ಆಕಾಶದಲ್ಲಿ 100 ಮಾನವ ರಹಿತ ಡ್ರೋನ್‌ಗಳ ವಿಸ್ಮಯ
ಅಮೆರಿಕದ ಬಹುರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಇಂಟೆಲ್ ಇಡೀ ವಿಜ್ಞಾನ ಲೋಕವನ್ನೇ ಮಗದೊಮ್ಮೆ ಬೆಚ್ಚಿ ಬೀಳಿಸಿದ್ದು, 100ರಷ್ಟು ಸಣ್ಣ ಡ್ರೋನ್ ವಿಮಾನಗಳನ್ನು ಉಪಯೋಗಿಸಿಕೊಂಡು ಆಕಾಶದಲ್ಲಿ ವಿಸ್ಮಯ ಪ್ರದರ್ಶನ ನೀಡಿದೆ.
Also Read: ರಿಕ್ಷಾದಲ್ಲೇ ವೀಲಿಂಗ್; ಗಿನ್ನೆಸ್ ಪುಟ ಸೇರಿದ ಚೆನ್ನೈನ 'ಆಟೋ ರಾಜ' ಮುಂದಕ್ಕೆ ಓದಿ
ಪ್ರಸ್ತುತ ಇಂಟೆಲ್ ಸಾಧನೆಯು ಗಿನ್ನೆಸ್ ದಾಖಲೆಗೆ ಅರ್ಹವಾಗಿದ್ದು, ಇದೇ ಮೊದಲ ಬಾರಿಗೆ ಆಕಾಶದಲ್ಲಿ ಅತಿ ಹೆಚ್ಚು ಮಾನವ ರಹಿತ ವಾಹನಗಳು ಏಕಕಾಲದಲ್ಲಿ ಹಾರಾಟ ನಡೆಸಿದೆಯೆಂಬ ದಾಖಲೆಗೆ ಪಾತ್ರವಾಗಿದೆ. [ಆಕರ್ಷಕ ವಿಡಿಯೋವನ್ನು ಲೇಖನದ ಕೆಳಗಡೆ ಕೊಡಲಾಗಿದೆ.]

ಇಲ್ಲಿ ಗಮನಾರ್ಹ ಸಾಧನೆಯೆಂದರೆ 100ರಷ್ಟು ಸಣ್ಣ ಸಣ್ಣ ಡ್ರೋನ್ ವಿಮಾನಗಳನ್ನು ನೆಲದಲ್ಲಿದ್ದ ಸಿಬ್ಬಂದಿಗಳು ಕಂಪ್ಯೂಟರ್ ಮೂಲಕ ನಿಯಂತ್ರಿಸುತ್ತಿದ್ದರು.

ವರ್ಣಮಯ ಸಿಡಿಮದ್ದಿನ ಪ್ರದರ್ಶನದಂತೆ ಬೆರಗುಗೊಳಿಸುವ ಬೆಳಕಿನ ಚಮತ್ಕಾರದೊಂದಿಗೆ ಏಕಕಾಲದಲ್ಲಿ ಮೇಲಕ್ಕೆ ಹಾರಿದ ಡ್ರೋನ್ ವಿಮಾನಗಳು ಆಕಾಶದಲ್ಲಿ ವಿಶಿಷ್ಟ ಆಕೃತಿಯನ್ನು ರಚಿಸಿತ್ತು.

ಜರ್ಮನಿಯ ಟಾರ್ನೆಶ್ Flugplatz Ahrenlohe ವಿಮಾನ ನಿಲ್ದಾಣದಲ್ಲಿ ಸೇರಿದ ನೂರಾರು ಪ್ರೇಕ್ಷಕರ ಸಾನಿಧ್ಯದಲ್ಲಿ ನೂತನ ಡ್ರೋನ್ ವಿಮಾನ ದಾಖಲೆಯನ್ನು ಸ್ಥಾಪಿಸಲಾಗಿತ್ತು.

ಪ್ರಸ್ತುತ ದಾಖಲೆಯನ್ನು 2015 ನವೆಂಬರ್ ತಿಂಗಳಲ್ಲೇ ಸಾಧಿಸಿತ್ತಾದರೂ ವಿಡಿಯೋವನ್ನು ಲಾಸ್ ವೇಗಾಸ್ ನಲ್ಲಿ ನಡೆದ 2016 ಸಿಇಎಸ್ ವಿಜ್ಞಾನ ಮೇಳದಲ್ಲಷ್ಟೇ ಬಿಡುಗೊಳಿಸಲಾಗಿತ್ತು.

Ars Electronica Futurelab ಜೊತೆಗಿನ ಸಹಯೋಗದಲ್ಲಿ ಇಂಟೆಲ್ ದಾಖಲೆಯನ್ನು ಸ್ಥಾಪಿಸಿದೆ. ಅಲ್ಲದೆ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಅವಿರತ ಪ್ರಯತ್ನ ಹಾಗೂ ಅಧ್ಯಯನ ಕೊನೆಗೂ ಸಾರ್ಥಕಗೊಂಡಿದೆ.

ಇದೇ ಸಂದರ್ಭದಲ್ಲಿ ವಿಶೇಷ ಸಂಗೀತ ಮೇಳವನ್ನು ಆಯೋಜಿಸಲಾಗಿತ್ತು. ಆಕಾಶದತ್ತ ಏರಿದ ಡ್ರೋನ್ ವಿಮಾನಗಳು ಸಂಗೀತಕ್ಕೆ ತಕ್ಕಂತೆ ವರ್ಣಮಯ ಆಲಂಕಾರದೊಂದಿಗೆ ಕುಣಿಯುತ್ತಿರುವುದು ನೋಡುಗರಿಗೆ ವಿಸ್ಮಯದ ಅನುಭವ ನೀಡುತ್ತಿದ್ದವು.

ಒಟ್ಟಿನಲ್ಲಿ ಇದೇ ಮೊದಲ ಬಾರಿಗೆ ಆಕಾಶದಲ್ಲಿ 100 ಚಾಲಕ ರಹಿತ ಡ್ರೋನ್ ವಿಮಾನಗಳು ಏಕಕಾಲದಲ್ಲಿ ಪ್ರದರ್ಶನ ನೀಡಿರುವುದು ಗಿನ್ನೆಸ್ ದಾಖಲೆ ಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಂತಾಗಿದೆ.

ಬಾಹ್ಯಾಕಾಶದಲ್ಲಿರುವ ಅಪ್ಪನಿಗೆ ಮಗಳ ಗಿನ್ನೆಸ್ ದಾಖಲೆಯ ಸಂದೇಶ


Click it and Unblock the Notifications








