ಇನ್‍ಸ್ಟಾಗ್ರಾಮ್‍ನಿಂದ ಹಣ ಮಾಡಿ ದುಬಾರಿ ಕಾರು ಖರೀದಿ: ಹೇಗೆ ಗೊತ್ತಾ?

ಇಂದು ಸೋಷಿಯಲ್ ಮೀಡಿಯಾಗಳ ಕಾಲ. ಸೋಷಿಯಲ್ ಮೀಡಿಯಾಗಳಲ್ಲಿ ಮಿಂಚಿ ಹಲವರು ಸೆಲೆಬ್ರಿಟಿಗಳಾಗಿ ಮಿಂಚುತ್ತಿದ್ದಾರೆ. ಹೆಚ್ಚಿನ ಜನರು ವ್ಲಾಗ್ ಮಾಡುವುದನ್ನು ಫುಲ್ ಟೈಮ್ ಕೆಲಸವಾಗಿ ಮಾಡುತ್ತಿದ್ದಾರೆ. ಇದು ಹೆಚ್ಚಿನ ಸಂಖ್ಯೆಯ ಜನರಿಗೆ ಆದಾಯದ ಮೂಲವಾಗಿದೆ. ಅವರಿಗೂ ಇಂದು ಸೆಲೆಬ್ರಿಟಿ ಸ್ಥಾನಮಾನವಿದೆ. ಎಷ್ಟರಮಟ್ಟಿಗೆಂದರೆ ಕೆಲವರು ಅದನ್ನೇ ತಮ್ಮ ಫುಲ್ ಟೈಮ್ ಕೆಲಸವಾಗಿ ನೋಡುತ್ತಿದ್ದಾರೆ. ಇದೇ ರೀತಿ ಇನ್‍ಸ್ಟಾಗ್ರಾಮ್ (Instagram) ನಲ್ಲಿ ಜನಪ್ರಿಯವಾಗಿರುವ ಕೇರಳದ ದಂಪತಿಗಳು ಹೊಸ ಮಹೀಂದ್ರಾ XUV700 (Mahindra XUV700) ಎಸ್‍ಯುವಿಯನ್ನು ಖರೀದಿಸಿ ಸುದ್ದಿಯಾಗಿದ್ದಾರೆ.

ಮಹೀಂದ್ರಾ ಕಾರುಗಳು ಜನಪ್ರಿಯತೆಯನ್ನು ಹೆಚ್ಚಿಸುತ್ತಲೇ ಇವೆ. ಅದರಲ್ಲೂ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳು ಬಿಡುಗಡೆಯಾದ ನಂತರ, ಅನೇಕ ಜನರು ಆ ಫಲಿತಾಂಶಗಳ ಆಧಾರದ ಮೇಲೆ ಆಧುನಿಕ ಮಹೀಂದ್ರಾ ಕಾರುಗಳು ಸೆಲೆಬ್ರಿಟಿಗಳನ್ನು ಕೂಡ ಸೆಳೆಯುದಿದೆ. XUV300 ಸೇರಿದಂತೆ ಕೆಲವು ಮಹೀಂದ್ರಾ ಕಾರುಗಳು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5 ರಲ್ಲಿ 5 ರಲ್ಲಿ ಪೂರ್ಣ ಅಂಕಗಳನ್ನು ಗಳಿಸಿವೆ.

Sheethal Elzha

ಅದೇ ರೀತಿ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಕೆಲವು ಮಹೀಂದ್ರಾ ಕಾರುಗಳು 5-ಸ್ಟಾರ್ ರೇಟಿಂಗ್ ಅನ್ನು ಪಡೆದಿವೆ. XUV700 ಜನಪ್ರಿಯ ಮಹೀಂದ್ರಾ ಕಾರುಗಳಲ್ಲಿ ಒಂದಾಗಿದೆ. ಈ ಕಾರಣದಿಂದಾಗಿ, XUV700 ಪ್ರಸ್ತುತ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಮಹೀಂದ್ರಾ ಕಾರುಗಳಲ್ಲಿ ಒಂದಾಗಿದೆ. ಪ್ರತಿ ತಿಂಗಳು ಸರಾಸರಿ 7,000 ರಿಂದ 8,000 ಜನರು XUV700 ಎಸ್‍ಯುವಿಗಳನ್ನು ಖರೀದಿಸುತ್ತಿದ್ದಾರೆ.

ಇದೀಗ XUV700 ಖರೀದಿಸಿರುವ ದಂಪತಿಗಳು, ಕೇರಳಿದಲ್ಲಿ Instagram ನಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ. ಈ ಜೋಡಿಯ ಹೆಸರು ಶೀತಲ್ ಎಲ್ಸಾ (Sheethal Elzha) - ವಿನು ವಿನೇಶ್. ಈ ದಂಪತಿಗಳು 2021 ರಲ್ಲಿ ವಿವಾಹವಾಗಿದ್ದರು. ಈ ವರ್ಷ ಅವರಿಗೆ ಒಂದು ಮಗು ಜನಿಸಿತು. ಈ ವರ್ಷ ದಂಪತಿಗಳು ಮತ್ತೊಂದು ಸಂತಸ ಸಂಗತಿ ಎಂದರೆ ಹೊಸ ಮಹೀಂದ್ರಾ XUV700 ಅನ್ನು ಖರೀದಿಸಿರುವುದಾಗಿದೆ.

Sheethal Elzha

ಶೀತಲ್ ಎಲ್ಸಾ ಅವರು ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಕಾರಿಗೆ ಹೊಂದಿಕೆಯಾಗುವಂತೆ ಬ್ಲ್ಯಾಕ್ ಡ್ರೆಸ್‌ನಲ್ಲಿ ಶೋರೂಮ್‌ಗೆ ಹೋಗಿ ಕಾರನ್ನು ಡೆಲಿವರಿ ತೆಗೆದುಕೊಂಡ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಕವರ್ ತೆಗೆದು ಕಾರಿನ ಅಂದವನ್ನು ವಿವರಿಸಿ ಶೋರೂಂನಲ್ಲಿಯೇ ಕೇಕ್ ಕತ್ತರಿಸಿ ಸಂಭ್ರಮಿಸಿದರು. ನಂತರ, ಶೀತಲ್ ಮಗು ಎಲ್ಸಾಳೊಂದಿಗೆ ಮುಂದಿನ ಸೀಟಿನಲ್ಲಿ ಕುಳಿತಿದ್ದಾಳೆ, ಡ್ರೈವರ್ ಸೀಟಿನಲ್ಲಿ ವಿನು ವಿನೇಶ್ ಕಾರನ್ನು ಓಡಿಸಲು ಸಿದ್ಧರಾದರು.

ಶೀತಲ್ ಎಲ್ಸಾ ಅವರನ್ನು ಕೈ ಹಿಡಿದು ಮೊದಲ ಬಾರಿಗೆ ತಮ್ಮ XUV700 ಗೆ ಆಹ್ವಾನಿಸಿದರು. ಬಳಿಕ ವಿನು ವಿನೇಶ್ ಕಾರನ್ನು ಶೋರೂಂನಿಂದ ಹೊರಕ್ಕೆ ಓಡಿಸಿದ್ದಾರೆ. ನಂತರ, ಶೀತಲ್ ಎಲ್ಸಾ-ವಿನು ವಿನೇಶ್ ದಂಪತಿಗಳು ಕಾರನ್ನು ಹತ್ತಿರದ ಚರ್ಚ್‌ಗೆ ತೆಗೆದುಕೊಂಡು ಹೋಗಿ ಮಗುವಿನೊಂದಿಗೆ ಸಣ್ಣ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಹಿಂದಿನ XUV500 ಬದಲಿಗೆ XUV700 ಅನ್ನು ಬಿಡುಗಡೆ ಮಾಡಲಾಗಿದೆ. ಈ ಮಹೀಂದ್ರಾ XUV700 ಕಾರಿನ ಎಕ್ಸ್ ಶೋ ರೂಂ ಬೆಲೆಗಳು ಪ್ರಸ್ತುತ 14 ಲಕ್ಷದಿಂದ 25.14 ಲಕ್ಷ ರೂ. ಆಗಿದೆ. ಈ ಮಹೀಂದ್ರಾ XUV700 ಮಿಡ್‌ನೈಟ್ ಬ್ಲ್ಯಾಕ್, ಎಲೆಕ್ಟ್ರಿಕ್ ಬ್ಲೂ, ನಪೋಲಿ ಬ್ಲಾಕ್, ಡ್ಯಾಜ್ಲಿಂಗ್ ಸಿಲ್ವರ್, ರೆಡ್ ರೇಜ್ ಮತ್ತು ಎವರೆಸ್ಟ್ ವೈಟ್ ಸೇರಿದಂತೆ ವಿವಿಧ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, November 25, 2024, 17:40 [IST]
English summary
Instagram celebrity sheetal elzha buys mahindra xuv700 details
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+