ಬೊಲೆರೊ ಕಾರು ಮಾಡಿಫೈ ಮಾಡಿದ ದೈತ್ಯ ಪೊಲೀಸ್
ಪಂಜಾಬ್ ಪೊಲೀಸ್ ಇಲಾಖೆಯಲ್ಲಿರುವ ಜಗ್‍ದೀಪ್ ಸಿಂಗ್‍ರವರು ಭಾರತದ ಅತಿ ಎತ್ತರದ ಪೊಲೀಸ್ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಬೇರೆ ಪೊಲೀಸರು 6 ಅಡಿ, ಆರೂವರೆ ಅಡಿ ಎತ್ತರವನ್ನು ಹೊಂದಿದ್ದರೆ, ಇವರು 7.6 ಅಡಿ ಎತ್ತರವನ್ನು ಹೊಂದಿದ್ದಾರೆ.

ತಮ್ಮ ಅತಿ ಎತ್ತರದಿಂದಾಗಿಯೇ ಇವರು ಪಂಜಾಬ್‍ನಲ್ಲಿ ಸೆಲೆಬ್ರಿಟಿಯಾಗಿದ್ದಾರೆ. ಇವರು ಹೋದ ಕಡೆಯಲ್ಲೆಲ್ಲಾ ಪೊಲೀಸರೂ ಸೇರಿದಂತೆ, ಸಾರ್ವಜನಿಕರು ಇವರ ಜೊತೆಗೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಜಗ್‍ದೀಪ್‍ಸಿಂಗ್‍ರವರು ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಕಳೆದ 19 ವರ್ಷಗಳಿಂದ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಜಗ್‍ದೀಪ್‍ರವರಿಗೆ ತಮ್ಮ ಈ ಎತ್ತರವು ಶಾಪ ಹಾಗೂ ವರ ಎರಡೂ ಆಗಿದೆ. ಇಷ್ಟೊಂದು ಎತ್ತರದ ಕಾರಣಕ್ಕೆ ಅನಾನುಕೂಲ ಉಂಟಾಗುತ್ತಿದೆ. ಈ ಎತ್ತರವು ಇವರ ಜೀವನಶೈಲಿಯನ್ನು ಬದಲಿಸಿದೆ. ಸ್ವಲ್ಪ ಹೆಚ್ಚು ಎನ್ನಬಹುದಾದ ಎತ್ತರವನ್ನು ಹೊಂದಿರುವ ಕಾರಣಕ್ಕೆ ಇವರು ಧರಿಸುವ ಶೂಗಳನ್ನು ವಿಶೇಷವಾಗಿ ಆರ್ಡರ್ ಕೊಟ್ಟು ತಯಾರಿಸಲಾಗುತ್ತಿದೆ.

ಇವರು ಧರಿಸುವ ಬಟ್ಟೆಗಳನ್ನೂ ಸಹ ವಿಶೇಷವಾಗಿಯೇ ತಯಾರಿಸಲಾಗುತ್ತದೆ. ಎಲ್ಲಾ ರೀತಿಯಲ್ಲಿಯೂ ಜಗ್‍ದೀಪ್‍ರವರಿಗೆ ವಿಶೇಷವಾದ ವಸ್ತುಗಳನ್ನು ತಯಾರಿಸಬೇಕಿದೆ. ಈ ಎತ್ತರದಿಂದಾಗಿ ಜಗ್‍ದೀಪ್‍ರವರಿಗೆ ಆಟೋಮೊಬೈಲ್‍ನಲ್ಲಿ ಹಿನ್ನಡೆಯುಂಟಾಗಿದೆ.

ಇವರ ಬಳಿಯಿರುವ ನೈಕ್ ಹಾಗೂ ಸ್ಪೆಂಡರ್ ಬೈಕ್‍ಗಳು ಇವರ ಎತ್ತರ ಹಾಗೂ ಗಾತ್ರದ ಮುಂದೆ ಚಿಕ್ಕ ಮಕ್ಕಳ ಬೈಕಿನಂತೆ ಕಾಣುತ್ತವೆ. ಈ ಕಾರಣಕ್ಕೆ ಇವರಿಗೆ ಪಂಜಾಬ್ ಪೊಲೀಸ್ ಇಲಾಖೆಯು ಮಹೀಂದ್ರಾ ಬೊಲೆರೊ ಕಾರ್ ಅನ್ನು ನೀಡಿತ್ತು.

ಆದರೆ ದೈತ್ಯಾಕಾರದ ದೇಹವನ್ನು ಹೊಂದಿರುವ ಕಾರಣಕ್ಕೆ ಈ ಕಾರ್ ಸಹ ಇವರಿಗೆ ಸರಿಯಾಗಲಿಲ್ಲ. ಈ ಕಾರ್ ಅನ್ನು ಹತ್ತುವಾಗ ಹಾಗೂ ಇಳಿಯುವಾಗ ತೊಂದರೆಯನ್ನು ಅನುಭವಿಸುತ್ತಿದ್ದರು. ಹಾಗಾಗಿ ಈ ಕಾರ್ ಅನ್ನು ಮಾಡಿಫೈಗೊಳಿಸಲು ಮುಂದಾದರು.

ಆದರೆ ಇದು ಸರ್ಕಾರ ನೀಡಿರುವ ವಾಹನವಾದ ಕಾರಣಕ್ಕೆ ಈ ಕಾರ್ ಅನ್ನು ಮಾಡಿಫೈಗೊಳಿಸುವುದು ಅಷ್ಟು ಸುಲಭವಲ್ಲ. ಈ ಕಾರಣಕ್ಕೆ ಕಾರಿನ ಎತ್ತರವನ್ನು ಮಾತ್ರ ಮಾಡಿಫೈ ಮಾಡಿದ್ದಾರೆ. ಮಾಡಿಫೈ ಮಾಡಿದ ನಂತರ ಕಾರಿನಲ್ಲಿ ಆರಾಮದಾಯಕವಾಗಿ ಪ್ರಯಾಣಿಸುತ್ತಿದ್ದಾರೆ.

ಲಿಫ್ಟ್ ಕಿಟ್‍ನ ಸಹಾಯದಿಂದ ಈ ಕಾರಿನ ಎತ್ತರವನ್ನು ಮಾಡಿಫೈಗೊಳಿಸಿದ್ದಾರೆ. ಜಗ್‍ದೀಪ್ ಸಿಂಗ್‍ರವರು ಕಾಲಿರವರಿಗಿಂತ ಹೆಚ್ಚು ಎತ್ತರವನ್ನು ಹೊಂದಿದ್ದಾರೆ. ಎತ್ತರದ ಜೊತೆಗೆ ಹೆಚ್ಚಿನ ತೂಕವನ್ನು ಸಹ ಹೊಂದಿದ್ದಾರೆ. ಈ ಕಾರಣಕ್ಕೆ ತಮಗೆ ನೀಡಿದ್ದ ಮಹೀಂದ್ರಾ ಬೊಲೆರೊ ಕಾರ್ ಅನ್ನು ಮಾಡಿಫೈಗೊಳಿಸಿದ್ದಾರೆ. ಇದನ್ನು ಹಿಸ್ಟರಿ ಟಿವಿಯ ಯುಟ್ಯೂಬ್ ಚಾನೆಲ್‍ನಲ್ಲಿ ಕಾಣಬಹುದು.

ಮಾಡಿಫೈಗೊಳಿಸಿದ ನಂತರ ಕಾರ್ ಅನ್ನು ಪೊಲೀಸ್ ಕೆಲಸಕ್ಕೆ ಬಳಸುತ್ತಿದ್ದಾರೆ. ಈ ಕಾರಿನಲ್ಲಿ ಕೆಲವು ಬದಲಾವಣೆಗಳು ಕಾಣಬಹುದು. ಇವುಗಳಲ್ಲಿ ಕಾರಿನ ಟಯರ್‍ಗಳನ್ನು ಸ್ವಲ್ಪ ಪ್ರಮಾಣದಲ್ಲಿ ಎತ್ತರಿಸಲಾಗಿದೆ. ಈ ಕಾರು ರೆಗ್ಯುಲರ್ ಮಹೀಂದ್ರಾ ಬೊಲೆರೊ ಕಾರಿಗಿಂತ ಆಕರ್ಷಕವಾಗಿ ಕಾಣುತ್ತದೆ.
ವಿಶೇಷವೆಂದರೆ ಜಗದೀಪ್ ಸಿಂಗ್‍ರವರು ಈ ಕಾರಿಗಿಂತ ಹೆಚ್ಚು ಎತ್ತರವಾಗಿದ್ದಾರೆ. ಭಾರತದ ಮೋಟಾರು ವಾಹನ ಕಾಯ್ದೆಯ ಪ್ರಕಾರ ಭಾರತದಲ್ಲಿ ವಾಹನಗಳನ್ನು ಮಾಡಿಫೈಗೊಳಿಸುವಂತಿಲ್ಲ. ಜಗ್‍ದೀಪ್ ಸಿಂಗ್‍ರವರ ಬೊಲೆರೊ ಕಾರಿನಲ್ಲಿ ಹಲವಾರು ಆಫ್ಟರ್ ಮಾರ್ಕೆಟ್ ಬಿಡಿಭಾಗಗಳನ್ನು ಅಳವಡಿಸಲಾಗಿದೆ.

ಬಂಪರ್ ಹಾಗೂ ವ್ಹೀಲ್‍ಗಳನ್ನು ಎತ್ತರಿಸಲು ಕೆಲವು ಎಕ್ವಿಪ್‍ಮೆಂಟ್‍ಗಳನ್ನು ಬಳಸಲಾಗಿದೆ. ಇವುಗಳ ಬಳಕೆಯನ್ನು ಸಹ ನಿಷೇಧಿಸಲಾಗಿದೆ. ಜಗ್‍ದೀಪ್‍ರವರು ಕುಳಿತಾಗ ಕಾರಿನ ರೂಫ್ ಅವರ ತಲೆಗೆ ತಾಗಿದರೂ ಮೊದಲಿಗಿಂತ ಹೆಚ್ಚು ತೊಂದರೆಯಾಗುತ್ತಿಲ್ಲ.


Click it and Unblock the Notifications








