ಸಿಕ್ಸರ್ ಬಾರಿಸಿ ಸಂಭ್ರಮಿಸುವ ಬದಲು ವಿಷಾದ ವ್ಯಕ್ತಪಡಿಸಿದ ಕ್ರಿಕೆಟಿಗ

ಕ್ರಿಕೆಟ್ ಅಭಿಮಾನಿಗಳಿಗೆ ಐರ್ಲೆಂಡ್ ಕ್ರಿಕೆಟಿಗ ಕೆವಿನ್ ಒಬ್ರಿಯೆನ್ ರವರ ಪರಿಚಯ ಇದ್ದೇ ಇರುತ್ತದೆ. ಐರ್ಲೆಂಡ್ ಕ್ರಿಕೆಟ್ ತಂಡವು ಈ ಆಟಗಾರನನ್ನು ಪಪ್ಪಿ ಎಂದು ಕರೆಯುತ್ತದೆ. ಐಲೆಂಡ್ ತಂಡದ ಯಶಸ್ಸಿನ ಹಿಂದೆ ಕೆವಿನ್ ಒಬ್ರಿಯೆನ್ ರವರ ಕೊಡುಗೆ ಸಾಕಷ್ಟಿದೆ.

ಸಿಕ್ಸರ್ ಬಾರಿಸಿ ಸಂಭ್ರಮಿಸುವ ಬದಲು ವಿಷಾದ ವ್ಯಕ್ತಪಡಿಸಿದ ಕ್ರಿಕೆಟಿಗ

ಕೆವಿನ್ ಒಬ್ರಿಯೆನ್ ರವರನ್ನು ಐರ್ಲೆಂಡ್ ಕ್ರಿಕೆಟ್ ತಂಡದ ಅಮೂಲ್ಯ ಆಸ್ತಿ ಎಂದು ಕರೆಯಲಾಗುತ್ತದೆ. ಯಾವುದೇ ಬ್ಯಾಟ್ಸ್ ಮನ್ ಸಿಕ್ಸರ್ ಬಾರಿಸಿದಾಗ ಸಂಭ್ರಮಿಸುವುದುಂಟು. ಆದರೆ ಕೆವಿನ್ ಓಬ್ರಿಯೆನ್ ಮಾತ್ರ ಸಿಕ್ಸರ್ ಬಾರಿಸಿದ್ದಕ್ಕೆ ಸಂಭ್ರಮಿಸುವ ಬದಲು ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ಅವರು ಬಾರಿಸಿದ ಸಿಕ್ಸರ್ ಅವರ ಕಾರಿಗೆ ಹಾನಿಯುಂಟು ಮಾಡಿದ್ದೇ ಇದಕ್ಕೆ ಕಾರಣ.

ಸಿಕ್ಸರ್ ಬಾರಿಸಿ ಸಂಭ್ರಮಿಸುವ ಬದಲು ವಿಷಾದ ವ್ಯಕ್ತಪಡಿಸಿದ ಕ್ರಿಕೆಟಿಗ

ಅವರು ಬಾರಿಸಿದ ಸಿಕ್ಸರ್ ಅವರ ಕಾರಿನ ವಿಂಡ್ ಷೀಲ್ಡ್ ಮುರಿದಿದೆ. ಕೆವಿನ್ ಒಬ್ರಿಯೆನ್ ಸದ್ಯ ಐರ್ಲೆಂಡ್ ನಲ್ಲಿ ನಡೆಯುತ್ತಿರುವ ಇಂಟರ್ ಝೋನಲ್ ತ್ರಿಕೋನ ಟಿ 20 ಕ್ರಿಕೆಟ್ ಸರಣಿಯಲ್ಲಿ ಲೀನ್‌ಸ್ಟರ್ ಲೈಟ್ನಿಂಗ್ ಪರ ಆಡುತ್ತಿದ್ದಾರೆ. ನಿನ್ನೆ ಸರಣಿಯ ನಾಲ್ಕನೇ ಪಂದ್ಯವನ್ನು ಡಬ್ಲಿನ್‌ನ ಪೆಂಬ್ರೋಕ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಆಯೋಜಿಸಲಾಗಿತ್ತು.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಸಿಕ್ಸರ್ ಬಾರಿಸಿ ಸಂಭ್ರಮಿಸುವ ಬದಲು ವಿಷಾದ ವ್ಯಕ್ತಪಡಿಸಿದ ಕ್ರಿಕೆಟಿಗ

ಈ ಪಂದ್ಯ ಲೀನ್‌ಸ್ಟರ್ ಲೈಟ್ನಿಂಗ್ ಹಾಗೂ ನಾರ್ತ್ ವೆಸ್ಟ್ ವಾರಿಯರ್ಸ್ ಮಧ್ಯೆ ನಡೆದಿತ್ತು. ಮಳೆಯ ಕಾರಣದಿಂದಾಗಿ ಈ ಪಂದ್ಯವನ್ನು 12 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಲೀನ್‌ಸ್ಟರ್ ಲೈಟ್ನಿಂಗ್ 12 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 124 ರನ್ ಗಳಿಸಿತ್ತು. ಲೀನ್‌ಸ್ಟರ್ ಲೈಟ್ನಿಂಗ್ ಪರ ಬ್ಯಾಟ್ ಬೀಸಿದ ಕೆವಿನ್ ಒಬ್ರಿಯೆನ್ ಕೇವಲ 37 ಎಸೆತಗಳಲ್ಲಿ 8 ಸಿಕ್ಸರ್, 3 ಬೌಂಡರಿಗಳೊಂದಿಗೆ 82 ರನ್ ಗಳಿಸಿದರು.

ಸಿಕ್ಸರ್ ಬಾರಿಸಿ ಸಂಭ್ರಮಿಸುವ ಬದಲು ವಿಷಾದ ವ್ಯಕ್ತಪಡಿಸಿದ ಕ್ರಿಕೆಟಿಗ

ಕೆವಿನ್ ಒಬ್ರಿಯನ್‌ ಬಾರಿಸಿದ ಎಂಟು ಸಿಕ್ಸರ್‌ಗಳಲ್ಲಿ ಒಂದು ಸಿಕ್ಸರ್ ಮೈದಾನದ ಹೊರಗಿನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿನ ವಿಂಡ್ ಶೀಲ್ಡ್ ಗೆ ಬಡಿದಿದೆ. ವೇಗವಾಗಿ ಬಂದ ಚೆಂಡು ಕಾರಿನ ಹಿಂದಿನ ಕಿಟಕಿಯನ್ನು ಒಡೆದಿದೆ. ಈ ಕಾರು ಕೆವಿನ್ ಒಬ್ರಿಯನ್ ಅವರಿಗೆ ಸೇರಿದ್ದು ಎಂಬುದು ವಿಶೇಷ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಸಿಕ್ಸರ್ ಬಾರಿಸಿ ಸಂಭ್ರಮಿಸುವ ಬದಲು ವಿಷಾದ ವ್ಯಕ್ತಪಡಿಸಿದ ಕ್ರಿಕೆಟಿಗ

ಈ ಪಂದ್ಯದಲ್ಲಿ ಗುರಿಯನ್ನು ಬೆನ್ನತ್ತಿದ ನಾರ್ತ್ ವೆಸ್ಟ್ ವಾರಿಯರ್ಸ್ ತಂಡವು 12 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 104 ರನ್ ಗಳಿಸಿತು. ಡಕ್ವರ್ತ್-ಲೂಯಿಸ್ ವಿಧಾನದನ್ವಯ ಲೀನ್‌ಸ್ಟರ್ ಲೈಟ್ನಿಂಗ್ ತಂಡವು 24 ರನ್ ಗಳಿಂದ ಜಯಗಳಿಸಿತು.

ಸಿಕ್ಸರ್ ಬಾರಿಸಿ ಸಂಭ್ರಮಿಸುವ ಬದಲು ವಿಷಾದ ವ್ಯಕ್ತಪಡಿಸಿದ ಕ್ರಿಕೆಟಿಗ

ಪಂದ್ಯ ಮುಗಿದ ನಂತರ ಕೆವಿನ್ ಒಬ್ರಿಯೆನ್ ಸಂಭ್ರಮಿಸುವ ಬದಲು ತಮ್ಮ ಕಾರನ್ನು ಟೊಯೊಟಾ ಡೀಲರ್ ಬಳಿ ಕೊಂಡೊಯ್ದಿದ್ದಾರೆ. ಕಾರನ್ನು ಹೊಸದರಂತೆ ಸರಿ ಪಡಿಸಿಕೊಡುವುದಾಗಿ ಲಾಂಗ್ ಮೈಲ್ ಟೊಯೊಟಾ ಡೀಲರ್ ಟ್ವಿಟರ್‌ ಮೂಲಕ ತಿಳಿಸಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸಿಕ್ಸರ್ ಬಾರಿಸಿ ಸಂಭ್ರಮಿಸುವ ಬದಲು ವಿಷಾದ ವ್ಯಕ್ತಪಡಿಸಿದ ಕ್ರಿಕೆಟಿಗ

ಕ್ರಿಕೆಟ್‌ನಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಇದು ಮೊದಲ ಸಲವೇನಲ್ಲ. 2019ರ ಐಪಿಎಲ್ ಪಂದ್ಯವೊಂದರಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ತಂಡದ ಕ್ರಿಸ್ ಲಿನ್ ಸಿಕ್ಸರ್‌ ಬಾರಿಸಿದ ಚೆಂಡು ಬೌಂಡರಿ ಸಾಲಿನಲ್ಲಿ ನಿಲ್ಲಿಸಿದ್ದ ಟಾಟಾ ಹ್ಯಾರಿಯರ್ ಕಾರಿನ ಮುಂಭಾಗದ ವಿಂಡ್‌ಸ್ಕ್ರೀನ್‌ಗೆ ಅಪ್ಪಳಿಸಿತ್ತು.

ಸಿಕ್ಸರ್ ಬಾರಿಸಿ ಸಂಭ್ರಮಿಸುವ ಬದಲು ವಿಷಾದ ವ್ಯಕ್ತಪಡಿಸಿದ ಕ್ರಿಕೆಟಿಗ

ಚೆಂಡು ತೀವ್ರವಾಗಿ ಹೊಡೆದರೂ ಟಾಟಾ ಹ್ಯಾರಿಯರ್ ಎಸ್ ಯುವಿಯ ವಿಂಡ್‌ಸ್ಕ್ರೀನ್ ಗೆ ಹಾನಿಯಾಗಿರಲಿಲ್ಲ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 2018ರಲ್ಲಿ ಜಿಂಬಾಬ್ವೆಯಲ್ಲಿ ನಡೆದ ಪಂದ್ಯವೊಂದರಲ್ಲಿ ಸಿಕಂದರ್ ರಾಜಾ ಸಿಕ್ಸರ್ ಬಾರಿಸಿದ್ದ ಚೆಂಡು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿಗೆ ಹೊಡೆದಿತ್ತು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಸಿಕ್ಸರ್ ಬಾರಿಸಿ ಸಂಭ್ರಮಿಸುವ ಬದಲು ವಿಷಾದ ವ್ಯಕ್ತಪಡಿಸಿದ ಕ್ರಿಕೆಟಿಗ

2000ನೇ ಇಸವಿಯಲ್ಲಿ ನಡೆದಿದ್ದ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಸಿಕ್ಸರ್‌ ಬಾರಿಸಿದ್ದ ಚೆಂಡು ಮೈದಾನದಿಂದ ಹೊರ ಹೋಗಿ ಜೆಫ್ರಿ ಬಾಯ್‌ಕಾಟ್‌ರವರ ಕಾರಿಗೆ ಬಡಿದಿತ್ತು.

Most Read Articles

Kannada
English summary
Ireland batsman sixer smashes his own car. Read in Kannada.
Story first published: Friday, August 28, 2020, 18:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X