ಬೆಂಗಳೂರು ಟ್ರಾಫಿಕ್ ತಡೆಯಲು ಜಪಾನೀಸ್ ಟೆಕ್ನಾಲಜಿ: ಈ 28 ಜಂಕ್ಷನ್ನಲ್ಲಿ ಟ್ರಾಫಿಕ್ ಕಮ್ಮಿಯಾಗುತ್ತಾ?
ಬೆಂಗಳೂರಿಗರು ಬೆಂಗಳೂರಿನಲ್ಲಿ ಬೆಂಗಳೂರಿಗರಿಂದಲೇ ಅನುಭವಿಸುತ್ತಿರುವ ಅತೀ ದೊಡ್ಡ ಸಮಸ್ಯೆ ಎಂದರೆ ಅದು ಟ್ರಾಫಿಕ್. ಸಾಧಾರಣವಾಗಿ ವಿಶ್ವದಲ್ಲಿ ಎಲ್ಲೆಡೆ ದೂರವನ್ನು ಕಿಲೋ ಮೀಟರ್‌ನಲ್ಲಿ ಅಳೆದರೆ ಭಾರತದ ಬೆಂಗಳೂರಿನಲ್ಲಿ ಮಾತ್ರ ದುರವನ್ನು ಸಮಯದಲ್ಲಿ ಅಳೆಯಲಾಗುತ್ತಿದೆ. ಅಷ್ಟರ ಮಟ್ಟಿಗೆ ಟ್ರಾಫಿಕ್ ಬೆಂಗಳೂರಿನಲ್ಲಿ ತನ್ನ ಪ್ರಾಭಲ್ಯವನ್ನು ಮೆರೆಯುತ್ತಿದೆ.
ಈ ಸಮಸ್ಯೆಯಿಂದ ಕೊಂಚವಾದರೂ ಮುಕ್ತಿ ಪಡೆಯಲು ಸರ್ಕಾರ ಇದೀಗ ಹೊಸ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ಬೆಂಗಳೂರಿನ ಟ್ರಾಫಿಕ್‌ನಿಂದ ಹೊರ ಬರಲು ಸರ್ಕಾರ ಜಾಪನೀಸ್ ಟೆಕ್ನಾಲಜಿಗೆ ಮೊರೆ ಹೋಗುತ್ತಿದೆ. ಬೆಂಗಳೂರು ಮಹಾ ನಗರದ ಕೆಲವು ಸಿಗ್ನಲ್‌ಗಳಲ್ಲಿ ಇದೀಗ ಜಪಾನೀಸ್ ಟೆಕ್ನಾಲಜಿಯನ್ನು ಅಳವಡಿಸಿ ಪರೀಕ್ಷೆಗಳನ್ನು ಮಾಡುತ್ತಿದ್ದು, ಇದರಿಂದ ಎಷ್ಟರ ಮಟ್ಟಿಗೆ ಟ್ರಾಫಿಕ್ ಕಡಿಮೆಯಾಗಲು ಸಹಕಾರಿಯಾಗಿರಲಿದೆ ಎಂದು ನೊಡಬೇಕಿದೆ.

ಮಾಹಿತಿಗಳ ಪ್ರಕಾರ ಈಗಾಗಲೇ ಬೆಂಗಳೂರಿನ ಕೆಲವು ಕಡೆ ಜಪಾನ್ ಟೆಕ್ನಾಲಜಿಯಾದ ಮೋಡೆರಾಟೋ ಅಥವಾ MODERATO ((Management of Origin-Destination-Related Adaptation for Traffic Optimisation) ಅನ್ನು ಅಳವಡಿಸಲಾಗಿದ್ದು, ಪ್ರಮುಖವಾಗಿ ಕೆನ್ಸಿಂಗ್ಟನ್ ರಸ್ತೆ, ಅಲಸೂರು ಬಳಿಯ ಮುರ್ಫಿ ರಸ್ತೆಯ ಬಳಿಯು ಪಾದಾಚಾರಿಗಳಿಗೆ ಮತ್ತು ವಾಹನಗಳಿಗೆ ಸಹಾಯವಾಗಲು ಇದನ್ನು ಅಳವಡಿಸಲಾಗಿದೆ.
ಇನ್ನು ಎಂಜಿ ರೋಡ್, ಹೊಸೂರು ರೋಡ್ ಮತ್ತು ಹಳೆ ಮದ್ರಾಸ್ ರಸ್ತೆ ಸೇರಿದಂತೆ ಬೆಂಗಳೂರಿನ ಸುಮಾರು 28 ದೊಡ್ಡ ದೊಡ್ಡ ಜಂಕ್ಷನ್‌ನಲ್ಲಿ ಇದನ್ನು ಅಳವಡಿಸಲಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಕಾರಣಾತಂರಗಳಿಂದ ಈ ಟೆಕ್ನಾಲಜಿಯನ್ನು ಬಳಸಿರಲಿಲ್ಲ. ಇದೀಗ ಇಷ್ಟು ಜಾಗಗಳಲ್ಲಿ ಈ ಮೋಡರೇಟೋ ಟೆಕ್ನಾಲಜಿಯನ್ನ ಬಳಸಿದ್ದು ಇದದ ಫಲಿತಾಂಶವನ್ನು ಕುತೂಹಲದಿಂದ ಕಾಯುತ್ತಿದ್ದಾರೆ.

ಸದ್ಯಕ್ಕೆ ಮೇಲೆ ತಿಳಿಸಿದ ಜಂಕ್ಷನ್‌ನಲ್ಲಿ ಈ ಟ್ರಾಫಿಕ್ ಸಿಗ್ನಲ್ ಟೈಮರ್‌ಗಳನ್ನು ಫಿಕ್ಸ್ ಮಾಡಿದ್ದು, ಇದರ ಮೂಲಕ ಆ ಜಂಕ್ಷನ್ ಟ್ರಾಫಿಕ್‌ನಲ್ಲಿ ಎಷ್ಟು ವಾಹನಗಳಿವೆ ಎಂದು ಸಂಖ್ಯೆ ರೂಪದಲ್ಲಿ ತಿಳಿಸುತ್ತದೆ. ಈ ಟೆಕ್ನಾಲಜಿಯ ಸಹಾಯದಿಂದ ಅಲ್ಲಿನ ಸಿಗ್ನಲ್‌ನಲ್ಲಿರುವ ವಾಹನಗಳ ಸಂಖ್ಯೆಯ ಆಧಾರದ ಮೇಲೆ ಟ್ರಾಫಿಕ್ ಸಿಗ್ನಲ್‌ಗಳನ್ನು ಬದಲಾಯಿಸುತ್ತವೆ ಎಂದು ತಿಳಿದು ಬಂದಿದೆ. ಇದರಿಂದ ಸಂಚಾರಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂಬುದು ಎಲ್ಲರ ಅಭಿಪ್ರಾಯ.
ಇನ್ನು ಈ ಸಿಸ್ಟಂ ಅನ್ನು ಅಳವಡಿಸಿರುವುದರಿಂದ ಟ್ರಾಫಿಕ್ ಸಿಗ್ನಲ್ ಅನ್ನು ಸುಮಾರು 13 ರಿಂದ 30 ಪರ್ಸೆಂಟ್‌ನಷ್ಟು ಬೇಗ ಕಾರ್ಯ ನಿರ್ವಹಿಸುವಂತೆ ಮಾಡಲಿದ್ದು, ಇದು ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ ಎನ್ನಲಾಗಿದೆ. ಇದು ಕೊಂಚ ಮಟ್ಟಿಗೆ ವಾಹನ ಸವಾರರಿಗೆ ರಿಲೀಫ್ ನೀಡಲಿದ್ದು, ಟ್ರಾಫಿಕ್ ದಟ್ಟಣೆಯನ್ನೂ ಕಡಿಮೆ ಮಾಡಲಿದೆ.
ಬೆಂಗಳೂರಿನ ಟ್ರಾಫಿಕ್‌ನಲ್ಲಿ ಅತೀ ಹೆಚ್ಚು ಕಷ್ಟ ಪಡುವವರೆಂದರೆ ಅದು ಕ್ಯಾಬ್ ಡ್ರೈವರ್‌ಗಳು. ಪ್ರತಿನಿತ್ಯ ತಾವು ಕೆಲಸಕ್ಕೆ ಹೊರಡುವ ಹೊತ್ತಿಗೆ ಎಲ್ಲಾ ವಾಹನಗಳು ರಸ್ತೆ ಮೇಲಿದ್ದು ದೊಡ್ಡ ಸಮಸ್ಯೆಯೇ ಉಂಟಾಗುತ್ತದೆ. ಇದೀ ಕಾರಣದಿಂದ ಹಲವು ಬಾರಿ ಕ್ಯಾಬ್ ಡ್ರೈವರ್‌ಗಳು ಸರಿಯಾದ ಸಮಯಕ್ಕೆ ತಮ್ಮ ಗುರಿಯನ್ನು ತಲುಪಲಾಗದೇ ಇತರರಿಂದ ಬೈಸಿಕೊಂಡಿದ್ದೇ ಹೆಚ್ಚು. ಹಾಗಾಗಿ ಸರ್ಕಾರದ ಇಂತಹ ನಡೆಗಳು ಇವರನ್ನೂ ಸೇರಿ ಹಲವರಿಗೆ ಉಪಯುಕ್ತವಾಗುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications