲ್ ಸೀಟ್ ಅನ್ನು ಹೊಂದಿರಲಿದೆ. ಈ ಬೈಕ್ ರಿಯರ್ ಡ್ರಂ ಬ್ರೇಕ್ ಅನ್ನು ಪಡೆಯಲಿದ್ದು, ಫ್ಯುಯಲ್ ಟ್ಯಾಂಕ್‍ನಲ್ಲಿ ಯಾವುದೇ ಬದಲಾವಣೆಯು ಹೊಂದಿರುವುದಿಲ್ಲ ಎನ್ನಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಪಲ್ಸರ್ 125 ಬೈಕ್

ಭಾರತೀಯ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿ ಬಜಾಜ್ ಆಟೋ ಕಳೆದ ವರ್ಷ ಪಲ್ಸರ್ ಎನ್‍ಎಸ್125 ಬೈಕ್ ಅನ್ನು ಪೋಲಾಂಡ್‍‍ನಲ್ಲಿ ಅನಾವರಣಗೊಳಿಸಿತ್ತು. ಪೋಲಾಂಡ್‍‍ನಲ್ಲಿ ಅನಾವರಣಗೊಂಡ ಎನ್‍ಎಸ್125 ಬೈಕಿನ ಬೆಲೆ ಪಿ‍ಎಲ್‍ಎನ್ 7,999ಗಳಾಗಿದ್ದು, ಭಾರತದ ಮೌಲ್ಯದಲ್ಲಿ ರೂ.1.60 ಲಕ್ಷಗಳಾಗಿದೆ. ಅದಾದ ನಂತರ ಈ ಬೈಕ್ ಅನ್ನು ಕೊಲಂಬಿಯಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಪಲ್ಸರ್ 125 ಬೈಕ್

ಮಾಹಿತಿಗಳ ಪ್ರಕಾರ ಎಂಜಿನ್ ವಿಚಾರದಲ್ಲಿಯೂ ಕೂಡಾ ಯಾವುದೇ ಬದಲಾವಣೆಗಳನ್ನು ಮಾಡದೆಯೆ ಬಜಾಜ್ ಪಲ್ಸರ್ ಎನ್‍‍ಎಸ್125 ಬೈಕಿನಲ್ಲಿ ನೀಡಲಾದ 124.45ಸಿಸಿ ಏರ್‍‍ಕೂಲ್ಡ್, ಸಿಂಗಲ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅಳವಡಿಸಲಾಗಿದ್ದು, 8,500 ಆರ್‍‍ಪಿ‍ಎಂನಲ್ಲಿ 12 ಬಿ‍‍ಹೆಚ್‍‍ಪಿ ಪವರ್ ಹಾಗೂ 6,000 ಆರ್‍‍ಪಿ‍ಎಂನಲ್ಲಿ 11 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

Source: Bikedekho

Most Read Articles

Kannada
English summary
Bajaj Pulsar 125 Spotted Launch Later This Month. Read In Kannada
Story first published: Saturday, August 3, 2019, 12:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X