ಇನ್‍ಸ್ಟಾಗ್ರಾಮ್‍ನಿಂದ ಹಣ ಮಾಡಿ ಖರೀದಿಸಿದ ದುಬಾರಿ ಕಾರಿನ ವಿಶೇಷತೆಗಳು
ಇಂದು ಸೋಷಿಯಲ್ ಮೀಡಿಯಾಗಳ ಕಾಲ. ಸೋಷಿಯಲ್ ಮೀಡಿಯಾಗಳಲ್ಲಿ ಮಿಂಚಿ ಹಲವರು ಸೆಲೆಬ್ರಿಟಿಗಳಾಗಿ ಮಿಂಚುತ್ತಿದ್ದಾರೆ. ಎಷ್ಟರಮಟ್ಟಿಗೆಂದರೆ ಕೆಲವರು ಅದನ್ನೇ ತಮ್ಮ ಫುಲ್ ಟೈಮ್ ಕೆಲಸವಾಗಿ ಮಾಡುತ್ತಿದ್ದಾರೆ. ಇದು ಹೆಚ್ಚಿನ ಸಂಖ್ಯೆಯ ಜನರಿಗೆ ಆದಾಯದ ಮೂಲವಾಗಿದೆ. ಅವರಿಗೂ ಇಂದು ಸೆಲೆಬ್ರಿಟಿ ಸ್ಥಾನಮಾನವಿದೆ. ಇದೇ ರೀತಿ ಇನ್‍ಸ್ಟಾಗ್ರಾಮ್ (Instagram) ನಲ್ಲಿ ಜನಪ್ರಿಯವಾಗಿರುವ ಕೇರಳದ ದಂಪತಿಗಳು ಹೊಸ ಮಹೀಂದ್ರಾ XUV700 (Mahindra XUV700) ಎಸ್‍ಯುವಿಯನ್ನು ಖರೀದಿಸಿ ಸುದ್ದಿಯಾಗಿದ್ದಾರೆ. ಈ ಮಹೀಂದ್ರಾ XUV700 ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ.
ಮಹೀಂದ್ರಾ ಕಾರುಗಳು ಜನಪ್ರಿಯತೆಯನ್ನು ಹೆಚ್ಚಿಸುತ್ತಲೇ ಇವೆ. ಅದರಲ್ಲೂ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳು ಬಿಡುಗಡೆಯಾದ ನಂತರ, ಅನೇಕ ಜನರು ಆ ಫಲಿತಾಂಶಗಳ ಆಧಾರದ ಮೇಲೆ ಆಧುನಿಕ ಮಹೀಂದ್ರಾ ಕಾರುಗಳು ಸೆಲೆಬ್ರಿಟಿಗಳನ್ನು ಕೂಡ ಸೆಳೆಯುದಿದೆ. XUV300 ಸೇರಿದಂತೆ ಕೆಲವು ಮಹೀಂದ್ರಾ ಕಾರುಗಳು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5 ರಲ್ಲಿ 5 ಪೂರ್ಣ ಅಂಕಗಳನ್ನು ಗಳಿಸಿವೆ.

ಅದೇ ರೀತಿ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಕೆಲವು ಮಹೀಂದ್ರಾ ಕಾರುಗಳು 5-ಸ್ಟಾರ್ ರೇಟಿಂಗ್ ಅನ್ನು ಪಡೆದಿವೆ. XUV700 ಜನಪ್ರಿಯ ಮಹೀಂದ್ರಾ ಕಾರುಗಳಲ್ಲಿ ಒಂದಾಗಿದೆ. ಈ ಕಾರಣದಿಂದಾಗಿ, XUV700 ಪ್ರಸ್ತುತ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಮಹೀಂದ್ರಾ ಕಾರುಗಳಲ್ಲಿ ಒಂದಾಗಿದೆ. ಪ್ರತಿ ತಿಂಗಳು ಸರಾಸರಿ 7,000 ರಿಂದ 8,000 ಜನರು XUV700 ಎಸ್‍ಯುವಿಗಳನ್ನು ಖರೀದಿಸುತ್ತಿದ್ದಾರೆ.
ಇದೀಗ XUV700 ಖರೀದಿಸಿರುವ ದಂಪತಿಗಳು, ಕೇರಳಿದಲ್ಲಿ Instagram ನಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ. ಈ ಜೋಡಿಯ ಹೆಸರು ಶೀತಲ್ ಎಲ್ಸಾ (Sheethal Elzha) - ವಿನು ವಿನೇಶ್. ಈ ದಂಪತಿಗಳು 2021 ರಲ್ಲಿ ವಿವಾಹವಾಗಿದ್ದರು. ಈ ವರ್ಷ ಅವರಿಗೆ ಒಂದು ಮಗು ಜನಿಸಿತು. ಈ ವರ್ಷ ದಂಪತಿಗಳು ಮತ್ತೊಂದು ಸಂತಸ ಸಂಗತಿ ಎಂದರೆ ಹೊಸ ಮಹೀಂದ್ರಾ XUV700 ಅನ್ನು ಖರೀದಿಸಿದ್ದಾರೆ. ಈ ಮಹೀಂದ್ರಾ XUV700 ಎಸ್‍ಯುವಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಬೆಲೆ ಮತ್ತು ಬಣ್ಣಗಳ ಆಯ್ಕೆ: ಹಿಂದಿನ ಮಹೀಂದ್ರಾ XUV500 ಬದಲಿಗೆ XUV700 ಅನ್ನು ಬಿಡುಗಡೆ ಮಾಡಲಾಗಿದೆ. ಈ ಮಹೀಂದ್ರಾ XUV700 ಕಾರಿನ ಎಕ್ಸ್ ಶೋ ರೂಂ ಬೆಲೆಗಳು ಪ್ರಸ್ತುತ 14 ಲಕ್ಷದಿಂದ 25.14 ಲಕ್ಷ ರೂ. ಆಗಿದೆ. ಈ ಮಹೀಂದ್ರಾ XUV700 ಮಿಡ್‌ನೈಟ್ ಬ್ಲ್ಯಾಕ್, ಎಲೆಕ್ಟ್ರಿಕ್ ಬ್ಲೂ, ನಪೋಲಿ ಬ್ಲಾಕ್, ಡ್ಯಾಜ್ಲಿಂಗ್ ಸಿಲ್ವರ್, ರೆಡ್ ರೇಜ್ ಮತ್ತು ಎವರೆಸ್ಟ್ ವೈಟ್ ಸೇರಿದಂತೆ ವಿವಿಧ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.
ಪರ್ಫಾಮೆನ್ಸ್: ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿ 2 ಪವರ್‌ಟ್ರೇನ್‌ನೊಂದಿಗೆ ಸಿಗುತ್ತದೆ. ಇದರ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 200 ಪಿಎಸ್ ಪವರ್ ಹಾಗೂ 380 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಮತ್ತೊಂದು 2.2-ಲೀಟರ್ ಡೀಸೆಲ್ ಎಂಜಿನ್ 185 ಪಿಎಸ್ ಪವರ್ ಮತ್ತು 450 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಈ ಕಾರು ರೂಪಾಂತರಗಳಿಗೆ ಅನ್ವಯ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನೊಂದಿಗೆ ಖರೀದಿಗೆ ಸಿಗುತ್ತದೆ. ಎಫ್‌ಡಬ್ಲ್ಯೂಡಿ (ಫ್ರಂಟ್ ವೀಲ್ ಡ್ರೈವ್) ಮತ್ತು ಎಡಬ್ಲ್ಯೂಡಿ (ಆಲ್ ವೀಲ್ ಡ್ರೈವ್) ತಂತ್ರಜ್ಞಾನ ಆಯ್ಕೆಯನ್ನು ಹೊಂದಿದೆ. ಜೊತೆಗೆ ಸರಿ ಸುಮಾರು 17 ಕಿ.ಮೀ ಮೈಲೇಜ್ ನೀಡುತ್ತದೆ.
ಫೀಚರ್ಸ್: ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿ ಅತ್ಯಾಧುನಿಕ ವೈಶಿಷ್ಟ್ಯವನ್ನು ಹೊಂದಿದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 6-ವೇ ಪವರ್ ಡ್ರೈವರ್ ಸೀಟ್, 12-ಸ್ಪೀಕರ್ ಆಡಿಯೋ ಸಿಸ್ಟಮ್, ಸನ್‌ರೂಫ್, ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್, ಬಿಲ್ಟ್-ಇನ್ ಅಲೆಕ್ಸಾ ಕನೆಕ್ಟಿವಿಟಿ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್ಸ್ ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications