ಕೆಟ್ಟು ನಿಂತ ಕಾರಿಗೆ ಡೀಲರ್ 12 ಲಕ್ಷ ಬಿಲ್: ವಿಮಾ ಕಂಪನಿ ಮಧ್ಯಸ್ಥಿಕೆಯಿಂದ ಕೇವಲ 1 ಲಕ್ಷಕ್ಕೆ SUV ರೆಡಿ

ಇತ್ತೀಚೆಗೆ ಕುಟುಂಬವೊಂದು ತಮ್ಮ ಜೀಪ್ ಕಂಪಾಸ್ ಮತ್ತು ಮೆರಿಡಿಯನ್‌ನಲ್ಲಿ ಲೇಹ್ ಲಡಾಖ್‌ಗೆ ಪ್ರವಾಸವನ್ನು ಕೈಗೊಂಡಿದ್ದರು. ಪ್ರಯಾಣದ ವೇಳೆ ಜೀಪ್ ಮೆರಿಡಿಯನ್‌ಗೆ ಅಂಡರ್ ಕ್ಯಾರೇಜ್ ಹಾನಿಯಾಗಿದ್ದು, ಇದನ್ನು ದುರಸ್ತಿ ಮಾಡಲು ಬರೋಬ್ಬರಿ 12 ಲಕ್ಷ ರೂ. ವೆಚ್ಚವಾಗುವುದಾಗಿ ತಿಳಿಸಿದ್ದಾರೆ. ಆದರೆ ಬಳಿಕ ಕೇವಲ 1.1 ಲಕ್ಷಕ್ಕೆ ರಿಪೇರಿ ಮಾಡಲಾಗಿದೆ.

ಈ ಅಸಾಧಾರಣ ಬಿಲ್‌ ಅಸಾಧಾರಣವಾಗಿ ಕಡಿಮೆಯಾಗಿದ್ದು ವಿಮಾ ಕಂಪನಿಯ ಮಧ್ಯ ಪ್ರವೇಶದಿಂದ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಕುಟುಂಬದ ಸದಸ್ಯರೊಬ್ಬರು ಹಂಚಿಕೊಂಡಿದ್ದಾರೆ. ತಮ್ಮ ಕುಟುಂಬ ಇತ್ತೀಚೆಗೆ ಕಂಪಾಸ್ ಮತ್ತು ಮೆರಿಡಿಯನ್ ಎರಡು ಜೀಪ್ SUV ಗಳಲ್ಲಿ ಲೇಹ್ ಲಡಾಖ್‌ಗೆ ಪ್ರವಾಸವನ್ನು ಕೈಗೊಂಡಿದ್ದರು. ಕಂಪಾಸ್‌ನಲ್ಲಿ ಈಗಾಗಲೇ ಇಂತಹ ಹಲವು ಪ್ರವಾಸಗಳನ್ನು ಮಾಡಲಾಗಿದೆ.

jeep-repair-dealer-bills-12-lakhs-insurance-company-helped

ಜೊತೆಗೆ ಜೀಪ್ ಕಂಪಾಸ್ ಓಡಿಸುತ್ತಿದ್ದ ಚಾಲಕ ಈಗಾಗಲೇ ಇಂತಹ ಪ್ರದೇಶಗಳಲ್ಲಿ ಓಡಿಸಿರುವ ಅನುಭವವಿದೆ. ಇನ್ನು ಮೆರಿಡಿಯನ್ ಚಾಲಕ ಕೂಡ ಎಲ್ಲಾ ರೀತಿಯ ಪರಿಸ್ಥಿತಿಗಳಲ್ಲೂ ಉತ್ತಮವಾಗಿ ನಿರ್ವಹಿಸಬಲ್ಲ ಅನುಭವಿ ಚಾಲಕನಾಗಿದ್ದಾನೆ. ಆದ್ರೆ ಇಲ್ಲಿ ಜೀಪ್ ಮೆರಿಡಿಯನ್ ಹೊಸ ಕಾರಾಗಿದ್ದು ಕೇವಲ 10,000 ಕಿ.ಮೀ ಸಂಚರಿಸಿತ್ತು. ಲೇಹ್ ಲಡಾಖ್‌ನಂತಹ ಪ್ರದೇಶಗಳಿಗೆ ಕೊಂಡೊಯ್ಯುತ್ತಿರುವುದು ಇದೇ ಮೊದಲು.

ಪ್ರಯಾಣದಲ್ಲಿ ಕಾರುಗಳು ಮತ್ತು ಚಾಲಕರಿಗೆ ಯಾವುದೇ ಸಮಸ್ಯೆ ಇಲ್ಲ, ಎಲ್ಲವೂ ಸರಿಯಾಗಿ ಮುಂದುವರೆಯುತ್ತಿದ್ದವು. ಅವರು ಲಡಾಖ್ ಬಳಿಯ ಎಲ್ಲಾ ಜನಪ್ರಿಯ ಸ್ಥಳಗಳನ್ನು ಸುತ್ತಿದ್ದರು. ಆದರೆ ಟ್ಯಾಂಗ್ಟ್ಸೆಯನ್ನು ದಾಟಿದಾಗ ಪ್ರಯಾಣವು ಅನಿರೀಕ್ಷಿತ ತಿರುವು ಪಡೆದುಕೊಂಡಿತು. ಕೊಳಕು ಹಾದಿಯಲ್ಲಿ 25-30 ಕಿ.ಮೀ ಸಾಧಾರಣ ವೇಗದಲ್ಲಿ ಪ್ರಯಾಣಿಸುತ್ತಿದ್ದಾಗ, ಮೆರಿಡಿಯನ್‌ನಲ್ಲಿ ಇದ್ದಕ್ಕಿದ್ದಂತೆ ಕಂಪನಗಳು ಮತ್ತು ಶಬ್ದಗಳು ಕೇಳಿಬಂದಿವೆ.

jeep-repair-dealer-bills-12-lakhs-insurance-company-helped

ಜೀಪ್ ಮೆರಿಡಿಯನ್‌ಗಿಂತ ಮುಂದೆ ಹೋಗುತ್ತಿದ್ದ ಕಂಪಾಸ್ ಅದೇ ಭೂಪ್ರದೇಶದಲ್ಲಿ ಸರಾಗವಾಗಿ ಹಾದು ಹೋಗಿತ್ತು. ಆದ್ರೆ ಮೆರಿಡಿಯನ್ ಮಾತ್ರ ಗಂಭೀರ ಸಮಸ್ಯೆಯಾಗಿರುವ ಮುನ್ಸೂಚನೆಯನ್ನು ನೀಡಿತ್ತು. ಕಾರಿನ ಕೆಳಭಾಗದಲ್ಲಿ ಪರಿಶೀಲಿಸಿದ ನಂತರ, ಮೆರಿಡಿಯನ್‌ನ ಅಂಡರ್‌ಕ್ಯಾರೇಜ್‌ನಲ್ಲಿ ಕೆಲವು ಗೀರುಗಳು ಮತ್ತು ಗಂಭೀರ ಹಾನಿಗಳು ಕಂಡುಬಂದಿವೆ.

ಇಂತಹ ಪರಿಸ್ಥಿತಿಗಳಲ್ಲಿ ವಾಹನಗಳನ್ನು ಹಾಗೆಯೇ ಮುಂದುವರಿಸಿದರೆ ತೀವ್ರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅರಿತ ಚಾಲಕರು, ಸ್ಥಳದಲ್ಲೇ ಕಾರನ್ನು ಬಿಡಲು ನಿರ್ಧರಿಸಿದ್ದರು. ಕುಟುಂಬವು ಅವರ ಪ್ರಯಾಣವನ್ನು ನಿಲ್ಲಿಸಿ ಹಿಂದಿರುಗಲು ಮಿಲಿಟರಿಯಿಂದ ಸಹಾಯ ಪಡೆಯಿತು. ಕುಟುಂಬ ಶ್ರೀನಗರಕ್ಕೆ ತಲುಪಿ ಅಲ್ಲಿಂದ ತಮ್ಮ ಮನೆಗೆ ತಲುಪಿದೆ.

jeep-repair-dealer-bills-12-lakhs-insurance-company-helped

ನಂತರ ಅವರ ಕಾರನ್ನು ಫ್ಲಾಟ್‌ಬೆಡ್ ಟ್ರೈಲರ್‌ನಲ್ಲಿ ಶ್ರೀನಗರದ ವರ್ಕ್‌ಶಾಪ್‌ಗೆ ಕೊಂಡೊಯ್ಯಲಾಯಿತು. ಡೀಲರ್‌ಶಿಪ್ ತಲುಪಿದ ನಂತರ ಎಲ್ಲವನ್ನು ಪರಿಶೀಲಿಸಿದರು. ರಿಪೇರಿ ಮಾಡಲು ಸುಮಾರು 12 ಲಕ್ಷ ರೂ. ಖರ್ಚಾಗುವುದು ಎಂದು ಮಾಲೀಕರಿಗೆ ಹೇಳಿದ್ದಾರೆ. ಮಾಲೀಕರಿಗೆ ಇದನ್ನು ಕೇಳತ್ತಿದ್ದಂತೆ ಒಮ್ಮೆಲೆ ತಲೆ ತಿರುಗಿದಂತಾಗಿದೆ. ವಾಹನದ ಎಲ್ಲಾ ಎಸಿ ಪೈಪ್‌ಗಳು ಮತ್ತು ಇತರ ಅಂಡರ್‌ಕ್ಯಾರೇಜ್ ಭಾಗಗಳ ಟನ್ ಸೇರಿದಂತೆ ವ್ಯಾಪಕವಾದ ಪಟ್ಟಿಯನ್ನು ನೀಡಿದ್ದಾರೆ.

ಈ ಉಲ್ಲೇಖವನ್ನು ಪಡೆದ ನಂತರ, ವಿಮಾ ಕಂಪನಿ ಇಲ್ಲಿ ವಿಷಯಕ್ಕೆ ಪ್ರವೇಶಿಸಿತು. ವಿಮಾ ಕಂಪನಿಯವರು ತಮ್ಮ ಅಧಿಕಾರಿಯನ್ನು ಕಳುಹಿಸಿ ವಾಹನ ತಪಾಸಣೆ ನಡೆಸಿ ಬಿಲ್ ಅನ್ನು 4 ಲಕ್ಷ ರೂ.ಗೆ ಇಳಿಸಿದ್ದಾರೆ. ನಂತರ ವರ್ಕ್‌ಶಾಪ್ ವಾಹನದ ಬಿಡಿಭಾಗಗಳನ್ನು ಆರ್ಡರ್ ಮಾಡಿದ್ದರು. ಆದರೆ ಇಲ್ಲಿ ವರ್ಕ್‌ಶಾಪ್ ಅವರು ತಪ್ಪಾದ ಬಿಡಿಭಾಗಗಳನ್ನು ಆರ್ಡರ್ ಮಾಡಿದ್ದರು.

ಕೊನೆಗೂ ವಾಹನಕ್ಕೆ ಸರಿಹೊಂದುವ ಸರಿಯಾದ ಭಾಗಗಳನ್ನು ಪಡೆಯಲು ಮತ್ತು ಅವುಗಳನ್ನು ವಾಹನಕ್ಕೆ ಅಳವಡಿಸಲು ಕೆಲ ವಾರಗಳನ್ನು ತೆಗೆದುಕೊಂಡರು. ಅಂತಿಮವಾಗಿ, ಸುಮಾರು 3 ತಿಂಗಳ ನಂತರ ಕಾರು ಮೊದಲಿನಂತೆ ರೆಡಿಯಾಗಿದೆ. ಒಂದು ವೇಳೆ ವಿಮಾ ಕಂಪನಿ ಮಧ್ಯ ಪ್ರವೇಶಿಸದೇ ಇದ್ದಿದ್ದರೆ 12 ಲಕ್ಷ ರೂ.ಗಳ ಬೃಹತ್ ಬಿಲ್ ಬರುತ್ತಿತ್ತು ಎಂದು ಮಾಲೀಕ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಒಟ್ಟಾರೆ ಬಿಲ್ 1.1 ಲಕ್ಷಕ್ಕೆ ಇಳಿದು ಸಂಪೂರ್ಣವಾಗಿ ವಿಮಾ ಕಂಪನಿಯೇ ಭರಿಸಿದೆ ಎಂದರು.

Article Published On: Saturday, September 23, 2023, 17:06 [IST]
English summary
Jeep repair dealer bills 12 lakhs insurance company helped
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+