ಕರೋನಾ ವೈರಸ್ ಭೀತಿಯ ನಡುವೆಯೇ ಜಗ್ಗಿ ವಾಸುದೇವ್ ಜಾಲಿ ರೈಡ್

ಕರೋನಾದ ಬಗ್ಗೆ ಜನರು ಭಯಗೊಂಡಿರುವ ಈ ಸಂದರ್ಭದಲ್ಲಿ ಸದ್ಗುರು ಎಂದು ಕರೆದುಕೊಳ್ಳುವ ಜಗ್ಗಿ ವಾಸುದೇವ್ ರವರು ತಮ್ಮ ಹೊಸ ಬೈಕಿನಲ್ಲಿ ಜಾಲಿ ರೈಡ್ ಮಾಡುತ್ತಿರುವ ದೃಶ್ಯದ ವೀಡಿಯೋ ವೈರಲ್ ಆಗಿದೆ.

ಕರೋನಾ ವೈರಸ್ ಭೀತಿಯ ನಡುವೆಯೇ ಜಗ್ಗಿ ವಾಸುದೇವ್ ಜಾಲಿ ರೈಡ್

ಸದ್ಗುರು ಎಂದೇ ಖ್ಯಾತರಾಗಿರುವ ಜಗ್ಗಿ ವಾಸುದೇವ್ ರವರು ರಾಜಕೀಯ ವ್ಯಕ್ತಿಗಳಿಂದ ಹಿಡಿದು ಚಿತ್ರತಾರೆಗಳವರೆಗೆ ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದಾರೆ. ಇವರ ಇಶಾ ಯೋಗ ಕೇಂದ್ರಕ್ಕೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭೇಟಿ ನೀಡುತ್ತಾರೆ. ಜಗ್ಗಿ ವಾಸುದೇವ್ ರವರು ವಿವಾದಗಳಿಗಾಗಿಯೂ ಹೆಸರುವಾಸಿಯಾಗಿದ್ದಾರೆ. ಇವರ ಬಳಿ ಸಾಕಷ್ಟು ಐಷಾರಾಮಿ ಕಾರು ಹಾಗೂ ಬೈಕುಗಳಿವೆ. ಇವೆಲ್ಲವೂ ದುಬಾರಿಬೆಲೆಯ ವಾಹನಗಳು.

ಕರೋನಾ ವೈರಸ್ ಭೀತಿಯ ನಡುವೆಯೇ ಜಗ್ಗಿ ವಾಸುದೇವ್ ಜಾಲಿ ರೈಡ್

ನದಿಗಳ ಪುನರ್ ಜೀವನಕ್ಕಾಗಿ ರೂ. 20 ಲಕ್ಷ ಬೆಲೆಯ ಬಿಎಂಡಬ್ಲ್ಯು ಬೈಕಿನಲ್ಲಿ ರಾಲಿಯನ್ನು ಆಯೋಜಿಸಿದ್ದರು. ಇದರ ಜೊತೆಗೆ ಕೋಟಿಗಟ್ಟಲೇ ಬೆಲೆ ಬಾಳುವ ಬೆಂಝ್ ಕಾರ್ ಅನ್ನು ಹೊಂದಿದ್ದಾರೆ.

ಕರೋನಾ ವೈರಸ್ ಭೀತಿಯ ನಡುವೆಯೇ ಜಗ್ಗಿ ವಾಸುದೇವ್ ಜಾಲಿ ರೈಡ್

ಇವುಗಳಲ್ಲದೇ ಡುಕಾಟಿ ಮಲ್ಟಿಸ್ಟ್ರಾಡಾ, ಕವಾಸಕಿ ನಿಂಜಾ 1000, ಡುಕಾಟಿ ಡಯಾವೆಲ್, ಹೋಂಡಾ ಆಫ್ರಿಕಾ ಟ್ವಿನ್, ಸುಜುಕಿ ವಿ-ಸ್ಟ್ರೋಮ್, ಟ್ರಯಂಫ್ ರಾಕೆಟ್ 3 ಸೇರಿದಂತೆ ಹಲವಾರು ಐಷಾರಾಮಿ ಬೈಕುಗಳನ್ನು ಹೊಂದಿದ್ದಾರೆ.

ಕರೋನಾ ವೈರಸ್ ಭೀತಿಯ ನಡುವೆಯೇ ಜಗ್ಗಿ ವಾಸುದೇವ್ ಜಾಲಿ ರೈಡ್

ಈಗ ತಮ್ಮ ಹೊಸ ಜಾವಾ 42 ಬೈಕಿನಲ್ಲಿ ಜಾಲಿ ರೈಡ್ ಮಾಡುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇಡೀ ಜಗತ್ತು ಕರೋನಾ ವೈರಸ್ ನಿಂದ ಹೈರಣಾಗಿರುವ ಸಂದರ್ಭದಲ್ಲಿ ಆಧ್ಯಾತ್ಮಿಕತೆಯ ಗುರು ಎಂದೇ ಖ್ಯಾತರಾಗಿರುವ ಜಗ್ಗಿ ವಾಸುದೇವ್ ರವರ ಈ ನಡೆ ತಮಿಳುನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕರೋನಾ ವೈರಸ್ ಭೀತಿಯ ನಡುವೆಯೇ ಜಗ್ಗಿ ವಾಸುದೇವ್ ಜಾಲಿ ರೈಡ್

ಈ ಹಿಂದೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿದ್ದ ಜಗ್ಗಿ ವಾಸುದೇವ್ ರವರು, ಇಂತಹ ಕಷ್ಟದ ಸಂದರ್ಭದಲ್ಲಿ ಜನರಿಗೆ ಸಾಂತ್ವನ ಹೇಳುವ ಬದಲು ಜಾಲಿ ರೈಡ್ ಮಾಡುತ್ತಿರುವುದನ್ನು ಹಲವರು ಟೀಕಿಸಿದ್ದಾರೆ.

ಕರೋನಾ ವೈರಸ್ ಭೀತಿಯ ನಡುವೆಯೇ ಜಗ್ಗಿ ವಾಸುದೇವ್ ಜಾಲಿ ರೈಡ್

ಜಗ್ಗಿ ವಾಸುದೇವ್ ರವರು ತಮಿಳುನಾಡು ಮಾತ್ರವಲ್ಲದೆ ಅನೇಕ ರಾಜ್ಯಗಳಲ್ಲಿ ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದಾರೆ. ಪ್ರಪಂಚದಾದ್ಯಂತವಿರುವ ಜನರು ಇವರ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಈ ಜಾಲಿ ರೈಡ್ ವೀಡಿಯೋ ವಿವಾದಕ್ಕೆ ಕಾರಣವಾಗಿದೆ.

ಕರೋನಾ ವೈರಸ್ ಭೀತಿಯ ನಡುವೆಯೇ ಜಗ್ಗಿ ವಾಸುದೇವ್ ಜಾಲಿ ರೈಡ್

ಜಗ್ಗಿ ವಾಸುದೇವ್ ರವರು ರೈಡ್ ಮಾಡುತ್ತಿರುವ ಈ ಬೈಕ್ 4 ಸ್ಟ್ರೋಕಿನ ಜಾವಾ 42 ಬೈಕ್ ಆಗಿದೆ. ಇವರು ಹಳೆಯ 2 ಸ್ಟ್ರೋಕಿನ ಜಾವಾ ಬೈಕ್ ಅನ್ನು ಸಹ ಹೊಂದಿದ್ದು, ಸ್ವಲ್ಪ ಪ್ರಮಾಣದಲ್ಲಿ ಮಾಡಿಫೈಗೊಳಿಸಿದ್ದಾರೆ. ಜಾವಾ ಕಂಪನಿ 35 ವರ್ಷಗಳ ನಂತರ, ಕಳೆದ ವರ್ಷ ತನ್ನ ಹೊಸ ಬೈಕ್‌ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

ಕರೋನಾ ವೈರಸ್ ಭೀತಿಯ ನಡುವೆಯೇ ಜಗ್ಗಿ ವಾಸುದೇವ್ ಜಾಲಿ ರೈಡ್

ಮೊದಲು ಜಾವಾ ಕ್ಲಾಸಿಕ್ ಹಾಗೂ ಜಾವಾ 42 ಬೈಕುಗಳನ್ನು ಬಿಡುಗಡೆಗೊಳಿಸಲಾಯಿತು. ನಂತರ ಜಾವಾ ಪೆರಾಕ್ ಬೈಕ್ ಅನ್ನು ಬಿಡುಗಡೆಗೊಳಿಸಲಾಯಿತು. ಈ ಬೈಕುಗಳು ನೋಡಲು ಕ್ಲಾಸಿಕ್ ಆಗಿದ್ದರೂ, ಅವು ಆಧುನಿಕತೆಗೆ ತಕ್ಕಂತಹ ವಿವಿಧ ತಾಂತ್ರಿಕ ಫೀಚರ್ ಗಳನ್ನು ಹೊಂದಿವೆ. ಈ ಬೈಕುಗಳಲ್ಲಿ ಎಬಿಎಸ್ ಹಾಗೂ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ.

ಜಾವಾ ಕ್ಲಾಸಿಕ್ ಬೈಕಿನ ಬೆಲೆ ರೂ.1.6 ಲಕ್ಷಗಳಾದರೆ, ಜಾವಾ 42 ಬೈಕಿನ ಬೆಲೆ ರೂ.1.73 ಲಕ್ಷಗಳಾಗಿದೆ. ಈ ಎರಡೂ ಬೈಕ್‌ಗಳಲ್ಲಿ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ.

ಕರೋನಾ ವೈರಸ್ ಭೀತಿಯ ನಡುವೆಯೇ ಜಗ್ಗಿ ವಾಸುದೇವ್ ಜಾಲಿ ರೈಡ್

ಈ ಎರಡೂ ಬೈಕ್‌ಗಳಲ್ಲಿ 293 ಸಿಸಿಯ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲಿಂಗ್ ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 27 ಬಿಹೆಚ್‌ಪಿ ಪವರ್ ಹಾಗೂ 28 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
Jaggi Vasudev jolly ride in Jawa 42 bike. Read in Kannada.
Story first published: Monday, March 23, 2020, 17:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X