ರೋಡಲ್ಲಿ ಹೋದರೆ ನಡೆಯುವವರೂ ನಿಂತು ನೋಡುತ್ತಾರೆ: ಎಂಜಿ ಕಾಮೆಟ್‌‌ ಬಗ್ಗೆ ಜಾಹ್ನವಿ ಹೇಳಿದ್ದೇನು?

ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್‌ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯತೆ ಗಳಿಸಿರುವ ಈಕೆ ಇತ್ತೀಚೆಗಷ್ಟೇ ಪ್ರಸಿದ್ಧ ಕಾರು ತಯಾರಿಕಾ ಕಂಪನಿಯಾದ ಎಂಜಿ ಯ ಕಾಮೆಟ್‌ ಎನ್ನುವ ಎಲೆಕ್ಟ್ರಿಕ್‌ ಕಾರನ್ನು ಟೆಸ್ಟ್ ಡ್ರೈವ್‌ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದರು.

ಈ ಕುರಿತಾಗಿ ವಿಡಿಯೋ ರೆಕಾರ್ಡ್‌ ಮಾಡಿ ಪೋಸ್ಟ್‌ ಮಾಡಿದ ಎಂಜಿ ಇಂಡಿಯಾ ತನ್ನ ಸೋಷಿಯಲ್‌ ಮೀಡಿಯಾದಲ್ಲಿ ಪ್ರಮೋಷನಲ್‌ ವಿಡಿಯೋ ಆಗಿ ಪೋಸ್ಟ್‌ ಮಾಡಿದ್ದು, ಇದರಲ್ಲಿ ಜಾಹ್ನವಿ ಕಪೂರ್‌, ಎಂಜಿ ಕಾಮೆಟ್‌ (MG Comet) ಅನ್ನು ಓಡಿಸಿದ ನಂತರ ತಮಗೆ ಆ ಕಾರಿನ ಬಗ್ಗೆ ಅನಿಸಿದ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

Jahnavi Kapoor Opens Up After Driving MG Comet

ವಿಡಿಯೋದಲ್ಲಿ ಜಾಹ್ನವಿ ಕಪೂರ್ ಅವರು ತುಂಬಾ ಎಕ್ಸೈಟ್‌ ಆಗಿ ಕಾರಿನ ಕುರಿತಾದ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ನನ್ನನ್ನು ನಿಮ್ಮ ಕಾರಿನ ಟೆಸ್ಟ್‌ ಡ್ರೈವ್‌ ನಡೆಸಲು ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ಎಂಜಿ ಕಾಮೆಟ್‌ ಡ್ರೈವ್‌ ಮಾಡಲು ನಾನಂತೂ ಸೂಪರ್‌ ಎಕ್ಸೈಟ್‌ ಆಗಿದ್ದೇನೆ ಎಂದು ಹೇಳಿದ ನಂತರ ಎಂಜಿ ಕಾಮೆಟ್‌ ಒಳಗೆ ಕಾಲಿಟ್ಟರು.

ನಂತರ ಎಂಜಿ ಕಾಮೆಟ್‌ ಒಳಗೆ ಕುಳಿತ ಜಾಹ್ನವಿ ಕಪೂರ್‌ ಅವರ ರಿಯಾಕ್ಷನ್‌ ಎಂತಹವರ ಮನಸ್ಸಿಗೂ ಮುದ ನೀಡುವಂತಿತ್ತು. ತುಂಬಾ ಆನಂದದಿಂದ ಜಾಹ್ನವಿ ಕಪೂರ್‌ ನಾನು ಈ ಕಾರಿನ ಪ್ರೀತಿಯಲ್ಲಿ ಬಿದ್ದಿದ್ದೇನೆ ಎಂದು ರಿಯಾಕ್ಟ್‌ ಮಾಡುತ್ತಾರೆ. ಕಾರಿನ ಸ್ಟನ್ನಿಂಗ್‌ ಇಂಟೀರಿಯರ್‌ ನೋಡಿ ಜಾಹ್ನವಿ ಕಳೆದು ಹೋಗಿದ್ದರು.

Jahnavi Kapoor Opens Up After Driving MG Comet

ಜಾಹ್ನವಿ ಅವರಿಗೆ ಕಾರಿನಲ್ಲಿದ್ದ ಆ್ಯಂಡ್ರಾಯ್ಡ್‌ ಆಟೋ ಮತ್ತು ಆಪಲ್‌ ಕಾರ್‌ ಪ್ಲೇ ತುಂಬಾ ಹಿಡಿಸಿದ್ದು ಇದರ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿ ಈ ಕಾರನ್ನು ದಿನಂಪ್ರತಿ ಅವಶ್ಯಕತೆಗಳಿಗೆ ಆರಾಮವಾಗಿ ಉಪಯೋಗಿಸಬಹುದಾಗಿದೆ. ಮಾತ್ರವಲ್ಲದೇ ಇದರ ಹೊರಾಂಗಣ ವಿನ್ಯಾಸವೂ ಆಕರ್ಷಕವಾಗಿದೆ ಎಂದು ಇದೇ ಸಂಧರ್ಭದಲ್ಲಿ ಅವರು ಹೇಳಿದ್ದಾರೆ.

ರಸ್ತೆಯಲ್ಲಿ ಈ ಕಾರಿನಲ್ಲಿ ಹೋಗುವಾಗ ಎಂಥಹವರೂ ಸಹ ಒಮ್ಮೆ ತಿರುಗಿ ನೊಡುತ್ತಾರೆ. ಇದಕ್ಕೆ ಪ್ರಮುಖ ಕಾರಣ ಇದರ ಹೊರಾಂಗಣ ವಿನ್ಯಾಸ ಮತ್ತು ಎಂಜಿ ಕಾಮೆಟ್‌ ಕಾರಿನ ಗಾತ್ರ. ಇದರ ಎರಡು ಡೋರ್‌ನ ಹೊರಾಂಗಣ ವಿನ್ಯಾಸವು ಈ ಕಾರಿಗೆ ಎಕ್ಸ್‌ಕ್ಲ್ಯೂಸಿವ್‌ ಪ್ರೀಮಿಯಂ ಟಚ್‌ ಅನ್ನು ನೀಡುತ್ತದೆ ಎಂಬುದು ಎಂಜಿ ಯ ಅಭಿಪ್ರಾಯ.

ಎಂಜಿ ಯು ಕಾಮೆಟ್‌ ಕಾರಿನ ಬುಕಿಂಗ್‌ ಅನ್ನು ಮೇ ೨೦೨೩ ರಲ್ಲಿ ಆರಂಭವಾಗಿದ್ದು ಇದರ ಮಾರಾಟದ ಸಂಖ್ಯೆಗಳು ಎಷ್ಟೆಂದು ಇಲ್ಲಿಯವರೆಗೂ ಕಂಪನಿ ಹೊರ ಬಿಟ್ಟಿಲ್ಲ. ನಗರ ಪ್ರದೇಶದಲ್ಲಿ ದಿನಂಪ್ರತಿ ಉಪಯೋಗಿಸುವವರಿಗೆ ಈ ಕಾರು ಹೇಳಿ ಮಾಡಿಸಿದ್ದು, ವಿವಿಧ ಬಣ್ಣಗಳಲ್ಲಿ ಈ ಕಾರು ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, July 1, 2023, 19:52 [IST]
English summary
Jahnavi kapoor opens up after driving mg comet
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+