ರಸ್ತೆಯಲ್ಲೂ ಓಡುವ ಗೂಡ್ಸ್ ಬಂಡಿ; ಇದುವೇ ರೋಡ್ ಟ್ರೈನ್..!

By Nagaraja

ಹಳಿಯಲ್ಲಿ ಓಡುವ ರೈಲುಗಳನ್ನು ನೀವು ನೋಡಿರುವೀರಾ! ನಾವಿಂದು ಪರಿಚಯಿಸುವ ವಾಹನ ಭಾರತೀಯರ ಪಾಲಿಗೆ ಹೊಸ ಅನುಭವವಾಗಲಿದೆ. ಅದುವೇ ರಸ್ತೆಯಲ್ಲಿ ಓಡುವ ಗೂಡ್ಸ್ ಬಂಡಿ 'ರೋಡ್ ಟ್ರೈನ್'.

ಲ್ಯಾಂಡ್ ಟ್ರೈನ್ ಎಂಬ ಹೆಸರಿನಿಂದಲೂ ಕರೆಯಲ್ಪಡುವ ರೋಡ್ ಟ್ರೈನ್ ಆಸ್ಟೇಲಿಯಾ, ಅರ್ಜೆಂಟೀನಾ ಹಾಗೂ ಮೆಕ್ಸಿಕೊಗಳಂತಹ ರಾಷ್ಟ್ರಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಪ್ರಸ್ತುತ ಲೇಖನದಲ್ಲಿ ರೋಡ್ ಟ್ರೈನ್ ಬಗ್ಗೆ ಕೆಲವೊಂದು ಆಸಕ್ತಿದಾಯಕ ಮಾಹಿತಿಗಳನ್ನು ಬಹಿರಂಗಪಡಿಸಲಿದ್ದೇವೆ.

ರಸ್ತೆಯಲ್ಲೂ ಓಡುವ ಗೂಡ್ಸ್ ಬಂಡಿ; ಇದುವೇ ರೋಡ್ ಟ್ರೈನ್..!

ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಅತಿ ಭಾರದ ಸರಕುಗಳನ್ನು ಅತಿ ಸುಲಭವಾಗಿ ಸಾಗಿಸುವುದೇ ರೋಡ್ ಟ್ರೈನ್ ಗಳ ಹಿಂದಿರುವ ಪ್ರಮುಖ ಉದ್ದೇಶವಾಗಿದೆ.

ರಸ್ತೆಯಲ್ಲೂ ಓಡುವ ಗೂಡ್ಸ್ ಬಂಡಿ; ಇದುವೇ ರೋಡ್ ಟ್ರೈನ್..!

ಆಸ್ಟ್ರೇಲಿಯಾದಲ್ಲಿದ್ದು ರೋಡ್ ಟ್ರೈನ್ ಎಂಬ ಹೆಸರಿನಿಂದಲೇ ಜನಪ್ರಿಯವಾಗಿದೆ. ಅಂತೆಯೇ ಅಮೆರಿಕದಲ್ಲಿ ಟ್ರಿಪಲ್ಸ್, ಟರ್ನ್ ಪೈಕ್ ಡಬಲ್ಸ್, ರೋಕಿ ಮೌಂಟೆನ್ ಡಬಲ್ಸ್ ಎಂಬ ಪದಗಳಿಂದಲೂ ಕರೆಯಲ್ಪಡುತ್ತದೆ.

ರಸ್ತೆಯಲ್ಲೂ ಓಡುವ ಗೂಡ್ಸ್ ಬಂಡಿ; ಇದುವೇ ರೋಡ್ ಟ್ರೈನ್..!

ರೋಡ್ ಟ್ರೈನ್ ಹಿಂದುಗಡೆ ಒಂದಕ್ಕಿಂತ ಹೆಚ್ಚು ಸರಕು ಹೊರುವ ಟ್ರೈಲರುಗಳನ್ನು (ಹಿಂಜೋಡು ವಾಹನ) ಜೋಡಣೆ ಮಾಡಲಾಗುತ್ತದೆ.

ರಸ್ತೆಯಲ್ಲೂ ಓಡುವ ಗೂಡ್ಸ್ ಬಂಡಿ; ಇದುವೇ ರೋಡ್ ಟ್ರೈನ್..!

ಇತಿಹಾಸದ ಪುಟವನ್ನು ತೆರೆದು ನೋಡಿದಾಗ ರೋಡ್ ಟ್ರೈನ್ ಅನೇಕ ಯುದ್ಧಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿರುವುದನ್ನು ನೀವು ಗಮನಿಸಬಹುದು. ಇದರ ನೆರವನ್ನು ಎರಡನೇ ಬೋಯರ್ ಯುದ್ಧದಲ್ಲಿ ಬ್ರಿಟನ್ ಪಡೆದುಕೊಂಡಿತ್ತು.

ರಸ್ತೆಯಲ್ಲೂ ಓಡುವ ಗೂಡ್ಸ್ ಬಂಡಿ; ಇದುವೇ ರೋಡ್ ಟ್ರೈನ್..!

ಅಂದೆಲ್ಲ ಸ್ಟೀಮ್ ನಿಂದ ನಿಯಂತ್ರಿತ ರೋಡ್ ಟ್ರೈನ್ ಬಳಿಕ 1930 ಹಾಗೂ 1940ರ ದಶಕದಲ್ಲಿ ಆಸ್ಟ್ರೇಲಿಯಾ ಮಿಲಿಟರಿ ಪಡೆಯನ್ನು ಸೇರ್ಪಡೆಗೊಂಡಿತ್ತು.

ರಸ್ತೆಯಲ್ಲೂ ಓಡುವ ಗೂಡ್ಸ್ ಬಂಡಿ; ಇದುವೇ ರೋಡ್ ಟ್ರೈನ್..!

ನಿಮ್ಮ ಮಾಹಿತಿಗಾಗಿ ಇಡೀ ವಿಶ್ವದಲ್ಲೇ ಆಸ್ಟ್ರೇಲಿಯಾಯವು ಅತ್ಯಂತ ದೊಡ್ಡ ಮತ್ತು ಭಾರವಾದ ರಸ್ತೆ ಕಾನೂನು ಮಾನ್ಯತಾ ವಾಹನಗಳನ್ನು ಹೊಂದಿದೆ. ಕೆಲವೊಂದು 200 ಟನ್ ಗಳಷ್ಟು ಭಾರವನ್ನು ಹೊಂದಿದೆ.

ರಸ್ತೆಯಲ್ಲೂ ಓಡುವ ಗೂಡ್ಸ್ ಬಂಡಿ; ಇದುವೇ ರೋಡ್ ಟ್ರೈನ್..!

ಡಬಲ್ ರೋಡ್ ಟ್ರೈನ್ ವಾಹನವು ಆಸ್ಟೇಲಿಯಾದ ಬಹುತೇಕ ಪ್ರದೇಶದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

ರಸ್ತೆಯಲ್ಲೂ ಓಡುವ ಗೂಡ್ಸ್ ಬಂಡಿ; ಇದುವೇ ರೋಡ್ ಟ್ರೈನ್..!

ರೋಡ್ ಟ್ರೈನ್ ವಾಹನಗಲಲ್ಲಿ ಬಿ ಡಬಲ್, ಬಿ ಟ್ರಿಪಲ್, ಡಬಲ್ ರೋಡ್ ಟ್ರೈನ್, ಎಬಿ ಟ್ರಿಪಲ್, ಬಿಎಬಿ ಕ್ವಾಡ್, ಎಬಿಬಿ ಕ್ವಾಡ್, ಟ್ರಿಪಲ್ ರೋಡ್ ಟ್ರೈನ್, 2ಎಬಿ ಟ್ರೈನ್ ಮತ್ತು ಪವರ್ ಟ್ರೈನ್ ಗಳು ಪ್ರಮುಖ ಶ್ರೇಣಿಗಳಾಗಿವೆ. ಈ ಪೈಕಿ ಪವರ್ ಟ್ರೈನ್ ಅತ್ಯಂತ ಬೃಹತ್ತಾಗಿದೆ.

ರಸ್ತೆಯಲ್ಲೂ ಓಡುವ ಗೂಡ್ಸ್ ಬಂಡಿ; ಇದುವೇ ರೋಡ್ ಟ್ರೈನ್..!

ಆಸ್ಟ್ರೇಲಿಯಾ ರಾಷ್ಟ್ರೀಯ ಘನ ವಾಹನ ವಿಭಾಗವು ರೋಡ್ ಟ್ರೈನ್ ಸಂಚಾರಕ್ಕೆ ಗಂಟೆಗೆ ಗರಿಷ್ಠ 100 ಕೀ.ಮೀ. ವೇಗಮಿತಿಗೊಳಿಸಿದೆ.

More from DriveSpark

Article Published On: Tuesday, December 29, 2015, 10:55 [IST]
English summary
Interesting Facst About Road Train
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+