Gaganyaan: ಗಗನಯಾನ ಮಿಷನ್ ಯಶಸ್ವಿಗೊಳಿಸಿದ ನಮ್ಮ ಹೆಮ್ಮೆಯ ಇಸ್ರೋ.. ಹೊಸ ಅಧ್ಯಾಯಕ್ಕೆ ನಾಂದಿ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಮಾನವರನ್ನು ಕಕ್ಷೆಗೆ ಕಳುಹಿಸುವ ಗಗನಯಾನ (Gaganyaan) ಮಿಷನ್ ಭಾಗವಾಗಿ, ವಿಜ್ಞಾನಿಗಳು ನಡೆದ ಪ್ರಯೋಗ ನಾನಾ ಅಡೆತಡೆಗಳನ್ನು ದಾಟಿ ಅಂತಿಮವಾಗಿ ಯಶಸ್ವಿಯಾಗಿದೆ. ಇಲ್ಲಿದೆ ಮಾಹಿತಿ.

ಪ್ರಸ್ತುತ, ಇಸ್ರೋ 400 ಕಿಲೋಮೀಟರ್ ಅಂತರಿಕ್ಷಕ್ಕೆ ಮೂರು ದಿನಗಳ ಅಧ್ಯಯನ ಕಾರ್ಯಾಚರಣೆಗೆ 3 ಗಗನಯಾತ್ರಿಗಳನ್ನು ಕಳುಹಿಸಲು ತನ್ನ ಕನಸಿನ 'ಗಗನಯಾನ' ಯೋಜನೆಯಲ್ಲಿ ಕೆಲಸ ಮಾಡುತ್ತಿದೆ. ಅಧ್ಯಯನ ನಂತರ, ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆಕೊಂಡು ಬರುವ ಪ್ಲ್ಯಾನ್ ಹಾಕಿಕೊಂಡಿದೆ. ಅದರ ಭಾಗವಾಗಿಯೇ ಇಂದು ಪ್ರಯೋಗವನ್ನು ನಡೆಸಿ, ಸಫಲತೆಯನ್ನು ಕಂಡಿದೆ.

Gaganyaan: ಗಗನಯಾನ ಮಿಷನ್ ಯಶಸ್ವಿಗೊಳಿಸಿದ ನಮ್ಮ ಹೆಮ್ಮೆಯ ಇಸ್ರೋ.. ಹೊಸ ಅಧ್ಯಾಯಕ್ಕೆ ನಾಂದಿ

ಗಗನಯಾನ ಭಾಗವಾಗಿ, ಆಂಧ್ರ ಪ್ರದೇಶ ಶ್ರೀಹರಿಕೋಟದಿಂದ ಟೆಸ್ಟ್ ವೆಹಿಕಲ್ ಡೆವಲಪ್‌ಮೆಂಟ್ ಪ್ರೈಟ್ ಮಿಷನ್ - 1 (TV - D1) ಎಂಬ ಹೆಸರಿನ ನೌಕೆಯನ್ನು ಉಡಾವಣೆ ಮಾಡಲು ಇಂದು ಬೆಳಗ್ಗೆ 7.30 ಕ್ಕೆ ಸಮಯವನ್ನು ನಿಗದಿಪಡಿಸಲಾಗಿತ್ತು. ಆ ಬಗ್ಗೆ ಶುಕ್ರವಾರವೇ ಇಸ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ, ಬೆಳಗ್ಗೆ ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ರಾಕೆಟ್ ಉಡಾವಣೆ ಸ್ವಲ್ಪ ಹೊತ್ತು ಮುಂದೂಡಲಾಗಿತ್ತು.

ಆ ಬಳಿಕ, ವಿಜ್ಞಾನಿಗಳು ಗಗನನೌಕೆಯಲ್ಲಿ ತಾಂತ್ರಿಕ ದೋಷವನ್ನು ಬೇಗನೇ ಪತ್ತೆ ಮಾಡಿ, ಅದನ್ನು ಸರಿಪಡಿಸುವಲ್ಲಿ ಯಶಸ್ವಿಯಾದರು. ನಂತರ, 10 ಗಂಟೆಗೆ ಸರಿಯಾಗಿ ರಾಕೆಟ್ ಉಡಾವಣೆ ಮಾಡಲಾಯಿತು. ಅದು, ಈ ಮೊದಲೇ ನಿಗದಿಪಡಿಸಿದಂತೆ 12 ಕಿಲೋಮೀಟರ್ ಎತ್ತರಕ್ಕೆ ಚಿಮ್ಮಿ ತನ್ನ ಕೆಲಸವನ್ನು ನಿಲ್ಲಿಸಿತು. ಅದರಲ್ಲಿದ್ದ ಗಗನಯಾತ್ರಿಗಳನ್ನು ಹೊತ್ತ ಮಾದರಿ (ಮಾಡೆಲ್) ಸುರಕ್ಷಿತವಾಗಿ ಭೂಮಿಗೆ ಇಳಿಯಿತು.

Gaganyaan: ಗಗನಯಾನ ಮಿಷನ್ ಯಶಸ್ವಿಗೊಳಿಸಿದ ನಮ್ಮ ಹೆಮ್ಮೆಯ ಇಸ್ರೋ.. ಹೊಸ ಅಧ್ಯಾಯಕ್ಕೆ ನಾಂದಿ

ಗಗನಯಾನ ಮಿಷನ್ ಪ್ರಯೋಗದಲ್ಲಿ ಇಸ್ರೋ ಯಶಸ್ವಿಯಾದ ಬೆನ್ನಲೇ ಹಲವು ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಶುಭ ಕೋರುತ್ತಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, 'ಈ ಉಡಾವಣೆಯು ಭಾರತದ ಮೊದಲ ಮಾನವ ಬಾಹ್ಯಾಕಾಶ ಹಾರಾಟಕ್ಕೆ ನಮ್ಮನ್ನು ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗಿದೆ. ನಮ್ಮ ವಿಜ್ಞಾನಿಗಳಿಗೆ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.

ಕಳೆದ ಆಗಸ್ಟ್ ತಿಂಗಳಲ್ಲಿ ಚಂದ್ರಯಾನ - 3 (Chandrayaan - 3) ಭಾಗವಾಗಿ ಇಸ್ರೋ, ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್, ರೋವರ್ ಇಳಿಸಿ, ಅಲ್ಲಿ ವಿವಿಧ ಅಧ್ಯಯನಗಳನ್ನು ನಡೆಸಿತ್ತು. ಅಲ್ಲದೆ, ಸೆಪ್ಟೆಂಬರ್ ನಲ್ಲಿ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ - ಎಲ್1 (Aditya - L1) ಗಗನನೌಕೆಯನ್ನು ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿತ್ತು.

Gaganyaan: ಗಗನಯಾನ ಮಿಷನ್ ಯಶಸ್ವಿಗೊಳಿಸಿದ ನಮ್ಮ ಹೆಮ್ಮೆಯ ಇಸ್ರೋ.. ಹೊಸ ಅಧ್ಯಾಯಕ್ಕೆ ನಾಂದಿ

ಇದು, 125 ದಿನಗಳ ಪ್ರಯಾಣದ ನಂತರ ನಿಗದಿತ ಕಕ್ಷೆ ತಲುಪಲಿದ್ದು, ಅಲ್ಲಿ ಕಾರ್ಯಾಚರಣೆ ನಡೆಸಿ, ಸೂರ್ಯನ ಚಿತ್ರಗಳನ್ನು ಭೂಮಿಗೆ ಕಳುಹಿಸಲಿದೆ. ಇನ್ನು, ಮಾನವರನ್ನು ಅಂತರಿಕ್ಷಕ್ಕೆ ಕಳುಹಿಸುವ ಗಗನಯಾನ ಮಿಷನ್ ಭಾಗವಾಗಿ, ವಿಜ್ಞಾನಿಗಳು ನಡೆದ ಪ್ರಯೋಗ ಯಶಸ್ವಿಯಾಗಿದೆ. ಈ ಕ್ಷೇತ್ರದಲ್ಲಿ ವಿಜ್ಞಾನಿಗಳು ಮಾಡುತ್ತಿರುವ ಕೆಲಸ ನಿಜಕ್ಕೂ ಶ್ಲಾಘನೀಯ. ಅವರನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, October 21, 2023, 14:23 [IST]
English summary
Isro success in gaganyaan test mission full details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+