ಸಾಹಸಿ ಹೆಣ್ಣು.. ಸ್ಕೂಟಿಯಿಂದ ಆರಂಭಿಸಿ ಹೊಸ ಥಾರ್‌ ಖರೀದಿ: ಪಾನಿಪುರಿ ಗರ್ಲ್‌ಗೆ ಆನಂದ್ ಮಹೀಂದ್ರಾ ಫಿದಾ!

ಮಹೀಂದ್ರಾ ಗ್ರೂಪ್‌ (Mahindra Group) ಮುಖ್ಯಸ್ಥ ಆನಂದ್ ಮಹೀಂದ್ರಾ (Anand Mahindra) ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಯಾವಾಗಲೂ ಒಂದಿಲೊಬ್ಬ ಸಾಧಕರ ಸ್ಪೂರ್ತಿದಾಯಕ ಕಥೆಗಳನ್ನು ತಮ್ಮ 'ಎಕ್ಸ್' ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ, ಬುಲೆಟ್ ಪಾನಿಪುರಿ ವಾಲಿ ಎಂದು ಖ್ಯಾತಿಗಳಿರುವ ತಾಪ್ಸಿ ಉಪಾಧ್ಯಾಯ ಅವರನ್ನು ಹೊಗಳಿದ್ದಾರೆ.

ನಿಮ್ಮಲ್ಲಿ ಬಹುತೇಕರು ಇನ್ಸ್ಟಾಗ್ರಾಮ್ (Instagram) ರೀಲ್ಸ್ ನಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗೆ ಫುಡ್ ಕಾರ್ಟ್‌ ಕಟ್ಟಿಕೊಂಡು ಬಂದು, ಪಾನಿಪುರಿ ಮಾರಾಟ ಮಾಡುವ ಬಿಟೆಕ್ ಪದವೀಧರೆ ತಾಪ್ಸಿ ಉಪಾಧ್ಯಾಯ ಅವರ ಹಲವು ವಿಡಿಯೋಗಳನ್ನು ನೋಡಿರುತ್ತೀರಿ. ಆಕೆಯ ರೀಲ್ಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್ ನಲ್ಲಿ ಇರುತ್ತವೆ.

Inspirational Girl: Starting with Scooty, Now Buy New Thar Suv, Anand Mahindra Praises Panipuri Girl

ಈಗ ತಾಪ್ಸಿ ಬುಲೆಟ್ ಬಿಟ್ಟು, ಮಹೀಂದ್ರಾ ಥಾರ್‌ ಏರಿದ್ದಾರೆ. ಸ್ಕೂಟಿಗೆ ಫುಡ್ ಕಾರ್ಟ್‌ ಕಟ್ಟಿಕೊಂಡು ಬಂದು ಪಾನಿಪುರಿ ಮಾರಾಟ ಮಾಡುವ ಕೆಲಸದಲ್ಲಿ ತೊಡಕೊಂಡು ಕೊಂಚ ಲಾಭವನ್ನು ಮಾಡಿ, ಬುಲೆಟ್ ಬೈಕ್‌ನಲ್ಲಿ ಬರುವುದನ್ನು ಶುರು ಮಾಡಿದ್ದರು. ಸದ್ಯ ಆಕೆಯ ಉದ್ಯಮ ದೊಡ್ಡ ಮಟ್ಟದಲ್ಲಿ ಬೆಳೆದಿದ್ದು, 40 ಪಾನಿಪುರಿ ಗಾಡಿಗಳಿಗೆ ಮಾಲೀಕರಾಗಿದ್ದಾರೆ. ಒಂದಷ್ಟು ಮಂದಿಗೆ ಉದ್ಯೋಗ ನೀಡಿದ್ದು, ರೂ.10 ಲಕ್ಷ ಕೊಟ್ಟು ಥಾರ್‌ ಕೊಂಡುಕೊಳ್ಳುವಷ್ಟು ಎತ್ತರಕ್ಕೆ ಏರಿದ್ದಾರೆ.

ಮಹೀಂದ್ರಾ ಥಾರ್‌ ಎಸ್‌ಯುವಿಯಲ್ಲಿ ಬರುವ ತಾಪ್ಸಿ ಉಪಾಧ್ಯಾಯ, ಸೀದಾ ರಸ್ತೆ ಬದಿಯಲ್ಲಿ ತನ್ನ ಕಾರನ್ನು ನಿಲ್ಲಿಸಿ, ಪಾನಿಪುರಿ ಮಾರಾಟಗೊಳಿಸಲು ಸಿದ್ದತೆಯನ್ನು ಆರಂಭಿಸುತ್ತಾರೆ. ಪಾನಿಪುರಿಗೆ ಬಳಕೆ ಮಾಡುವ ಮಸಾಲೆಗಳನ್ನು ತುಂಬಾ ಶುಚಿತ್ವದಿಂದ ತಯಾರಿಸಲಾಗುತ್ತದೆ. 'ಈ ಯುವತಿ ಒಂದೇ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಗೊಂಡರು. ಅದರಿಂದ ಇದೆಲ್ಲ ಸಾಧ್ಯವಾಗಿದೆ ಅಂದುಕೊಳ್ಳುತ್ತಾರೆ. ಹಾಗೇನೂ ಇಲ್ಲ. ಈ ಮಟ್ಟಕ್ಕೆ ಏರಲು ವರ್ಷಗಳಿಂದ ಕಷ್ಟಪಟ್ಟಿದ್ದೇನೆ ಎಂದು 22ರ ಹರೆಯದ ತಾಪ್ಸಿ ಹೇಳುತ್ತಾರೆ.

Inspirational Girl: Starting with Scooty, Now Buy New Thar Suv, Anand Mahindra Praises Panipuri Girl

ತಾಪ್ಸಿ ಉಪಾಧ್ಯಾಯ ಥಾರ್‌ನಲ್ಲಿ ಬರುವ ವಿಡಿಯೋ ಆನಂದ್ ಮಹೀಂದ್ರಾ ಕಣ್ಣಿಗೆ ಬಿದಿದ್ದು, ಆಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 'ಆಫ್-ರೋಡ್ ವೆಹಿಕಲ್ ಏನು ಮಾಡಬೇಕು?.. ಜನರು ಈ ಮೊದಲು ಹೋಗದ ಸ್ಥಳಗಳಿಗೆ ತೆರಳಲು ಸಹಾಯ ಮಾಡಬೇಕು. ಅಸಾಧ್ಯವಾದ ಗುರಿ ಮುಟ್ಟಲು ನೆರವಾಗಬೇಕು. ಜೊತೆಗೆ ಪ್ರತಿಯೊಬ್ಬರ ಕನಸು ಸಹಕಾರಗೊಳಿಸಬೇಕು.. ನಾನು ಈ ವೀಡಿಯೊವನ್ನು ಏಕೆ ಪ್ರೀತಿಸುತ್ತೇನೆ ಎಂದು ಈಗ ನಿಮಗೆ ತಿಳಿದಿದೆ' ಎಂದಿದ್ದಾರೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಹೀಂದ್ರಾ ಥಾರ್‌ (Mahindra Thar), ರೂ.10.98 ಲಕ್ಷದಿಂದ ರೂ.16.94 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 1.5-ಲೀಟರ್ ಡೀಸೆಲ್, 2.2-ಲೀಟರ್ ಡೀಸೆಲ್ ಮತ್ತು 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 6-ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ.

ಈ ಕಾರು, 15.2 kmpl ಮೈಲೇಜ್ ನೀಡಲಿದ್ದು, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕ್ರೂಸ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಹಿಲ್ ಡಿಸೆಂಟ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, January 24, 2024, 12:44 [IST]
English summary
Inspirational girl starting with scooty now buy new thar suv anand mahindra praises panipuri girl
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+