ಟಿವಿಎಸ್‌ನ ಈ ಎಲೆಕ್ಟ್ರಿಕ್‌ ಸ್ಕೂಟರ್‌ಗೆ ಅಮೇಜಾನ್‌ನಲ್ಲಿ ಭಾರೀ ಬೆಲೆ ಇಳಿಕೆ: ಇಷ್ಟು ಕಡಿಮೆ ಬೆಲೆ, ಭರ್ಜರಿ ಫೀಚರ್ಸ್‌!

ಈ ಹಬ್ಬದ ಸೀಸನ್‌ ಇದೀಗ ಪ್ರಾರಂಭವಾಗಿದೆ ಮತ್ತು ನಾವು ಈಗಾಗಲೇ ಟನ್‌ಗಳಷ್ಟು ರಿಯಾಯಿತಿಗಳನ್ನು ನೋಡಿದ್ದೇವೆ. ವಿಶೇಷವಾಗಿ ದ್ವಿಚಕ್ರ ಎಲೆಕ್ಟ್ರಿಕ್‌ ವಾಹನಗಳಿಗೆ, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ನೀಡುತ್ತಿದೆ. ನಿಮಗೆಲ್ಲಾ ತಿಳಿದಿರುವಂತೆ ಆನ್‌ಲೈನ್‌ನಲ್ಲಿ ಇದೀಗ ಬೈಕ್‌ ಮತ್ತು ಸ್ಕೂಟರ್‌ಗಳನ್ನು ಖರೀದಿ ಮಾಡಬಹುದಾಗಿದೆ. ಇದೀಗ ಅಮೇಜಾನ್‌ನಲ್ಲಿ ಬಜಾಜ್‌ ಚೇತಕ್‌ ಎಲೆಕ್ಟ್ರಿಕ್‌ ಬೈಕ್‌ಗೆ ಭರ್ಜರಿ ಆಫರ್‌ ನೀಡುತ್ತಿದ್ದು ನಾವಿಂದು ಆ ಕುರಿತಾಗಿ ನೋಡಲಿದ್ದೇವೆ. ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೆ ಓದಿ.

ಅಮೆಜಾನ್, ಚೇತಕ್ ಬ್ರೂಕ್ಲಿನ್ ಬ್ಲ್ಯಾಕ್ - ವಿಶೇಷ ಆವೃತ್ತಿಯ ಮೇಲೆ ಕೇವಲ 7,000 ರೂ.ವರೆಗಿನ ಮೌಲ್ಯದ ಗಣನೀಯ ರಿಯಾಯಿತಿಯನ್ನು ನೀಡುತ್ತಿದೆ. ಅಮೆಜಾನ್ ಗ್ರೇಟ್ ಇಂಡಿಯಾ ಫೆಸ್ಟಿವಲ್‌ನಲ್ಲಿ 1,33,501 ರೂಗೆ ಈ ಸ್ಕೂಟರ್‌ ಲಭ್ಯವಿದೆ. ಆದರೆ ಎಲೆಕ್ಟ್ರಿಕ್‌ನ ಎಂಆರ್‌ಪಿ 1,40,444 ರೂ. ಅಮೇಜಾನ್‌ ಪೇ ಅಥವಾ ICICI ಕ್ರೆಡಿಟ್ ಕಾರ್ಡ್ ಮತ್ತು ನೋ ಕಾಸ್ಟ್ EMI ಸ್ಕೀಮ್‌ಗಳೊಂದಿಗೆ ಈ ಸ್ಕೂಟರ್‌ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ನೀವು ಸಂಪೂರ್ಣ ಮೊತ್ತವನ್ನು ಒಂದೇ ಬಾರಿಗೆ ಪಾವತಿಸಿದರೆ, ಅಮೇಜಾನ್‌ ಫ್ಲಾಟ್ ರೂ 4,000 ಆಫ್ ನೀಡುತ್ತದೆ.

Is Amazon Great Indian Festival the best time for Bajaj Chetak electric

ಬಜಾಜ್ ಚೇತಕ್ ಬ್ರೂಕ್ಲಿನ್ ಬ್ಲ್ಯಾಕ್ - ವಿಶೇಷ ಆವೃತ್ತಿಯು 3.2 kWh ಬ್ಯಾಟರಿಯಿಂದ 4.2 kW (5.6 bhp) ಉತ್ಪಾದನೆ ಮತ್ತು 73 kmph ಗರಿಷ್ಠ ವೇಗವನ್ನು ಹೊಂದಿದೆ. ಇದು 136 ಕಿಮೀ ವ್ಯಾಪ್ತಿಯನ್ನು ಹೊಂದಿದೆ ಮತ್ತು 3 ಗಂಟೆ 35 ನಿಮಿಷಗಳಲ್ಲಿ 0 ರಿಂದ 80 ಪ್ರತಿಶತದವರೆಗೆ ಚಾರ್ಜಿಂಗ್‌ ಸಾಮರ್ಥ್ಯವನ್ನು ಹೊಂದಲಿದೆ.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಸಾಮಾನ್ಯ ಜನರ ಜೊತೆ ಸೆಲಬ್ರಿಟಿಗಳನ್ನು ಈ ಸ್ಕೂಟರ್ ಆಕರ್ಷಿಸಿತು. ಇನ್ನು ಹೊಸ ನವೀಕರಣಗಳೊಂದಿಗೆ ಮತ್ತಷ್ಟು ಗ್ರಾಹರನ್ನು ಸೆಳೆಯುವ ಸಾಧ್ಯತೆಗಳಿದೆ. ಹೊಸ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಾವು ಇತ್ತೀಚೆಗೆ ಬೆಂಗಳೂರಿನಲ್ಲಿ ರೈಡ್ ಮಾಡಿದ್ದೇವೆ. ಈ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸ, ಫಿಚರ್ಸ್, ಹೊಸ ಬದಲಾವಣೆ ಮತ್ತು ರೈಡಿಂಗ್ ಅನುಭವದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Is Amazon Great Indian Festival the best time for Bajaj Chetak electric

ಹೊಸ ಬಜಾಜ್ ಚೇತಕ್ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ನ ಎರಡು ಆವೃತ್ತಿಗಳಲ್ಲಿ ಆಕರ್ಷಕ ಬೆಲೆಯೊಂದಿಗೆ ಹೆಚ್ಚು ಶಕ್ತಿಶಾಲಿ ಪವರ್‌ಟ್ರೇನ್ ಮತ್ತು ಹೆಚ್ಚಿನ ತಂತ್ರಜ್ಞಾನಗಳೊಂದಿಗೆ ಬಂದಿದೆ. ಪ್ರಮುಖವಾಗಿ ಬಜಾಜ್ ಚೇತಕ್ ಯುವ ಖರೀದಿದಾರನ್ನು ಆಕರ್ಷಿಸುವ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ, 5-ಇಂಚಿನ ಟಿಎಫ್‌ಟಿ ಡಿಸ್ಪ್ಲೇ ಟೆಕ್‌ಪ್ಯಾಕ್ (TecPac) ಪ್ಯಾಕೇಜ್ ನೊಂದಿಗೆ ಬಂದಿದೆ.

ಇದು ಟರ್ನ್ - ಬೈ - ಟರ್ನ್ ನ್ಯಾವಿಗೇಷನ್, ಮ್ಯೂಸಿಕ್ ಕಂಟ್ರೋಲ್, ಕಾಲ್ ಅಲರ್ಟ್ ಹಾಗೂ ಡಿಸ್ಪ್ಲೇ ಥೀಮ್ ರೀತಿಯ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಇವುಗಳೊಂದಿಗೆ ಹಿಲ್ ಹೋಲ್ಡ್, ರಿವರ್ಸ್ ಮೋಡ್, ಸ್ಪೋರ್ಟ್ಸ್ ಮೋಡ್‌ನ್ನು ಒಳಗೊಂಡಿದೆ. ಚೇತಕ್ ಪ್ರೀಮಿಯಂನಲ್ಲಿ ಪರಿಚಯಿಸಲಾದ ಇತರ ವೈಶಿಷ್ಟ್ಯಗಳೆಂದರೆ ಸ್ಪೆಲ್ಫ್-ಕ್ಯಾನ್ಸೆಲಿಂಗ್ ಬ್ಲಿಂಕರ್‌ಗಳು, ಲೆಪ್ಟ್ ಮತ್ತು ರೈಟ್ ಕಂಟ್ರೋಲ್ ಗಳ ಸ್ವಿಚ್‌ಗಳು, ಎಲೆಕ್ಟ್ರಾನಿಕ್ ಹ್ಯಾಂಡಲ್ ಲಾಕ್ ಮತ್ತು ಸೀಟ್ ತೆರೆಯುವ ಸ್ವಿಚ್ ಅನ್ನು ಹೊಂದಿದೆ.

ಹೊಸ 2024ರ ಬಜಾಜ್ ಚೇತಕ್ ಎಲೆಕ್ಟ್ರಿಕ್ (Bajaj Chetak electric) ಸ್ಕೂಟರ್ ರೈಡಿಂಗ್ ಅನುಭವ ಹಿಂದಿನ ಮಾದರಿಗೆ ಹೋಲಿಸಿದರೆ ಹೆಚ್ಚು ಭಿನ್ನವಾಗಿಲ್ಲ. ಹೊಸ ಚೇತಕ್ ಚಲಿಸುವಾಗ ಕ್ಷಿಪ್ರವಾಗಿದಂತೆ ಭಾಸವಾಗುತ್ತದೆ. ಹೊಸ ಚೇತಕ್ ಸ್ಪೋರ್ಟ್ಸ್ ಮೋಡ್ ನಲ್ಲಿ ಉತ್ತಮ ಪರ್ಫಾಮೆನ್ಸ್ ಅನ್ನು ನೀಡುತ್ತದೆ. ಆಫರ್‌ನಲ್ಲಿರುವ ಇತರ ಮೋಡ್, ಇಕೋ ಬಗ್ಗೆ ಮಾತನಾಡಲು ಹೆಚ್ಚೇನಿಲ್ಲ.

ರಿವರ್ಸ್ ಗೇರ್ ಆಯ್ಕೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನೀವು ಸುಲಭವಾಗಿ ಪಾರ್ಕಿಂಗ್ ಮಾಡಬಹುದು ಮತ್ತು ಪಾರ್ಕ್ ಮಾಡಿದ ಸ್ಥಳದಿಂದ ಹೊರಗೆ ಸುಲಭವಾಗಿ ಹೊರಗೆ ಬರಬಹುದು. ಎಲೆಕ್ಟ್ರಿಕ್ ವೈವಿಧ್ಯದ ಕೆಲವು ಇತರ ಸ್ಕೂಟರ್‌ಗಳಂತೆ ಸಸ್ಪೆನ್ಷನ್ ಸೆಟಪ್ ಸ್ವಲ್ಪ ಕಠಿಣವಾಗಿದೆ, ವಿಶೇಷವಾಗಿ ಸ್ವಲ್ಪ ಒರಟಾದ ರಸ್ತೆಗಳಲ್ಲಿಯು ಆರಾಮದಾಯಕವಾಗಿ ಚಲಸಬಹುದು.

More from DriveSpark

Article Published On: Saturday, October 12, 2024, 11:00 [IST]
English summary
Is amazon great indian festival the best time for bajaj chetak electric
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+