ವಿಮಾನಗಳಿಗೆ ವೇಗ ಮಿತಿಯಿದೆಯೇ? ಪೈಲಟ್ ಮೀರಿದಲ್ಲಿ ಅಪಾಯವೇ?

ಕಾರುಗಳೆಂತೆಯೇ ವಿಮಾನಗಳಿಗೂ ವೇಗ ಮಿತಿ ಇದೆಯೇ? ಈ ಬಗ್ಗೆ ವಿಮಾನ ತಜ್ಞರ ಸಲಹೆಗಳನ್ನು ವಿವರಿಸಿ ಕೊಡಲಾಗುವುದು.

By Nagaraja

ಆಕಾಶದಲ್ಲಿ ಹಾರಾಡುವ ಹಕ್ಕಿಗಳಂತೆ ಗಗನದಲ್ಲಿ ವಿಮಾನಗಳ ಸಂಚಾರ ಜಾಸ್ತಿಯಾಗಿದೆ. ಬಲ್ಲ ಮೂಲಗಳ ಪ್ರಕಾರ ವಿಶ್ವದೆಲ್ಲೆಡೆ ದಿನವೊಂದರಲ್ಲಿ ಮೂರು ದಶಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಾರೆ. ಇದೇ ಸಂದರ್ಭದಲ್ಲಿ 13,000ದಷ್ಟು ವಿಮಾನಗಳು ಸುತ್ತಾಡುತ್ತಿರುತ್ತವೆ. ಹಾಗಿರಬೇಕೆಂದರೆ ಎಲ್ಲರಲ್ಲೂ ಮೂಡಿ ಬರುವ ಸಹಜ ಪ್ರಶ್ನೆ ಕಾರುಗಳಂತೆಯೇ ವಿಮಾನಗಳಿಗೂ ವೇಗ ಮಿತಿ ಇದೆಯೇ? ಹಾಗೊಂದು ವೇಳೆ ಪೈಲಟ್ ವೇಗ ಮಿತಿಯನ್ನು ಮಿತಿ ಮೀರಿದ್ದಲ್ಲಿ ಅಪಾಯ ಕಾದಿದಿಯೇ? ಈ ಎಲ್ಲ ಪ್ರಶ್ನಗೆಳಿಗೆ ಉತ್ತರ ಕಂಡುಹುಡುಕುವ ಪ್ರಯತ್ನ ಮಾಡಲಾಗುವುದು.

ವಿಮಾನಗಳಿಗೆ ವೇಗ ಮಿತಿ ಇದೆಯೇ?

ವಿಮಾನಗಳಿಗೆ ವೇಗ ಮಿತಿ ಇದೆಯೇ?

ವಾಯುಮಾನ ನಿಯಂತ್ರಕರು ವಿಮಾನಯಾನ ಕಾರ್ಯಾಚರಣೆಯನ್ನು ನಿರ್ವಹಿಸುತ್ತಾರೆ. ಇದು ಅನೇಕ ಪರಿಸ್ಥಿತಿಗೆ ಅನುಸಾರವಾಗಿ ವಿವಿಧ ವೇಗಮಿತಿಗಳನ್ನು ಹೊಂದಿರುತ್ತವೆ.

ವಿಮಾನಗಳಿಗೆ ವೇಗ ಮಿತಿಯಿದೆಯೇ? ಪೈಲಟ್ ಮೀರಿದಲ್ಲಿ ಅಪಾಯವೇ?

ಯಾವ ಅಂತರಿಕ್ಷ ಮಟ್ಟದಲ್ಲಿ ವಿಮಾನ ಹಾರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ವಿಮಾನದ ವೇಗ ಮಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಾಗುತ್ತದೆ.

ವಿಮಾನಗಳಿಗೆ ವೇಗ ಮಿತಿಯಿದೆಯೇ? ಪೈಲಟ್ ಮೀರಿದಲ್ಲಿ ಅಪಾಯವೇ?

10,000 ಅಡಿ ಎತ್ತರದಲ್ಲಿ ಹಾರುವ ಎಲ್ಲ ವಿಮಾನಗಳಿಗೂ ಸಾಮಾನ್ಯ ವೇಗ ಮಿತಿ ಗಂಟೆಗೆ 463.49 ಕೀ.ಮೀ. ಅಥವಾ ಗಂಟೆಗೆ 288 ಮೈಲು ನಿಗದಿಪಡಿಸಲಾಗಿರುತ್ತದೆ. ಇವುಗಳನ್ನು ಕ್ಲಾಸ್ ಬಿ ವಾಯು ಪ್ರದೇಶ ಮಟ್ಟದಲ್ಲಿ ಗುರುತಿಸಲಾಗುತ್ತದೆ.

ವಿಮಾನಗಳಿಗೆ ವೇಗ ಮಿತಿಯಿದೆಯೇ? ಪೈಲಟ್ ಮೀರಿದಲ್ಲಿ ಅಪಾಯವೇ?

ಕೆಲವೊಂದು ಪ್ರಕರಣಗಳಲ್ಲಿ ಕ್ಲಾಸ್ ಬಿ ಮಟ್ಟವು ನಿಗದಿತ ಎತ್ತರಕ್ಕಿಂತಲೂ ಮೀರಬಹುದಾಗಿದೆ. ಉದಾಹರಣೆಗೆ ಅಟ್ಲಾಂಟಾದಲ್ಲಿ ಕ್ಲಾಸ್ ಬಿ ವಾಯು ಪ್ರದೇಶ ಮಟ್ಟವು 12,500 ಅಡಿ ಎತ್ತರವಾಗಿದೆ.

ವಿಮಾನಗಳಿಗೆ ವೇಗ ಮಿತಿಯಿದೆಯೇ? ಪೈಲಟ್ ಮೀರಿದಲ್ಲಿ ಅಪಾಯವೇ?

ಬಹುತೇಕ ವಾಣಿಜ್ಯ ವಿಮಾನಗಳು ಕ್ಲಾಸ್ ಬಿ ಮಟ್ಟಕ್ಕಿಂತಲೂ ಗರಿಷ್ಠ 38,000 ಅಡಿ ಎತ್ತರದಲ್ಲಿ ಹಾರಾಡುತ್ತವೆ. ಹಾಗಾಗಿ ಯಾವುದೇ ನಿಗದಿತ ವೇಗ ಮಿತಿಯನ್ನು ಏರ್ಪಡಿಸಲಾಗಿರುವುದಿಲ್ಲ.

ವಿಮಾನಗಳಿಗೆ ವೇಗ ಮಿತಿಯಿದೆಯೇ? ಪೈಲಟ್ ಮೀರಿದಲ್ಲಿ ಅಪಾಯವೇ?

ವಾಣಿಜ್ಯ ವಿಮಾನಗಳು ಇಷ್ಟೊಂದು ಎತ್ತರದಲ್ಲಿ ಹಾರಾಡಲು ಸ್ಪಷ್ಟ ಕಾರಣವಿದೆ. ಯಾಕೆಂದರೆ ಇದು ವಿಮಾನದ ಏರೋಡೈನಾಮಿಕ್ ದಕ್ಷತೆಯ ಜೊತೆಗೆ ಹೆಚ್ಚಿನ ಎಂಜಿನ್ ಕ್ಷಮತೆಯನ್ನು ಕಾಪಾಡಲು ನೆರವಾಗುತ್ತದೆ.

ವಿಮಾನಗಳಿಗೆ ವೇಗ ಮಿತಿಯಿದೆಯೇ? ಪೈಲಟ್ ಮೀರಿದಲ್ಲಿ ಅಪಾಯವೇ?

ನಿಜವಾಗಿಯೂ ವಿಮಾನಗಳು ಎಷ್ಟು ದಕ್ಷತೆಯೊಂದಿಗೆ ಹಾರಾಡುತ್ತವೆಯೋ ಅಷ್ಟೊಂದು ಪ್ರಮಾಣದ ಇಂಧನವು ಉಳಿತಾಯವಾಗಲಿದೆ. ಇದು ಪರಿಸರ ಸೇರಿದಂತೆ ಗ್ರಾಹಕರಿಗೂ ಅನುಕೂಲವಾಗಿರಲಿದೆ.

ವಿಮಾನಗಳಿಗೆ ವೇಗ ಮಿತಿಯಿದೆಯೇ? ಪೈಲಟ್ ಮೀರಿದಲ್ಲಿ ಅಪಾಯವೇ?

ಹಾಗಾಗಿ 10,000 ಅಡಿಗಿಂತಲೂ ಹೆಚ್ಚು ಎತ್ತರದಲ್ಲಿ ಹಾರಾಡುವ ವಾಣಿಜ್ಯ ವಿಮಾನಗಳಿಗೆ ವೇಗ ಮಿತಿ ಇರುವುದಿಲ್ಲ. ಇಲ್ಲಿ ಪೈಲಟ್ ವಿಮಾನದ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತಿ ಮುಖ್ಯ.

ವಿಮಾನಗಳಿಗೆ ವೇಗ ಮಿತಿಯಿದೆಯೇ? ಪೈಲಟ್ ಮೀರಿದಲ್ಲಿ ಅಪಾಯವೇ?

ಅತ್ತ ವಿಮಾನವು 2,500 ಅಡಿಗಿಂತಲೂ ಕೆಳಕ್ಕೆ ಸರಿದಾಗ ಕ್ಲಾಸ್ ಸಿ ಅಥವಾ ಕ್ಲಾಸ್ ಡಿ ವಾಯು ಪ್ರದೇಶಕ್ಕೆ ಒಳಪಡಲಿದ್ದು, ವೇಗಮಿತಿಯು ಭಾದಕವಾಗಿರಲಿದೆ.

ವಿಮಾನಗಳಿಗೆ ವೇಗ ಮಿತಿಯಿದೆಯೇ? ಪೈಲಟ್ ಮೀರಿದಲ್ಲಿ ಅಪಾಯವೇ?

ಪ್ರಸ್ತುತ ವಾಯು ಪ್ರದೇಶದಲ್ಲಿ ಆಗಮನ ಮತ್ತು ನಿರ್ಗಮನ ವಿಮಾನಗಳ ನಿಯಂತ್ರಣ ವಲಯವಾಗಿರುವುದರಿಂದ ವಾಯು ಸಂಚಾರವನ್ನು ರಕ್ಷಿಸುತ್ತದೆ. ಈ ಪ್ರದೇಶದಲ್ಲಿನ ವೇಗ ಮಿತಿಯು ಗಂಟೆಗೆ 370.15 ಕೀ.ಮೀ. ಅಥವಾ ಗಂಟೆಗೆ 230 ಮೈಲು ವೇಗವಾಗಿದೆ.

ವಿಮಾನಗಳು ಎಷ್ಟು ವೇಗದಲ್ಲಿ ಸಂಚರಿಸಬಲ್ಲದ್ದು?

ವಿಮಾನಗಳು ಎಷ್ಟು ವೇಗದಲ್ಲಿ ಸಂಚರಿಸಬಲ್ಲದ್ದು?

ವಿಮಾನಗಳು ಸಂಚರಿಸುವ ವೇಗವು ಅವುಗಳ ವಿಧಗಳನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ 35,000 ಅಡಿ ಎತ್ತರದಲ್ಲಿ ಸಂಚರಿಸುವ ಬೋಯಿಂಗ್ 747 ಜಂಬೋ ಜೆಟ್ ಗಂಟೆಗೆ 925.37 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ.

ವಿಮಾನಗಳಿಗೆ ವೇಗ ಮಿತಿಯಿದೆಯೇ? ಪೈಲಟ್ ಮೀರಿದಲ್ಲಿ ಅಪಾಯವೇ?

ಸುರಕ್ಷಿತ ವೇಗದಲ್ಲಿ ಚಲಿಸಲು ಪೈಲಟ್ ಗಳಿಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ. ಇಲ್ಲಿ ಹವಾಮಾನ ವೈಪರೀತ್ಯ, ಎಂಜಿನ್ ದಕ್ಷತೆ ಇತ್ಯಾದಿ ಘಟಕಗಳು ಸಹ ಪರಿಣಾಮ ಬೀರುತ್ತದೆ.

ವಿಮಾನಗಳಿಗೆ ವೇಗ ಮಿತಿಯಿದೆಯೇ? ಪೈಲಟ್ ಮೀರಿದಲ್ಲಿ ಅಪಾಯವೇ?

ನಿರ್ಬಂಧಿತ ವಾಯುಪ್ರದೇಶದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್ ವೇಗ ಮಿತಿಯ ಮೇಲೆ ನಿಗಾವಹಿಸುತ್ತದೆ. ಆಧುನಿಕ ವಿಮಾನಗಳು ವೇಗ, ಎಂಜಿನ್ ನಿರ್ವಹಣೆ ಬಗ್ಗೆ ನೇರ ಮಾಹಿತಿಯನ್ನು ನೀಡುತ್ತದೆ.

ದಾಖಲೆ ವೇಗ

ದಾಖಲೆ ವೇಗ

ಅಮೆರಿಕ ವಾಯುಯಾನ ಸಂಸ್ಥೆ ಲಾಕ್ ಹೀಡ್ ನಿರ್ಮಿತ ಎಸ್-71 ಬ್ಲ್ಯಾಕ್ ಬರ್ಡ್ ವಿಮಾನ ಜಗತ್ತಿನಲ್ಲಿ ಅತಿ ಹೆಚ್ಚು ವೇಗದಲ್ಲಿ ಸಂಚರಿಸಿದ ದಾಖಲೆಯನ್ನು ಹೊಂದಿದ್ದು, ಗಂಟೆಗೆ 3,529.3 ಕೀ.ಮೀ. ವೇಗದಲ್ಲಿ (2,193 mph) ಸಂಚರಿಸಿದೆ.

ವಿಮಾನಗಳಿಗೆ ವೇಗ ಮಿತಿಯಿದೆಯೇ? ಪೈಲಟ್ ಮೀರಿದಲ್ಲಿ ಅಪಾಯವೇ?

1976ನೇ ಇವಸಿಯಲ್ಲಿ ದಾಖಲೆ ಪುಟ ಸೇರಿರುವ ಲಾಕ್ ಹೀಡ್ ವಿಮಾನವು 80,000 ಅಡಿ ಎತ್ತರದಲ್ಲಿ ಸಂಚರಿಸಿರುವುದು ಮಗದೊಂದು ದಾಖಲೆಯಾಗಿದೆ.

More from DriveSpark

Article Published On: Saturday, December 3, 2016, 11:44 [IST]
English summary
Is there a speed limit for aircraft?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+