ಆಪ್ ರೋಡಿಂಗ್ ವೇಳೆ ಸಂಕಷ್ಟ- ಜೀಪ್ ರ‍್ಯಾಂಗಲರ್ ರಕ್ಷಿಸಿದ ಮಹೀಂದ್ರಾ ಥಾರ್

Written By:

ಆಪ್ ರೋಡಿಂಗ್ ವಿಭಾಗದಲ್ಲಿ ಜನಪ್ರಿಯತೆ ಸಾಧಿಸಿರುವ ಜೀಪ್ ರ‍್ಯಾಂಗಲರ್ ಕಾರು ಕೌಶಲ್ಯ ಪ್ರದರ್ಶನ ವೇಳೆ ಕೇಸರಿನಲ್ಲಿ ಸಿಲುಕಿಕೊಂಡು ಮಹೀಂದ್ರಾ ಥಾರ್ ಮೂಲಕ ರಕ್ಷಣೆ ಮಾಡಿರುವ ಘಟನೆ ನಡೆದಿದ್ದು, ರಕ್ಷಣೆ ಮಾಡುತ್ತಿರುವವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

To Follow DriveSpark On Facebook, Click The Like Button
ಆಪ್ ರೋಡಿಂಗ್ ವೇಳೆ ಸಂಕಷ್ಟ- ಜೀಪ್ ರ‍್ಯಾಂಗಲರ್ ರಕ್ಷಿಸಿದ ಮಹೀಂದ್ರಾ ಥಾರ್

ಇದು ಜೀಪ್ ಆಪ್ ಪ್ರಿಯರಿಗೆ ಸ್ಪಲ್ಪ ಮಟ್ಟಿಗೆ ಹಿನ್ನಡೆ ಎಂದೇ ಹೇಳಬಹುದು. ಯಾಕೇಂದ್ರೆ ಕೇಸರಿನಲ್ಲಿ ಸಿಲುಕಿ ಹೊರ ಬರಲು ಸಾಧ್ಯವಾಗದ ಜೀಪ್ ರ‍್ಯಾಂಗಲರ್ ಅನ್ನು ಮಹೀಂದ್ರಾ ಥಾರ್ ರಕ್ಷಣೆ ಮಾಡಿದ್ದು, ಆಪ್ ರೋಂಡಿಗ್ ಗುಣಲಕ್ಷಣಗಳಲ್ಲಿ ಜೀಪ್ ರ‍್ಯಾಂಗಲರ್ ಅನ್ನು ಮಹೀಂದ್ರಾ ಥಾರ್ ಹಿಂದಿಕ್ಕಲಿದೆಯಾ ಎನ್ನುವ ಪ್ರಶ್ನೆಗಳು ಎದುರಾಗುತ್ತವೆ.

ಆಪ್ ರೋಡಿಂಗ್ ವೇಳೆ ಸಂಕಷ್ಟ- ಜೀಪ್ ರ‍್ಯಾಂಗಲರ್ ರಕ್ಷಿಸಿದ ಮಹೀಂದ್ರಾ ಥಾರ್

ಅಂದಹಾಗೆ ಕೇರಳದ ಎರ್ನಾಕುಲಂ ಜಿಲ್ಲೆಯ ಭೂತಾನ್ ಕಾಥಾನಲ್ಲಿ ಮೊನ್ನೆಯಷ್ಟೇ ನಡೆದ ಮ್ಯಾಡ್ಫೆಟ್ 3 ಎಂಬ ಆಪ್ ರೋಡಿಂಗ್ ಪ್ರದರ್ಶನ ವೇಳೆ ರ‍್ಯಾಂಗಲರ್ ಕೇಸರಿನಲ್ಲಿ ಸಿಲುಕಿಗೊಂಡು ಹೊರಬರಲು ಭಾರೀ ಹರಸಾಹಸ ಪಡಬೇಕಾಯಿತು.

ಆಪ್ ರೋಡಿಂಗ್ ವೇಳೆ ಸಂಕಷ್ಟ- ಜೀಪ್ ರ‍್ಯಾಂಗಲರ್ ರಕ್ಷಿಸಿದ ಮಹೀಂದ್ರಾ ಥಾರ್

ಒಂದು ಹಂತದಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಿದರೂ ಮೇಲೆತ್ತಲು ಹಲವು ಮಾರ್ಗಗಳನ್ನು ಕೈಗೊಳ್ಳಲಾಯ್ತು. ಆದ್ರೂ ಕೈಗೊಂಡ ಪ್ರಯತ್ನಗಳು ಫಲ ನೀಡದ ಹಿನ್ನೆಲೆ ಮಹೀಂದ್ರಾ ಥಾರ್ ಮೂಲಕ ಜೀಪ್ ರ‍್ಯಾಂಗಲರ್ ಮೇಲಕ್ಕೆ ಎಳೆಯಲಾಯ್ತು.

ಆಪ್ ರೋಡಿಂಗ್ ವೇಳೆ ಸಂಕಷ್ಟ- ಜೀಪ್ ರ‍್ಯಾಂಗಲರ್ ರಕ್ಷಿಸಿದ ಮಹೀಂದ್ರಾ ಥಾರ್

ಈ ವೇಳೆ ಸ್ಥಳದಲ್ಲಿ ನೆರದಿದ್ದ ನೂರಾರು ಜನ ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಹಿನ್ನೆಲೆ ಜೀಪ್ ರ‍್ಯಾಂಗಲರ್ ಆಪ್ ರೋಡಿಂಗ್ ಸಾಮರ್ಥ್ಯ ಬಗ್ಗೆ ಚರ್ಚೆಗಳು ಶುರುವಾಗಿದ್ದು, ಮಹೀಂದ್ರಾ ಥಾರ್ ಮೆಚ್ಚುಗೆಗೆ ಪಾತ್ರವಾಗಿದೆ.

ಆಪ್ ರೋಡಿಂಗ್ ವೇಳೆ ಸಂಕಷ್ಟ- ಜೀಪ್ ರ‍್ಯಾಂಗಲರ್ ರಕ್ಷಿಸಿದ ಮಹೀಂದ್ರಾ ಥಾರ್

ಅಸಲಿಗೆ ಥಾರ್‌ಗಿಂತ ಹೆಚ್ಚಿನ ಎಂಜಿನ್ ಶಕ್ತಿ ಹೊಂದಿರುವ ರ‍್ಯಾಂಗಲರ್ 2.8-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ಥಾರ್ ಮಾದರಿಯು 2.5-ಲೀಟರ್ ಸಿಆರ್‍‌ಡಿಇ ಡೀಸೆಲ್ ಎಂಜಿನ್ ಹೊಂದಿದೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ಜೀಪ್ ರ‍್ಯಾಂಗಲರ್ ಮತ್ತು ಮಹೀಂದ್ರಾ ಥಾರ್ ವಿಡಿಯೋ ಇಲ್ಲಿದೆ ವೀಕ್ಷಿಸಿ.

English summary
Read in Kannada about Mahindra Thar pulls out Jeep Wrangler Which Was Stuck.
Story first published: Wednesday, September 6, 2017, 17:42 [IST]
Please Wait while comments are loading...

Latest Photos