ಮಂಜುಗಡ್ಡೆಯಲ್ಲಿ ಕಾರು ಡ್ರಿಫ್ಟಿಂಗ್ ರೇಸ್
ಕಾರು ರೇಸನ್ನು ಎಲ್ಲರೂ ಇಷ್ಟಪಡುತ್ತಾರೆ. ಅಂತಿಮ ಕ್ಷಣದ ವರೆಗೂ ರೋಮಾಂಚನ ಸೃಷ್ಟಿಸುವ ಇಂತಹ ರೇಸ್‌ಗಳು ಅಷ್ಟೇ ಅಪಾಯಕಾರಿಯೂ ಹೌದು. ಆದರೆ ನುರಿತ ತರಬೇತಿಯನ್ನು ಪಡೆದ ರೇಸ್ ಚಾಲಕರೂ ಇಂತಹ ಸವಾಲುಗಳನ್ನು ಸ್ವೀಕರಿಸುತ್ತಾರೆ.
ನಮ್ಮ ಇಂದಿನ ಫೇಸ್‌ಬುಕ್ ವೀಡಿಯೋದಲ್ಲಿ 600ರಷ್ಟು ಅಶ್ವಶಕ್ತಿ ಉತ್ಪಾದಿಸಬಲ್ಲ ಮೊದಲ ಮಾದರಿಯ ರೇಸ್ ಕಾರೊಂದನ್ನು ಪರಿಚಯಿಸಲಿದ್ದೇವೆ. ಜಾನ್ ಒಸ್ಸಾನ್ ಎಂಬ ವೃತ್ತಿ ನಿರತ ಚಾಲಕ ಈ ಸವಾಲನ್ನು ಸ್ವೀಕರಿಸುವಲ್ಲಿ ಯಶಸ್ವಿಯಾಗುತ್ತಾರೆ.
ಮಂಜುಗಡ್ಡೆಯಿಂದ ಕೂಡಿದ ಹಿಮಪಾತದಲ್ಲಿ ಶರವೇಗದಲ್ಲಿ ಸಾಗುವ ರೇಸ್ ಕಾರು ನೋಡುವಾಗ ಮೈ ಜುಮ್ ಅನ್ನಿಸುತ್ತದೆ. ಇಲ್ಲಿ ಕೇವಲ ರೇಸ್ ಮಾತ್ರವಲ್ಲ ಅತಿ ವೇಗದಲ್ಲಿ ಸಾಗುವ ರೇಸ್ ಕಾರಿನಲ್ಲಿ ಡ್ರಿಫ್ಟಿಂಗ್ ಮಜಾವನ್ನು ಸವಿಯಬಹುದಾಗಿದೆ.
ಅಲ್ಟಿಮಾ ಜಿಟಿಆರ್ ತಲಹದಿಯ ಈ ಲಿಮ್ಯಾನ್ ಪ್ರೊಟೊಟೈಪ್ ಕಾರಲ್ಲಿ ಆಡಿ ಆರ್8 ವಿ10 ಎಂಜಿನ್ ಆಳವಡಿಸಲಾಗಿದ್ದು, 1000 ಕೆ.ಜಿ.ಗಳಷ್ಟು ಭಾರ ಹೊಂದಿದೆ. ಇದರ ಅಂದಾಜು ದರ 4.18 ಕೋಟಿ ರು.ಗಳಾಗಿವೆ.
ಇಂದಿನ ಫೇಸ್‌ಬುಕ್ ವೀಡಿಯೋ


Click it and Unblock the Notifications