ಭಾರತದಲ್ಲಿ ವಿಮಾನಗಳಿಗೆ ತುಂಬಿಸುವ ಇಂಧನದ ಬೆಲೆಗಿಂತ ವಾಹನಗಳಿಗೆ ತುಂಬಿಸುವ ಇಂಧನದ ಬೆಲೆಯೇ ಹೆಚ್ಚು

ಕಳೆದ ಕೆಲವು ತಿಂಗಳುಗಳಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ವಿಪರೀತವಾಗಿ ಏರಿಕೆಯಾಗಿವೆ. ಗಗನಕ್ಕೇರಿರುವ ಇಂಧನ ಬೆಲೆಯಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇತ್ತೀಚಿನ ದರ ಏರಿಕೆಯ ನಂತರ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 109.53 ಗಳಾದರೆ, ಪ್ರತಿ ಲೀಟರ್ ಡೀಸೆಲ್ ಬೆಲೆ ರೂ. 100.37 ಗಳಾಗಿದೆ. ಇದೇ ವೇಳೆ ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 111 ರ ಗಡಿ ದಾಟಿದೆ.

ಭಾರತದಲ್ಲಿ ವಿಮಾನಗಳಿಗೆ ತುಂಬಿಸುವ ಇಂಧನದ ಬೆಲೆಗಿಂತ ವಾಹನಗಳಿಗೆ ತುಂಬಿಸುವ ಇಂಧನದ ಬೆಲೆಯೇ ಹೆಚ್ಚು

ಪೆಟ್ರೋಲ್, ಡೀಸೆಲ್ ಬೆಲೆಗಿಂತ ದೇಶದಲ್ಲಿ ವಿಮಾನಗಳಿಗೆ ತುಂಬಿಸುವ ಇಂಧನ ಅಂದರೆ ಜೆಟ್ ಇಂಧನದ ಬೆಲೆ ತುಂಬಾ ಕಡಿಮೆ ಎಂದು ತಿಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ದೆಹಲಿಯಲ್ಲಿ ಒಂದು ಲೀಟರ್ ಜೆಟ್ ಇಂಧನದ ಬೆಲೆ ರೂ. 79 ಗಳಾಗಿದೆ. ಈ ಮೂಲಕ ಪ್ರತಿ ಲೀಟರ್ ಜೆಟ್ ಇಂಧನವನ್ನು ಪೆಟ್ರೋಲ್ ಬೆಲೆಗಿಂತ ಸುಮಾರು 33% ನಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ.

ಭಾರತದಲ್ಲಿ ವಿಮಾನಗಳಿಗೆ ತುಂಬಿಸುವ ಇಂಧನದ ಬೆಲೆಗಿಂತ ವಾಹನಗಳಿಗೆ ತುಂಬಿಸುವ ಇಂಧನದ ಬೆಲೆಯೇ ಹೆಚ್ಚು

ಜೆಟ್ ಇಂಧನ ಎಂದರೇನು ?

ಜೆಟ್ ಇಂಧನವು ವಿಮಾನವನ್ನು ಚಾಲನೆಗೊಳಿಸಲು ಬಳಸುವ ಇಂಧನವಾಗಿದೆ. ಜೆಟ್ ಇಂಧನವನ್ನು ಎಲ್ಲಾ ರೀತಿಯ ನಾಗರಿಕ ವಿಮಾನಯಾನ ವಿಮಾನಗಳಲ್ಲಿ, ಮಿಲಿಟರಿ ವಿಮಾನಗಳಲ್ಲಿ ಹಾಗೂ ಹೆಲಿಕಾಪ್ಟರ್‌ಗಳಲ್ಲಿ ಬಳಸಲಾಗುತ್ತದೆ. ಜೆಟ್ ಇಂಧನವು ಸಹ ಪೆಟ್ರೋಲ್, ಡೀಸೆಲ್‌ನಂತೆಯೇ ಒಂದು ರೀತಿಯ ಇಂಧನವಾಗಿದೆ. ಆದರೆ ಈ ಇಂಧನವನ್ನು ಬಳಸಿ ಸಾಮಾನ್ಯ ವಾಹನಗಳನ್ನು ಚಾಲನೆ ಮಾಡಲು ಸಾಧ್ಯವಿಲ್ಲ.

ಭಾರತದಲ್ಲಿ ವಿಮಾನಗಳಿಗೆ ತುಂಬಿಸುವ ಇಂಧನದ ಬೆಲೆಗಿಂತ ವಾಹನಗಳಿಗೆ ತುಂಬಿಸುವ ಇಂಧನದ ಬೆಲೆಯೇ ಹೆಚ್ಚು

ಜೆಟ್ ಇಂಧನದ ಬೆಲೆ ಕಡಿಮೆಯಾಗಲು ಕಾರಣ

ಜೆಟ್ ಇಂಧನದ ಮೇಲೆ ಕಡಿಮೆ ತೆರಿಗೆ ವಿಧಿಸುವ ಕಾರಣಕ್ಕೆ ಅದರ ಬೆಲೆ ಕಡಿಮೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್‌ ಮೇಲೆ ಶೇಕಡಾ 60 ರಷ್ಟು ಹಾಗೂ ಪ್ರತಿ ಲೀಟರ್ ಡೀಸೆಲ್‌ ಮೇಲೆ ಶೇಕಡಾ 54 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಕೇಂದ್ರ ಸರ್ಕಾರವು ಈಗ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ರೂ. 32.80 ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ ರೂ. 31.80 ರಷ್ಟು ಅಬಕಾರಿ ಸುಂಕವನ್ನು ವಿಧಿಸುತ್ತದೆ.

ಭಾರತದಲ್ಲಿ ವಿಮಾನಗಳಿಗೆ ತುಂಬಿಸುವ ಇಂಧನದ ಬೆಲೆಗಿಂತ ವಾಹನಗಳಿಗೆ ತುಂಬಿಸುವ ಇಂಧನದ ಬೆಲೆಯೇ ಹೆಚ್ಚು

ಪೆಟ್ರೋಲ್, ಡೀಸೆಲ್ ಚಿಲ್ಲರೆ ಬೆಲೆಯನ್ನು ರಾಜ್ಯ ಸರ್ಕಾರಗಳು ತೆರಿಗೆ ವಿಧಿಸಿದ ನಂತರ ನಿಗದಿ ಪಡಿಸಲಾಗುತ್ತದೆ. ಇವುಗಳಿಗೆ ಹೋಲಿಸಿದರೆ, ಪ್ರತಿ ಲೀಟರ್ ಜೆಟ್ ಇಂಧನದ ಬೆಲೆ ರೂ. 79 ಗಳಾಗಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಜೆಟ್ ಇಂಧನದ ಮೇಲೆಯೂ ತೆರಿಗೆ ವಿಧಿಸುತ್ತವೆ. ಆದರೆ ಈ ತೆರಿಗೆ ಪ್ರಮಾಣವು ಪೆಟ್ರೋಲ್, ಡೀಸೆಲ್ ಗಿಂತ ತೀರಾ ಕಡಿಮೆ.

ಭಾರತದಲ್ಲಿ ವಿಮಾನಗಳಿಗೆ ತುಂಬಿಸುವ ಇಂಧನದ ಬೆಲೆಗಿಂತ ವಾಹನಗಳಿಗೆ ತುಂಬಿಸುವ ಇಂಧನದ ಬೆಲೆಯೇ ಹೆಚ್ಚು

ಕೇಂದ್ರ ಸರ್ಕಾರವು ಜೆಟ್ ಇಂಧನದ ಮೇಲೆ ಶೇಕಡಾ 11 ರಷ್ಟು ಅಬಕಾರಿ ಸುಂಕವನ್ನು ವಿಧಿಸುತ್ತದೆ. ಆದರೆ ಜೆಟ್ ಇಂಧನದ ಮೇಲೀನ ವ್ಯಾಟ್ ದರವನ್ನು 0 - 30% ವರೆಗೂ ನಿಗದಿಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಭಾರತದಲ್ಲಿ ಇಂಧನ ಬೆಲೆಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ ಸುಮಾರು 86 ಡಾಲರ್ ಗಳಿಗೆ ಏರಿಕೆಯಾಗಿದೆ.

ಭಾರತದಲ್ಲಿ ವಿಮಾನಗಳಿಗೆ ತುಂಬಿಸುವ ಇಂಧನದ ಬೆಲೆಗಿಂತ ವಾಹನಗಳಿಗೆ ತುಂಬಿಸುವ ಇಂಧನದ ಬೆಲೆಯೇ ಹೆಚ್ಚು

ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ಬೆಲೆ ಏರಿಕೆಯ ಪರಿಣಾಮವು 20 - 25 ದಿನಗಳ ನಂತರ ಭಾರತದಲ್ಲಿ ಗೋಚರಿಸುತ್ತದೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಲು ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುವುದೇ ಕಾರಣವೆಂದು ಸರ್ಕಾರ ಹೇಳುತ್ತದೆ. ತೈಲ ಕಂಪನಿಗಳು ಅಂತರ್ ರಾಷ್ಟ್ರೀಯ ಬೆಲೆಗೆ ಅನುಗುಣವಾಗಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ನಿಗದಿಪಡಿಸುತ್ತವೆ.

ಭಾರತದಲ್ಲಿ ವಿಮಾನಗಳಿಗೆ ತುಂಬಿಸುವ ಇಂಧನದ ಬೆಲೆಗಿಂತ ವಾಹನಗಳಿಗೆ ತುಂಬಿಸುವ ಇಂಧನದ ಬೆಲೆಯೇ ಹೆಚ್ಚು

ಆದರೆ ಪೆಟ್ರೋಲ್, ಡೀಸೆಲ್ ಮೇಲೆ 50% ಗಿಂತ ಹೆಚ್ಚು ತೆರಿಗೆ ವಿಧಿಸಲಾಗುತ್ತದೆ. ಈ ಪ್ರಮಾಣವನ್ನು ಕಡಿಮೆ ಮಾಡಿದರೆ ಭಾರತದಲ್ಲಿ ಇಂಧನ ಬೆಲೆಗಳು ಕಡಿಮೆಯಾಗುತ್ತವೆ. ಆದರೆ ಸರ್ಕಾರವು ಈ ಪ್ರಮಾಣವನ್ನು ಕಡಿಮೆ ಮಾಡುವ ಮನಸ್ಥಿತಿಯಲ್ಲಿಲ್ಲ. ಭಾರತದಲ್ಲಿ ಕಳೆದ ಮೂರು ವಾರಗಳಲ್ಲಿ 15 ಬಾರಿ ಬೆಲೆ ಏರಿಕೆ ಮಾಡಲಾಗಿದೆ ಎಂದು ವರದಿಗಳಾಗಿವೆ.

ಭಾರತದಲ್ಲಿ ವಿಮಾನಗಳಿಗೆ ತುಂಬಿಸುವ ಇಂಧನದ ಬೆಲೆಗಿಂತ ವಾಹನಗಳಿಗೆ ತುಂಬಿಸುವ ಇಂಧನದ ಬೆಲೆಯೇ ಹೆಚ್ಚು

ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಂತಹ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಭಾರತದಲ್ಲಿ ಇಂಧನಗಳ (ಪೆಟ್ರೋಲ್ ಹಾಗೂ ಡೀಸೆಲ್) ಬೆಲೆಯನ್ನು ದಿನ ನಿತ್ಯ ಪರಿಷ್ಕರಿಸುತ್ತವೆ. ಈ ಬೆಲೆಗಳನ್ನು ಅಂತರ್ ರಾಷ್ಟ್ರೀಯ ಕಚ್ಚಾ ತೈಲ ಬೆಲೆ ಹಾಗೂ ರೂಪಾಯಿ ಡಾಲರ್ ವಿನಿಮಯ ದರಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಭಾರತದಲ್ಲಿ ವಿಮಾನಗಳಿಗೆ ತುಂಬಿಸುವ ಇಂಧನದ ಬೆಲೆಗಿಂತ ವಾಹನಗಳಿಗೆ ತುಂಬಿಸುವ ಇಂಧನದ ಬೆಲೆಯೇ ಹೆಚ್ಚು

ಹೊಸ ತೈಲ ಬೆಲೆಗಳು ಪ್ರತಿ ದಿನ 6 ಗಂಟೆಗೆ ಜಾರಿಗೆ ಬರುತ್ತವೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸೆಪ್ಟೆಂಬರ್ 24 ರಿಂದ ಡೀಸೆಲ್ ಬೆಲೆಯನ್ನು ಹಾಗೂ ಸೆಪ್ಟೆಂಬರ್ 28 ರಿಂದ ಪೆಟ್ರೋಲ್ ಬೆಲೆಯನ್ನು ಹೆಚ್ಚಿಸುತ್ತಿವೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತಿರುವುದರಿಂದ ಇವುಗಳ ಬೆಲೆ ಹೆಚ್ಚಾಗುತ್ತಿದೆ. ಇದಲ್ಲದೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಿಸುವ ಇತರ ಅಂಶಗಳಲ್ಲಿ ರಾಜ್ಯ ಸರ್ಕಾರಗಳು ವಿಧಿಸುವ ವ್ಯಾಟ್, ಡೀಲರ್ ಕಮಿಷನ್, ಸರಕು ಶುಲ್ಕ ಇತ್ಯಾದಿಗಳು ಸೇರಿವೆ.

ಭಾರತದಲ್ಲಿ ವಿಮಾನಗಳಿಗೆ ತುಂಬಿಸುವ ಇಂಧನದ ಬೆಲೆಗಿಂತ ವಾಹನಗಳಿಗೆ ತುಂಬಿಸುವ ಇಂಧನದ ಬೆಲೆಯೇ ಹೆಚ್ಚು

ಇಂಧನದ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲ್, ಡೀಸೆಲ್ ಬೆಲೆಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ಆದರೆ ಆದಾಯದ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಹಲವು ರಾಜ್ಯ ಸರ್ಕಾರಗಳು ಇಂಧನದ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದನ್ನು ವಿರೋಧಿಸುತ್ತಿವೆ. ಮತ್ತೊಂದೆಡೆ ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವುದಿಲ್ಲವೆಂದು ತಿಳಿಸಿದೆ.

ಭಾರತದಲ್ಲಿ ವಿಮಾನಗಳಿಗೆ ತುಂಬಿಸುವ ಇಂಧನದ ಬೆಲೆಗಿಂತ ವಾಹನಗಳಿಗೆ ತುಂಬಿಸುವ ಇಂಧನದ ಬೆಲೆಯೇ ಹೆಚ್ಚು

ಕಳೆದ ಎರಡು ವರ್ಷಗಳಿಂದ ಇಂಧನದ ಮೇಲಿನ ಅಬಕಾರಿ ಸುಂಕ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಸಹ ಇಂಧನಗಳ ಬೆಲೆ ನಿರಂತರ ಏರಿಕೆಗೆ ಕಾರಣವಾಗಿದೆ. ಈ ವರ್ಷದ ಆರಂಭದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯಾಗಿತ್ತು. ಈ ಕಾರಣದಿಂದಾಗಿ ಮೊದಲ ಬಾರಿಗೆ ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ. 100 ಗಳ ಗಡಿ ದಾಟಿತ್ತು.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

More from DriveSpark

Article Published On: Monday, October 18, 2021, 19:28 [IST]
English summary
Jet fuel cheaper than petrol and diesel in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+