ಇನ್ನು ಮುಂದೆ ಬಸ್ಸಲ್ಲೇ ಸ್ನಾನಗೃಹ ಸೌಲಭ್ಯ
ಡೊನಿಸಿ ಸ್ಯಾಂಡೋವಲ್ (Doniece Sandoval) ಎಂಬಾಕೆ ಲಾಭ ರಹಿತ ಲಾವಾ ಮಾ (LavaMae) ಎಂಬ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆಕೆ ಹಾಗೂ ಆಕೆಯ ಪತಿ ಸೇರಿಕೊಂಡು ವಸತಿ ರಹಿತ ಬಡ ಜನರಿಗಾಗಿ ಹಳೆಯ ಬಸ್ಸಿನಲ್ಲೇ ಸ್ನಾನಗೃಹ ಸೌಲಭ್ಯವನ್ನು ಒದಗಿಸುತ್ತಿದ್ದಾರೆ.
ಬಡತನವನ್ನು ಶೀಘ್ರದಲ್ಲೇ ಹಿಮ್ಮೆಟ್ಟಿಸುವುದು ಅಸಾಧ್ಯ. ಆದುದರಿಂದ ಬಡ ಜನರ ಶುಚಿತ್ವದ ಬಗ್ಗೆ ಕಾಳಜಿ ವಹಿಸುವುದು ಇವರ ಪ್ರಮುಖ ಉದ್ದೇಶವಾಗಿದೆ. ಇವರ ಮೊದಲ ಯೋಜನೆಯು 1992ನೇ ಇಸವಿಯಲ್ಲಿ ಆರಂಭಿಸಲಾಗಿತ್ತು. ಸದ್ಯ ಜಗತ್ತಿನ 25 ನಗರಗಳಿಗೆ ಯೋಜನೆ ವ್ಯಾಪಿಸುವ ಇರಾದೆಯನ್ನು ಹೊಂದಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಬೀದಿ ಪ್ರದೇಶದಲ್ಲಿ 3,500ದಷ್ಟು ಮಂದಿ ವಾಸಿಸುತ್ತಿದ್ದು, ಅಂತವರಿಗೆ ಈ ಯೋಜನೆ ನೆರವಾಗಲಿದೆ. ಬಹು ಕ್ರಿಯಾತ್ಮಕವಾಗಿರುವ ಇಂತಹ ಬಸ್ಸುಗಳು ಎರಡು ಸ್ನಾನಗೃಹಗಳನ್ನು ಹೊಂದಿರಲಿದೆ. ಅಷ್ಟೇ ಅಲ್ಲದೆ ಶೌಚಾಲಯ ಸೌಲಭ್ಯ ಕೂಡಾ ಇರಲಿದೆ. ಹಾಗೆಯೇ ತಮ್ಮ ಬಟ್ಟೆಬರೆಗಳನ್ನು ಇಡಲು ಪ್ರತ್ಯೇಕ ತಾತ್ಕಾಲಿಕ ಕೊಠಡಿಗಳಿರಲಿದೆ.

ಕೇಂದ್ರ ಸರಕಾರ ಸಹ ಇಂತಹದೊಂದು ಯೋಜನೆಯನ್ನು ಭಾರತದಲ್ಲೂ ಆರಂಭಿಸಬೇಕು ಎಂಬುದು ನಮ್ಮ ಈಗಿನ ಬಯಕೆಯಾಗಿದೆ. ಕೇಂದ್ರ ಬಜೆಟ್‌ನಲ್ಲಿ ಶುಚಿತ್ವದ ಬಗ್ಗೆ ಹೆಚ್ಚಿನ ಖಾಳಜಿ ವಹಿಸುತ್ತಿದ್ದರೂ ಇಂತಹ ಮೊಬೈಲ್ ಬಸ್ಸುಗಳ ಯಾವುದೇ ಪ್ರಸ್ತಾವನೆಯಾಗದಿರುವುದು ಬೇಸರದ ಸಂಗತಿಯಾಗಿದೆ.


Click it and Unblock the Notifications








