ಐಪಿಎಲ್ ಸ್ಟಾರ್ ಆಟಗಾರರೂ ಮೆಚ್ಚಿದ್ರು ಟಾಟಾ ಟಿಯಾಗೋ ಇವಿ... ರೇಂಜ್ ನೋಡಿ ಷಾಕ್!
ಪ್ರತಿ ವರ್ಷದ ಬೇಸಿಗೆ ಬಂದ್ರೆ ಸಾಕು ದೇಶದಲ್ಲಿ ಯುವ ಜನತೆಗೆ ಐಪಿಎಲ್ ಒಂದು ವರ್ಷಕ್ಕೆ ಸಾಕಾಗುವಷ್ಟು ಮನರಂಜನೆ ನೀಡುತ್ತದೆ. ಪ್ರತಿ ಟೀಮ್‌ಗೆ ತಮ್ಮದೇ ಅಭಿಮಾನಿ ಬಳಗವಿದ್ರೆ ಬೆಂಗಳೂರು ಹಾಗೂ ಚೆನ್ನೈಗೆ ಮಾತ್ರ ದೇಶದ ಪ್ರತಿ ರಾಜ್ಯದಲ್ಲೂ ಅಭಿಮಾನಿಗಳಿದ್ದಾರೆ. ಇಲ್ಲಿ ಧೋನಿ ಹಾಗೂ ಕೊಹ್ಲಿ ಪ್ರಭಾವಿ ಆಟಗಾರರಾಗಿದ್ದಾರೆ.
ಹಾಗೆಯೇ ಹೊಸ ಆಟಗಾರರು ಕೂಡ ತಮ್ಮ ಪ್ರತಿಭೆಯನ್ನು ಗುರ್ತಿಸಿಕೊಂಡರೆ ಮಾತ್ರ ಇಲ್ಲಿ ನಿಲ್ಲಬಹುದು, ಇಲ್ಲದಿದ್ರೆ ಅವರನ್ನು ನಿರ್ಲಕ್ಷ್ಯ ಮಾಡಿರುವ ಉದಾಹರಣೆಗಳು ಕೂಡ ಇವೆ. ಹಾಗೆಯೇ ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಉತ್ತಮ ಹೆಸರು ಗಳಿಸಿರುವ 31 ನೇ ಶ್ರೇಯಾಂಕದ ರುತುರಾಜ್ ಗಾಯಕ್ವಾಡ್ ಕೂಡ ಅಭಿಮಾನಿಗಳಲ್ಲಿ ಗುರ್ತಿಸಿಕೊಂಡು ಸದ್ಯ ಐಪಿಎಲ್ ಸ್ಟಾರ್ ಆಟಗಾರರಾಗಿದ್ದಾರೆ.

ಅವರು ಇತ್ತೀಚೆಗೆ ಟಾಟಾ ಟಿಯಾಗೊ EV ಯನ್ನು ಓಡಿಸಿ ಕಾರಿನ ಫೀಚರ್‌ಗಳಿಗೆ ಫಿದಾ ಆಗಿದ್ದಾರೆ. ಅವರು ಈ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್‌ನಲ್ಲಿ ಚೆನ್ನೈ ನಗರದಲ್ಲಿ ರೌಂಡ್ಸ್ ಹಾಕುತ್ತಾ ತಮ್ಮ ಜೀವನ ಮತ್ತು ವೃತ್ತಿಜೀವನದ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದರು. ಹಾಗೆಯೇ ಪ್ರಮುಖವಾಗಿ ಟಾಟಾ ಟಿಯಾಗೊ ಇವಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಟಾಟಾ ಟಿಯಾಗೋದ ಬಗ್ಗೆ ಕಾರು ಏರುವ ಮುನ್ನವೇ ಆಶ್ಚರ್ಯಕರ ಹೇಳಿಕೆ ನೀಡಿಬಿಟ್ಟರು. ಟಿಯಾಗೋ ರೇಂಜ್ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿ, ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ನೇರವಾಗಿ 315 ಕಿ.ಮೀ ವರೆಗೆ ಹೋಗಬಹುದು ಎಂದು ತಿಳಿಯುತ್ತಿದ್ದಂತೆ, ಈ ರೇಂಜ್‌ನೊಂದಿಗೆ ಪುಣೆಯಲ್ಲಿರುವ ನಮ್ಮ ಮನೆಯಿಂದ ಲೋನಾವಾಲಾಕ್ಕೆ ಹೋಗಿ ಬರಗಬಹುದು ಎಂದರು.
ಅಂತಿಮವಾಗಿ Tiago EV ನಲ್ಲಿ ಕುಳಿತ ಅವರು, ಸಂದರ್ಷನಾಕಾರನನ್ನು ಕಾರು ಸ್ಟಾರ್ಟ್ ಮಾಡು ಎಂದರು. ಅದ್ರೆ ಇವಿ ಕಾರುಗಳು ಸದ್ದು ಮಾಡುವುದಿಲ್ಲ ಎಂದು ತಿಳಿಯದೇ ಮತ್ತೊಮ್ಮೆ ಆಶ್ಚರ್ಯಕ್ಕೆ ಗುರಿಯಾದರೆ. ಸಂದರ್ಷನಕಾರ ಕಾರು ಈಗಾಗಲೇ ಸ್ಟಾರ್ಟ್ ಆಗಿದೆ ಎಂದ ತಕ್ಷಣ ಮತ್ತೊಮ್ಮೆ ಷಾಕ್ ಆಗಿದ್ದಾರೆ. ಹೀಗೆ ಸಂದರ್ಷನವು ಮುಗಿಯುವವರೆಗೂ ನೋಡುಗರಿಗೆ ಉತ್ತಮ ಮನರಂಜನೆ ನೀಡುತ್ತದೆ.
ತಮಾಷೆಯ ವಿಷಯವೆಂದರೆ ಈ IPL ಸೀಸನ್‌ನಲ್ಲಿ Tiago EV ಜೊತೆಗೆ ರುತುರಾಜ್ ಅವರಿಗೆ ಮರೆಯಲಾಗದ ನೆನಪೊಂದಿದೆ. ಇದು ಬಹುತೇಕ ಐಪಿಲ್ ವೀಕ್ಷಕರಿಗೆ ತಿಳಿದಿರುತ್ತದೆಯಾದ್ರೂ ತಿಳಿಯದವರಿಗಾಗಿ ಹೇಳೋಣ. ರುತುರಾಜ್ ಅವರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸಿಕ್ಸರ್ ಬಾರಿಸಿದಾಗ ಕಾರಿನ ಮೇಲೆ ತಮ್ಮದೇ ಮುದ್ರೆ ಹಾಕಿದ್ದರು. ಅಂದ್ರೆ ಬಾಲ್ ನೇರವಾಗಿ ಟಿಯಾಗೊ ಇವಿಗೆ ಬಡಿದು ಬಾಗಿಲಿಗೆ ಡೆಂಟ್ ಬಿದ್ದಿತ್ತು.
ಒಟ್ಟಾರೆ ಟಾಟಾ ಕಾರಿನಲ್ಲಿ ಓಡಾಡುತ್ತಾ ಮಾಡಿರುವ ಸಂದರ್ಷನವು ತುಂಬಾ ಅದ್ಬುತವಾಗಿ ಬಂದಿದೆ. ಈ ಸಂದರ್ಷನ ಕುರಿತು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದು ಲೆಕ್ಕದಲ್ಲಿ ಇದು ಟಾಟಾ ಟಿಯಾಗೋ ಕಾರಿನ ಜಾಹಿರಾತು ಗಿಮಿಕ್ ಆಗಿದೆ. ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್ ಸೈಟ್‌ನಲ್ಲಿ ಪ್ರಚಾರವಾಗಿರುವ ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications








