ಭಾರತದ ಅತ್ಯಂತ ದುಬಾರಿ ಸೂಪರ್‌ಕಾರ್ ಖರೀದಿಸಿದ ಉದ್ಯಮಿ ನಸೀರ್ ಖಾನ್: ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಕಳೆದ ಐದು ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ ಸೂಪರ್‌ಕಾರ್‌ಗಳ ಕಡೆ ಪ್ರೀಮಿಯಂ ಗ್ರಾಹಕರು ಆಸಕ್ತಿ ವಹಿಸುತ್ತಿದ್ದಾರೆ. ಭಾರತದಲ್ಲಿ ಲ್ಯಾಂಭೊರ್ಗಿನಿ, ಆಸ್ಟನ್, ಫೆರಾರಿಯಂತಹ ಬ್ರ್ಯಾಂಡ್‌ಗಳು ತಮ್ಮ ಕಾರುಗಳನ್ನು ಅಧಿಕೃತವಾಗಿ ಮಾರಾಟ ಮಾಡುತ್ತಿದೆ. ಈ ಪಟ್ಟಿಗೆ ಇತ್ತೀಚೆಗೆ ಪ್ರವೇಶಿಸಿದವರು ಮೆಕ್‌ಲಾರೆನ್ ಬ್ರ್ಯಾಂಡ್ ಆಗಿದೆ,

ಸೂಪರ್‌ಕಾರ್‌ ಹಾಗೂ ಸ್ಪೋರ್ಟ್ಸ್ ಕಾರು ತಯಾರಕ ಕಂಪನಿಯಾದ ಮೆಕ್‌ಲಾರೆನ್ ಒಂದು ವರ್ಷದ ಹಿಂದೆ ಭಾರತೀಯ ಮಾರುಕಟ್ಟೆಗೆ ತನ್ನ ಅಧಿಕೃತ ಪ್ರವೇಶವನ್ನು ಘೋಷಿಸಿತ್ತು. ಮೆಕ್‌ಲಾರೆನ್ ಇತ್ತೀಚೆಗೆ ಮುಂಬೈನಲ್ಲಿ ತಮ್ಮ ಮೊದಲ ಡೀಲರ್‌ಶಿಪ್ ಅನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ಭಾಗವಾಗಿ, ಬ್ರ್ಯಾಂಡ್ ತನ್ನ ಪ್ರಮುಖ ಸೂಪರ್ ಕಾರ್, ಮೆಕ್ಲಾರೆನ್ 765 LT ಅನ್ನು ಅನಾವರಣಗೊಳಿಸಿದೆ. ಇದು ಭಾರತದಲ್ಲಿ ಅಧಿಕೃತವಾಗಿ ಮಾರಾಟದಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಸೂಪರ್‌ಕಾರ್‌ಗಳಲ್ಲಿ ಒಂದಾಗಿದೆ.

ಭಾರತದ ಅತ್ಯಂತ ದುಬಾರಿ ಸೂಪರ್‌ಕಾರ್ ಖರೀದಿಸಿದ ಉದ್ಯಮಿ ನಸೀರ್ ಖಾನ್

ಮೆಕ್‌ಲಾರೆನ್ ಕಂಪನಿಯು ಈಗಾಗಲೇ ತನ್ನ ಮೊದಲ ಗ್ರಾಹಕರನ್ನು ಕಂಡುಕೊಂಡಿದೆ. ಈ ಕಾರನ್ನು ಇತ್ತೀಚೆಗೆ ಹೈದರಾಬಾದ್ ಮೂಲದ ಉದ್ಯಮಿಯೊಬ್ಬರಿಗೆ ವಿತರಿಸಲಾಯಿತು. 765 LT ಸ್ಪೈಡರ್ ಅನ್ನು ಖರೀದಿಸಿದ naseer_khan0054 ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮೆಕ್ಲಾರೆನ್ ಅನ್ನು ಭಾರತದಲ್ಲಿ ಇನ್ಫಿನಿಟಿ ಗ್ರೂಪ್ ನಿರ್ವಹಿಸುತ್ತದೆ ಮತ್ತು ಬ್ರ್ಯಾಂಡ್ ತನ್ನ ಸಂಪೂರ್ಣ ಪೋರ್ಟ್ಫೋಲಿಯೊವನ್ನು ಭಾರತದಲ್ಲಿ ನೀಡುತ್ತಿದೆ. ಮೆಕ್ಲಾರೆನ್ ಭಾರತದಲ್ಲಿ GT, Artura, 720S, 720S ಸ್ಪೈಡರ್, 765 LT ಮತ್ತು 765 LT ಸ್ಪೈಡರ್ ಕಾರುಗಳನ್ನು ಮಾರಾಟ ಮಾಡುತ್ತಿದೆ.

ನಸೀರ್ ಖಾನ್ ಖರೀದಿಸಿದ ಮೆಕ್ಲಾರೆನ್ 765 LT ಸ್ಪೈಡರ್ ಆವೃತ್ತಿಯು ಶ್ರೇಣಿಯ ಅತ್ಯಂತ ದುಬಾರಿಯಾಗಿದೆ. ಅವರು MSO ವಾಲ್ಕಾನೋ ರೆಡ್ ಶೇಡ್‌ನಲ್ಲಿ ಸೂಪರ್‌ಕಾರ್ ಅನ್ನು ಖರೀದಿಸಿದ್ದಾರೆ ಅದು ತುಂಬಾ ಉತ್ತಮ ಮತ್ತು ಸ್ಪೋರ್ಟಿಯಾಗಿ ಕಾಣುತ್ತದೆ. ನಸೀರ್ ಖಾನ್ ಬಹುಶಃ ಭಾರತದಲ್ಲಿ 765 LT ಸ್ಪೈಡರ್‌ನ ಮೊದಲ ಗ್ರಾಹಕ. ನಾಸೀರ್ ಈ ಕಾರಿಗೆ ಯಾವುದೇ ಕಸ್ಟಮೈಸೇಶನ್ ಆಯ್ಕೆ ಮಾಡಿಕೊಂಡಿದ್ದಾರೆಯೇ ಎಂಬುದು ನಮಗೆ ಖಚಿತವಿಲ್ಲ. ಈ ಸೂಪರ್‌ಕಾರ್ ಒಂದಕ್ಕಿಂತ ಒಂದು ವಿಷಯದಲ್ಲಿ ವಿಶೇಷವಾಗಿದೆ.

ಮೆಕ್ಲಾರೆನ್ ಇದುವರೆಗೆ ಉತ್ಪಾದಿಸಿದ ವೇಗದ ಕನ್ವರ್ಟಿಬಲ್ಗಳಲ್ಲಿ ಒಂದಾಗಿದೆ. ಇದು ಕೂಪ್ ಆವೃತ್ತಿಯಂತೆ ಅತ್ಯಂತ ಏರೋಡೈನಾಮಿಕ್ ವಿನ್ಯಾಸವನ್ನು ನೀಡುತ್ತದೆ. ಕಾರ್ಬನ್ ಫೈಬರ್ ನಿಂದ ಈ ಸೂಪರ್‌ಕಾರ್‌ನ ಬಾಡಿ ಹೊಂದಿದೆ. ಇದು ಹೆಚ್ಚು ಆಕ್ರಮಣಕಾರಿ ಮುಂಭಾಗದ ಬಂಪರ್, ಸ್ಪಿಲ್ಟರ್, ಸೈಡ್ ಸ್ಕರ್ಟ್‌ಗಳು ಮತ್ತು ಸುತ್ತುವ ಹಿಂಭಾಗದ ಬಂಪರ್ ಅನ್ನು ಪಡೆಯುತ್ತದೆ. ಇದು ಕನ್ವರ್ಟಿಬಲ್ ಆವೃತ್ತಿಯಾಗಿರುವುದರಿಂದ, ಸೂಪರ್‌ಕಾರ್‌ನ ರೂಫ್ ಅನ್ನು ಕೇವಲ 11 ಸೆಕೆಂಡುಗಳಲ್ಲಿ ಮಡಚಿಕೊಳ್ಳುತ್ತದೆ.

ಮೆಕ್ಲಾರೆನ್ 765 LT ಕಾರಿನ ನಿಖರವಾದ ಬೆಲೆ ತಿಳಿದಿಲ್ಲವಾದರೂ, ಇದರ ಬೆಲೆ ಸುಮಾರು ಎಕ್ಸ್ ಶೋರೂಂ ಪ್ರಕಾರ 12 ಕೋಟಿ ರೂ ಆಗಿರಬಹುದು. ಈ ಮಾದರಿಯ ಉತ್ಪಾದನೆಯು 765 ಯುನಿಟ್ ಗಳಿಗೆ ಮಾತ್ರ ಸೀಮಿತವಾಗಿದೆ, ಇದು ಭಾರತದಲ್ಲಿನ ಯಾವುದೇ ಸೂಪರ್‌ಕಾರ್‌ಗಳಿಗಿಂತ ಹೆಚ್ಚು ವಿಶೇಷವಾಗಿದೆ. ಮೆಕ್ಲಾರೆನ್ 765 LT ಸ್ಪೈಡರ್ ಕಾರಿನಲ್ಲಿ 4.0 ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V8 ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಎಂಜಿನ್ 765 ಬಿಹೆಚ್‍ಪಿ ಪವರ್ ಮತ್ತು 800 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಈ ಎಂಜಿನ್ ಅನ್ನು 7-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇದು ಎಲ್ಲಾ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ. ಮೆಕ್ಲಾರೆನ್ ಬ್ರ್ಯಾಂಡ್ ಆಗಿ ಭಾರತದಲ್ಲಿನ ಉತ್ಸಾಹಿಗಳಲ್ಲಿ ದೀರ್ಘಕಾಲದವರೆಗೆ ಸಾಕಷ್ಟು ಜನಪ್ರಿಯವಾಗಿದೆ, ಆದರೆ ಇತ್ತೀಚಿನವರೆಗೂ ಅವರು ಈ ಮಾದರಿಯನ್ನು ಭಾರತದಲ್ಲಿ ಅಧಿಕೃತವಾಗಿ ಮಾರಾಟ ಮಾಡಿಲ್ಲ. ಮೆಕ್ಲಾರೆನ್‌ನಂತಹ ಸೂಪರ್‌ಕಾರನ್ನು ಖರೀದಿಸಲು ಶಕ್ತರಾಗಿರುವ ಅನೇಕ ಉತ್ಸಾಹಿಗಳು ಈ ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಂಡಿದ್ದಾರೆ. ನಾಸೀರ್ ಖಾನ್‌ಗೆ ವಿತರಿಸಲಾದ ಮೆಕ್‌ಲಾರೆನ್ ಮೊದಲ 765 LT ಸ್ಪೈಡರ್ ಆಗಿದೆ,

ಮೆಕ್ಲಾರೆನ್ ಒಂದು ವರ್ಷದ ಹಿಂದೆ ಭಾರತೀಯ ಮಾರುಕಟ್ಟೆಗೆ ತನ್ನ ಅಧಿಕೃತ ಪ್ರವೇಶವನ್ನು ಘೋಷಿಸಿತ್ತು ಮತ್ತು ಆ ಸಮಯದಲ್ಲಿ ಅವರು 720S ಸ್ಪೈಡರ್ ಅನ್ನು ಪಶ್ಚಿಮ ಬಂಗಾಳ ಮೂಲದ ಉದ್ಯಮಿ ಪರ್ವೀನ್ ಅಗರ್ವಾಲ್ ಅವರಿಗೆ ವಿತರಿಸಿದರು. ನಾಸೀರ್ ಖಾನ್‌ಗೆ ಹಿಂತಿರುಗಿ, ಮೆಕ್‌ಲಾರೆನ್ 765 LT ಸ್ಪೈಡರ್ ಅವರ ಮೊದಲ ಸೂಪರ್‌ಕಾರ್ ಅಲ್ಲ. ಅವರ ಗ್ಯಾರೇಜ್‌ನಲ್ಲಿ Rolls Royce Cullinan Black Badge, Ferrari 812 Superfast, Mercedes-Benz G350d, Ford Mustang, Lamborghini Aventador, Lamborghini Urus ಮತ್ತು ಇನ್ನೂ ಹಲವು ದುಬಾರಿ ಕಾರುಗಳಿವೆ.

Article Published On: Wednesday, December 14, 2022, 19:29 [IST]
English summary
Indias most expensive supercar mclaren brought by hyderabad man
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+