ರೀಲ್ಸ್ ಮಾಡಿ 5 ಕೋಟಿ ಬೆಲೆಯ Lamborghini ಖರೀದಿಸಿದ ಗಂಡ ಹೆಂಡತಿ: ಮನಸ್ಸಿದ್ದರೆ ಮಾರ್ಗ
ಲಕ್ಷುರಿ ಕಾರುಗಳು ಎಂದ ಕೂಡಲೇ ನಮಗೆ ನೆನಪಾಗುವುದು ಲ್ಯಾಂಬೋರ್ಗಿನಿ. ಸ್ಪೋರ್ಟಿ, ಅಗ್ರೆಸಿವ್ ಡಿಸೈನ್ ಮತ್ತು ಬೆಂಕಿಯಂತಹ ಪರ್ಫಾಮೆನ್ಸ್‌ಗಳಿಂದ ನೋಡುಗರನ್ನು ಮೊದಲ ನೋಟದಲ್ಲಿಯೇ ಆಕರ್ಷಿಸುತ್ತದೆ. ಪ್ರತಿಯೊಬ್ಬರಿಗೂ ಸೂಪರ್ ಕಾರು ಕೊಳ್ಳುವುದಾದರೆ ಅದೊದು ಲ್ಯಾಂಬೋರ್ಗಿನಿ ಆಗಿರಬೇಕು ಎಂಬ ಕನಸಿರುತ್ತದೆ. ಕೆಲವರ ಆ ಕನಸು ನನಸಾಗುತ್ತದೆ.
ಇಂದಿನ ಈ ಲೇಖನದಲ್ಲಿ ಕನಸಿನ ಲ್ಯಾಂಬೋರ್ಗಿನಿ (Lamborghini) ಕಾರನ್ನು ತಮ್ಮದಾಗಿಸಿಕೊಂಡ ಸಾಮಾಜಿಕ ಜಾಲತಾಣ ಸೆಲೆಬ್ರಿಟಿಯ ಕುರಿತಾಗಿ ನೋಡಲಿದ್ದೇವೆ. ಲ್ಯಾಂಬೋರ್ಗಿನಿ ಉರುಸ್ ಪರ್ಫಾಮಂತೆ ಕಾರನ್ನು ಇವರು ತಮ್ಮದಾಗಿಸಿಕೊಂಡಿದ್ದು ೨೦೨೨ ರಲ್ಲಿ ಲ್ಯಾಂಬೋರ್ಗಿನಿ ತನ್ನ ಪ್ರಸಿದ್ದ ಎಸ್‌ಯುವಿ ಮಾಡೆಲ್ ಆದ ಉರುಸ್‌ನ ಪರ್ಫಾಮಂತೆ ಎಂಬ ವೇರಿಯೆಂಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಈ ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳು ಇದನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹೌದು, ಗಂಡ ಹೆಂಡತಿಯಾಗಿರುವ ಈ ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳು ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿ ಪ್ರಸಿದ್ದರಾಗಿದ್ದರು. ಇವರನ್ನು ಕೃತಿ ಸಿಂಗ್ ರಹೇಜಾ ಮತ್ತು ಅವರ ಗಂಡ ರೋಹಿತ್ ರಹೇಜಾ ಎಂದು ಗುರುತಿಸಲಾಗಿದ್ದು, ಇಬ್ಬರೂ ಸಹ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿ ಪ್ರಸಿದ್ದರಾಗಿದ್ದಾರೆ. ಲೈಫ್‌ಸ್ಟೈಲ್ ಮತ್ತು ಫ್ಯಾಷನ್ ಕುರಿತಾದ ವಿಷಯಗಳನ್ನು ಬಳಸಿಕೊಂಡು ವಿಡಿಯೋಗಳನ್ನು ಮಾಡಿ ಜನರ ಮನ ಗೆದ್ದಿದ್ದಾರೆ. ಜನರ ಬೆಂಬಲದೊಂದಿಗೆ ಅತ್ಯಂತ ದುಬಾರಿ ಐಷಾರಾಮಿ ಎಸ್‌ಯುವಿ ಒಂದನ್ನು ತಮ್ಮ ಮನೆಗೆ ತಂದಿದ್ದಾರೆ.
ಇವರು ಕೊಂಡಿರುವ ಈ ಉರುಸ್ ಪರ್ಫಾಮಂತೆ ವಿಯೋಲಾ ಪಾಸಿಫೆ ಬಗ್ಗೆ ಹೇಳುವುದಾದರೆ ಪರ್ಫಾಮಂತೆ ಎಂಬುವುದು ಲ್ಯಾಂಬೋರ್ಗಿನಿ ತನ್ನ ಕಾರುಗಳ ಪವರ್‌ಫುಲ್ ಮಾದರಿಗೆ ಇಎಉವಂತಹ ಹೆಸರು. 2022 ರಲ್ಲಿ ಅವರು ಈ ಉರುಸ್ ಎಸ್‌ಯುವಿಯ ಪರ್ಫಾಮಂತೆ ಮಾದರಿಯನ್ನು ಭಾರತದಲ್ಲಿ ಲಾಂಚ್ ಮಾಡಿದ್ದರು. ಈ ಕಾರಿನ ಬೆಲೆ ಆರಂಭವಾಗುವುದೇ 4.22 ಕೋಟಿ ರೂಪಾಯಿಗಳಿಂದ ಎಂಬುದನ್ನು ನಾವು ಗಮನಿಸಬೇಕು.

1980ರಲ್ಲೊ Rambo Lambo LM 002 ಎಂಬ ಹೆಸರಿನ ಎಸ್‍ಯುವಿಯೊಂದಿಗೆ ತನ್ನ ಪ್ರಯಾಣವನ್ನು ಆರಂಭಿಸಿತು. ನಂತರದಲ್ಲಿ ಲ್ಯಾಂಬೊರ್ಗಿನಿ ಸಾಲು ಸಾಲು ಸೂಪರ್ ಕಾರುಗಳು ಬಿಡುಗಡೆಗೊಂಡಿತು. ಅವುಗಳು ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಸೃಷ್ಟಿಸಿತು. ನಂತರ ಲ್ಯಾಂಬೊರ್ಗಿನಿ ಉರುಸ್ ಎಸ್‍ಯುವಿಯು ಹೊಸ ದಾಖಲೆಗಳನ್ನು ಸೃಷ್ಟಿಸಿತು. ಈ ಉರುಸ್ ಎಸ್‍ಯುವಿ ಕನ್ನಡ ಚಲಚಿತ್ರ ಸೆಲಬ್ರಿಟುಗಳು ಸೇರಿದಂತೆ ಹಲವು ಸೆಲಬ್ರಿಟಿಗಳ ಮೆಚ್ಚಿನ ಕಾರ್ ಆಗಿದೆ.
ಲ್ಯಾಂಬೊರ್ಗಿನಿ ಉರುಸ್ ಪರ್ಫಾರ್ಮೆಂಟೆ ಎಸ್‍ಯುವಿ 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V8 ಎಂಜಿನ್‌ನ ಅತ್ಯಂತ ಪವರ್ ಫುಲ್ ಆವೃತ್ತಿಯಿಂದ ಚಾಲಿತವಾಗಿದೆ. ಈ ಎಂಜಿನ್ 6,000rpm ನಲ್ಲಿ 666 hp (657bhp) ಮತ್ತು 2,250 ರಿಂದ 4,500 rpm ನಲ್ಲಿ 850 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮೂಲಕ ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ.

ಈ ಲ್ಯಾಂಬೊರ್ಗಿನಿ ಉರುಸ್ ಪರ್ಫಾರ್ಮೆಂಟೆ ಎಸ್‍ಯುವಿ ಕೇವಲ 3.3 ಸೆಕೆಂಡ್‌ಗಳಲ್ಲಿ 0-100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು 200 ಕಿ.ಮೀ ವೇಗವನ್ನು ಪಡೆದುಕೊಳ್ಳಲು 11.5 ಸೆಕೆಂಡುಗಳ ಸಮಯವನ್ನು ತೆಗೆದುಕೊಳ್ಳುತ್ತದ ಎಂದು ಲ್ಯಾಂಬೊರ್ಗಿನಿ ಹೇಳಿಕೊಂಡಿದೆ. ಈ ಲ್ಯಾಂಬೊರ್ಗಿನಿ ಉರುಸ್ ಎಸ್‍ಯುವಿಯು 308 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications