ಮತ್ತಷ್ಟು ಆರಾಮದಾಯಕ ಸವಾರಿಗಾಗಿ ಟೊಯೊಟಾ ಇನೋವಾ ಹೈಕ್ರಾಸ್ ಕಾರಿನ ಒಳಭಾಗ ಮಾರ್ಪಾಡು
ಜಪಾನ್ ಮೂಲದ ದೈತ ವಾಹನ ತಯಾರಿಕ ಕಂಪನಿಯಾದ ಟೊಯೊಟಾ ಹೊಸ ಇನೋವಾ ಹೈಕ್ರಾಸ್ ಹೊಸ ಪ್ರೀಮಿಯಂ ಎಂಪಿವಿಯಾಗಿದೆ. ಇನೋವಾ ಹೈಕ್ರಾಸ್ ರೂಪಾಂತರವು ಹಳೇಯ ಇನೋವಾ ಮಾದರಿಯ ವಿಶ್ವಾಸಾರ್ಹತೆ ಮತ್ತು ವಿಶಾಲತೆಯನ್ನು ಹೈಬ್ರಿಡ್ ಪವರ್‌ಟ್ರೇನ್‌ನ ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹದ ಸಂಯೋಜನೆಯಾಗಿದೆ.
ಟೊಯೊಟಾ ಇನೋವಾ ಮಾದರಿಯು ಫ್ಯಾಮಿಲಿ ಕಾರ್ ಆಗಿಯೂ ಹೆಚ್ಚು ಜನಪ್ರಿಯಗೊಂಡಿದೆ. ಅಲ್ಲದೇ ಇನೋವಾ ಕಾರ್ ಹೆಚ್ಚು ಟ್ಯಾಕಿಯಾಗಿಯೂ ಬಳಕೆಯಾಗುತ್ತದೆ. ಇದರಿಂದ ಈ ಕಾರಿಗೆ ಭಾರತದಲ್ಲಿ ಭಾರಿ ಬೇಡಿಕೆಯಿದೆ. ಪ್ರಸ್ತುತ ಟೊಯೊಟಾ ಇನೋವಾ ಹೈಕ್ರಾಸ್ ಮಾದರಿಗೆ ಭಾರೀ ಬೇಡಿಕೆಯನ್ನು ಹೊಂದಿರುವುದರಿಂದ ವೈಟಿಂಗ್ ಪಿರೆಡ್ ಕೂಡ ಹೆಚ್ಚಿದೆ. ಈ ಇನೋವಾ ಹೈಕ್ರಾಸ್ ಕಾರಿನ ಟಾಪ್-ಸ್ಪೆಕ್ ರೂಪಾಂತರಗಳಿಗೆ ಹೆಚ್ಚಿನ ಬೇಡಿಕೆಯಿದೆ.

ಇಲ್ಲಿಯೊಬ್ಬ, ಟೊಯೊಟಾ ಇನೋವಾ ಹೈಕ್ರಾಸ್ (Toyota Innova Hycross) ಲೋ-ಸ್ಪೀಡ್ ಕಾರಿನ ಮಾಲೀಕರು ತಮ್ಮ ಹೊಸ ಕಾರಿನ ಒಳಭಾಗವನ್ನು ಟಾಪ್-ಸ್ಪೆಕ್ ರೂಪಾಂತರಕ್ಕೆ ಹೋಲುವಂತೆ ಮಾಡಿಫೈ ಮಾಡಿಸಿದ್ದಾರೆ. ಈ ಕಾರನ್ನು ಕ್ರೀಮ್ ಮತು ಟ್ಯಾನ್ ಬಣ್ಣಗಳನ್ನು ಸಂಯೋಜಿಸುವ ಟ್ರೈ-ಟೋನ್ ಥೀಮ್‌ನಲ್ಲಿರುವ ಒಳಭಾಗವನ್ನು ಹೊಂದಿದೆ. ಈ ಕಾರಿನ ಸೀಟುಗಳನ್ನು ಕ್ರೀಮ್ ಮತ್ತು ಟ್ಯಾನ್ ಥೀಮ್ ನಲ್ಲಿದೆ. ಆದರೆ ಡ್ಯಾಶ್‌ಬೋರ್ಡ್ ಅನ್ನು ಟ್ಯಾನ್ ಮತ್ತು ಬ್ಲ್ಯಾಕ್ ಬಣ್ಣವನ್ನು ಒಳಗೊಂಡಿದೆ.
ಈ ಕಾರಿನ ಡೋರ್ ಸೈಡ್ ಕೂಡ ಸೀಟ್ ಬಣ್ಣದ ಥೀಮ್ ಅನ್ನು ಹೊಂದಿದ್ದು, ಕೆಳಗಿನ ಭಾಗವನ್ನು ಲೆಥೆರೆಟ್ ವಸ್ತುಗಳನ್ನು ಒಳಗೊಂಡಿವೆ. ಇದಲ್ಲದೆ, ಒಳಭಾಗದಲ್ಲಿರುವ ಎಲ್ಲಾ ಮ್ಯಾಟ್ ಕಪ್ಪು ಟ್ರಿಮ್‌ಗಳನ್ನು ಹೆಚ್ಚಿನ ಗ್ಲೋಸಿ ಬ್ಲ್ಯಾಕ್ ಬಣ್ಣದಲ್ಲಿದೆ. ಮಾಡಿಫೈಗೊಂಡ ಈ ಕಾರಿನಲ್ಲಿ ಟಾಪ್-ಸ್ಪೆಕ್ ರೀತಿಯ ಆರಾಮದಾಯಕ ಸವಾರಿ ಅನುಭವವನ್ನು ಪಡೆಯಬಹುದು. ಈ ಹೈಕ್ರಾಸ್ ಒಟ್ಟು ಐದು ಟ್ರಿಮ್ ಹಂತಗಳಲ್ಲಿ ಲಭ್ಯವಿದೆ. ಇದು G, GX, VX, ZX ಮತ್ತು ZX(O) ಆಗಿದೆ.

ಹೊಸ ಇನೋವಾ ಹೈಕ್ರಾಸ್ 4755 ಎಂಎಂ ಉದ್ದ, 1845 ಎಂಎಂ ಅಗಲ ಮತ್ತು 1785 ಎಂಎಂ ಎತ್ತರ ಮತ್ತು 2850 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಈ ಇನೋವಾ ಹೈಕ್ರಾಸ್ ಮಾದರಿಯು ಇನೋವಾ ಕ್ರಿಸ್ಟಾಗಿಂತ 20 ಎಂಎಂ ಉದ್ದ ಮತ್ತು ಅಗಲವಾಗಿದೆ. ಆದರೆ ಇದರ ಎತ್ತರವು ಒಂದೇ ಆಗಿರುತ್ತದೆ, ಆದರೆ ವೀಲ್ ಬೇಸ್ ಅನ್ನು 100 ಎಂಎಂವರೆಗೆ ವಿಸ್ತರಿಸಲಾಗಿದೆ.
ಹೊಸ ಟೊಯೊಟಾ ಇನೋವಾ ಹೈಕ್ರಾಸ್ ಕಾರಿನ ವ್ಹೀಲ್‌ಬೇಸ್‌ನ ಹೆಚ್ಚಳವು ಉತ್ತಮ ಕ್ಯಾಬಿನ್ ಜಾಗವನ್ನು ನೀಡುತ್ತದೆ. ಈ ಇನೋವಾ ಹೈಕ್ರಾಸ್ ಬ್ಲ್ಯಾಕ್ಲಿಶ್ ಅಗೆಹಾ ಗ್ಲಾಸ್ ಫ್ಲೇಕ್, ಪ್ಲಾಟಿನಂ ವೈಟ್ ಪರ್ಲ್, ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಪರ್ಲ್ ಕ್ರಿಸ್ಟಲ್ ಶೈನ್, ಸಿಲ್ವರ್ ಮೆಟಾಲಿಕ್, ಅವಂತ್-ಗಾರ್ಡ್ ಬ್ರೋಂಜ್ ಮೆಟಾಲಿಕ್, ಆಟಿಟ್ಯೂಡ್ ಬ್ಲ್ಯಾಕ್ ಮೈಕಾ ಮತ್ತು ಸೂಪರ್ ವೈಟ್ ಎಂಬ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.
ಟೊಯೊಟಾ ಇನೋವಾ ಹೈಕ್ರಾಸ್ ಎಂಪಿವಿಯು ಟೊಯೋಟಾ ಸೇಫ್ಟಿ ಸೆನ್ಸ್ ಸೂಟ್ ಆಫ್ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟ್ಸ್ ಸಿಸ್ಟಂ) ನೊಂದಿಗೆ ಬರುತ್ತದೆ. ಈ ಕಾರಿನ ADAS ವೈಶಿಷ್ಟ್ಯಗಳು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರ್, ಲೇನ್ ಕೀಪ್ ಅಸಿಸ್ಟ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಮತ್ತು ಪ್ರಿ-ಕೊಲಿಷನ್ ಸಿಸ್ಟಂ ಅನ್ನು ಒಳಗೊಂಡಿದೆ.
ಈ ಪ್ರೀಮಿಯಂ ಕಾರಿನ ಫೀಚರ್ಸ್ ಬಗ್ಗೆ ಹೇಳುವುದಾದರೆ, ಈ ಎಂಪಿವಿಯಲ್ಲಿ ಸ್ಪೀಕರ್ BL ಆಡಿಯೊ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಕನೆಕ್ಟಿವಿಟಿ ಕಾರ್ ಟೆಕ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಕನಕ್ಟಿವಿಟಿಯೊಂದಿಗೆ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪ್ಯಾಡಲ್ ಶಿಫ್ಟರ್‌ಗಳು, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ದೊಡ್ಡ ಪನೋರಮಿಕ್ ಸನ್‌ರೂಫ್ ಮತ್ತು ಚಾಲಿತ ಟೈಲ್‌ಗೇಟ್ ಅನ್ನು ಹೊಂದಿದೆ.
Image Courtesy: AutoRounders


Click it and Unblock the Notifications








