ಭಾರತೀಯ ವಾಹನೋದ್ಯಮಕ್ಕೆ ಸಂಬಂಧಿಸಿದ 10 ರೋಚಕ ಸತ್ಯಗಳು
ಜಗತ್ತಿನ ಅತಿದೊಡ್ಡ ವಾಹನ ಮಾರುಕಟ್ಟೆಗಳಲ್ಲಿ ಒಂದಾಗಿರುವ ಭಾರತವು, ಜಾಗತಿಕವಾಗಿ ಶಿಪ್ರಗತಿಯಲ್ಲಿ ಬೆಳೆದು ಬರುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ. ನಿಮ್ಮ ಮಾಹಿತಿಗಾಗಿ ಭಾರತೀಯ ಪ್ರಯಾಣಿಕ ಕಾರು ಹಾಗೂ ವಾಣಿಜ್ಯ ವಾಹನಗಳ ಉತ್ಪಾದನೆಯು ಜಗತ್ತಿನಲ್ಲಿ ಆರನೇ ಅತಿದೊಡ್ಡ ಮಾರುಕಟ್ಟೆಯನ್ನು ಹೊಂದಿದೆ.
ಇಲ್ಲಿ 2011ನೇ ಸಾಲಿನಲ್ಲಿ ಒಟ್ಟು 3.9 ದಶಲಕ್ಷ ವಾಹನಗಳು ಉತ್ಪನ್ನಗೊಂಡಿದ್ದವು. 2010ರಲ್ಲಿ ಥಾಯ್ಲೆಂಡ್ ಹಿಂದಿಕ್ಕಿದ ಭಾರತವು ಏಷ್ಯಾದ ಮೂರನೇ ಅತಿದೊಡ್ಡ ಪ್ರಯಾಣಿಕ ವಾಹನ ರಫ್ತು ದೇಶವಾಗಿ ಮಾರ್ಪಡುಗೊಂಡಿತ್ತು.
ಮಾರುತಿ ಸುಜುಕಿ, ಹ್ಯುಂಡೈ, ಮಹೀಂದ್ರ ಆಂಡ್ ಮಹೀಂದ್ರ ಹಾಗೂ ಟಾಟಾ ಮೋಟಾರ್ಸ್ ದೇಶದ ಮುಂಚೂಣಿಯ ಕಾರು ತಯಾರಕ ಕಂಪನಿಗಳಾಗಿವೆ. ಅಧ್ಯಯನ ವರದಿಯೊಂದರ ಪ್ರಕಾರ 2020ರ ವೇಳೆಗೆ ಭಾರತ ಜಗತ್ತಿನ ಅತಿದೊಡ್ಡ ಮಾರುಕಟ್ಟೆಯಾಗಿ ಪರಿವರ್ತನೆಯಾಗುವ ಎಲ್ಲ ಸಾಧ್ಯತೆಗಳು ಕಂಡುಬಂದಿವೆ ಎಂದು ವಿವರಿಸಿವೆ.
ಇಂದಿನ ಈ ಲೇಖನದ ಮೂಲಕ ಭಾರತೀಯ ವಾಹನೋದ್ಯಮಕ್ಕೆ ಸಂಬಂಧಿಸಿದ 10 ರೋಚಕ ಸಂಗತಿಗಳನ್ನು ಬಹಿರಂಗಪಡಿಸಲಿದ್ದೇವೆ. ಇದು ವಾಹನ ಪ್ರಿಯರಿಗೆ ರಸದೌತಣ ನೀಡುವ ಭರವಸೆಯನ್ನು ನಮ್ಮ ಡ್ರೈವ್ ಸ್ಪಾರ್ಕ್ ಹೊಂದಿದೆ.

1. ವಿಶ್ವದ ಅಗ್ಗದ ಕಾರು
ಟಾಟಾ ಮೋಟಾರ್ಸ್‌ನ ಅತ್ಯಂತ ಜನಪ್ರಿಯ ಉತ್ಪನ್ನವಾಗಿರುವ ನ್ಯಾನೋ, ವಿಶ್ವದ ಅತ್ಯಂತ ಅಗ್ಗದ ಕಾರೆನಿಸಿದೆ. ಅಮೆರಿಕ್ಕರನ್ನು ಇದನ್ನು ಹೇಗೆ ವ್ಯಾಖ್ಯಾನಿಸುತ್ತಿರಬಹುದು? ಹೌದು, 2500 ಅಮೆರಿಕನ್ ಡಾಲರ್ ಇದ್ದರೆ ಭಾರತದಲ್ಲಿ ಕಾರೊಂದನ್ನು ನಿಮ್ಮದಾಗಿಸಬಹುದು.

ಅಗ್ಗದ ಡೀಸೆಲ್ ಕಾರು
ಸಣ್ಣ ಕಾರು ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಪ್ರಾಬಲ್ಯ ಸಾಧಿಸಿರುವ ಹೊರತಾಗಿಯೂ 4 ಲಕ್ಷ ರು. ಎಕ್ಸ್ ಶೋ ರೂಂ ದರಗಳ ಕೆಳಗಡೆ ಭಾರತದಲ್ಲಿ ಡೀಸೆಲ್ ಕಾರು ಲಭ್ಯವಿಲ್ಲವೆಂಬುದು ತುಂಬಾ ಬೇಸರದ ಸಂಗತಿಯಾಗಿದೆ.ಸದ್ಯ ಲಭ್ಯವಿರುವ ಪೈಕಿ ಅಗ್ಗದ ಡೀಸೆಲ್ ಕಾರಾದ ಟಾಟಾ ಇಂಡಿಕಾ ಎಕ್ಸ್ ಶೋ ರೂಂ ಆರಂಭಿಕ ದರ 3.99 ಲಕ್ಷ ರು.ಗಳಾಗಿವೆ.

ಭಾರತದ ಪಾಲು
ವಿಶ್ವದಾದ್ಯಂತ ಒಟ್ಟು 50 ಲಕ್ಷ ಪ್ರಯಾಣಿಕ ಕಾರುಗಳು ಪ್ರತಿ ತಿಂಗಳಲ್ಲಿ ಮಾರಾಟವಾಗುತ್ತಿವೆ. ಈ ಪೈಕಿ ಜಾಗತಿಕ ಮಾರಾಟದಲ್ಲಿ ಭಾರತದ ಪಾಲು ಶೇಕಡಾ 4ರಷ್ಟಾಗಿದೆ.

ಮುಂಚೂಣಿಯ ಕಾರುಗಳು
1.5 ಲಕ್ಷ ಯುನಿಟ್‌ಗಳನ್ನು ಪ್ರತಿ ತಿಂಗಳು ಮಾರಾಟ ಮಾಡುತ್ತಿರುವ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್, ಹ್ಯುಂಡೈ ಇಂಡಿಯಾ, ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರ ಆಂಡ್ ಮಹೀಂದ್ರ ದೇಶದ ಒಟ್ಟು ಮಾರುಕಟ್ಟೆಯ ಶೇಕಡಾ 75ರಷ್ಟು ಪಾಲನ್ನು ಹೊಂದಿದೆ. ಉಳಿದ ಸಂಖ್ಯೆಯನ್ನು 21 ಕಾರು ತಯಾರಕ ಕಂಪನಿಗಳು ಹಂಚಿಕೊಂಡಿವೆ.

ಉದ್ಯೋಗ
ದೇಶದ ವಾಹನೋದ್ಯಮವು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿಯೂ ಒಂದು ಕೋಟಿ ಭಾರತೀಯರಿಗೆ ಉದ್ಯೋಗದ ಕೊರತೆಯನ್ನು ನೀಗಿಸಿದೆ.

ಕಾರು ಸಾಂದ್ರತೆ
ದೇಶದ ಕಾರು ನಿಬಿಡತೆಯು ಪ್ರತಿ 1000 ಜನರಿಗೆ 11ರಷ್ಟಿದೆ. ಇನ್ನು ರಾಷ್ಟ್ರ ರಾಜಧಾನಿ ದಹೆಲಿಯನ್ನು ಮಾತ್ರ ಪರಿಗಣಿಸಿದಾದ ಇದು ಎಂಟು ಪಟ್ಟು ಹೆಚ್ಚಾಗಿದ್ದು ಪ್ರತಿ 1000 ಜನರಲ್ಲಿ 90 ಮಂದಿಗೆ ಕಾರುಗಳಾಗಿವೆ. ಇದು ದೆಹಲಿ, ಬೆಂಗಳೂರುಗಳಂತಹ ನಗರಗಳಲ್ಲಿ ಅತ್ಯಧಿಕ ವಾಹನ ದಟ್ಟಣೆಗೆ ಕಾರಣವಾಗಿದೆ.

ದೆಹಲಿ ಟ್ರಾಫಿಕ್
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರಾಸರಿ ಟ್ರಾಫಿಕ್ ವೇಗ ಪ್ರತಿ ಗಂಟೆಗೆ 15 ಕೀ.ಮೀ. ಆಗಿದೆ.

ಗೂಗಲ್ ಶೋಧನೆ
ಭಾರತದಲ್ಲಿ ಹಳೆಯ ಕಾರುಗಳನ್ನು ಖರೀದಿಸುವುದಕ್ಕಾಗಿ ಪ್ರತಿ ತಿಂಗಳು 4.5 ಲಕ್ಷಗಳಷ್ಟು ಗೂಗಲ್ ಶೋಧನೆ ನಡೆಯುತ್ತಿದೆ.

ಅತ್ಯಂತ ಯಶಸ್ವಿ ಕಾರು
1983ನೇ ಇಸವಿಯಲ್ಲಿ ಲಾಂಚ್ ಆಗಿರುವ ಮಾರುತಿ ಸುಜುಕಿ ಈ ವರೆಗೆ 2.5 ದಶಲಕ್ಷ ಯುನಿಟ್ ಮಾರಾಟವಾಗಿದೆ. ಮಾತೃಸಂಸ್ಥೆ ಸುಜುಕಿ ಆಲ್ಟೊದಿಂದ ರಿ ಬ್ಯಾಡ್ಜ್ ಪಡೆದುಕೊಂಡಿದ್ದ ಮಾರುತಿ 800 ದೇಶದ ಸಣ್ಣ ಸಿಟಿ ಕಾರು ಎನಿಸಿಕೊಂಡಿದೆ.

ವಿಶ್ವದ 6ನೇ ಅತಿದೊಡ್ಡ ಮಾರುಕಟ್ಟೆ
2012ರ ಅಂಕಿಅಂಶ ಪ್ರಕಾರ ಬ್ರೆಜಿಲ್ ದೇಶವನ್ನು ಹಿಂದಿಕ್ಕಿರುವ ಭಾರತ, ವಿಶ್ವದ ಆರನೇ ಅತಿದೊಡ್ಡ ವಾಹನ ಮಾರುಕಟ್ಟೆ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. (ಇದರಲ್ಲಿ ಪ್ರಯಾಣಿಕ ಕಾರು, ಹಗುರ ವಾಣಿಜ್ಯ ವಾಹನ, ಮಿನಿಬಸ್, ಟ್ರಕ್ ಹಾಗೂ ಬಸ್ ಸೇರಿವೆ.)


Click it and Unblock the Notifications








