ರೋಚಕತೆಗೆ ಸಾಕ್ಷಿಯಾದ ಜಗತ್ತಿನ ಮಹಾ ಅದ್ಭುತ 'ಸುಯೆಜ್ ಕಾಲುವೆ'

By Manoj B.k

ಕೆಂಪು ಸಮುದ್ರದ ಸುಯೆಜ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಯೀದ್ ಬಂದರಿನ ನಡುವೆ ಸಂಪರ್ಕ ಕಲ್ಪಿಸುವ ಒಂದು ಮಹಾಕಾಲುವೆಯಾಗಿದೆ 'ಸುಯೆಜ್ ಕಾಲುವೆ'. ಈಜಿಪ್ಟ್ ದೇಶದಲ್ಲಿರುವ ಸುಯೆಜ್ ಕಾಲುವೆ ಸೈನಾಯಿ ಜಂಬೂದ್ವೀಪದ ಪಶ್ಚಿಮಕ್ಕಿದ್ದು, 193.30 ಕೀ.ಮೀ. ಉದ್ದಕ್ಕೆ ಹರಡಿದೆ.

ಸುಯೆಜ್ ಕಾಲುವೆಯ ನಿರ್ಮಾಣದೊಂದಿಗೆ ಏಷ್ಯಾ ಮತ್ತು ಯುರೋಪ್ ಖಂಡಗಳಿಗೆ ಹೋಗುವ ಹಡಗುಗಳು ಆಫ್ರಿಕಾ ಖಂಡವನ್ನು ಸುತ್ತಬೇಕಾಗಿಲ್ಲ. ಬದಲಾಗಿ ನೇರವಾಗಿ ಮಹಾ ಕಾಲುವೆ ಮುಖಾಂತರ ಸಂಪರ್ಕ ಕಲ್ಪಿಸುತ್ತಿದ್ದು, ವೆಚ್ಚ ಕಡಿತದ ಜೊತೆಗೆ ಸಾಗರೋದ್ಯಮ ವ್ಯಾಪಾರವನ್ನು ಕುದುರಿಸಿದೆ.

ರೋಚಕತೆಗೆ ಸಾಕ್ಷಿಯಾದ ಜಗತ್ತಿನ ಮಹಾ ಅದ್ಭುತ 'ಸುಯೆಜ್ ಕಾಲುವೆ'

ಮಾನವ ನಿರ್ಮಿತ ಸುಯೆಜ್ ಕಾಲುವೆಯು ಈಜಿಪ್ಟನ್ನರ ಜೀವನಾಡಿಯಾಗಿದ್ದು, 1859ರಲ್ಲಿ ಆರಂಭವಾದ ನಿರ್ಮಾಣ ಕಾಮಗಾರಿಯು 1869ರಲ್ಲಿ ಮುಕ್ತಾಯಗೊಂಡಿತ್ತು.

ರೋಚಕತೆಗೆ ಸಾಕ್ಷಿಯಾದ ಜಗತ್ತಿನ ಮಹಾ ಅದ್ಭುತ 'ಸುಯೆಜ್ ಕಾಲುವೆ'

ಸುಯೆಜ್ ಕನಾಲ್ ಕಂಪನಿ 10 ವರ್ಷಗಳ ನಿರ್ಮಾಣ ಕಾಮಗಾರಿಯ ಬಳಿಕ 1869 ನವೆಂಬರ್ 17ರಂದು ಅಧಿಕೃತವಾಗಿ ತೆರೆದುಕೊಂಡಿತ್ತು.

ರೋಚಕತೆಗೆ ಸಾಕ್ಷಿಯಾದ ಜಗತ್ತಿನ ಮಹಾ ಅದ್ಭುತ 'ಸುಯೆಜ್ ಕಾಲುವೆ'

ಕೆಂಪು ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರದ ಮುಖಾಂತರ ಉತ್ತರ ಅಟ್ಲಾಂಟಿಕ್ ಮತ್ತು ಉತ್ತರ ಇಂಡಿಯನ್ ಸಮುದ್ರಗಳಿಗೆ ಸಂಪರ್ಕ ಕಲ್ಪಿಸುವ ಸುಯೆಜ್ ಕಾಲುವೆಯು ದಕ್ಷಿಣ ಅಟ್ಲಾಂಟಿಟ್ ಮತ್ತು ದಕ್ಷಿಣ ಇಂಡಿಯನ್ ಸಾಗರಗಳ ಸಂಪರ್ಕ ಹಾದಿಯನ್ನು ಕಡಿತ ಮಾಡುವುದರೊಂದಿಗೆ ಒಟ್ಟಾರೆ ಸಮುದ್ರಯಾನವನ್ನು 7,000 ಕೀ.ಮೀ.ಗಳಷ್ಟು ಕಡಿಮೆಗೊಳಿಸುತ್ತದೆ.

ರೋಚಕತೆಗೆ ಸಾಕ್ಷಿಯಾದ ಜಗತ್ತಿನ ಮಹಾ ಅದ್ಭುತ 'ಸುಯೆಜ್ ಕಾಲುವೆ'

ತನ್ನ ವಿಶಿಷ್ಟ ಭೌಗೋಳಿಕ ಲಕ್ಷಣಗಳೊಂದಿಗೆ ಸುಯೆಜ್ ಕಾಲುವೆ ಜಗತ್ತಿನ ಮಹಾ ಅದ್ಭುತಗಳಲ್ಲಿ ಒಂದೆನಿಸಿಕೊಂಡಿದೆ. ರಾಜಕೀಯ ಬಿಕ್ಕಟ್ಟು, ಕಾರ್ಮಿಕರ ಅಭಾವದಿಂದಾಗಿ ಯೋಜನೆಗೆ ಅನೇಕ ತೊಡಕುಗಳು ಎದುರಾಗಿತ್ತು.

ರೋಚಕತೆಗೆ ಸಾಕ್ಷಿಯಾದ ಜಗತ್ತಿನ ಮಹಾ ಅದ್ಭುತ 'ಸುಯೆಜ್ ಕಾಲುವೆ'

ಪ್ರಾಚೀನ ದಾಖಲೆಗಳ ಪ್ರಕಾರ ಫರೋ ಸೆನುಸ್ರೆತ್ III ಅರಸು ಕೆಂಪು ಸಮುದ್ರ ಮತ್ತು ನೈಲ್ ನದಿ ಸಂಪರ್ಕದಲ್ಲಿ ಕಾಲುವೆ ನಿರ್ಮಿಸಲು ಮುಂದಾಗಿದ್ದರು.

ರೋಚಕತೆಗೆ ಸಾಕ್ಷಿಯಾದ ಜಗತ್ತಿನ ಮಹಾ ಅದ್ಭುತ 'ಸುಯೆಜ್ ಕಾಲುವೆ'

ಇತಿಹಾಸದತ್ತ ಗಮನ ಹಾಯಿಸಿದಾಗ ಮಹತ್ತರ ಸುಯೆಜ್ ಕಾಲುವೆ ನಿರ್ಮಾಣಕ್ಕೆ ಫ್ರಾನ್ಸ್ ಚಕ್ರವರ್ತಿ ನೆಪೋಲಿಯನ್ ಬೋನಾ ಪಾರ್ಟಿ ಆಸಕ್ತಿಯನ್ನು ತೋರಿದ್ದರು. 1798ರಲ್ಲಿ ಈಜಿಪ್ಟ್ ಆಕ್ರಮಿಸಿಕೊಂಡ ನೆಪೋಲಿಯನ್, ಸುಯೆಜ್ ಕಾಲುವೆ ನಿರ್ಮಾಣದ ಬಗ್ಗೆ ಅಧ್ಯಯನಕ್ಕಾಗಿ ತಜ್ಞರ ತಂಡವನ್ನು ಕಳುಹಿಸಿಕೊಟ್ಟಿದ್ದರು.

ರೋಚಕತೆಗೆ ಸಾಕ್ಷಿಯಾದ ಜಗತ್ತಿನ ಮಹಾ ಅದ್ಭುತ 'ಸುಯೆಜ್ ಕಾಲುವೆ'

ಕೆಂಪು ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರಗಳನ್ನು ಕೂಲಂಕುಷವಾಗಿವಾಗಿ ಅಧ್ಯಯನ ನಡೆಸಿದ ತಜ್ಞರು ತಂಡವು, ಮೆಡಿಟರೇನಿಯನ್ ಗಿಂತ ಕಾಲುವೆ ನಿರ್ಮಾಣದಿಂದ ನೈಲ್ ಡೆಲ್ಟಾದಲ್ಲಿ ಮಹಾ ಪ್ರಳಯದ ಬಗ್ಗೆ ಎಚ್ಚರಿಸಿದ್ದರು.

ರೋಚಕತೆಗೆ ಸಾಕ್ಷಿಯಾದ ಜಗತ್ತಿನ ಮಹಾ ಅದ್ಭುತ 'ಸುಯೆಜ್ ಕಾಲುವೆ'

ಸಾಗರಾಯಾನ ವ್ಯಾಪಾರದ ಉದ್ದೇಶದಿಂದಲೇ ನಿರ್ಮಾಣಗೊಂಡಿರುವ ಸುಯೆಜ್ ಕಾಲುವೆಯ ಸಂಪೂರ್ಣ ಒಡೆತನ ಹಾಗೂ ನಿರ್ವಹಣೆಯನ್ನು ಸುಯೆಜ್ ಕನಾಲ್ ಪ್ರಾಧಿಕಾರ ನೋಡಿಕೊಳ್ಳುತ್ತಿದೆ.

ರೋಚಕತೆಗೆ ಸಾಕ್ಷಿಯಾದ ಜಗತ್ತಿನ ಮಹಾ ಅದ್ಭುತ 'ಸುಯೆಜ್ ಕಾಲುವೆ'

ಸುಯೆಜ್ ಕಾಲುವೆ ದಿನವೊಂದರಲ್ಲಿ 49ರಷ್ಟು ಹಡಗುಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. 2014ರಲ್ಲಿ ಹಡಗು ನಿರ್ವಹಣೆಯನ್ನು 49ರಿಂದ 97ಕ್ಕೆ ಏರಿಸಲು ಕಾಲುವೆ ವಿಸ್ತರಣೆ ಯೋಜನೆ ಜಾರಿಗೆ ತರಲಾಯಿತು.

ರೋಚಕತೆಗೆ ಸಾಕ್ಷಿಯಾದ ಜಗತ್ತಿನ ಮಹಾ ಅದ್ಭುತ 'ಸುಯೆಜ್ ಕಾಲುವೆ'

1854ರಲ್ಲಿ ಸುಯೆಜ್ ಕಾಲುವೆ ನಿರ್ಮಾಣದ ಯೋಜನೆಯನ್ನು ಹಮ್ಮಿಕೊಂಡರೂ ಸಹ ಇದನ್ನು ಬ್ರಿಟನ್ ಸರಕಾರ ವಿರೋಧಿಸಿತ್ತಲ್ಲದೆ ಇಂದೊಂದು ಸ್ವಯಂ ಆತ್ಮಹತ್ಯೆ ಎಂಬುದಾಗಿ ಟೀಕಿಸಿತ್ತು. ಇದು ಸಾಮ್ರಾಜ್ಯಶಾಹಿ ದಬ್ಬಾಳಿಕೆಗೆ ಸಾಕ್ಷಿಯಾಗಿತ್ತು.

ರೋಚಕತೆಗೆ ಸಾಕ್ಷಿಯಾದ ಜಗತ್ತಿನ ಮಹಾ ಅದ್ಭುತ 'ಸುಯೆಜ್ ಕಾಲುವೆ'

ಸುಯೆಜ್ ಕಾಲುವೆ ನಿರ್ಮಾಣಕ್ಕೆ ಲಕ್ಷಾಂತರ ಕಾರ್ಮಿಕರ ಅಗತ್ಯವಿತ್ತು. ಈಜಿಪ್ಟ್ ಸರಕಾರವು ಬಹುತೇಕ ಕಾರ್ಮಿಕರನ್ನು ರವಾನಿಸಿತ್ತು. ಆದರೆ ಕಡಿಮೆ ಸಂಬಳ ನೀಡಿದ್ದರಿಂದ ಕಾರ್ಮಿಕ ಬಿಕ್ಕಟ್ಟು ಆರಂಭವಾಗಿತ್ತು.

ರೋಚಕತೆಗೆ ಸಾಕ್ಷಿಯಾದ ಜಗತ್ತಿನ ಮಹಾ ಅದ್ಭುತ 'ಸುಯೆಜ್ ಕಾಲುವೆ'

ಫ್ರಾನ್ಸ್ ಎಂಜಿನಿಯರ್ ಫರ್ಡಿನಾಂಡ್ ಡಿಲೆಸೆಪ್ಸ್ ನೇತೃತ್ವದಲ್ಲಿ ಕಾಲುವೆ ನಿರ್ಮಾಣ ಕಾಮಗಾರಿಯು ನೇರವೇರಿತ್ತು. ಇದು ಇಡೀ ಜಗತ್ತಿಗೆ ನೀಡಿರುವ ವರದಾನವಾಗಿದೆ.

ರೋಚಕತೆಗೆ ಸಾಕ್ಷಿಯಾದ ಜಗತ್ತಿನ ಮಹಾ ಅದ್ಭುತ 'ಸುಯೆಜ್ ಕಾಲುವೆ'

ಅಂಕಿಅಂಶಗಳ ಪ್ರಕಾರ 2013ರಲ್ಲಿ ಶೇಕಡಾ 4.6ರಷ್ಟು ಜಾಗತಿಕ ತೈಲ ಮತ್ತು ಪ್ರೆಟ್ರೋಲಿಯಂ ಉತ್ಪನ್ನಗಳನ್ನು ಸುಯೆಜ್ ಕಾಲುವೆಯ ಮುಖಾಂತರ ರವಾನಿಸಲಾಗಿತ್ತು. ಅಲ್ಲದೆ ಶೇಕಡಾ 7.5ರಷ್ಟು ಜಾಗತಿಕ ಸಾಗರ ವ್ಯಪಾರವನ್ನು ವಶಪಡಿಸಿಕೊಂಡಿತ್ತು.

More from DriveSpark

Article Published On: Monday, October 3, 2016, 11:38 [IST]
English summary
Interesting facts about the Suez Canal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+