ವಿಮಾನಗಳಲ್ಲಿರುವ ಬ್ಲಾಕ್ ಬಾಕ್ಸ್ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಪ್ರಪಂಚದಾದ್ಯಂತ ಆಗಾಗ ವಿಮಾನ ಅಪಘಾತಗಳು ಸಂಭವಿಸುತ್ತವೆ. ವಿಮಾನಗಳು ಅಪಘಾತಕ್ಕೀಡಾದಾಗ ಯಾವ ಕಾರಣಕ್ಕೆ ಅಪಘಾತವಾಯಿತು ಎಂಬುದನ್ನು ತಿಳಿಯಲು ವಿಮಾನಗಳಲ್ಲಿರುವ ಬ್ಲಾಕ್ ಬಾಕ್ಸ್ ಅಂದರೆ ಕಪ್ಪು ಪೆಟ್ಟಿಗೆಗಳು ನೆರವಾಗುತ್ತವೆ.

ವಿಮಾನಗಳಲ್ಲಿರುವ ಬ್ಲಾಕ್ ಬಾಕ್ಸ್ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಈ ಲೇಖನದಲ್ಲಿ ಆ ಕಪ್ಪು ಪೆಟ್ಟಿಗೆಗಳ ಬಗ್ಗೆ ಅನೇಕ ಜನರಿಗೆ ಗೊತ್ತಿಲ್ಲದ ಕೆಲವು ಆಸಕ್ತಿದಾಯಕ ವಿಷಯಗಳನ್ನು ತಿಳಿದು ಕೊಳ್ಳೋಣ. ಕಪ್ಪು ಪೆಟ್ಟಿಗೆ ಎಂಬುದು ಎಫ್‌ಡಿ‌ಆರ್ ಹಾಗೂ ಸಿ‌ವಿ‌ಆರ್ ಎಂಬ ಎರಡು ಘಟಕಗಳ ಸಂಯೋಜನೆಯಾಗಿದೆ. ಇವುಗಳಲ್ಲಿ ಎಫ್‌ಡಿ‌ಆರ್ ಅಂದರೆ ಫ್ಲೈಟ್ ಡೇಟಾ ರೆಕಾರ್ಡರ್, ಸಿ‌ವಿ‌ಆರ್ ಅಂದರೆ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಎಂದಾಗಿದೆ.

ವಿಮಾನಗಳಲ್ಲಿರುವ ಬ್ಲಾಕ್ ಬಾಕ್ಸ್ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಇವುಗಳಲ್ಲಿ ಎಫ್‌ಡಿ‌ಆರ್ ವ್ಯವಸ್ಥೆಯು ವಿಮಾನಗಳ ಇಂಜಿನ್ ಕಾರ್ಯಕ್ಷಮತೆ ಸೇರಿದಂತೆ ವಿವಿಧ ಮಾಹಿತಿಯನ್ನು ದಾಖಲಿಸುತ್ತದೆ. ಎಫ್‌ಡಿಆರ್ ವ್ಯವಸ್ಥೆಯು ವಿಮಾನದ ಎತ್ತರ ಹಾಗೂ ವೇಗದಲ್ಲಿನ ಬದಲಾವಣೆಗಳನ್ನು ದಾಖಲಿಸುತ್ತದೆ. ವಿಮಾನ ಪತನಗೊಂಡರೆ ಯಾವ ಕಾರಣಕ್ಕೆ ಪತನವಾಯಿತು ಎಂಬುದನ್ನು ತನಿಖಾ ತಂಡವು ಈ ವ್ಯವಸ್ಥೆಯ ಮೂಲಕ ಕಂಡು ಹಿಡಿಯುತ್ತದೆ.

ವಿಮಾನಗಳಲ್ಲಿರುವ ಬ್ಲಾಕ್ ಬಾಕ್ಸ್ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಇನ್ನು ಸಿವಿಆರ್ ವ್ಯವಸ್ಥೆಯು ಕಾಕ್‌ಪಿಟ್‌ನಲ್ಲಿ ಪೈಲಟ್‌ಗಳ ನಡುವೆ ನಡೆದ ಸಂಭಾಷಣೆಗಳನ್ನು ದಾಖಲಿಸುತ್ತದೆ. ಸಿವಿಆರ್ ವ್ಯವಸ್ಥೆಯು ಭೂಮಿಯ ಮೇಲಿರುವ ಸಂಚಾರ ನಿಯಂತ್ರಣ ಕೇಂದ್ರದ ಅಧಿಕಾರಿಗಳು ಹಾಗೂ ವಿಮಾನಗಳ ನಡುವಿನ ಸಂಭಾಷಣೆಗಳನ್ನು ಸಹ ದಾಖಲಿಸುತ್ತದೆ ಎಂಬುದು ಗಮನಾರ್ಹ.

ವಿಮಾನಗಳಲ್ಲಿರುವ ಬ್ಲಾಕ್ ಬಾಕ್ಸ್ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಎಫ್‌ಡಿ‌ಆರ್ ವ್ಯವಸ್ಥೆಯು 25 ಗಂಟೆಗಳವರೆಗಿನ ಮಾಹಿತಿಯನ್ನು ದಾಖಲಿಸುತ್ತದೆ. ಇನ್ನು ಸಿವಿಆರ್ ವ್ಯವಸ್ಥೆ ಕಳೆದ 2 ಗಂಟೆಗಳಲ್ಲಿ ಕಾಕ್‌ಪಿಟ್‌ನಲ್ಲಿ ನಡೆದ ಸಂಭಾಷಣೆಗಳನ್ನು ದಾಖಲಿಸುತ್ತದೆ. 2 ಗಂಟೆಗಳ ನಂತರ ಸಿ‌ವಿ‌ಆರ್ ವ್ಯವಸ್ಥೆಯು ಹಳೆಯ ಸಂಭಾಷಣೆಗಳನ್ನು ಅಳಿಸಿ ಹಾಕಿ ಹೊಸ ಸಂಭಾಷಣೆಗಳನ್ನು ದಾಖಲಿಸುತ್ತದೆ.

ವಿಮಾನಗಳಲ್ಲಿರುವ ಬ್ಲಾಕ್ ಬಾಕ್ಸ್ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಕಪ್ಪು ಪೆಟ್ಟಿಗೆಯನ್ನು ಸಾಮಾನ್ಯವಾಗಿ ವಿಮಾನಗಳ ಟೇಲ್ ಮೇಲೆ ಇರಿಸಲಾಗುತ್ತದೆ. ಅಪಘಾತದ ಸಂದರ್ಭದಲ್ಲಿ ತಪ್ಪಿಸಿಕೊಳ್ಳುವ ಸಾಧ್ಯತೆಯಿರುವುದರಿಂದ ಕಪ್ಪು ಪೆಟ್ಟಿಗೆಯನ್ನು ಹೆಚ್ಚಾಗಿ ಟೇಲ್ ಪ್ರದೇಶದಲ್ಲಿ ಇರಿಸಲಾಗುತ್ತದೆ. ಬಹುತೇಕ ಜನರು ಕಪ್ಪು ಪೆಟ್ಟಿಗೆ ಕಪ್ಪು ಬಣ್ಣದಲ್ಲಿರುತ್ತದೆ ಎಂದು ತಿಳಿದು ಕೊಂಡಿದ್ದಾರೆ.

ವಿಮಾನಗಳಲ್ಲಿರುವ ಬ್ಲಾಕ್ ಬಾಕ್ಸ್ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಆದರೆ ಕಪ್ಪು ಪೆಟ್ಟಿಗೆಯು ಕಿತ್ತಳೆ ಹಾಗೂ ಕೆಂಪು ಮಿಶ್ರಿತ ಗಾಢ ಬಣ್ಣವನ್ನು ಹೊಂದಿದೆ. ಅಪಘಾತದ ನಂತರ ಸುಲಭವಾಗಿ ಪತ್ತೆ ಹಚ್ಚುವ ಸಲುವಾಗಿ ಕಪ್ಪು ಪೆಟ್ಟಿಗೆಗಳಿಗೆ ಕಿತ್ತಳೆ ಹಾಗೂ ಕೆಂಪು ಮಿಶ್ರಿತ ಗಾಢ ಬಣ್ಣವನ್ನು ನೀಡಲಾಗುತ್ತದೆ. ವಿಮಾನಗಳ ಅವಶೇಷಗಳ ನಡುವೆ ಈ ಬಣ್ಣವು ತನಿಖಾ ತಂಡದ ಅಧಿಕಾರಿಗಳಿಗೆ ಸುಲಭವಾಗಿ ಗೋಚರಿಸುತ್ತದೆ.

ವಿಮಾನಗಳಲ್ಲಿರುವ ಬ್ಲಾಕ್ ಬಾಕ್ಸ್ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಕಿತ್ತಳೆ ಹಾಗೂ ಕೆಂಪು ಮಿಶ್ರಿತ ಗಾಢ ಬಣ್ಣವಾಗಿದ್ದಾಗ ಅದನ್ನು ಕಪ್ಪು ಪೆಟ್ಟಿಗೆ ಎಂದು ಏಕೆ ಕರೆಯುತ್ತಾರೆ ಎಂಬ ಪ್ರಶ್ನೆ ಉದ್ಭವಿಸಬಹುದು. ಇದನ್ನು ಕಪ್ಪು ಪೆಟ್ಟಿಗೆ ಎಂದು ಕರೆಯಲು ವಿವಿಧ ಕಾರಣಗಳನ್ನು ಮುಂದಿಡಲಾಗಿದೆ. ಕಪ್ಪು ಪೆಟ್ಟಿಗೆ ಎಂಬ ಪದವನ್ನು ಮೊದಲು ಮಾಧ್ಯಮಗಳು ಬಳಸಿದವು. ನಂತರ ಈ ಹೆಸರು ಹಾಗೆ ಉಳಿಯಿತು ಎಂದು ಹೇಳಲಾಗಿದೆ.

ವಿಮಾನಗಳಲ್ಲಿರುವ ಬ್ಲಾಕ್ ಬಾಕ್ಸ್ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಈ ರೀತಿಯ ವಿವಿಧ ಕಾರಣಗಳಿದ್ದರೂ ಸ್ಪಷ್ಟವಾದ ವಿವರಣೆಗಳಿಲ್ಲ. ವಿವರಗಳನ್ನು ತಿಳಿದಿರುವ ಯಾರೂ ಈ ವ್ಯವಸ್ಥೆಯನ್ನು ಕಪ್ಪು ಪೆಟ್ಟಿಗೆ ಎಂದು ಕರೆಯುವುದಿಲ್ಲ. ವಿಮಾನದಲ್ಲಿ ಬಳಸುವ ಪ್ರಮುಖ ವ್ಯವಸ್ಥೆಯಾಗಿರುವುದರಿಂದ, ಕಪ್ಪು ಪೆಟ್ಟಿಗೆಯನ್ನು ವಿವಿಧ ರೀತಿಯ ಕಠಿಣ ಪರೀಕ್ಷೆಗಳಿಗೆ ಒಳಪಡಿಸಿದ ನಂತರವೇ ಬಳಸಲಾಗುತ್ತದೆ.

ವಿಮಾನಗಳಲ್ಲಿರುವ ಬ್ಲಾಕ್ ಬಾಕ್ಸ್ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಬೆಂಕಿ ಅಪಘಾತಗಳಿಂದ ಸಂರಕ್ಷಿಸಿಕೊಳ್ಳುತ್ತದೆಯೇ, ಒತ್ತಡವನ್ನು ತಡೆದು ಕೊಳ್ಳುತ್ತದೆಯೇ ಎಂಬ ಹಲವು ಪರೀಕ್ಷೆಗಳನ್ನು ನಡೆಸಲಾಗುವುದು. ಈ ಪರೀಕ್ಷೆಗಳ ನಂತರವೂ ಕಪ್ಪು ಪೆಟ್ಟಿಗೆ ಕಾರ್ಯನಿರ್ವಹಿಸುತ್ತದೆಯೇ ಎಂಬುದನ್ನು ಕೂಡ ಪರೀಕ್ಷಿಸಲಾಗುತ್ತದೆ. ಆಗ ಮಾತ್ರ ಕಪ್ಪು ಪೆಟ್ಟಿಗೆಯನ್ನು ವಿಮಾನದಲ್ಲಿ ಬಳಸಲು ಅನುಮತಿ ನೀಡಲಾಗುತ್ತದೆ.

ವಿಮಾನಗಳಲ್ಲಿರುವ ಬ್ಲಾಕ್ ಬಾಕ್ಸ್ ಬಗೆಗಿನ ಆಸಕ್ತಿಕರ ಸಂಗತಿಗಳಿವು

ವಿಮಾನಗಳು ಪತನಗೊಂಡ ನಂತರ ಕಪ್ಪು ಪೆಟ್ಟಿಗೆಯನ್ನು ಕಂಡು ಹಿಡಿಯಲು ಕೆಲವೊಮ್ಮೆ ಹೆಚ್ಚು ಸಮಯ ಬೇಕಾಗುತ್ತದೆ. ಕಪ್ಪು ಪೆಟ್ಟಿಗೆ ತನಿಖಾ ತಂಡದವರಿಗೆ ಸಿಗುವವರೆಗೂ ಹುಡುಕಾಟ ಮುಂದುವರಿಯುತ್ತದೆ.

ವಿಮಾನಗಳಲ್ಲಿರುವ ಬ್ಲಾಕ್ ಬಾಕ್ಸ್ ಬಗೆಗಿನ ಆಸಕ್ತಿಕರ ಸಂಗತಿಗಳಿವು

ಏರ್ ಫ್ರಾನ್ಸ್ ಫ್ಲೈಟ್ 447 ವಿಮಾನವು ಅಟ್ಲಾಂಟಿಕ್ ಸಾಗರದಲ್ಲಿ ಅಪಘಾತಕ್ಕೀಡಾದಾಗ ಆ ವಿಮಾನದಲ್ಲಿದ್ದ ಕಪ್ಪು ಪೆಟ್ಟಿಗೆಯನ್ನು ಕಂಡುಹಿಡಿಯಲು ಸುಮಾರು 2 ವರ್ಷ ಬೇಕಾಯಿತು ಎಂಬುದು ಗಮನಾರ್ಹ.

ವಿಮಾನಗಳಲ್ಲಿರುವ ಬ್ಲಾಕ್ ಬಾಕ್ಸ್ ಬಗೆಗಿನ ಆಸಕ್ತಿಕರ ಸಂಗತಿಗಳಿವು

2 ವರ್ಷಗಳ ಹಿಂದೆ ಅಪಘಾತದ ಮೊದಲು ಏನಾಯಿತು ಎಂಬ ಬಗ್ಗೆ ಆ ವಿಮಾನದಲ್ಲಿದ್ದ ಕಪ್ಪು ಪೆಟ್ಟಿಗೆ ಹಲವಾರು ಪ್ರಮುಖ ಮಾಹಿತಿಗಳನ್ನು ಒದಗಿಸಿದೆ.ಈ ಕಾರಣಕ್ಕಾಗಿಯೇ ವಿಮಾನದಲ್ಲಿ ಬಳಸುವ ಮೊದಲು ಕಪ್ಪು ಪೆಟ್ಟಿಗೆಯನ್ನು ವಿವಿಧ ಕಠಿಣ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ.

Most Read Articles

Kannada
English summary
Interesting facts about black box in air planes details
Story first published: Friday, August 6, 2021, 20:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X