ನಂಬರ್‍‍ಪ್ಲೇಟ್‍‍ಗಳ ಬಗ್ಗೆ ನೀವು ಅರಿಯದ ಸಂಗತಿಗಳಿವು..!

ಯಾವುದೇ ವಾಹನವಾಗಿರಲಿ ಆ ವಾಹನಗಳಲ್ಲಿ ನಂಬರ್‍‍ಪ್ಲೇಟ್‍‍ಗಳಿರುವುದು ಕಡ್ಡಾಯ. ನಂಬರ್‍‍ಪ್ಲೇಟ್ ಇಲ್ಲದೇ ವಾಹನಗಳನ್ನು ಚಾಲನೆ ಮಾಡಲು ಸಾಧ್ಯವಿಲ್ಲ. ನಂಬರ್‍‍ಪ್ಲೇಟ್‍‍ಗಳಿಂದ ವಾಹನಗಳ ಮಾಲೀಕರನ್ನು ಸುಲಭವಾಗಿ ಪತ್ತೆಹಚ್ಚಬಹುದು.

ನಂಬರ್‍‍ಪ್ಲೇಟ್‍‍ಗಳ ಬಗ್ಗೆ ನೀವು ಅರಿಯದ ಸಂಗತಿಗಳಿವು..!

ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದ ಬೇರೆ ದೇಶಗಳಲ್ಲಿಯೂ ಸಹ ವಾಹನಗಳಲ್ಲಿ ನಂಬರ್‍‍ಪ್ಲೇಟ್‍‍ಗಳನ್ನು ಕಡ್ಡಾಯಗೊಳಿಸಲಾಗಿದೆ. ನಂಬರ್‍‍ಪ್ಲೇಟ್‍‍ಗಳಿಲ್ಲದೇ ಯಾವುದೇ ವಾಹನಗಳು ಸಾರ್ವಜನಿಕ ರಸ್ತೆಗಳಲ್ಲಿ ಓಡಾಡುವಂತಿಲ್ಲ. ನಂಬರ್‍‍ಪ್ಲೇಟ್‍‍ಗಳಿಗೆ ತನ್ನದೇ ಆದ ಮಹತ್ವವಿದೆ. ಭಾರತದಲ್ಲಿ ನಂಬರ್‍‍ಪ್ಲೇಟ್‍‍ಗಳನ್ನು ಅಳವಡಿಸಲು ಹಲವಾರು ನಿಯಮಗಳಿವೆ.

ನಂಬರ್‍‍ಪ್ಲೇಟ್‍‍ಗಳ ಬಗ್ಗೆ ನೀವು ಅರಿಯದ ಸಂಗತಿಗಳಿವು..!

ನಂಬರ್‍‍ಪ್ಲೇಟ್ ಅಳವಡಿಕೆ ನಿಯಮಗಳು ಒಂದು ದೇಶದಿಂದ ಮತ್ತೊಂದು ದೇಶದಲ್ಲಿ ಬದಲಾಗುತ್ತವೆ. ನಂಬರ್ ಪ್ಲೇಟ್‍‍ಗಳನ್ನು ಮೊದಲ ಯಾವ ದೇಶದಲ್ಲಿ ಪರಿಚಯಿಸಲಾಯಿತು? ಮೊದಲ ಬಾರಿಗೆ ಯಾವಾಗ ಪರಿಚಯಿಸಲಾಯಿತು ಮುಂತಾದ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ನಂಬರ್‍‍ಪ್ಲೇಟ್‍‍ಗಳ ಬಗ್ಗೆ ನೀವು ಅರಿಯದ ಸಂಗತಿಗಳಿವು..!

ಪ್ರಪಂಚದಲ್ಲಿ ಮೊದಲ ಬಾರಿಗೆ ಫ್ರಾನ್ಸ್ ದೇಶವು ನಂಬರ್‍‍ಪ್ಲೇಟ್‍‍ಗಳನ್ನು ಪರಿಚಯಿಸಿತು. 1893ರಲ್ಲಿ ನಂಬರ್‍‍ಪ್ಲೇಟ್‍‍ಗಳನ್ನು ಫ್ರಾನ್ಸ್ ನಲ್ಲಿ ಮೊದಲ ಬಾರಿಗೆ ಅಳವಡಿಸಲಾಯಿತು. ಫ್ರಾನ್ಸ್ ದೇಶವು ಪ್ಯಾರಿಸ್ ಪೊಲೀಸ್ ಎಮರ್ಜೆನ್ಸಿ ಕಾಯ್ದೆಯನ್ನು ಜಾರಿಗೊಳಿಸಿ ನಂಬರ್‍‍ಪ್ಲೇಟ್‍‍ಗಳನ್ನು ಅಳವಡಿಸಿಕೊಂಡಿತು.

ನಂಬರ್‍‍ಪ್ಲೇಟ್‍‍ಗಳ ಬಗ್ಗೆ ನೀವು ಅರಿಯದ ಸಂಗತಿಗಳಿವು..!

120 ವರ್ಷಗಳ ಹಿಂದೆ ಫ್ರಾನ್ಸ್ ನಲ್ಲಿ ನಂಬರ್ ಪ್ಲೇಟ್ ಅನ್ನು ಮೊದಲ ಬಾರಿಗೆ ಅಳವಡಿಸಿಕೊಂಡ ನಂತರ, ಪ್ರಪಂಚದ ಇತರ ದೇಶಗಳೂ ಸಹ ನಂಬರ್ ಪ್ಲೇಟ್‍‍ಗಳನ್ನು ಅಳವಡಿಸಿಕೊಳ್ಳಲು ಶುರು ಮಾಡಿದವು. 1898ರಲ್ಲಿ ನೆದರ್‍‍ಲ್ಯಾಂಡ್ಸ್ ನಂಬರ್‍‍ಪ್ಲೇಟ್‍‍ಗಳನ್ನು ಅಳವಡಿಸಿಕೊಂಡಿತು.

ನಂಬರ್‍‍ಪ್ಲೇಟ್‍‍ಗಳ ಬಗ್ಗೆ ನೀವು ಅರಿಯದ ಸಂಗತಿಗಳಿವು..!

ಇದಾದ ನಂತರ ಅಮೇರಿಕಾದಲ್ಲಿ 1901ರಲ್ಲಿ ನಂಬರ್‍‍ಪ್ಲೇಟ್‍ ವ್ಯವಸ್ಥೆಯನ್ನು ಅಳವಡಿಸಲಾಯಿತು. ಅಮೇರಿಕಾದ ನ್ಯೂಯಾರ್ಕ್‍‍ನಲ್ಲಿ ಮೊದಲ ಬಾರಿಗೆ ಎಲ್ಲಾ ವಾಹನಗಳಲ್ಲೂ ನಂಬರ್‍‍ಪ್ಲೇಟ್‍‍ಗಳನ್ನು ಕಡ್ಡಾಯಗೊಳಿಸಲಾಯಿತು.

ನಂಬರ್‍‍ಪ್ಲೇಟ್‍‍ಗಳ ಬಗ್ಗೆ ನೀವು ಅರಿಯದ ಸಂಗತಿಗಳಿವು..!

ಈ ನಂಬರ್‍‍ಪ್ಲೇಟ್‍‍ಗಳನ್ನು ಆಯಾ ವಾಹನಗಳ ಮಾಲೀಕರೇ ಅಭಿವೃದ್ಧಿಪಡಿಸಿದ್ದರು. ಆದರೆ ಈ ವಾಹನಗಳ ಮಾಲೀಕರು ತಮ್ಮ ಹೆಸರಿನ ಇನ್ಶಿಯಲ್‍‍ಗಳನ್ನು ವಾಹನದ ಹಿಂಭಾಗದಲ್ಲಿ ಸ್ಪಷ್ಟವಾಗಿ ಕಾಣುವಂತೆ ಅಳವಡಿಸಬೇಕಾಗಿತ್ತು.

ನಂಬರ್‍‍ಪ್ಲೇಟ್‍‍ಗಳ ಬಗ್ಗೆ ನೀವು ಅರಿಯದ ಸಂಗತಿಗಳಿವು..!

ಅಮೇರಿಕಾದ ಮಸಾಚೂಟ್‍‍ನಲ್ಲಿ 1903ರಿಂದ ನಂಬರ್‍‍ಪ್ಲೇಟ್‍ ವ್ಯವಸ್ಥೆಯನ್ನು ಅನುಸರಿಸಲಾಗುತ್ತಿದೆ. ಆಗ ಈ ನಂಬರ್‍‍ಪ್ಲೇಟ್‍ಗಳಲ್ಲಿ ಕೇವಲ ನಂಬರ್‍‍ಗಳನ್ನು ಮಾತ್ರ ಬಳಸಲಾಗುತ್ತಿತ್ತು. ಅಮೇರಿಕಾದ ಲೋವಾದಲ್ಲಿ 1928ರಲ್ಲಿ ಪೊಟಾಟೊ ಗ್ರಾಫಿಕ್ಸ್ ನಂಬರ್‍‍ಪ್ಲೇಟ್‍‍‍ಗಳನ್ನು ಆರಂಭಿಸಲಾಯಿತು.

ನಂಬರ್‍‍ಪ್ಲೇಟ್‍‍ಗಳ ಬಗ್ಗೆ ನೀವು ಅರಿಯದ ಸಂಗತಿಗಳಿವು..!

ಪ್ರಪಂಚದಲ್ಲಿ ಮೊದಲ ಬಾರಿಗೆ ನಂಬರ್‍‍ಪ್ಲೇಟ್‍‍ಗಳನ್ನು ಪೊಟಾಟೊ ಗ್ರಾಫಿಕ್ಸ್ ನಲ್ಲಿ ಆರಂಭಿಸಲಾಯಿತು. ಎರಡನೇ ಮಹಾಯುದ್ದದ ಸಂದರ್ಭದಲ್ಲಿ ನಂಬರ್‍‍ಪ್ಲೇಟ್‍‍ಗಳನ್ನು ಸೋಯಾಬೀನ್ ಫೈಬರ್‍‍ಬೋರ್ಡಿನಲ್ಲಿ ಆರಂಭಿಸಲಾಯಿತು.

ನಂಬರ್‍‍ಪ್ಲೇಟ್‍‍ಗಳ ಬಗ್ಗೆ ನೀವು ಅರಿಯದ ಸಂಗತಿಗಳಿವು..!

ಯುದ್ದದ ಕಾರಣ ಕಬ್ಬಿಣದ ಬಳಕೆ ಹೆಚ್ಚಾಗಿದ್ದ ಕಾರಣ ಈ ಫೈಬರ್‍‍ಬೋರ್ಡ್ ಆರಂಭಿಸಲಾಯಿತು. ಕಬ್ಬಿಣದ ಬಳಕೆಯನ್ನು ಕಡಿಮೆಗೊಳಿಸಲು ಬೇರೆ ನಂಬರ್‍‍ಪ್ಲೇಟ್‍‍ಗಳನ್ನು ಆರಂಭಿಸಲಾಯಿತು.

Most Read Articles

Kannada
English summary
Interesting facts about vehicle number plates. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X