ಟಗ್ ಆಫ್ ವಾರ್'ನಲ್ಲಿ ಥಾರ್ ಎಸ್‌ಯುವಿಯನ್ನು ಹಿಮ್ಮೆಟ್ಟಿಸಿದ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್

ಭಾರತೀಯ ಮೂಲದ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಅಂಡ್ ಮಹೀಂದ್ರಾದ ಹೊಸ ತಲೆಮಾರಿನ ಥಾರ್ ಎಸ್‌ಯುವಿಯು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ.

ಟಗ್ ಆಫ್ ವಾರ್'ನಲ್ಲಿ ಥಾರ್ ಎಸ್‌ಯುವಿಯನ್ನು ಹಿಮ್ಮೆಟ್ಟಿಸಿದ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್

ಮತ್ತೊಂದು ಐಷಾರಾಮಿ ಎಸ್‌ಯುವಿ ತಯಾರಕ ಕಂಪನಿಯಾದ ಇಸುಝು ಇಂಡಿಯಾ ಇತ್ತೀಚೆಗೆ ತನ್ನ ಲೈಫ್ ಸ್ಟೈಲ್ ಪಿಕಪ್ ಟ್ರಕ್ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಪಿಕಪ್ ಟ್ರಕ್ ಶಕ್ತಿಯುತವಾಗಿದ್ದು, ಹಲವಾರು ಫೀಚರ್'ಗಳನ್ನು ಹೊಂದಿದೆ.

ಟಗ್ ಆಫ್ ವಾರ್'ನಲ್ಲಿ ಥಾರ್ ಎಸ್‌ಯುವಿಯನ್ನು ಹಿಮ್ಮೆಟ್ಟಿಸಿದ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್

ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಹೊಸ ವೀಡಿಯೊವೊಂದನ್ನು ಅಪ್ ಲೋಡ್ ಮಾಡಲಾಗಿದೆ. ಈ ವೀಡಿಯೊದಲ್ಲಿ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕಪ್ ಟ್ರಕ್ ಹಾಗೂ ಹೊಸ ತಲೆಮಾರಿನ ಮಹೀಂದ್ರಾ ಥಾರ್ ಎಸ್‌ಯುವಿಗಳ ನಡುವೆ ಟಗ್ ಆಫ್ ವಾರ್ ನಡೆಯುತ್ತಿರುವುದನ್ನು ಕಾಣಬಹುದು.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಟಗ್ ಆಫ್ ವಾರ್'ನಲ್ಲಿ ಥಾರ್ ಎಸ್‌ಯುವಿಯನ್ನು ಹಿಮ್ಮೆಟ್ಟಿಸಿದ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್

ಈ ವೀಡಿಯೊ ಎರಡು ವಾಹನಗಳ ನಡುವೆ ನಡೆಯುವ ಟಗ್ ಆಫ್ ವಾರ್ ಮೂಲಕ ಆರಂಭವಾಗುತ್ತದೆ. ಈ ವೀಡಿಯೊ ಉದ್ದಕ್ಕೂ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್, ಮಹೀಂದ್ರಾ ಥಾರ್‌ ಎಸ್‌ಯುವಿ ವಿರುದ್ಧ ನಿರಂತರವಾಗಿ ಮೇಲುಗೈ ಸಾಧಿಸುತ್ತದೆ.

ಟಗ್ ಆಫ್ ವಾರ್'ನಲ್ಲಿ ಥಾರ್ ಎಸ್‌ಯುವಿಯನ್ನು ಹಿಮ್ಮೆಟ್ಟಿಸಿದ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್

ಎಲ್ಲಿಯೂ ಮಹೀಂದ್ರಾ ಥಾರ್ ಎಸ್‌ಯುವಿ ಇಸುಝು ವಿರುದ್ಧ ಮೇಲುಗೈ ಸಾಧಿಸುವುದೇ ಇಲ್ಲ. ಈ ಟಗ್ ಆಫ್ ವಾರ್'ನಲ್ಲಿ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕಪ್ ಟ್ರಕ್, ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಸುಮಾರು 100 ಮೀಟರ್ ದೂರ ಎಳೆದೊಯ್ಯುತ್ತದೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಟಗ್ ಆಫ್ ವಾರ್'ನಲ್ಲಿ ಥಾರ್ ಎಸ್‌ಯುವಿಯನ್ನು ಹಿಮ್ಮೆಟ್ಟಿಸಿದ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್

ವೀಡಿಯೊದಲ್ಲಿ ಮಹೀಂದ್ರಾ ಥಾರ್ ತನ್ನ ಹಿಡಿತ ಸಾಧಿಸಲು ಹೆಣಗಾಡುತ್ತಿರುತ್ತದೆ. ಅಂತಿಮವಾಗಿ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಈ ಹಗ್ಗ ಜಗ್ಗಾಟದಲ್ಲಿ ವಿಜಯಿಯಾಗಿ ಹೊರ ಹೊಮ್ಮುತ್ತದೆ.

ಟಗ್ ಆಫ್ ವಾರ್'ನಲ್ಲಿ ಥಾರ್ ಎಸ್‌ಯುವಿಯನ್ನು ಹಿಮ್ಮೆಟ್ಟಿಸಿದ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್

ಈ ವಿಡಿಯೋ ನೋಡಿದ ನಂತರ ಹೊಸ ಮಹೀಂದ್ರಾ ಥಾರ್ ಇಷ್ಟೊಂದು ದುರ್ಬಲವೇ ಎಂಬ ಪ್ರಶ್ನೆ ನೋಡುಗರಲ್ಲಿ ಉದ್ಭವಿಸುತ್ತದೆ. ಈ ವೀಡಿಯೊದಲ್ಲಿರುವ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಮಾಡಿಫೈಗೊಳಿಸಿಲ್ಲ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಟಗ್ ಆಫ್ ವಾರ್'ನಲ್ಲಿ ಥಾರ್ ಎಸ್‌ಯುವಿಯನ್ನು ಹಿಮ್ಮೆಟ್ಟಿಸಿದ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್

ಆದರೆ ಇಸುಝು ವಿ-ಕ್ರಾಸ್ ಅನ್ನು ಹೆಚ್ಚು ಮಾಡಿಫೈಗೊಳಿಸಿರುವುದು ಹಿಂಭಾಗದಿಂದ ತಿಳಿಯುತ್ತದೆ. ಇಸುಝು ವಿ ಕ್ರಾಸ್ ವಾಹನವನ್ನು ಲಿಫ್ಟ್ ಕಿಟ್, ಆಫ್ಟರ್ ಮಾರ್ಕೆಟ್ ರಿಮ್ಸ್, ಟಯರ್ ಹಾಗೂ ಇನ್ನಿತರ ಪರಿಕರಗಳೊಂದಿಗೆ ಮಾರ್ಪಡಿಸಲಾಗಿದೆ.

ಟಗ್ ಆಫ್ ವಾರ್'ನಲ್ಲಿ ಥಾರ್ ಎಸ್‌ಯುವಿಯನ್ನು ಹಿಮ್ಮೆಟ್ಟಿಸಿದ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್

ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಮಹೀಂದ್ರಾ ಥಾರ್ ಎಸ್‌ಯುವಿಗಿಂತ ಹೆಚ್ಚು ತೂಕವನ್ನು ಹೊಂದಿದೆ. ಡಿ-ಮ್ಯಾಕ್ಸ್ ವಿ-ಕ್ರಾಸ್ ಸುಮಾರು 2 ಟನ್ ತೂಕವಿದ್ದರೆ, ಥಾರ್ ಡೀಸೆಲ್ ಹಾರ್ಡ್‌ಟಾಪ್ ಸುಮಾರು 1.7 ಟನ್ ತೂಕವನ್ನು ಹೊಂದಿದೆ.

MOST READ: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಟಗ್ ಆಫ್ ವಾರ್'ನಲ್ಲಿ ಥಾರ್ ಎಸ್‌ಯುವಿಯನ್ನು ಹಿಮ್ಮೆಟ್ಟಿಸಿದ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್

ವಿ ಕ್ರಾಸ್ ಚಲಿಸಲು ಆರಂಭಿಸಿದಾಗ, ಅದರ ವೇಗವು ಥಾರ್‌ ಎಸ್‌ಯುವಿಗಿಂತ ಹೆಚ್ಚಿರುತ್ತದೆ. ಮಹೀಂದ್ರಾ ಥಾರ್ ಎಸ್‌ಯುವಿಯಲ್ಲಿ 2.2 ಲೀಟರ್ ಎಮ್ಹಾಕ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ.

ಈ ಎಂಜಿನ್ 130 ಬಿಹೆಚ್‌ಪಿ ಪವರ್ ಹಾಗೂ 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್'ನಲ್ಲಿ 2.5-ಲೀಟರ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ.

MOST READ: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಟಗ್ ಆಫ್ ವಾರ್'ನಲ್ಲಿ ಥಾರ್ ಎಸ್‌ಯುವಿಯನ್ನು ಹಿಮ್ಮೆಟ್ಟಿಸಿದ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್

ಈ ಎಂಜಿನ್ 134 ಬಿಹೆಚ್‌ಪಿ ಪವರ್ ಹಾಗೂ 320 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಇಸುಝು ಡಿ-ಮ್ಯಾಕ್ಸ್, ಮಹೀಂದ್ರಾ ಥಾರ್ ಎಸ್‌ಯುವಿಗಿಂತ ಹೆಚ್ಚು ಬಲಿಷ್ಟವಾಗಿದೆ. ಆದರೆ ಆಫ್ ರೋಡ್'ಗಳಿಗೆ ಲಘು ವಾಹನಗಳು ಹೆಚ್ಚು ಸೂಕ್ತವಾಗಿವೆ.

ಚಿತ್ರಕೃಪೆ: ಆಟೋವ್ಹೀಲ್ಸ್ ಇಂಡಿಯಾ - ಕಾರ್ಸ್ ಅಂಡ್ ರೋಡ್ ಟ್ರಿಪ್ಸ್

Most Read Articles

Kannada
English summary
Isuzu D Max V Cross beats Mahindra Thar in Tug of war. Read in Kannada.
Story first published: Friday, June 4, 2021, 14:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X