ಇತಿಹಾಸ ಪುಟದತ್ತ ದೇಶದ ಚೊಚ್ಚಲ ಸೌರಶಕ್ತಿ ಚಾಲಿತ ರೈಲು

By Nagaraja

ಪರ್ಯಾಯ ಬದಲಿ ಇಂಧನ ವ್ಯವಸ್ಥೆಯ ಹುಡುಕಾಟದಲ್ಲಿರುವ ಭಾರತೀಯ ರೈಲ್ವೆ, ಸೌರಶಕ್ತಿ ಚಾಲಿತ (ಸೋಲಾರ್) ಚೊಚ್ಚಲ ರೈಲಿನ ಪ್ರಯೋಗಿಕ ಸಂಚಾರಕ್ಕೆ ಹಸಿರು ನಿಶಾನೆ ತೋರಿದೆ. ಪರೀಕ್ಷಾರ್ಥ ರೈಲಿನ ಎಲ್ಲ ಬೋಗಿಗಳ ಮೇಲೆ ಸೋಲಾರ್ ಪ್ಯಾನೆಲ್ ಗಳನ್ನು ಲಗತ್ತಿಸಲಾಗುವುದು.

ರೈಲ್ವೆ ಮೂಲಗಳ ಪ್ರಕಾರ, ಸಾಂಪ್ರದಾಯಿಕ ಡೀಸೆಲ್ ನಿಯಂತ್ರಿತ ಎಂಜಿನ್ ಗಳಿಂದಲೇ ರೈಲು ಓಡಾಟ ನಡೆಸಲಿದ್ದು, ಹವಾ ನಿಯಂತ್ರಿತ ಮತ್ತು ಹವಾ ನಿಯಂತ್ರಣ ರಹಿತ ರೈಲಿನ ಆಂತರಿಕ ವಿದ್ಯುತ್ ಅವಶ್ಯಕತೆಗಳಿಗಾಗಿ ಸೋಲಾರ್ ವಿದ್ಯುತ್ ಶಕ್ತಿಯನ್ನು ಬಳಕೆ ಮಾಡಲಾಗುವುದು.

ಇತಿಹಾಸ ಪುಟದತ್ತ ದೇಶದ ಚೊಚ್ಚಲ ಸೌರಶಕ್ತಿ ಚಾಲಿತ ರೈಲು

ಅಧ್ಯಯನ ವರದಿಗಳ ಪ್ರಕಾರ ಸೌರಶಕ್ತಿ ಬಳಕೆ ಮಾಡುವ ಮುಖಾಂತರ ಒಂದು ವರ್ಷದ ಅವಧಿಯಲ್ಲಿ ರೈಲು ಡೀಸೆಲ್ ಬಳಕೆಯನ್ನು 90,000 ಲೀಟರ್ ಗೆ ಕಡಿತ ಮಾಡಬಹುದಾಗಿದೆ. ಅದೇ ರೀತಿ ಪರಿಸರಕ್ಕೆ ಮಾಲಿನ್ಯವನ್ನುಂಟು ಮಾಡುವ ಕಾರ್ಬನ್ ಡೈ ಓಕ್ಸೈಡ್ ಎಮಿಷನ್ 200 ಟನ್ ಗಳಷ್ಟು ಕಡಿಮೆಯಾಗಲಿದೆ.

ಇತಿಹಾಸ ಪುಟದತ್ತ ದೇಶದ ಚೊಚ್ಚಲ ಸೌರಶಕ್ತಿ ಚಾಲಿತ ರೈಲು

ಸೌರಶಕ್ತಿ ಬಳಕೆಯಿಂದ ಡೀಸೆಲ್ ಬಳಕೆ ಮಿತವ್ಯಯ ಮಾಡುವ ಗುರಿಯಿದೆ. ಡೀಸೆಲ್ ಬದಲಿಯಾಗಿ ಸಿಎನ್‌ಜಿ, ಜೈವಿಕ ಡೀಸೆಲ್ ಮತ್ತು ನೈಸರ್ಗಿಕ ಅನಿಲ ಬಳಕೆ ಮಾಡುವ ಕುರಿತಾಗಿಯೂ ಭಾರತೀಯ ರೈಲ್ವೆ ಕಾರ್ಯಮಗ್ನವಾಗಿದೆ.

ಇತಿಹಾಸ ಪುಟದತ್ತ ದೇಶದ ಚೊಚ್ಚಲ ಸೌರಶಕ್ತಿ ಚಾಲಿತ ರೈಲು

ಪ್ರತಿಯೊಂದು ಬೋಗಿಯ ಮೇಲ್ಛಾವಣಿಯಲ್ಲಿ 12 ಸೋಲಾರ್ ಪ್ಯಾನೆಲ್ ಗಳನ್ನು ಲಗತ್ತಿಸಲಾಗುವುದು. ಇವುಗಳು ತಲಾ 300 ವ್ಯಾಟ್ ಗಳಿಂದ 3.6 ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ. ತನ್ಮೂಲಕ ಕೋಚ್ ಗಳಲ್ಲಿರುವ ಎಸಿ, ಫ್ಯಾನ್ ಮತ್ತು ಸಿಎಫ್‌ಎಲ್ ಬೆಳಕನ್ನು ಉರಿಸಲು ಸಹಕಾರಿಯಾಗಲಿದೆ.

ಇತಿಹಾಸ ಪುಟದತ್ತ ದೇಶದ ಚೊಚ್ಚಲ ಸೌರಶಕ್ತಿ ಚಾಲಿತ ರೈಲು

50ರಷ್ಟು ಡಿಯುಎಂಯು (Diesel Electric Multiple Unit) ಸೋಲಾರ್ ಪ್ಯಾನೆಲ್ ಗಳನ್ನು ಲಗತ್ತಿಸುವಂತೆ 2015 ಅಕ್ಟೋಬರ್ ನಲ್ಲಿ ನೋಯ್ಡಾ ತಳಹದಿಯ ಜಾಕ್ಸನ್ ಎಂಜಿನಿಯರ್ಸ್ ಲಿಮಿಟೆಡ್ (ಜೆಎಫ್ ಎಲ್) ಸಂಸ್ಥೆಗೆ 1.57 ಕೋಟಿ ರುಪಾಯಿಗಳ ಒಪ್ಪಂದವನ್ನು ಭಾರತೀಯ ರೈಲ್ವೆ ನೀಡಿತ್ತು.

ಇತಿಹಾಸ ಪುಟದತ್ತ ದೇಶದ ಚೊಚ್ಚಲ ಸೌರಶಕ್ತಿ ಚಾಲಿತ ರೈಲು

ಹವಾ ನಿಯಂತ್ರಣ ರಹಿತ ರೇವಾರಿ ಮತ್ತು ಸಿತಾಪುರ ಪ್ರಯಾಣಿಕ ರೈಲಿನಲ್ಲಿ ಸೋಲಾರ್ ಪ್ಯಾನೆಲ್ ಜೋಡಣೆ ಮಾಡಲಾಗಿದೆ. ಅಲ್ಲದೆ ಮುಂದಿನ ಐದು ವರ್ಷಗಳಲ್ಲಿ 1000 ಮೆಗಾ ವ್ಯಾಟ್ ಸೌರಶಕ್ತಿ ಉತ್ಪಾದಿಸುವ ಗುರಿ ಹೊಂದಿದೆ.

ಇತಿಹಾಸ ಪುಟದತ್ತ ದೇಶದ ಚೊಚ್ಚಲ ಸೌರಶಕ್ತಿ ಚಾಲಿತ ರೈಲು

ಒಂದು ಕೋಚ್ ಗೆ ಸೋಲಾರ್ ಪ್ಯಾನೆಲ್ ಜೋಡಿಸಲು 3.90 ಲಕ್ಷ ರುಪಾಯಿ ಖರ್ಚು ತಗುಲಲಿದೆ. ಇದನ್ನು ಆಳವಡಿಸುವುದರಿಂದ ದಿನವೊಂದರಲ್ಲಿ ಒಂದು ಕೋಚ್ ನಿಂದ 340 ರುಪಾಯಿ ಉಳಿತಾಯವಾಗಲಿದ್ದು, ವಾರ್ಷಿಕವಾಗಿ 1,24,100 ರುಪಾಯಿ ಉಳಿತಾಯವಾಗಲಿದೆ.

ಇತಿಹಾಸ ಪುಟದತ್ತ ದೇಶದ ಚೊಚ್ಚಲ ಸೌರಶಕ್ತಿ ಚಾಲಿತ ರೈಲು

ಸೋಲಾರ್ ಪ್ಯಾನೆಲ್ ದಿನವೊಂದರಲ್ಲಿ 17 ಯುನಿಟ್ ವಿದ್ಯುತ್ ಉತ್ಪಾದಿಸುವಷ್ಟು ಸಮರ್ಥವಾಗಿರುತ್ತದೆ. ಕೋಟ್ ಮೇಲ್ಗಡೆಯ 24 ಚದರ ಅಡಿ ಪ್ರದೇಶವು 12 ಸೋಲಾರ್ ಪ್ಯಾನೆಲ್ ಗಳಿಂದ ಆವರಿಸ್ಪಟ್ಟಿರುತ್ತದೆ.

ಇತಿಹಾಸ ಪುಟದತ್ತ ದೇಶದ ಚೊಚ್ಚಲ ಸೌರಶಕ್ತಿ ಚಾಲಿತ ರೈಲು

ಈಗಿನ ಯೋಜನೆ ಪ್ರಕಾರ ಹವಾ ನಿಯಂತ್ರಣ ರಹಿತ ರೈಲು ಬೋಗಿಗಳ ಮೇಲ್ಚಾವಣಿಯಲ್ಲಿ ಸೋಲಾರ್ ಪ್ಯಾನೆಲ್ ಲಗತ್ತಿಸಲಾಗುವುದು. ಇದರ ಯಶಸ್ಸಿನ ಆಧಾರದಲ್ಲಿ ಸೋಲಾರ್ ಪ್ಯಾನೆಲ್ ರೈಲು ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ರೈಲ್ವೆ ವಿಭಾಗೀಯ ವ್ಯವಸ್ಥಾಪಕರು ತಿಳಿಸಿದ್ದಾರೆ.

ಇತಿಹಾಸ ಪುಟದತ್ತ ದೇಶದ ಚೊಚ್ಚಲ ಸೌರಶಕ್ತಿ ಚಾಲಿತ ರೈಲು

ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರೈಲ್ವೆ ನಿಲ್ದಾಣಗಳನ್ನು ಸೌರಶಕ್ತಿ ಕೇಂದ್ರವನ್ನಾಗಿ ಮಾರ್ಪಾಡಿಸುವ ಕ್ರಾಂತಿಕಾರಿ ಯೋಜನೆಯನ್ನು ಭಾರತೀಯ ರೈಲ್ವೆ ಹೊಂದಿದೆ. ಇವೆಲ್ಲವೂ ಸದ್ಯದಲ್ಲೇ ನನಸಾಗಲಿ ಎಂಬುದು ನಮ್ಮ ಆಶಯವಾಗಿದೆ.

More from DriveSpark

Article Published On: Thursday, May 19, 2016, 14:09 [IST]
English summary
India Is All Set To Conduct Trial Run Of Its First Solar Powered Train
Read more on ಭಾರತ india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+