ಬೈಕ್ ಜಾಕೆಟ್‌ನಲ್ಲೇ ಟರ್ನ್ ಸಿಗ್ನಲ್, ಬ್ರೇಕ್ ಲೈಟ್ಸ್
ಅಮೆರಿಕ ಮೂಲದ ವಾಹನ ಉತ್ಸಾಹಿ ಸಂಸ್ಥೆಯೊಂದು ವಿನೂತನ ಬೈಕ್ ಜಾಕೆಟ್ ವೊಂದನ್ನು ಪರಿಚಯಿಸುತ್ತಿದೆ. ಇದು ರಾತ್ರಿ ವೇಳೆಯಲ್ಲಿ ಬೈಕ್ ಚಾಲನೆಯನ್ನು ಮತ್ತಷ್ಟು ಸುರಕ್ಷಿತವಾಗಿಸಲಿದೆ.
ಮೋಟಾರುಸೈಕಲ್ ಸಂಚಾರದ ಬಗ್ಗೆ ನಿರಂತರ ಅಧ್ಯಯನದ ಬಳಿಕ ಇಂಪಲ್ಸ್ ಜಾಕೆಟ್ಸ್ ಸಂಸ್ಥೆಯು ನೂತನ ಎಲ್‌ಇಡಿ ಬ್ರೇಕ್ ಹಾಗೂ ಟರ್ನ್ ಲೈಟ್ಸ್ ಗಳನ್ನು ಹೊಂದಿರುವ ಲೆಥರ್ ಜಾಕೆಟನ್ನು ಹೊರತಂದಿದೆ.

ಪ್ರಸ್ತುತ ಜಾಕೆಟ್ ನಲ್ಲಿ ವೈರ್ ಲೆಸ್ ತಂತ್ರಜ್ಞಾನವನ್ನು ಆಳವಡಿಸಲಾಗಿದೆ. ಇದು ಬೈಕ್‌ನ ಬ್ರೇಕಿಂಗ್ ಸಿಸ್ಟಂ ಹಾಗೂ ಟರ್ನ್ ಸಿಗ್ನಲ್ ಜೊತೆ ಸಂಪರ್ಕಿಸಲಿದೆ.

ನೀವು ಎಡ ಅಥವಾ ಬಲಕ್ಕೆ ತಿರುಗಲು ಟರ್ನ್ ಸಿಗ್ನಲ್ ಹಾಕಿದಾಗ ಜಾಕೆಟ್ ಹಿಂಭಾಗದಲ್ಲಿ ಆಳವಡಿಸಲಾದ ಎಲ್‌ಇಡಿ ಬೆಳಕು ಉರಿಯಲಿದೆ.

ಅಂತೆಯೇ ಬ್ರೇಕ್ ಅದುಮಿದಾಗ ಹಿಂಭಾಗದಲ್ಲಿರುವ ಕೆಂಪು ವರ್ಣದ ಎಲ್ ಇಡಿ ಬ್ರೇಕ್ ಲೈಟ್ಸ್ ನಿಖರವಾಗಿ ಬೆಳಕು ಚೆಲ್ಲಲಿದೆ.

ಇದರೊಂದಿಗೆ ಹಿಂಭಾಗದಿಂದ ಬರುವ ವಾಹನಗಳಿಗೆ ಹೆಚ್ಚಿನ ಗೋಚರತೆ ಲಭ್ಯವಾಗಲಿದೆ. ಅಲ್ಲದೆ ನಿಮ್ಮ ಸುರಕ್ಷಿತ ಪಯಣವನ್ನು ಖಾತ್ರಿಪಡಿಸಲಿದೆ.

ಪ್ರಸ್ತುತ ಲೆಥರ್ ಜಾಕೆಟ್ ಭಾರತೀಯ ರುಪಾಯಿ ಪ್ರಕಾರ 33,000 ರು.ಗಳಷ್ಟು ($499.99) ದುಬಾರಿಯೆನಿಸುತ್ತದೆ. ಅಲ್ಲದೆ ಸದ್ಯ ದೇಶದಲ್ಲಿ ಮಾರಾಟಕ್ಕೆ ಲಭ್ಯವಿದೆಯೇ ಎಂಬುದು ತಿಳಿದು ಬಂದಿಲ್ಲ.

ವಿಶೇಷತೆಗಳು
- ಲೆಥರ್ ಮೋಟಾರ್ ಸೈಕಲ್ ಜಾಕೆಟ್,
- ವೈರ್ ಲೆಸ್ ಬ್ರೇಕ್ ಮತ್ತು ಟರ್ನ್ ಸಿಗ್ನಲ್ ಲೈಟ್ಸ್
- ವರ್ಧಿತ ರಾತ್ರಿ ಗೋಚರತೆ
- ಗರಿಷ್ಠ ಸುರಕ್ಷತೆ
- ಮೊಣಕೈ ಮತ್ತು ಭುಜಕ್ಕೆ ಹೆಚ್ಚಿನ ರಕ್ಷಣೆ
- ಎಲ್‌ಇಡಿ ಬೆಳಕು (2 ಬ್ರೇಕ್, 2 ಟರ್ನ್ ಸಿಗ್ನಲ್)
- ರಿಚಾರ್ಚ್ ಮಾಡಬಹುದಾದ ಬ್ಯಾಟರಿ ಮತ್ತು ಚಾರ್ಜರ್

ವಿಶೇಷತೆ

ವಿಶೇಷತೆ
ವಿಡಿಯೋ ವೀಕ್ಷಿಸಿ


Click it and Unblock the Notifications








