ದೇಶದ ಅತಿ ಉದ್ದದ ರಸ್ತೆ ಸುರಂಗ ಮಾರ್ಗ ಎಲ್ಲಿದೆ ಗೊತ್ತಾ?
ಚೆನಾನಿ ಪಕೃತ್ತಿದತ್ತ ಹಿಮಾಲಯ ಪರ್ವತಗಳಿಂದ ಆವೃತ್ತವಾಗಿರುವ ಜಮ್ಮು ಮತ್ತು ಕಾಶ್ಮೀರದ ಉದ್ದಮ್‌ಪುರ ಜಿಲ್ಲೆಯಲ್ಲಿರುವ ಒಂದು ಪುಟ್ಟ ನಗರ. ಪ್ರಸ್ತುತ ನಗರವೀಗ ಇಡೀ ದೇಶದಲ್ಲೇ ಗುರುತಿಸ್ಪಲ್ಪಟ್ಟಿದೆ.
Also Read: ಜೀವಮಾನದಲ್ಲಿ ಸಂಚರಿಸಲೇಬೇಕಾದ ದೇಶದ 11 ಅದ್ಭುತ ರಸ್ತೆಗಳು
ಹೌದು, ಚೆನಾನಿಯಿಂದ ನಶ್ರಿ (Chenani-Nashri Tunnel)ವರೆಗೆ ರಸ್ತೆ ಸುರಂಗ ಮಾರ್ಗವನ್ನು ಕೊರೆಯಲಾಗುತ್ತಿದ್ದು, ದೇಶದಲ್ಲೇ ಅತಿ ಉದ್ದದ ರಸ್ತೆ ಸುರಂಗ ಮಾರ್ಗ ಎಂಬ ಖ್ಯಾತಿಗೆ ಪಾತ್ರವಾಗಲಿದೆ.

'ಪತ್ನಿಟಾಪ್' (Patnitop Tunnel ) ಎಂಬ ಹೆಸರಿನಿಂದಲೂ ಕರೆಯಲ್ಪಡುವ ಚೆನಾನಿ-ನಶ್ರಿ ರಸ್ತೆ ಸುರಂಗ ಮಾರ್ಗವು 9.2 ಕೀ.ಮೀ. ದೂರವನ್ನು ಕ್ರಮಿಸಲಿದೆ.

ಚೆನಾನಿ ನಗರದಿಂದ ಎರಡು ಕೀ.ಮೀ.ಗಳಷ್ಟು ದೂರದಲ್ಲಿ ಇದನ್ನು ನಿರ್ಮಿಸಲಾಗುತ್ತಿದ್ದು, ಚೆನಾನಿಯಂದ ನಶ್ರಿ ವರೆಗಿನ 31 ಕೀ.ಮೀ. ದೂರವನ್ನು ಕಡಿಮೆ ಮಾಡಲಿದೆ.

ಇದರೊಂದಿಗೆ ರಾಷ್ಟ್ರೀಯ ಹೆದ್ದಾರಿ 1ಎ (NH-1A)ರಲ್ಲಿ ಎದುರಾಗುವ ವಾಹನ ದಟ್ಟಣೆಯ ಸಮಸ್ಯೆಗೂ ಪರಿಹಾರ ಸಿಗಲಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಶೀತ ವಲಯ ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿಗಾಲದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಮಂಜಿನಿಂದ ಕೂಡಿದ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದ ವಾಹನ ಸಂಚಾರಕ್ಕೆ ಭಾರಿ ತೊಡಕಾಗುತ್ತದೆ.

ಇವೆಲ್ಲದಕ್ಕೂ ಪರಿಹಾರವಾಗಿ ಈ 9.2 ಕೀ.ಮೀ. ಉದ್ದದ ಚೆನಾನಿ-ನೆಶ್ರಿ ಸುರಂಗ ಮಾರ್ಗವನ್ನು ಕೊರೆಯಲಾಗುತ್ತಿದ್ದು, 2016 ಮಧ್ಯಂತರ ಅವಧಿಯಲ್ಲಿ ಲೋಕಾರ್ಪಣೆಯಾಗಲಿದೆ.

ಚೆನಾನಿ-ನಶ್ರಿ ಸುರಂಗ ಮಾರ್ಗದ ಮಗದೊಂದು ವಿಶೇಷಯತೆಯೆಂದರೆ ತುರ್ತು ಸೇವೆಗಳಿಗಾಗಿ ಸಮಾನಾಂತರವಾಗಿ ಸಣ್ಣದಾದ ಪಾರು (ಎಸ್ಕೇಪ್) ಸುರಂಗ ಮಾರ್ಗವನ್ನು ಕೊರೆಯಲಾಗಿದೆ.

ಬೆಂಕಿ ಹಾಗೂ ಅವಘಡದ ಸಂದರ್ಭದಲ್ಲಿ ಪ್ರಯಾಣಿಕರನ್ನು ಪಾರು ಮಾಡಲು ಹಾಗೂ ಅತ್ಯಂತ ವೇಗದಲ್ಲಿ ತುರ್ತು ಸೇವೆ ನೀಡಲು ಇದು ಸಹಕಾರಿಯಾಗಲಿದೆ.

ಇದರಂಗವಾಗಿ ಚೆನಾನಿಯಲ್ಲಿ 100 ರೋಗಿಗಳಿಗೆ ಚಿಕಿತ್ಸೆ ನೀಡಬಹುದಾದ ತುರ್ತು ಆಸ್ಪತ್ರೆಯನ್ನು ನಿರ್ಮಿಸಲಾಗುತ್ತದೆ.

ಪ್ರಸ್ತುತ ದೇಶದ ಅತಿ ಉದ್ದದ ಸುರಂಗ ರಸ್ತೆ ಮಾರ್ಗ ಎಂಬ ದಾಖಲೆಯನ್ನು ರೋಹಟಂಗ್ (Rohtang Tunnel) ಹೆಸರಲ್ಲಿದೆ. ಹಿಮಾಲಯದ ಲೇಹ್-ಮಾನಾಲಿ ಹೆದ್ದಾರಿಯಲ್ಲಿರುವ ಈ ರಸ್ತೆ ಸುರಂಗ ಮಾರ್ಗವು 8.8 ಕೀ.ಮೀ. ಉದ್ದವನ್ನು ಹೊಂದಿದೆ.

ಒಟ್ಟಿನಲ್ಲಿ ಬಹುತೇಕ ಅಂತಿಮ ಹಂತದಲ್ಲಿರುವ ಈ ಮಹತ್ತರ ಯೋಜನೆಗೆ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈಗಾಗಲೇ 10,000 ಕ್ಕೂ ಹೆಚ್ಚು ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿದೆ.

ಭಾರತೀಯ ರಸ್ತೆಗೆ ಸಂಬಂಧಪಟ್ಟ 10 ಅದ್ಭುತ ಸತ್ಯಗಳು
ನಿಮ್ಮನ್ನು ಸ್ತಬ್ಧಗೊಳಿಸುವ ಜಗತ್ತಿನ ಅದ್ಭುತ ಸುರಂಗ ಮಾರ್ಗಗಳು

Click it and Unblock the Notifications








