indigo: ವಿಮಾನದಲ್ಲಿ ಸಿಕ್ಕಾಪಟ್ಟೆ ಸೆಕೆ, AC ಕೇಳಿದ್ರೆ ಬೆವರು ಒರೆಸಿಕೊಳ್ಳಲು ಟಿಶ್ಯೂ ಕೊಟ್ಟ ಗಗನ ಸಖಿಯರು!

ಚಂಡೀಗಢದಿಂದ ಜೈಪುರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ವಿಮಾನದ ಹವಾನಿಯಂತ್ರಣ ವ್ಯವಸ್ಥೆಯ ವೈಫಲ್ಯದಿಂದಾಗಿ ಪ್ರಯಾಣಿಕರು ಶನಿವಾರ ಅಹಿತಕರ ಪ್ರಯಾಣಕ್ಕೆ ಒಳಗಾದರು. ಈ ಘಟನೆಯನ್ನು ಪಂಜಾಬ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ಬೆಳಕಿಗೆ ತಂದಿದ್ದು, ತಮ್ಮ ಅನುಭವವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಅವರು ಟ್ವಿಟರ್‌ನಲ್ಲಿ ಹೀಗೆ ಬರೆದಿದ್ದು, ಇಂದು ಚಂಡೀಗಢದಿಂದ ಜೈಪುರಕ್ಕೆ ಏರ್‌ಕ್ರಾಫ್ಟ್ 6E7261 ನಲ್ಲಿ ಪ್ರಯಾಣಿಸುತ್ತಿದ್ದಾಗ ಅತ್ಯಂತ ಭಯಾನಕ ಅನುಭವವಾಗಿದೆ. ಸುಡುವ ಬಿಸಿಲಿನಲ್ಲಿ ನಮ್ಮನ್ನು ಸರದಿ ಸಾಲಿನಲ್ಲಿ ಸುಮಾರು 10-15 ನಿಮಿಷಗಳ ಕಾಲ ಕಾಯುವಂತೆ ಮಾಡಲಾಯಿತು. ನಾವು ವಿಮಾನವನ್ನು ಪ್ರವೇಶಿಸಿದಾಗ, ನಮಗೆ ಆಘಾತವಾಗುವಂತೆ ಎಸಿಗಳು ಕೂಡ ಕಾರ್ಯನಿರ್ವಹಿಸಲಿಲ್ಲ. ಅಲ್ಲದೇ ಎಸಿಗಳು ಆನ್ ಆಗದೆಯೇ ವಿಮಾನವು ಹೊರಟಿತು.

indigo-flight-no-ac-air-hostesses-gave-tissue-wipe-sweat

ಟೇಕ್‌ಆಫ್‌ನಿಂದ ಲ್ಯಾಂಡಿಂಗ್‌ವರೆಗೆ ಎಸಿಗಳು ಆಫ್ ಆಗಿದ್ದವು, ಎಲ್ಲಾ ಪ್ರಯಾಣಿಕರು ಪ್ರಯಾಣದುದ್ದಕ್ಕೂ ಸಂಕಷ್ಟ ಅನುಭವಿಸುವಂತೆ ಮಾಡಲಾಗಿತ್ತು. ಹಾರಾಟದ ಸಮಯದಲ್ಲಿ ಗಂಭೀರ ಕಾಳಜಿಯನ್ನು ಯಾರೂ ತಿಳಿಸಲಿಲ್ಲ. ಗಗನಸಖಿಯರು ಬೆವರು ಒರೆಸಿಕೊಳ್ಳಲು ಪ್ರಯಾಣಿಕರಿಗೆ ಉದಾರವಾಗಿ ಟಿಶ್ಯೂ ಪೇಪರ್‌ಗಳನ್ನು ವಿತರಿಸಿದರು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹೆಚ್ಚಿನ ಪ್ರಯಾಣಿಕರು ಪ್ರಕ್ಷುಬ್ಧ ಮತ್ತು ಉದ್ರೇಕಗೊಂಡಿದ್ದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ.

ಅಸಹಾಯಕ ಪ್ರಯಾಣಿಕರು ಸೆಕೆಯಿಂದ ಬಳಲುತ್ತಾ ಕಾಗದಗಳನ್ನು ಬೀಸಿಕೊಳ್ಳುತ್ತಿದ್ದರು. ಇದು ಸ್ಪಷ್ಟವಾಗಿ ಒಂದು ಪ್ರಮುಖ ತಾಂತ್ರಿಕ ಸಮಸ್ಯೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೇವಲ ಹಣ ಉಳಿಸಲು ಪ್ರಯಾಣಿಕರ ಆರೋಗ್ಯ ಮತ್ತು ಸೌಕರ್ಯವನ್ನು ಪಣಕ್ಕಿಡಲಾಗಿದೆ. ಇಂಡಿಗೋ ಏರ್‌ಲೈನ್ಸ್ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರು ಮತ್ತೊಮ್ಮೆ ಇಂತಹ ಆಘಾತಕಾರಿ ಅನುಭವಕ್ಕೆ ಒಳಗಾಗಬಾರದು ಎಂದು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

indigo-flight-no-ac-air-hostesses-gave-tissue-wipe-sweat

ಒಟ್ಟಾರೆ ವಿಮಾನದಲ್ಲಿದ್ದ ಪ್ರಯಾಣಿಕರು ಎಸಿ ಇಲ್ಲದೇ ಬಲವಂತವಾಗಿ 90 ನಿಮಿಷಗಳ ಕಷ್ಟವನ್ನು ಅನುಭವಿಸಿದ್ದಾರೆ. ವಿಮಾನದ ಉದ್ದಕ್ಕೂ, ಪ್ರಯಾಣಿಕರು ಶಾಖವನ್ನು ಸಹಿಸಿಕೊಳ್ಳುವಂತೆ ಒತ್ತಾಯಿಸಲಾಗಿದೆ. ಏರ್‌ಲೈನ್‌ನಿಂದ ಯಾವುದೇ ಪರಿಹಾರ ಅಥವಾ ಸಮಸ್ಯೆಯ ಸ್ವೀಕೃತಿಯಿಲ್ಲ. ಅಸ್ವಸ್ಥತೆಯನ್ನು ನಿವಾರಿಸುವ ಪ್ರಯತ್ನದ ಭಾಗವಾಗಿ ಗಗನಸಖಿಯರು ಬೆವರು ಒರೆಸಿಕೊಳ್ಳಲು ಪ್ರಯಾಣಿಕರಿಗೆ ಟಿಶ್ಯೂ ಪೇಪರ್‌ಗಳನ್ನು ವಿತರಿಸಿರುವುದು ಶೋಚನೀಯ.

ಅದೇ ದಿನ ವಿವಿಧ ಇಂಡಿಗೋ ವಿಮಾನಗಳಲ್ಲಿ ತಾಂತ್ರಿಕ ದೋಷಗಳು: ಅದೇ ದಿನ ಇಂಡಿಗೋ ವಿಮಾನಗಳಲ್ಲಿ ವರದಿಯಾದ ಮೂರು ತಾಂತ್ರಿಕ ದೋಷಗಳಲ್ಲಿ ಈ ಘಟನೆಯೂ ಒಂದು. ದೆಹಲಿಗೆ ತೆರಳುತ್ತಿದ್ದ ಮತ್ತೊಂದು ವಿಮಾನವು ಎಂಜಿನ್ ದೋಷದಿಂದ ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಹಾಗೆಯೇ ರಾಂಚಿಗೆ ಹೊರಟಿದ್ದ ಇಂಡಿಗೋ ವಿಮಾನವು ತಾಂತ್ರಿಕ ದೋಷದಿಂದಾಗಿ ಟೇಕ್ ಆಫ್ ಆದ ಒಂದು ಗಂಟೆಯೊಳಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿತ್ತು.

ಸಾಮಾನ್ಯವಾಗಿ, ವಿಮಾನದಲ್ಲಿ ಎಸಿ ಕಾರ್ಯನಿರ್ವಹಿಸದಿದ್ದರೆ ವಿಮಾನವನ್ನು ಪ್ರಾರಂಭಿಸುವುದು ತಪ್ಪು. ಏಕೆಂದರೆ ವಿಮಾನದೊಳಗೆ ಪ್ರಯಾಣಿಕರು ಹೊರಬಿಟ್ಟ ಶ್ವಾಸವು ಅಲ್ಲೇ ಸುತ್ತುತ್ತದೆ. ಉಸಿರಾಟದ ತೊಂದರೆ ಇರುವವರಲ್ಲಿ ಇದು ತ್ವರಿತವಾಗಿ ಉಸಿರುಗಟ್ಟುವಿಕೆಗೆ ಕಾರಣವಾಗಬಹುದು. ಹಾಗಾಗಿ, ಎಸಿ ಕಾರ್ಯನಿರ್ವಹಿಸದಿದ್ದರೆ, ವಿಮಾನಯಾನ ಸಂಸ್ಥೆಗಳು ಆ ಹಾರಾಟವನ್ನು ನಿಲ್ಲಿಸುತ್ತವೆ ಅಥವಾ ಅದರ ಬದಲಿಗೆ ಮತ್ತೊಂದು ವಿಮಾನವನ್ನು ಹಾರಿಸುತ್ತವೆ.

ಇದು ಸಣ್ಣ ಪ್ರಯಾಣವಾಗಿರುವುದರಿಂದ ಯಾರಿಗೂ ಅಪಾಯವಾಗಲಿಲ್ಲ. ಆದರೆ ದೀರ್ಘಾವಧಿಯ ವಿಮಾನಗಳು ತುಂಬಾ ಅಪಾಯಕಾರಿ. ಮೊದಲೇ ಹೇಳಿದಂತೆ ಇಂಡಿಗೋದವರು ಹಣ ಉಳಿಸಿಲು ಹೀಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಇಂತಹ ಘಟನೆಗಳು ಮರುಕಳಿಸದಂತೆ ಏರ್‌ಲೈನ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಲವರು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Monday, August 7, 2023, 13:47 [IST]
English summary
Indigo flight no ac air hostesses gave tissue wipe sweat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+