ಭಾರತದಲ್ಲಿ ಮೊದಲ ಲಿಥಿಯಂ ನಿಕ್ಷೇಪ ಪತ್ತೆ: ದಿಢೀರನೇ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾಗುತ್ತಾ?

ಭಾರತದ ಮಾರುಕಟ್ಟೆಯಲ್ಲಿ ವಿವಿಧ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಬಿಡುಗಡೆ ಮಾಡುತ್ತಿವೆ. ಆದರೆ, ಇವುಗಳ ಬೆಲೆ IEC ಚಾಲಿತ ವಾಹನಗಳಿಗಿಂತ ಹೆಚ್ಚಿರುವುದರಿಂದ ಬಹುತೇಕರು ಖರೀದಿಸಲು ಮನಸ್ಸು ಮಾಡುತ್ತಿಲ್ಲ. ಸದ್ಯ ಆಶಾದಾಯಕ ಸುದ್ದಿಯೊಂದು ದೊರೆತಿದೆ. ಆ ಬಗ್ಗೆ ಹೆಚ್ಚಿನ ವಿವರ ತಿಳಿಯೋಣ.

ದೇಶದಲ್ಲಿ ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ವಾಹನಗಳು ಲಿಥಿಯಂನಿಂದ ತಯಾರಿಸಿದ ಬ್ಯಾಟರಿಯಿಂದ ಓಡುತ್ತವೆ. ಲಿಥಿಯಂ ಅನ್ನು ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾ ಸೇರಿದಂತೆ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಅದು ಸಾಕಷ್ಟು ದುಬಾರಿಯಾಗಿದೆ. ಅದರ ನೇರ ಪರಿಣಾಮವನ್ನು ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಹಾಗೂ ನೂತನ ಖರೀದಿದಾರರು ಎದುರಿಸಬೇಕಾಗಿದೆ. ಇದೀಗ, ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ಪ್ರಮಾಣದಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿವೆ ಎಂದು ಕೇಂದ್ರ ಸರ್ಕಾರ ಗುರುವಾರ ಮಾಹಿತಿ ನೀಡಿದೆ.

ಭಾರತದಲ್ಲಿ ಮೊದಲ ಲಿಥಿಯಂ ನಿಕ್ಷೇಪ ಪತ್ತೆ: ದಿಢೀರನೇ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾಗುತ್ತಾ?

ಭಾರತೀಯ ಭೂಗರ್ಭಶಾಸ್ತ್ರ ಇಲಾಖೆಯು ಇಲ್ಲಿನ ರಿಯಾಸಿ ಜಿಲ್ಲೆಯ ಸಲಾಲ್ - ಹೈಮಾನಾ ಎಂಬಲ್ಲಿ 59 ಲಕ್ಷ ಟನ್‌ ಲಿಥಿಯಂ ನಿಕ್ಷೇಪವಿರುವುದನ್ನು ಶೋಧಿಸಿದೆ. ಇಲ್ಲಿ ಗಣಿಗಾರಿಕೆಯನ್ನು ನಡೆಸುವುದರಿಂದ ಲಿಥಿಯಂಗಾಗಿ ವಿದೇಶಗಳಿಗೆ ಅವಲಂಬನೆಯಾಗುವುದು ಕಡಿಮೆಯಾಗಲಿದ್ದು, ಮುಂಬರುವ ದಿನಗಳಲ್ಲಿ ಗರಿಷ್ಠ ಬೆಲೆಯಲ್ಲಿ ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ಕಾರುಗಳ ಬೆಲೆ ದಿಢೀರನೇ ಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಲಿಥಿಯಂ - ಐಯಾನ್ ಬ್ಯಾಟರಿ ಸೆಲ್‌ಗಳನ್ನು ತಯಾರಿಸಲು ಬೇಕಾಗಿರುವ ಕಚ್ಚಾವಸ್ತುಗಳ ಆಮದಿಗೆ ಸುಂಕ ವಿನಾಯಿತಿ ವಿಸ್ತರಿಸಲಾಗಿದೆ ಎಂದು ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಘೋಷಿಸಿದ್ದರು.

ಲಿಥಿಯಂ ನಿಕ್ಷೇಪ ಪತ್ತೆಯಾಗಿರುವ ಬಗ್ಗೆ ಕೇಂದ್ರ ಭೂವೈಜ್ಞಾನಿಕ ಪ್ರೋಗ್ರಾಮಿಂಗ್ ಬೋರ್ಡ್ ನ ಸಭೆಯಲ್ಲಿ ಗಣಿ ಸಚಿವಾಲಯದ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ಅವರು, ಆಯಾ ರಾಜ್ಯ ಸರ್ಕಾರಗಳಿಗೆ ಸಂಶೋಧನೆಯ ವರದಿಯನ್ನು ಹಸ್ತಾಂತರಿಸಿ ಮಾತನಾಡಿದರು. ದೇಶದಲ್ಲಿ ಇದೇ ಮೊದಲ ಬಾರಿಗೆ ಲಿಥಿಯಂ ನಿಕ್ಷೇಪ ಪತ್ತೆಯಾಗಿದ್ದು, ಈ ಸಂಬಂಧ ಮುಂದಿನ ಕ್ರಮಕೈಗೊಳ್ಳುವಂತೆ ಜಮ್ಮು ಮತ್ತು ಕಾಶ್ಮೀರ ಗಣಿ ಮತ್ತು ಭೂಗರ್ಭಶಾಸ್ತ್ರ ಇಲಾಖೆಯ ಕಾರ್ಯದರ್ಶಿ ಅಮಿತ್ ಶರ್ಮಾ ಅವರಿಗೆ ವರದಿ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಮೊದಲ ಲಿಥಿಯಂ ನಿಕ್ಷೇಪ ಪತ್ತೆ: ದಿಢೀರನೇ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾಗುತ್ತಾ?

ಭಾರತದ ವಿವಿಧ ವಾಹನ ತಯಾರಿಕ ಕಂಪನಿಗಳು, ಕೇಂದ್ರ ಸರ್ಕಾರದ ಆಶಯದಂತೆ ಶೂನ್ಯ ಇಂಗಾಲದ ಹೊರಸೂಸುವಿಕೆಯ ಗುರಿಯನ್ನು ತಲುಪಲು, ತಮ್ಮ ಮಾರಾಟ ವಿಭಾಗದಲ್ಲಿ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳಿರುವಂತೆ ಕ್ರಮಕೈಗೊಳ್ಳುತ್ತಿವೆ. ದೇಶದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಟಾಟಾ ಮೋಟಾರ್ಸ್ ಈಗಾಗಲೇ ಹಲವು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಅದರಲ್ಲಿ ಟಿಯಾಗೊ ಇವಿ ಅತ್ಯಂತ ಕಡಿಮೆ ಬೆಲೆಯ ಕಾರಾಗಿದೆ. ಮಹೀಂದ್ರಾ ಕೂಡ XUV400 ಇವಿಯನ್ನು ಮಾರಾಟ ಮಾಡುತ್ತಿದೆ.

ಇಷ್ಟೇ ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ದೇಶಾದ್ಯಂತ ರಸ್ತೆಗಳಲ್ಲಿ 2070ರ ವೇಳೆಗೆ ಶೂನ್ಯ ಹೊರಸೂಸುವಿಕೆ ವಾಹನಗಳಲು ಇರಬೇಕೆಂದು ಬಯಸಿದ್ದು, ಇಂಧನ ಪರಿವರ್ತನೆ (energy transition), ಶೂನ್ಯ ಹೊರಸೂಸುವಿಕೆ (net zero objectives) ಗುರಿಯನ್ನು ಸಾಧಿಸಲು ಬಂಡವಾಳ ಹೂಡಿಕೆ ಮಾಡಲು ರೂ.35,000 ಕೋಟಿಗಳನ್ನು ಒದಗಿಸಲಾಗುತ್ತದೆ ಎಂದು ಬಜೆಟ್ ನಲ್ಲಿ ತಿಳಿಸಿತ್ತು. ಇದೀಗ ಭಾರತದಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿರುವುದು ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ವೇಗ ಮತ್ತಷ್ಟು ಹೆಚ್ಚಾಗಲಿದೆ ಎಂದು ಹೇಳಬಹುದು.

ಲಿಥಿಯಂನಿಯಿಂದ ತಯಾರಿಸಿದ ಬ್ಯಾಟರಿಗಳು ಹೆಚ್ಚು ಬಾಳಿಕೆ ಬರುತ್ತವೆ. ಇವುಗಳ ನಿರ್ವಹಣಾ ವೆಚ್ಚವು ತುಂಬಾ ಕಡಿಮೆ. ಜೊತೆಗೆ ಅತ್ಯಂತ ಸುರಕ್ಷಿತವಾಗಿವಾಗಿದ್ದು, ಎಲೆಕ್ಟ್ರಿಕ್ ವಾಹನಗಳು ಅತ್ಯುತ್ತಮ ರೇಂಜ್ ನೀಡಲು ಸಹಾಯ ಮಾಡುತ್ತದೆ. ಅಲ್ಲದೆ, ಈ ಲಿಥಿಯಂಯನ್ನು ವಿಮಾನಗಳ ಬ್ಯಾಟರಿ ತಯಾರಿಕೆ ಹಾಗೂ ಮಾಸಿಕ ಕಾಯಿಲೆಗೆ ಔಷಧಿಯಾಗಿಯೂ ಉಪಯೋಗ ಮಾಡಲಾಗುತ್ತದೆ. ಕಡಿಮೆ ಸಾಮರ್ಥ್ಯದ ಲೀಡ್ ಆಸಿಡ್ ಬ್ಯಾಟರಿಗೆ ಹೋಲಿಸಿದರೆ, ಲಿಥಿಯಂ ಬ್ಯಾಟರಿಗಳು ತುಂಬಾ ಉತ್ತಮವಾಗಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಜಮ್ಮು ಮತ್ತು ಕಾಶ್ಮೀರದಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿರುವುದು ಭಾರತದ ಎಲೆಕ್ಟ್ರಿಕ್ ವಾಹನಗಳಿಗೆ ವರವಾಗಲಿದೆ. ಗಣಿಗರಿಕೆ ಆರಂಭಿಸಿ, ಲಿಥಿಯಂಯನ್ನು ಹೊರತೆಗೆದು ವಾಹನ ತಯಾರಿಕ ಕಂಪನಿಗಳಿಗೆ ಪೂರೈಕೆ ಮಾಡುವುದರಿಂದ ವಿದೇಶಗಳಿಗೆ ಈ ಖನಿಜವನ್ನು ಆಮದು ಮಾಡಿಕೊಳ್ಳುವುದು ತಪ್ಪುತ್ತದೆ. ದೊಡ್ಡ ಹಾಗೂ ಸಣ್ಣ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ತಯಾರಿಸುವ ದ್ವಿಚಕ್ರ ಹಾಗೂ ಕಾರುಗಳ ಬೆಲೆ ಗಣನೀಯವಾಗಿ ಇಳಿಕೆಯಾಗಬಹುದು. ಅಂತೂ ಕಾಶ್ಮೀರ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಲು ಸಿದ್ಧವಾಗಿದೆ.

Article Published On: Friday, February 10, 2023, 17:29 [IST]
English summary
Indias first lithium discovered details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+