IndiGo: ಅಜ್ಜನ ಋಣ ತೀರಿಸಿಕೊಂಡ ಮೊಮ್ಮಗ: ಅಂದು ಟಿವಿಎಸ್-50, ಇಂದು ಇಂಡಿಗೋ ವಿಮಾನ

ಪ್ರತಿಯೊಬ್ಬರ ಜೀವನದಲ್ಲಿ ತಂದೆ-ತಾಯಿ ನಂತರ ಅವರ ಅಜ್ಜ-ಅಜ್ಜಿಯ ಬಗ್ಗೆ ಒಂದು ಪುಟ ಇದ್ದೇ ಇರುತ್ತೆ. ಹಲವು ನೆನಪುಗಳು, ಅವರೊಂದಿಗೆ ಕಳೆದ ಕ್ಷಣಗಳು ಬಹುತೇಕರಿಗೆ ವಿಶೇಷವಾಗಿರುತ್ತವೆ. ಚಿಕ್ಕಂದಿನಿಂದಲೂ ಅವರಿಗಾಗಿ ಏನಾದರೊಂದು ಮಾಡುವ ಹಂಬಲ ಕೂಡ ಇರುತ್ತದೆ. ಅದನ್ನು ಯಾವುದೋ ಒಂದು ರೀತಿಯಲ್ಲಿ ನೆರವೇರಿಸಿ ಮನಸ್ಸಿಗೆ ಖುಷಿಯಾದ್ರೆ ಸಾಕು ಅಲ್ಲವೇ?

ಇಲ್ಲೊಬ್ಬರು ಮೊಮ್ಮಗ ಮೊದಲ ಬಾರಿಗೆ ತಮ್ಮ ಅಜ್ಜ-ಅಜ್ಜಿ ಹಾಗೂ ತಾಯಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸಿದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರೆ. ವಿಶೇಷವೆಂದರೆ ಮೊಮ್ಮಗನೇ ವಿಮಾನದ ಪೈಲಟ್ ಆಗಿದ್ದು, ಈ ಇಂಡಿಗೊ (IndiGo)ದ ಪೈಲಟ್ ಪ್ರದೀಪ್ ಕೃಷ್ಣನ್ ಎಂದು ತಿಳಿದುಬಂದಿದೆ. ಚೆನ್ನೈನಿಂದ ಕೊಯಮತ್ತೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಪೈಲಟ್ ಆಗಿದ್ದಾರೆ. ಮೊದಲ ಬಾರಿಗೆ ಅವರೊಂದಿಗೆ ವಿಮಾನ ಪ್ರಯಾಣ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಆಗಾಗ್ಗೆ ತಮ್ಮ ವಿಮಾನ ಪ್ರಯಾಣದ ವೀಡಿಯೊಗಳನ್ನು ಪೋಸ್ಟ್ ಮಾಡುವ ಇವರು, ಇದೀಗ ಈ ಹೃದಯ ಸ್ಪರ್ಶಿ ವಿಡಿಯೋ ಹಂಚಿಕೊಂಡಿದ್ದು, ಒಮ್ಮೆಲೆ ವಿಡಿಯೋ ಸಖತ್ ವೈರಲ್ ಆಗಿಬಿಟ್ಟಿದೆ.

indigo-pilot-1st-flight-journey-with-his-grandparents

ನನ್ನ ಕುಟುಂಬ ನನ್ನೊಂದಿಗೆ ಪ್ರಯಾಣಿಸುತ್ತಿದೆ ಎಂದು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ. ನನ್ನ ಅಜ್ಜ-ಅಜ್ಜಿ ಮತ್ತು ಅಮ್ಮ 29ನೇ ಸಾಲಿನಲ್ಲಿ ಕುಳಿತಿದ್ದಾರೆ. ನನ್ನ ಅಜ್ಜ ಇಂದು ಮೊದಲ ಬಾರಿಗೆ ನನ್ನೊಂದಿಗೆ ಹಾರುತ್ತಿದ್ದಾರೆ. ನಾನು ಅವರ ಟಿವಿಎಸ್ 50 ಮೊಪೆಡ್‌ನ ಹಿಂದಿನ ಸೀಟಿನಲ್ಲಿ ಅನೇಕ ಬಾರಿ ಪ್ರಯಾಣಿಸಿದ್ದೇನೆ. ಆದರೆ ಈಗ ಅವರಿಗೆ ಸವಾರಿ ನೀಡುವ ಸರದಿ ನನ್ನದಾಗಿದೆ ಎಂದು ವಿಮಾನದಲ್ಲಿ ಘೋಷಿಸಿದರು.

ಪೈಲೆಟ್ ಪ್ರದೀಪ್ ಕೃಷ್ಣನ್ ಅವರ ತಾಯಿ ಭಾವುಕರಾಗುವುದನ್ನು ವಿಡಿಯೋದಲ್ಲಿ ಕಾಣಬಹುದು. ತಮ್ಮ ಆಸನದಲ್ಲಿ ಎದ್ದು ನಿಂತು ಎಲ್ಲರೂ ಸ್ವಾಗತಿಸಲು ಪೈಲಟ್ ಪ್ರಯಾಣಿಕರನ್ನು ಕೇಳಿಕೊಂಡರು. ನನ್ನ ಅತಿದೊಡ್ಡ ಕನಸಿದು. ತಮ್ಮ ಕುಟುಂಬ ಮತ್ತು ಸ್ನೇಹಿತರನ್ನು ವಿಮಾನದಲ್ಲಿ ಕರೆದೊಯ್ಯುವುದು ಪ್ರತಿಯೊಬ್ಬ ಪೈಲಟ್‌ನ ಕನಸು" ಎಂದು ಪ್ರದೀಪ್ ಕೃಷ್ಣನ್ ಇನ್‌ಸ್ಟಾಗ್ರಾಂನಲ್ಲಿ ವೀಡಿಯೊ ಕೆಳಗೆ ಬರೆದುಕೊಂಡಿದ್ದಾರೆ.

ಪ್ರೇಮಿಗಳಂತೆ ಓಡಾಡುತ್ತಾರೆ ಅಜ್ಜಿ-ಮೊಮ್ಮೊಗ: ಪ್ರೇಮಿಗಳೆಂದಾಕ್ಷಣ ಕೆವಲ ಯುವತಿ-ಯುವಕರ ನಡುವೆ ಮಾತ್ರ ಇರುವುದಿಲ್ಲ. ಯಾವುದೇ ಬಂಧವಾಗಲಿ ಕಲ್ಮಷ, ಸ್ವಾರ್ಥವಿಲ್ಲದೆ ಪ್ರೀತಿಯನ್ನು ಹಂಚಿಕೊಂಡರೆ ಅದು ಪ್ರೀತಿಗಿಂತ ದೊಡ್ಡದಾಗಿರುತ್ತದೆ. ಇಲ್ಲೂ ಈ ಅಜ್ಜಿ-ಮೊಮ್ಮಗನ ನಡುವಿನ ಭಾಂದವ್ಯ ಅಂಥಹದ್ದೇ ಆಗಿದೆ. ತನ್ನ ಅಜ್ಜಿಯನ್ನು ಪ್ರತಿ 15 ದಿನಗಳಿಗೊಮ್ಮೆ ಕಾರಿನಲ್ಲಿ ನಗರವೆಲ್ಲಾ ಸುತ್ತಾಡಿಸುವ ಕುರಿತು ಮೊಮ್ಮೊಗ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ವಿಡಿಯೋದಲ್ಲಿ ತನ್ನ ಅಜ್ಜಿಯ ಕುರಿತು ವಿವರಿಸಿ, ಕಾರಿನಲ್ಲಿ ಹೊರ ಹೋಗುವ ದಿನಕ್ಕಾಗಿ ತನ್ನ ಅಜ್ಜಿ ಕಾಯುವ ಆನಂದ ಕ್ಷಣಗಳನ್ನು ರೆಕಾರ್ಡ್ ಮಾಡಿದ್ದಾನೆ. ಈ ಸುಂದರವಾದ ಬಂಧದ ಬಗ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಪ್ರತಿ ಬಾರಿ ಅಜ್ಜಿಯನ್ನು ಕರೆದೊಯ್ಯುವಾಗ, ಆಕೆ ಸಣ್ಣ ಹುಡುಗಿಯಂತೆ ಉತ್ಸುಕರಾಗಿರುತ್ತಾರೆ. ಆಕೆ ಬೆಳೆದ ತನ್ನ ಬೆಂಗಳೂರಿನ ಬಗ್ಗೆ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಪ್ರತಿ ಬಾರಿಯೂ ಒಂದೇ ರೀತಿಯ ಸಂಭಾಷಣೆಗಳನ್ನು ಹೊಂದಿದ್ದರೂ, ಪ್ರತಿ 15 ದಿನಗಳಿಗೊಮ್ಮೆ ನನ್ನ ಬರುವಿಕೆಗಾಗಿಯೇ ಕಾಯುತ್ತಿರುತ್ತಾರೆ. ಅದರ ಪ್ರತಿ ಕ್ಷಣವನ್ನು ಪ್ರೀತಿಸುತ್ತಾರೆ ಎಂದು ಯುವಕ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

indigo-pilot-1st-flight-journey-with-his-grandparents

ವಯಸ್ಸಾದವರನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಬರುವ ಇಂದಿನ ಕಾಲದಲ್ಲಿ ಈ ಯುವಕರು ತೋರುತ್ತಿರುವ ಈ ಪ್ರೀತಿಗೆ ಹಲವರು ಫಿದಾ ಆಗಿದ್ದಾರೆ. ವಯಸ್ಸಾದವರನ್ನು ಅವರ ಕೊನೆ ದಿನಗಳಲ್ಲಿ ಖುಷಿಯಾಗಿಡಬೇಕೆಂಬ ನಿರ್ಣಯವು ಅವರ ಮುಖದಲ್ಲಿ ಎಲ್ಲಿಲ್ಲದ ಸಂತೋಷವನ್ನು ನೋಡುವಂತೆ ಮಾಡಿದೆ. ಈ ಇಬ್ಬರು ಯುವಕರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, April 5, 2024, 17:08 [IST]
English summary
Indigo pilot 1st flight journey with his grandparents
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+