Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೆಲಿಕಾಪ್ಟರ್‌ಗಳ ವೇಗ ಹಾಗೂ ದೂರದ ಬಗೆಗಿನ ರೋಚಕ ಸಂಗತಿಗಳಿವು
ಹೆಲಿಕಾಪ್ಟರ್‌ಗಳು ಅತಿ ವೇಗವಾಗಿ ಚಲಿಸದೇ ಇದ್ದರೂ ನಮಗೆ ತಿಳಿದಿರುವುದಕ್ಕಿಂತ ಹೆಚ್ಚಿನ ವೇಗದಲ್ಲಿ ಹಾರಾಟ ನಡೆಸಬಲ್ಲವು. ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಿದರೆ ಮಾತ್ರ ಅದರ ವೇಗದ ಬಗ್ಗೆ ನಿಖರವಾಗಿ ತಿಳಿಯುತ್ತದೆ.

ದುಬಾರಿ ಬೆಲೆಯ ಕಾರಣಕ್ಕೆ ಎಲ್ಲರಿಗೂ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುವ ಭಾಗ್ಯವಿರುವುದಿಲ್ಲ. ಹೆಲಿಕಾಪ್ಟರ್‌ಗಳು ಕಾರು ಹಾಗೂ ರೈಲುಗಳಿಗಿಂತ ಹೆಚ್ಚಿನ ವೇಗದಲ್ಲಿ ಚಲಿಸುತ್ತವೆ. ಸಾಮಾನ್ಯ ಸಿವಿಲ್ ಹೆಲಿಕಾಪ್ಟರ್‌ಗಳ ಸರಾಸರಿ ವೇಗವೆಷ್ಟು, ಒಮ್ಮೆ ಇಂಧನ ತುಂಬಿದ ನಂತರ ಅವು ಎಷ್ಟು ದೂರ ತಡೆರಹಿತವಾಗಿ ಹಾರಾಟ ನಡೆಸುತ್ತವೆ ಎಂಬ ಆಸಕ್ತಿದಾಯಕ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಹೆಲಿಕಾಪ್ಟರ್‌ಗಳು ಎಷ್ಟು ವೇಗವಾಗಿ ಹಾರಾಡುತ್ತವೆ?
ಹೆಲಿಕಾಪ್ಟರ್‌ಗಳ ವೇಗ ಸಾಮಾನ್ಯವಾಗಿ ಪ್ರತಿ ಗಂಟೆಗೆ 160 ಮೈಲಿ ಅಥವಾ 260 ಕಿ.ಮೀಗಳಾಗಿರುತ್ತದೆ. ಆದರೆ ಈ ವೇಗವು ಹೆಲಿಕಾಪ್ಟರ್‌ನ ಗಾತ್ರವೆಷ್ಟು, ಎಷ್ಟು ಜನ ಪ್ರಯಾಣಿಸುತ್ತಾರೆ, ಎಷ್ಟು ಭಾರವಾದ ವಸ್ತುಗಳನ್ನು ಲೋಡ್ ಮಾಡಲಾಗಿದೆ ಎಂಬುದರ ಮೇಲೆ ಆಧಾರಿತವಾಗಿರುತ್ತದೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಅತಿ ವೇಗದ ಸಿವಿಲ್ ಹೆಲಿಕಾಪ್ಟರ್‌ಗಳು!
ಅಗಸ್ಟಾ 109:
ಅಗಸ್ಟಾ 109 ಹೆಲಿಕಾಪ್ಟರ್, ಪ್ರತಿ ಗಂಟೆಗೆ 180 ಮೈಲಿ ವೇಗದಲ್ಲಿ ಹಾರಬಲ್ಲದು. ಒಮ್ಮೆ ಪೂರ್ತಿಯಾಗಿ ಇಂಧನ ತುಂಬಿಸಿದರೆ ಈ ಹೆಲಿಕಾಪ್ಟರ್ 500 ಮೈಲಿಗಳಷ್ಟು ದೂರ ಚಲಿಸುತ್ತದೆ. ಈ ಹೆಲಿಕಾಪ್ಟರ್ ನಲ್ಲಿ 5 ಜನ ಪ್ರಯಾಣಿಕರು ಆರಾಮವಾಗಿ ಪ್ರಯಾಣಿಸಬಹುದು.

ಏರ್‌ಬಸ್ ಎಎಸ್ 350:
ಈ ಹೆಲಿಕಾಪ್ಟರ್‌ನ ಗರಿಷ್ಠ ವೇಗ ಪ್ರತಿ ಗಂಟೆಗೆ 150 ಮೈಲಿಗಳಾಗಿದೆ. ಪೂರ್ತಿಯಾಗಿ ಇಂಧನ ತುಂಬಿಸಿದ ನಂತರ ಈ ಹೆಲಿಕಾಪ್ಟರ್ ಆರು ಪ್ರಯಾಣಿಕರೊಂದಿಗೆ 400 ಮೈಲಿಗಳವರೆಗೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ. ಏರ್‌ಬಸ್ ಎಎಸ್ 350 ಅನ್ನು ವಿಐಪಿಗಳಿಗಾಗಿ ಹಾಗೂ ವೈದ್ಯಕೀಯ ತುರ್ತು ಸೇವೆಗಳಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಳಸಲಾಗುತ್ತದೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಏರ್‌ಬಸ್ ಎಎಸ್ 355:
ಏರ್‌ಬಸ್ ಎಎಸ್ 355 ಹೆಲಿಕಾಪ್ಟರ್ ಗರಿಷ್ಠ 150 ಮೈಲಿ ವೇಗದಲ್ಲಿ ಚಲಿಸುತ್ತದೆ. 5 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಈ ಹೆಲಿಕಾಪ್ಟರ್ ಪೂರ್ತಿಯಾಗಿ ಇಂಧನ ತುಂಬಿಸಿದ ನಂತರ 400 ಮೈಲುಗಳಷ್ಟು ದೂರ ಚಲಿಸುತ್ತದೆ. ಈ ಹೆಲಿಕಾಪ್ಟರ್, ಆಕಾಶದಿಂದ ಫೋಟೋ ತೆಗೆಯುವುದಕ್ಕೆ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದಕ್ಕೆ ಹೆಸರುವಾಸಿಯಾಗಿದೆ.

ರಾಬಿನ್ಸನ್ ಆರ್ 44:
ಈ ಸಣ್ಣ ಹೆಲಿಕಾಪ್ಟರ್ ಕೇವಲ ಮೂರು ಸೀಟುಗಳನ್ನು ಹೊಂದಿದೆ. ಈ ಹೆಲಿಕಾಪ್ಟರ್ ಪ್ರತಿ ಗಂಟೆಗೆ ಗರಿಷ್ಠ 130 ಮೈಲಿ ವೇಗದಲ್ಲಿ ಚಲಿಸುತ್ತದೆ. ಪೂರ್ತಿಯಾಗಿ ಇಂಧನ ತುಂಬಿಸಿದ ನಂತರ ಈ ಹೆಲಿಕಾಪ್ಟರ್ 400 ಮೈಲಿಗಳವರೆಗೆ ಹಾರಾಟ ನಡೆಸುತ್ತದೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸಿಕೋರ್ ಸ್ಕೈ ಎಸ್ 76:
8 ಸೀಟುಗಳನ್ನು ಹೊಂದಿರುವ ಸಿಕೋರ್ ಸ್ಕೈ ಎಸ್ 76 ಹೆಲಿಕಾಪ್ಟರ್ ನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 180 ಮೈಲಿಗಳಾಗಿದೆ. ಪೂರ್ತಿಯಾಗಿ ಇಂಧನ ತುಂಬಿದ ನಂತರ ಈ ಹೆಲಿಕಾಪ್ಟರ್ 400 ಮೈಲಿಗಳವರೆಗೆ ಚಲಿಸುತ್ತದೆ.

ಸಿಕೋರ್ ಸ್ಕೈ ಎಸ್ 92:
ಈ ಹೆಲಿಕಾಪ್ಟರ್ 16 ಜನರನ್ನು ಹೊತ್ತೊಯ್ಯಬಲ್ಲದು. ಇದು ಅತಿದೊಡ್ಡ ಹೆಲಿಕಾಪ್ಟರ್‌ಗಳಲ್ಲಿ ಒಂದಾಗಿದೆ. 26,000 ಪೌಂಡ್ ತೂಕದ ಸಿಕೋರ್ ಸ್ಕೈ ಎಸ್ 92 ಹೆಲಿಕಾಪ್ಟರ್ ಪ್ರತಿ ಗಂಟೆಗೆ 160 ಮೈಲುಗಳಷ್ಟು ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಪೂರ್ತಿಯಾಗಿ ಇಂಧನ ತುಂಬಿಸಿದ ನಂತರ ಈ ಹೆಲಿಕಾಪ್ಟರ್ 600 ಮೈಲಿಗಿಂತ ಹೆಚ್ಚು ದೂರವನ್ನು ಕ್ರಮಿಸುತ್ತದೆ.