ಸಾರ್ವಜನಿಕರ ಬಳಕೆಗೆ ತೆರೆದುಕೊಂಡ ಭಾರತದ ಅತಿ ಉದ್ದದ ಸಿಂಗಲ್ ಲೇನ್ ಫ್ಲೈಓವರ್

ಹೊಸದಾಗಿ ನಿರ್ಮಾಣವಾಗಿರುವ ಡೊಬ್ರಾ ಜಂಕ್ಷನ್ ಸಸ್ಪೆಂಷನ್ ಫ್ಲೈಓವರ್ ಭಾರತದ ಇತಿಹಾಸದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆಯಲಿದೆ. ಈ ಫ್ಲೈ ಓವರ್ ಭಾರತದಲ್ಲಿರುವ ಅತಿ ಉದ್ದದ ಏಕ-ಪಥದ ಫ್ಲೈಓವರ್ ಎಂಬುದೇ ಇದರ ಹಿಂದಿರುವ ಕಾರಣ.

ಸಾರ್ವಜನಿಕರ ಬಳಕೆಗೆ ತೆರೆದುಕೊಂಡ ಭಾರತದ ಅತಿ ಉದ್ದದ ಸಿಂಗಲ್ ಲೇನ್ ಫ್ಲೈಓವರ್

ಇದರ ಜೊತೆಗೆ ಈ ಫ್ಲೈಓವರ್ ಮೊಟೋರೇಬಲ್ ಸಸ್ಪೆಂಷನ್ ಫ್ಲೈಓವರ್ ಎಂಬುದು ವಿಶೇಷ. ಈ ಫ್ಲೈಓವರ್ ಉತ್ತರಾಖಂಡ ರಾಜ್ಯದ ತೆಹ್ರಿ ಗರ್ವಾಲ್ ಜಿಲ್ಲೆಯಲ್ಲಿದೆ. ಈ ಫ್ಲೈಓವರ್ ನಿರ್ಮಾಣ ಕಾರ್ಯವು 2006ರಲ್ಲಿ ಆರಂಭವಾಯಿತು.

ಸಾರ್ವಜನಿಕರ ಬಳಕೆಗೆ ತೆರೆದುಕೊಂಡ ಭಾರತದ ಅತಿ ಉದ್ದದ ಸಿಂಗಲ್ ಲೇನ್ ಫ್ಲೈಓವರ್

ಈ ಫ್ಲೈಓವರ್ ಅನ್ನು ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ಸಾರ್ವಜನಿಕರಿಗಾಗಿ ಉದ್ಘಾಟಿಸಿದ್ದಾರೆ. ಈ ಫ್ಲೈಓವರ್ ವಾಹನ ಸವಾರರು ಹಾಗೂ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಲಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಸಾರ್ವಜನಿಕರ ಬಳಕೆಗೆ ತೆರೆದುಕೊಂಡ ಭಾರತದ ಅತಿ ಉದ್ದದ ಸಿಂಗಲ್ ಲೇನ್ ಫ್ಲೈಓವರ್

ಈ ಫ್ಲೈಓವರ್ ಪ್ರತಾಪ್ ನಗರ ಹಾಗೂ ತೆಹ್ರಿ ಗರ್ವಾಲ್ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆಗೊಳಿಸಲಿದೆ. 725 ಮೀಟರ್ ಉದ್ದವಿರುವ ಈ ಫ್ಲೈಓವರ್ ಗೆ ಡೊಬ್ರಾ ಚಾಂಟಿ ಎಂದು ಹೆಸರಿಡಲಾಗಿದೆ.

ಸಾರ್ವಜನಿಕರ ಬಳಕೆಗೆ ತೆರೆದುಕೊಂಡ ಭಾರತದ ಅತಿ ಉದ್ದದ ಸಿಂಗಲ್ ಲೇನ್ ಫ್ಲೈಓವರ್

ಈ ಫ್ಲೈಓವರ್ ಬಳಕೆಗೂ ಮುನ್ನ ತೆಹ್ರಿಯಿಂದ ಪ್ರತಾಪ್ ನಗರ ತಲುಪಲು ಸುಮಾರು 5 ಗಂಟೆಗಳು ಬೇಕಾಗುತ್ತಿತ್ತು. ಈ ಫ್ಲೈಓವರ್ ನಿಂದಾಗಿ 85 ಕಿ.ಮೀ ಉದ್ದದ ಪರ್ವತ ಮಾರ್ಗವನ್ನು ದಾಟಿ ಮುಂದಿನ ಹಂತವನ್ನು ತಲುಪಬಹುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸಾರ್ವಜನಿಕರ ಬಳಕೆಗೆ ತೆರೆದುಕೊಂಡ ಭಾರತದ ಅತಿ ಉದ್ದದ ಸಿಂಗಲ್ ಲೇನ್ ಫ್ಲೈಓವರ್

ಈ ಪರ್ವತ ಹಾದಿಯು ಕಡಿದಾದ ರಸ್ತೆಗಳನ್ನು ಹೊಂದಿದೆ. ಇದರಿಂದಾಗಿ ಪರ್ವತದ ಹಾದಿಯ ಪ್ರಯಾಣವು ಗರಿಷ್ಠ ಐದು ಗಂಟೆಗಳಾಗುತ್ತದೆ. ಈ ಅವಧಿಯನ್ನು ಡೊಬ್ರಾ ಚಾಂಟಿ ಫ್ಲೈಓವರ್ 90 ನಿಮಿಷಗಳಿಗೆ ಇಳಿಸಿದೆ.

ಸಾರ್ವಜನಿಕರ ಬಳಕೆಗೆ ತೆರೆದುಕೊಂಡ ಭಾರತದ ಅತಿ ಉದ್ದದ ಸಿಂಗಲ್ ಲೇನ್ ಫ್ಲೈಓವರ್

2006ರಲ್ಲಿ ಆರಂಭವಾದ ಫ್ಲೈಓವರ್ ಕಾಮಗಾರಿಯು 2008ರಲ್ಲಿ ಪೂರ್ಣಗೊಳ್ಳುವುದೆಂದು ಹೇಳಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಳ್ಳಲು 12 ವರ್ಷಗಳನ್ನು ತೆಗೆದುಕೊಂಡಿದೆ. ಈ ಕಾಮಗಾರಿಯ ನೇತೃತ್ವ ವಹಿಸಿದ್ದ ಎಂಜಿನಿಯರ್‌ಗಳ ಪ್ರಕಾರ, ಈ ಪ್ರದೇಶದಲ್ಲಿ ಕಂಡುಬಂದ ಅಡೆತಡೆಗಳು ವಿಳಂಬಕ್ಕೆ ಕಾರಣವಾಗಿವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಸಾರ್ವಜನಿಕರ ಬಳಕೆಗೆ ತೆರೆದುಕೊಂಡ ಭಾರತದ ಅತಿ ಉದ್ದದ ಸಿಂಗಲ್ ಲೇನ್ ಫ್ಲೈಓವರ್

ಗಡುವು ವಿಸ್ತರಣೆಯಾದ ಕಾರಣಕ್ಕೆ ನಿರ್ಮಾಣ ವೆಚ್ಚವೂ ಸಹ ಹೆಚ್ಚಾಗಿದೆ. ಈ ಫ್ಲೈಓವರ್ ನಿರ್ಮಾಣಕ್ಕೆ ಒಟ್ಟು ರೂ.2.95 ಕೋಟಿ ಖರ್ಚಾಗಿದೆ. ಈ ಫ್ಲೈಓವರ್ ನ ಉದ್ಘಾಟನಾ ಕಾರ್ಯಕ್ರಮವು ರಾಜ್ಯಕ್ಕೆ ಐತಿಹಾಸಿಕ ಕ್ಷಣವಾಗಿದೆ ಎಂದು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ಹೇಳಿದ್ದಾರೆ.

ಸಾರ್ವಜನಿಕರ ಬಳಕೆಗೆ ತೆರೆದುಕೊಂಡ ಭಾರತದ ಅತಿ ಉದ್ದದ ಸಿಂಗಲ್ ಲೇನ್ ಫ್ಲೈಓವರ್

ಕೆಲವು ವಾರಗಳ ಹಿಂದಷ್ಟೇ ವಿಶ್ವದ ಅತಿ ಉದ್ದದ ಸುರಂಗವನ್ನು ಲಡಾಖ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಈಗ ದೇಶದ ಅತಿ ಉದ್ದದ ಸಸ್ಪೆಂಷನ್ ಫ್ಲೈಓವರ್ ಅನ್ನು ಉತ್ತರಾಖಂಡದಲ್ಲಿ ಉದ್ಘಾಟಿಸಲಾಗಿದೆ. ಈ ಚಿತ್ರಗಳನ್ನು ಸಾಹಿಲ್ ಪೆಡ್ನೆಕರ್ ಅವರಿಂದ ಪಡೆಯಲಾಗಿದೆ.

Most Read Articles

Kannada
English summary
India's longest single lane suspension bridge inaugurated for public. Read in Kannada.
Story first published: Monday, November 9, 2020, 19:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X