ಜೀಪ್ ಕಂಪಾಸ್ ಕಾರು ಖರೀದಿಸಿದಕ್ಕೆ ಏಟಿನ ಗಿಫ್ಟ್ ಕೊಟ್ಟ ದೆಹಲಿ ಶೋರೂಂ ಸಿಬ್ಬಂದಿ !!

Written By:

ತಾನು ಖರೀದಿಸಿದ ಜೀಪ್ ಕಂಪಾಸ್ ವಾಹನವು ದೋಷಪೂರಿತವಾಗಿದೆ ಎಂದು ಶೋರೂಂಗೆ ದೂರು ನೀಡಲು ಹೋದ ಗ್ರಾಹಕನಿಗೆ ಶೋರೂಂನ ಮಾಲಿಕೆ ಮತ್ತು ಸಿಬ್ಬಂದಿ ಹಲ್ಲೆ ನೆಡೆಸಿರುವ ವಿಡಿಯೋ ವೈರಲ್ ಆಗಿದೆ.

To Follow DriveSpark On Facebook, Click The Like Button
ಜೀಪ್ ಕಂಪಾಸ್ ಕಾರು ಖರೀದಿಸಿದಕ್ಕೆ, 'ಏಟು' ಗಿಫ್ಟ್ ಕೊಟ್ಟ ದೆಹಲಿ ಶೋರೂಂ ಸಿಬ್ಬಂದಿ !!

ಜೀಪ್ ಇಂಡಿಯಾ ಕಂಪನಿಯ ಜೀಪ್ ಕಂಪಾಸ್ ಕಾರನ್ನು ಭಾರತದಲ್ಲಿ ಕಂಪನಿಯಲ್ಲಿ ಇತ್ತೀಚಿಗಷ್ಟೇ ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಗ್ರಾಹಕರಿಂದಲೂ ಕೂಡ ಅಭೂತಪೂರ್ವಕವಾಗಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗಂತ, ಜೀಪ್ ಕಂಪಾಸ್ ಕಾರಿನಲ್ಲಿ ಲೋಪಗಳೇನೂ ಇರಬಾರದು ಎಂದೇನೂ ಇಲ್ಲವಲ್ಲ !!

ಜೀಪ್ ಕಂಪಾಸ್ ಕಾರು ಖರೀದಿಸಿದಕ್ಕೆ, 'ಏಟು' ಗಿಫ್ಟ್ ಕೊಟ್ಟ ದೆಹಲಿ ಶೋರೂಂ ಸಿಬ್ಬಂದಿ !!

ಹೌದು, ಕಾರು ಎಂದ ಮೇಲೆ ರಿಪೈರಿ ಮಾಡಲೇಬೇಕಾಗುತ್ತದೆ. ಹಳೆಯ ಕಾರು ಪದೇ ಪದೇ ಕೆಟ್ಟು ನಿಲ್ಲುವುದು ಸರ್ವೇಸಾಮಾನ್ಯ. ಆದ್ರೆ, ಕೊಂಡಿರುವ ಹೊಸ ಕಾರಿನಲ್ಲಿ ಲೋಪದೋಷ ಕಂಡು ಬಂದರೆ ಯಾರಿಗೆ ತಾನೇ ಕೋಪ ಬರೋದಿಲ್ಲ ನೀವೇ ಹೇಳಿ.

ಜೀಪ್ ಕಂಪಾಸ್ ಕಾರು ಖರೀದಿಸಿದಕ್ಕೆ, 'ಏಟು' ಗಿಫ್ಟ್ ಕೊಟ್ಟ ದೆಹಲಿ ಶೋರೂಂ ಸಿಬ್ಬಂದಿ !!

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಮ್ಮ ಕನಸಿನ ಕಾರನ್ನು ಖರೀದಿಸಿ ಮನೆಗೆ ತಂದಾಗ ಗ್ರಾಹಕನಿಗೆ ಶಾಕ್ ಕಾದಿತ್ತು. ಖರೀದಿಸಿರುವ ಕಾರಿನಲ್ಲಿ ಉತ್ಪಾದನಾ ಲೋಪ ಕಂಡ ಕಾರು ಮಾಲಿಕನಿಗೆ ಸಿಟ್ಟು ನೆತ್ತಿಗೇರಿತ್ತು. ಮುಂದೆ ಓದಿ.

ಜೀಪ್ ಕಂಪಾಸ್ ಕಾರು ಖರೀದಿಸಿದಕ್ಕೆ, 'ಏಟು' ಗಿಫ್ಟ್ ಕೊಟ್ಟ ದೆಹಲಿ ಶೋರೂಂ ಸಿಬ್ಬಂದಿ !!

ಘಟನೆ ವಿವರ :

ಈ ಘಟನೆಯು ಹೊಸ ದೆಹಲಿಯಲ್ಲಿ ಸಂಭವಿಸಿದ್ದು, ತನ್ನ ಹೊಸ ಜೀಪ್ ಕಂಪಾಸ್ ವಾಹನದ ಉತ್ಪಾದನಾ ದೋಷಗಳನ್ನು ಸರಿಪಡಿಸುವಂತೆ ಜೀಪ್ ಕಂಪಾಸ್ ಶೋರೂಂ ಕದ ತಟ್ಟಿದಾರೆ. ಆದ್ರೆ, ಬಾಗಿಲಿಗೆ ಬಂದ ಗ್ರಾಹಕನಿಗೆ ಸರಿಯಾದ ಸೇವೆ ನೀಡದೆ, ರಿಪೇರಿ ಮಾಡಲು ಸುಮಾರು 15 ದಿನಗಳು ಬೇಕು, ಅಲ್ಲಿಯವರೆಗೆ ಕಾರನ್ನು ಇಲ್ಲಿಯೇ ಬಿಡಬೇಕಾಗುತ್ತದೆ ಎಂದಿದ್ದಾರೆ.

ಜೀಪ್ ಕಂಪಾಸ್ ಕಾರು ಖರೀದಿಸಿದಕ್ಕೆ, 'ಏಟು' ಗಿಫ್ಟ್ ಕೊಟ್ಟ ದೆಹಲಿ ಶೋರೂಂ ಸಿಬ್ಬಂದಿ !!

ಹೊಸದಾಗಿ ತೆಗೆದುಕೊಡಿರುವ ಕಾರನ್ನು ಮನೆಯ ಮುಂದೆ ನಿಲ್ಲಿಸಿಕೊಂಡು ತಮ್ಮ ಸಂಭ್ರಮವನ್ನು ತೋರ್ಪಡಿಸಬೇಕಾದ ಸಮಯದಲ್ಲಿ ಈ ರೀತಿಯ ತೊಂದರೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಗ್ರಾಹಕ, ಸಿಬ್ಬಂದಿಯ ಹತ್ತಿರ, ಕಾರನ್ನು ಅಷ್ಟೊಂದು ದಿನ ಬಿಡಬೇಕೆ ? ಎಂದು ಪ್ರೆಶ್ನಿಸಿದ್ದಾರೆ.

Recommended Video
Jeep Dealership Executives In Mumbai Beat Up Man Inside Showroom
ಜೀಪ್ ಕಂಪಾಸ್ ಕಾರು ಖರೀದಿಸಿದಕ್ಕೆ, 'ಏಟು' ಗಿಫ್ಟ್ ಕೊಟ್ಟ ದೆಹಲಿ ಶೋರೂಂ ಸಿಬ್ಬಂದಿ !!

ಈ ಪ್ರೆಶ್ನೆಗೆ ಉಡಾಫೆ ಉತ್ತರ ನೀಡಿದ ಸಿಬ್ಬಂದಿ, ನಿಮ್ಮ ಸಮಸ್ಯೆ ಸರಿಯಾಗಬೇಕೆಂದರೆ ನೀವು ರೀತಿ ಮಾಡಲೇ ಬೇಕು ಎಂದಿದ್ದಾರೆ. ಮೊದಲೇ ಕೋಪಗೊಂಡಿದ್ದ ಕಾರು ಮಾಲಿಕನಿಗೆ ಈ ಉತ್ತರ ಮತ್ತಷ್ಟು ಕೋಪ ತರಿಸಿದೆ.

ತಪ್ಪದೇ ಓದಿ-ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಜೀಪ್ ಕಂಪಾಸ್ ಕಾರು ಖರೀದಿಸಿದಕ್ಕೆ, 'ಏಟು' ಗಿಫ್ಟ್ ಕೊಟ್ಟ ದೆಹಲಿ ಶೋರೂಂ ಸಿಬ್ಬಂದಿ !!

ವಿಡಿಯೋ ಗಮನಿಸಿದಂತೆ, ಈ ವಿಚಾರವಾಗಿ ಶೋರೂಂನ ಸಿಬ್ಬಂದಿ ಮತ್ತು ಗ್ರಾಹಕನ ಮದ್ಯೆ ವಾಗ್ವಾದ ನೆಡೆದಿದ್ದು, ಇಬ್ಬರೂ ಸಹ ಏರು ಧ್ವನಿಯಲ್ಲಿ ಜಗಳಕ್ಕಿಳಿದ್ದಿದ್ದಾರೆ.

ಜೀಪ್ ಕಂಪಾಸ್ ಕಾರು ಖರೀದಿಸಿದಕ್ಕೆ, 'ಏಟು' ಗಿಫ್ಟ್ ಕೊಟ್ಟ ದೆಹಲಿ ಶೋರೂಂ ಸಿಬ್ಬಂದಿ !!

ಸಾಕಷ್ಟು ಬಾರಿ ಅಸಭ್ಯ ರೀತಿಯಲ್ಲಿ ನಿಂದಿಸಿರುವುದೂ ಕೂಡ ವಿಡಿಯೋನಲ್ಲಿ ನೋಡಬಹುದಾಗಿದೆ. ಗ್ರಾಹಕನನ್ನು ಸಂತೈಸಿ ಶೋರೂಂ ಕ್ಯಾಬಿನ್ ಒಳಗೆ ಕರೆದುಕೊಂಡು ಹೋದರೂ ಸಹ, ಸಿಬ್ಬಂದಿಯು ಅಲ್ಲಿಗೂ ಬಂದು ವಾಗ್ವಾದ ನೆಡೆಸಿದ್ದಾರೆ.

ಜೀಪ್ ಕಂಪಾಸ್ ಕಾರು ಖರೀದಿಸಿದಕ್ಕೆ, 'ಏಟು' ಗಿಫ್ಟ್ ಕೊಟ್ಟ ದೆಹಲಿ ಶೋರೂಂ ಸಿಬ್ಬಂದಿ !!

ಈ ಮಾತಿನ ಚಕಮಕಿಯೂ ಮತ್ತೊಂದು ಹಂತಕ್ಕೆ ಹೋಗಿದ್ದು, ಕೊನೆಗೆ ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದು ನಿಂತಿರುವುದು ದುರಾದೃಷ್ಟಕರ ವಿಚಾರ ಎನ್ನಬಹುದು. ನಿಖರವಾಗಿ ಏನಾಯಿತು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಘಟನೆಯ ಕುರಿತು ಶೀಘ್ರದಲ್ಲಿಯೇ ಅಧಿಕೃತ ಹೇಳಿಕೆಯನ್ನು ಜೀಪ್ ನೀಡಲಿದೆ ಎಂಬುದನ್ನು ನಾವು ನಿರೀಕ್ಷಿಸುತ್ತೇವೆ.

ತಪ್ಪದೇ ಓದಿ-ಬೆಂಗಳೂರಿನಲ್ಲಿ ಕ್ಯಾಬ್ ಸೇವೆಗಳನ್ನು ಆರಂಭಿಸಿದ 'ನಮ್ಮ ಟೈಗರ್' ಸ್ಪೆಷಲ್ ಏನು?

Read more on jeep ಜೀಪ್
English summary
A video going viral on social media shows executives and management of the Landmark Jeep dealership in Delhi taking violent action against a person.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark