ವಿಡಿಯೋ ನೋಡಿ: ಎಂಜಿನ್ ಇಲ್ಲದೇ ಚಲಿಸಿದ ರೈಲು ಬೋಗಿಗಳು, ಸ್ಥಳದಲ್ಲಿ ಭಯದ ವಾತಾವರಣ!
ಯಾವುದೇ ರೈಲು ಓಡಾಡಲು ಎಂಜಿನ್ ಎಂಬುದು ತೀರಾ ಅತ್ಯಗತ್ಯ. ಆದರೆ, ಇಲ್ಲೊಂದು ಕಡೆ ಎಂಜಿನ್ ಇಲ್ಲದೆಯೇ ರೈಲಿನ ಬೋಗಿಗಳು ಚಲಿಸಿವೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಷ್ಟಕ್ಕೂ ಈ ಘಟನೆ ಎಲ್ಲಿ ನಡೆದಿದೆ ಗೊತ್ತಾ.. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಜಾರ್ಖಂಡ್‌ನ ಸಾಹಿಬ್‌ಗಂಜ್‌ನ (Jharkhand Sahibganj) ಬರ್ಹದ್ವಾ ನಿಲ್ದಾಣದಲ್ಲಿ ಎಂಜಿನ್ ಇಲ್ಲದೆಯೇ ಹಳಿ ಮೇಲೆ ರೈಲು ಬೋಗಿಗಳು ಚಲಿಸಲು ಆರಂಭಿಸಿವೆ. ಈ ಅಹಿತಕರ ಘಟನೆ ಭಾನುವಾರ ವರದಿಯಾಗಿದ್ದು, ಸ್ಥಳೀಯರಲ್ಲಿ ಕ್ಷಣಕಾಲ ಭೀತಿ ಉಂಟು ಮಾಡಿತ್ತು. ಅದೃಷ್ಟವಶಾತ್ ಯಾವುದೇ ಸಾವು - ನೋವು ಆಗಿಲ್ಲ. ಸದ್ಯ, ಆ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಮಾಹಿತಿ ಪ್ರಕಾರ, ಮಾಲ್ಡಾ ವಿಭಾಗಕ್ಕೆ ಸೇರಿರುವ ಬರ್ಹದ್ವಾ ರೈಲು ನಿಲ್ದಾಣದಲ್ಲಿ 10 - 15 ದಿನಗಳ ಹಿಂದೆ, ಎರಡು ಗೂಡ್ಸ್ ರೈಲು ಕೋಚ್‌ಗಳನ್ನು ನಿಲ್ಲಿಸಲಾಗಿತ್ತು. ಅದೇ ಹಳಿಯ ಮೇಲೆ ಪ್ರಯಾಣಿಕ ರೈಲಿನ ನಾಲ್ಕು ಬೋಗಿಗಳು ನಿರ್ವಹಣೆಗೆ (maintenance) ನಿಂತ್ತಿದ್ದವು. ಆದರೆ, ಇದ್ದಕ್ಕಿಂದಂತೆ, ಗೂಡ್ಸ್ ರೈಲಿನ ಕೋಚ್ ಹಾಗೂ ರೈಲು ಬೋಗಿಗಳು ಚಲಿಸಲು ಆರಂಭಿಸಿವೆ.
ಎಂಜಿನ್ ಇಲ್ಲದೆಯೇ ಈ ಬೋಗಿಗಳು ಚಲಿಸುವುದನ್ನು ಗಮನಿಸಿದ ಸ್ಥಳೀಯರು, ಗಾಬರಿಯಿಂದ ಕೂಗಾಡಲು ಶುರು ಮಾಡಿದ್ದಾರೆ. ಇವು, ಬರ್ಹದ್ವಾ - ರಾಜಮಹಲ್ ರಸ್ತೆ ದಾಟಿ ರೈಲು ನಿಲ್ದಾಣದ ಮುಖ್ಯ ಹಳಿ ಕಡೆಗೆ ಹೋಗಿವೆ. ಆದರೆ, ಪ್ಲಾಟ್‌ಫಾರ್ಮ್ ತಲುಪುವಷ್ಟರಲ್ಲಿ ಆ ಬೋಗಿಗಳು ತಾವಾಗಿಯೇ ನಿಂತಿವೆ ಎಂದು ವರದಿಯಾಗಿದೆ.

ಗೂಡ್ಸ್ ರೈಲಿನ ಎರಡನೇ ಕಂಪಾರ್ಟ್‌ಮೆಂಟ್ ಅದೇ ಹಳಿ ಮೇಲೆ ನಿರ್ವಹಣೆಗೆ ನಿಂತಿದ್ದ ಪ್ರಯಾಣಿಕ ರೈಲಿನ ಕೋಚ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಗೂಡ್ಸ್ ನ ಒಂದು ಕೋಚ್ ಹಾಗೂ ರೈಲಿನ ನಾಲ್ಕು ಬೋಗಿ ಚಲಿಸುವ ಪ್ರಾರಂಭಿಸಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.
ಘಟನೆ ಸಂಬಂಧ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಬರ್ಹದ್ವಾ ನಿವಾಸಿಗಳು ಮಾಲ್ಡಾ ವಿಭಾಗದ ರೈಲ್ವೆ ಹಿರಿಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬರ್ಹದ್ವಾ ಸ್ಟೇಷನ್ ಮ್ಯಾನೇಜರ್ ನಿರಂಜನ್ ಕುಮಾರ್ ಭಗತ್ ಅವರು, ಇಳಿಜಾರಿನ ಕಾರಣ, ಎಂಜಿನ್ ಇಲ್ಲದೆ ರೈಲು ಬೋಗಿಗಳು ಹಳಿ ಮೇಲೆ ಚಲಿಸಿವೆ. ಯಾವುದೇ ಪ್ರಾಣ ಹಾನಿಯಾಗಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
झारखंड के साहेबगंज के बरहड़वा रेलवे स्टेशन पर ट्रेन बिना इंजन के ही पटरी पर दौड़ने लगी।गनीमत रही कि इस हादसे में कोई हताहत नहीं हुआ#Jharkhand #Railway #viralvideo pic.twitter.com/vgf0oDbizY
— Dhananjay Mandal (@dhananjaynews) September 4, 2023
ಸದ್ಯ, ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಸ್ಥಳೀಯರು, ಎಂಜಿನ್ ಇಲ್ಲದೆಯೇ ಚಲಿಸುತ್ತಿರುವ ರೈಲಿನ ಬೋಗಿಯ ದೃಶ್ಯಗಳನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿರವುದನ್ನು ಕಾಣಬಹುದು. ಈ ಘಟನೆಗೆ ಕಾರಣವೇನು ಎಂಬುದರ ಬಗ್ಗೆ ರೈಲ್ವೆ ಇಲಾಖೆಯಿಂದ ಈವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.
ಇನ್ನು, ಬರ್ಹದ್ವಾ ಸ್ಟೇಷನ್ ಮ್ಯಾನೇಜರ್ ಹೇಳುವಂತೆ ಇಳಿಜಾರಿನ ಕಾರಣ, ಎಂಜಿನ್ ಇಲ್ಲದೆ ರೈಲು ಬೋಗಿಗಳು ಚಲಿಸಿವೆ. ಅದೃಷ್ಟವಶಾತ್ ಅಲ್ಲೇ ಇದ್ದ ಸ್ಥಳೀಯರು ಕೂಗಾಡಿ, ಇತರರನ್ನು ಎಚ್ಚರಿಸಿದ್ದರಿಂದ ಯಾವುದೇ ಪ್ರಾಣ ಹಾನಿಯಂತಹ ದುರ್ಘಟನೆ ಸಂಭವಿಸಿಲ್ಲ. ಈಗಲಾದರೂ ರೈಲ್ವೆ ಇಲಾಖೆ, ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಮುನ್ನೆಚರಿಕೆ ವಹಿಸಲಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications