ವಿಶ್ವವೇ ಇಸ್ರೋ ವಿಜ್ಞಾನಿಗಳನ್ನು ಕೊಂಡಾಡುವಾಗ ಬೆಂಗಳೂರಿನಲ್ಲಿ ವಿಜ್ಞಾನಿಯ ಕಾರು ಮೇಲೆ ದಾಳಿ
ಚಂದ್ರಯಾನ 3 (Chandrayaan 3) ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡಿಂಗ್ ಆದ ಬಳಿಕ ಇಸ್ರೋ (ISRO) ವಿಜ್ಞಾನಿಗಳ ಸಂಶೋಧನೆ, ಅಧ್ಯಯನಕ್ಕೆ ವೇಗ ಸಿಕ್ಕಿದೆ. ಚಂದ್ರಯಾನ 3 ಯೋಜನೆಯನ್ನು ಯಶಸ್ವಿಗೊಳಿಸಿದ ಇಸ್ರೋ ವಿಜ್ಞಾನಿಗಳನ್ನು ಪ್ರಧಾನಿಯವರಿಂದ ಎಲ್ಲರೂ ಕೂಡ ಅಭಿನಂದಿಸಿದ್ದಾರೆ. ಆದರೆ ಬೆಂಗಳೂರಿನಲ್ಲಿ ಮತ್ತೋರ್ವ ಇಸ್ರೋ ವಿಜ್ಞಾನಿಯ ಕಾರಿನ ಮೇಲೆ ದಾಳಿ ಮಾಡಿದ್ದಲ್ಲದೆ ನಿಂದಿಸಿದ ಘಟನೆ ನಡೆದಿರರುವುದು ವರದಿಯಾಗಿದೆ.
ಇಸ್ರೋ ವಿಜ್ಞಾನಿ ಆಶಿಶ್ ಲಂಬಾ ಅವರ ಕಾರಿನ ಮೇಲೆ ದಾಳಿ ಆದ ಬಗ್ಗೆ ವೀಡಿಯೊ ಸಮೇತ ವಿವರಣೆಗಳೊಂದಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇಸ್ರೋ ವಿಜ್ಞಾನಿ ಆಶಿಶ್ ಲಂಬಾ ಅವರು ಕಚೇರಿಗೆ ಹೋಗುತ್ತಿದ್ದಾಗ ಅವರ ಕಾರು ಮುಂದೆ ಟಿವಿಎಸ್ ಎನ್‌ಟಾರ್ಕ್‌ನಲ್ಲಿ ಸ್ಕೂಟರ್‌ನಲ್ಲಿ ಯುವಕನೊಬ್ಬ ಬಂದು ಅಡ್ಡಗಟ್ಟುತ್ತಾನೆ. ನಂತರ ವಿಜ್ಞಾನಿಯನ್ನು ನಿಂದಿಸಿ ಕಾರಿಗೆ ಎರಡು ಬಾರಿ ಒದೆಯುತ್ತಾನೆ. ಆದರೆ ಈ ಹಿಂದೆ ಏನಾಯಿತು ಎಂಬುದನ್ನು ವೀಡಿಯೊ ತೋರಿಸುವುದಿಲ್ಲ.

ಈ ಘಟನೆಗೂ ಮುನ್ನ ಅವರ ನಡುವೆ ಜಗಳವಾಗಿದೆಯೇ ಅಥವಾ ಸ್ಕೂಟರ್‌ನಲ್ಲಿ ಸವಾರರು ಇದ್ದಕ್ಕಿದ್ದಂತೆ ನಿಲ್ಲಿಸಿ ವಿಜ್ಞಾನಿಯನ್ನು ನಿಂದಿಸಿದ್ದಾರೆ ಎಂಬುವುದು ತಿಳಿದಿಲ್ಲ. ಇಸ್ರೋ ವಿಜ್ಞಾನಿ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ ವೀಡಿಯೊ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯವಾಗಿದೆ. ವರದಿಗಳ ಪ್ರಕಾರ, ಆಗಸ್ಟ್ 29 ರಂದು ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಇತ್ತೀಚೆಗೆ ನಿರ್ಮಿಸಲಾದ ಎಚ್‌ಎಎಲ್ ಅಂಡರ್‌ಪಾಸ್ ಬಳಿ ಘಟನೆ ಸಂಭವಿಸಿದೆ.
ಸ್ಕೂಟರ್ ಸವಾರ ತನ್ನ ಕಾರಿನ ಮುಂದೆ ಬಂದು ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾರಿಗೆ ಒದ್ದಿದ್ದಾನೆ. ನಿನ್ನೆ ಇಸ್ರೋ ಕಚೇರಿಗೆ ಹೋಗುತ್ತಿದ್ದಾಗ, ಹೊಸದಾಗಿ ನಿರ್ಮಿಸಲಾದ ಎಚ್‌ಎಎಲ್ ಅಂಡರ್‌ಪಾಸ್ ಬಳಿ, ಹೆಲ್ಮೆಟ್ ಇಲ್ಲದೆ ಸ್ಕೂಟರ್‌ನಲ್ಲಿ (ಕೆಎ 03 ಕೆಎಂ 8826) ವ್ಯಕ್ತಿಯೊಬ್ಬರು ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದರು ನಮ್ಮ ಕಾರಿನ ಮುಂದೆ ಇದ್ದಕ್ಕಿದ್ದಂತೆ ಬರುತ್ತಿದ್ದರು. ಆದ್ದರಿಂದ ನಾವು ಸಡನ್ ಬ್ರೇಕ್ ಹಾಕಬೇಕಾಯಿತು. ಎಂದು ವಿಜ್ಞಾನಿ ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಅಧಿಕೃತ ಬೆಂಗಳೂರು ಪೊಲೀಸ್ ಖಾತೆಯು ತಕ್ಷಣವೇ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಟ್ವೀಟ್ ಗಮನಿಸಲಾಗಿದೆ. ನಾವು ಸಂಬಂಧಿತ ಪೊಲೀಸ್ ಅಧಿಕಾರಿಗೆ ಸೂಚನೆ ನೀಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಆಶಿಶ್ ಅವರ ಸಂಪರ್ಕ ವಿವರ ನೀಡುವಂತೆ ಮನವಿ ಮಾಡಿದೆ. ಕೆಲವು ದಿನಗಳ ಹಿಂದೆ ಮತ್ತೊಂದು ಘಟನೆ, ಇಸ್ರೋ ವಿಜ್ಞಾನಿಯ ಕಾರ್‌ಗೆ ಕಲ್ಲು ಎಸೆದು ವಿಜ್ಞಾನಿಯ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಬೆಂಗಳೂರಿನಲ್ಲಿ ನಡೆದಿರುವ ಈ ದುಷ್ಕೃತ್ಯ ತಡವಾಗಿ ಬೆಳಕಿಗೆ ಬಂದಿತು.
ಇದು ಬೆಂಗಳೂರಿನ ಮಾದನಾಯಕನ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌತನಹಳ್ಳಿ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ರೌತನಹಳ್ಳಿಯ ಮುಖ್ಯ ರಸ್ತೆಯಲ್ಲಿ ಆಗಸ್ಟ್ 24ರ ರಾತ್ರಿ 12:45ರ ವೇಳೆ ಮನೆಗೆ ತೆರಳುತ್ತಿದ್ದ ಇಸ್ರೋದ ಯುವ ವಿಜ್ಞಾನಿ ಅಶುತೋಷ್ ಸಿಂಗ್ ಅವರ ಕಾರನ್ನು ಹಿಂಬಾಲಿಸಿದ ಅಪರಿಚಿತ ದುಷ್ಕರ್ಮಿಗಳು, ಹಿಂಬದಿಯಿಂದ ಕಾರ್‌ನ ಗ್ಲಾಸ್ ಒಡೆದು ಹಾಕಿದ್ದಾರೆ.
@blrcitytraffic @CPBlr @BlrCityPolice Yesterday during going to ISRO office,Near to newly constructed HAL underpass, a person on scooty (KA03KM8826) without helmet was driving recklessly and coming in front of our car suddenly and so We had to apply sudden brake. pic.twitter.com/xwDyEy2peA
— Aashish Lamba (@lambashish) August 30, 2023
ಯುವ ವಿಜ್ಞಾನಿ ಅಶುತೋಷ್ ಸಿಂಗ್ ಅವರು ತನ್ನ ರೆನಾಲ್ಟ್ ಕ್ವಿಡ್ ಕಾರ್‌ನಲ್ಲಿ ಚಲಿಸುತ್ತಿದ್ದಾಗ ಹಿಂಬಾಲಿಸಿಕೊಂಡ ಬಂದ ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದ್ದಾರೆ. ದುಷ್ಕರ್ಮಿಗಳಿಂದ ಎಸ್ಕೇಪ್ ಆದ ಅಶುತೋಷ್ ಸಿಂಗ್ ಮಾದನಾಯಕಹಳ್ಳಿ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಮತ್ತೊಂದೆಡೆ ಈ ಘಟನೆಯ ಬಗ್ಗೆ ದೂರು ನೀಡಲು ಮುಂದಾದಾಗ ಪೊಲೀಸರು ಕೂಡ ನಿರ್ಲಕ್ಷ್ಯ ತೋರಿದ್ದಾರೆಂಬ ಆರೋಪ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಟ್ವಿಟರ್ ಮೂಲಕ ಘಟನೆಯ ಮಾಹಿತಿಯನ್ನು ಅಶುತೋಷ್ ಸಿಂಗ್ ಹಂಚಿಕೊಂಡಿದ್ದಾರೆ. ಬಳಿಕ ಎಚ್ಚೆತ್ತ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ ಸಂಭವಿಸುವ ಅಪಘಾತಗಳು ಮತ್ತು ಅಪರಾಧ ಚಟುವಟಿಕೆಗಳಂತಹ ಘಟನೆಗಳನ್ನು ರೆಕಾರ್ಡಿಂಗ್ ಮಾಡಲು ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾಗಳು ಬಹಳ ಉಪಕಾರಿಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications