ಬೈಕನ್ನು ನಂದಿಯಂತೆ ಮಾಡಿಫೈಗೊಳಿಸಿ ಶಿವನ ವೇಷದಲ್ಲಿ ಹರಿದ್ವಾರಕ್ಕೆ ಪಯಣ: ಸೆಲ್ಫಿಗಾಗಿ ಮುಗಿಬಿದ್ದ ಜನ

ಶಿವನನ್ನು ಪೂಜಿಸುವ ಕನ್ವಾರಿಯಾರಿಗೆ ಶ್ರಾವನ ಮಾಸವು ಅತ್ಯಂತ ವಿಶೇಷವಾದದ್ದು, ಅನೇಕ ಕನ್ವಾರಿಯಾಗಳು ಶಿವನನ್ನು ಮೆಚ್ಚಿಸಲು ಬರಿಗಾಲಿನಲ್ಲಿ ನಡೆಯುವುದು ಅಥವಾ ವಿವಿಧ ಸಾರಿಗೆ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಶಿವನ ವೇಷ ಧರಿಸಿ ಬೈಕ್ ಅನ್ನು ನಂದಿಯಂತೆ ಮಾರ್ಪಡಿಸಿದ್ದಾನೆ.

ಬೈಕನ್ನು ನಂದಿಯಂತೆ ಮಾಡಿಫೈಗೊಳಿಸಿ ಶಿವನ ವೇಷದಲ್ಲಿ ಹರಿದ್ವಾರಕ್ಕೆ ಪಯಣ: ಸೆಲ್ಫಿಗಾಗಿ ಮುಗಿಬಿದ್ದ ಜನ

ಸದ್ಯ ಇಂತಹದೊಂದು ವಿಶಿಷ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೈರಲ್ ಆಗಿರುವ ಈ ವೀಡಿಯೊದಲ್ಲಿ, ವ್ಯಕ್ತಿ ತನ್ನ ಬೈಕ್ ಅನ್ನು ಬೀದಿಗಳಲ್ಲಿ ಓಡಿಸುತ್ತಿರುವುದನ್ನು ಕಾಣಬಹುದು. ನೋಡುಗರು ಮತ್ತು ಇತರ ಕನ್ವಾರಿಯರು ಆತನನ್ನು ಕುತೂಹಲದಿಂದ ನೋಡುತ್ತಿದ್ದಾರೆ. ಈ ಬೈಕಿಗಾಗಿ 15,000 ರೂ. ಖರ್ಚು ಮಾಡಿ ನಂದಿಯ ರೂಪವನ್ನು ನೀಡಿರುವುದಾಗಿ ಆತ ಹೇಳಿಕೊಂಡಿದ್ದಾನೆ.

ಬೈಕನ್ನು ನಂದಿಯಂತೆ ಮಾಡಿಫೈಗೊಳಿಸಿ ಶಿವನ ವೇಷದಲ್ಲಿ ಹರಿದ್ವಾರಕ್ಕೆ ಪಯಣ: ಸೆಲ್ಫಿಗಾಗಿ ಮುಗಿಬಿದ್ದ ಜನ

ಈ ಶಿವನ ವೇಷಧಾರಿಯನ್ನು ಸುನಿಲ್ ಗುಪ್ತಾ ಎಂದು ಗುರುತಿಸಲಾಗಿದೆ, ಈತ ಕಳೆದ ಒಂದು ವರ್ಷದಿಂದ ಬೈಕಿಗಾಗಿ ಶ್ರಮಿಸಿರುವುದಾಗಿ ಹೇಳಿಕೊಂಡಿದ್ದಾನೆ. ಈತ ಮೂಲತಃ ವಾರಣಾಸಿಯ ಗ್ರಾಮಾಂತರ ಪ್ರದೇಶದ ಅನೈ ಬಜಾರ್‌ನ ನಿವಾಸಿಯಾಗಿದ್ದು, ಸಣ್ಣ ದಿನಸಿ ಮತ್ತು ಪಾನ್ ಅಂಗಡಿಯನ್ನು ನಡೆಸುತ್ತಿದ್ದಾನೆ.

ಆಜ್ ತಕ್ ಜೊತೆ ಮಾತನಾಡಿದ ಸುನಿಲ್ ಗುಪ್ತಾ, ನಾನು ಶಿವನ ಕಟ್ಟಾ ಭಕ್ತ. ನಾನು ಬದುಕಿರುವವರೆಗೂ ಶಿವನ ರೂಪದಲ್ಲಿ ಬಾಬಾ ವಿಶ್ವನಾಥನ ದರ್ಶನಕ್ಕೆ ಬರುತ್ತಲೇ ಇರುತ್ತೇನೆ. ನನ್ನ ಆದಿ ಅಂತ್ಯ ಎಲ್ಲವೂ ಆ ಪರಮೇಶ್ವರನೇ, ಭೂಮಿಯ ಮೇಲಿನ ಪ್ರತಿ ಜೀವಿಗೂ ಆಸರೆಯಾಗಿರುವ ಭೋಲೇನಾಥನನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳಿದ್ದಾನೆ.

ಬೈಕನ್ನು ನಂದಿಯಂತೆ ಮಾಡಿಫೈಗೊಳಿಸಿ ಶಿವನ ವೇಷದಲ್ಲಿ ಹರಿದ್ವಾರಕ್ಕೆ ಪಯಣ: ಸೆಲ್ಫಿಗಾಗಿ ಮುಗಿಬಿದ್ದ ಜನ

ಇನ್ನು ಪ್ರಯಾಣದ ವೇಳೆ ದಶಾಶ್ವಮೇಧ ಘಾಟ್‌ನಿಂದ ನೀರನ್ನು ತೆಗೆದುಕೊಂಡ ನಂತರ ಆತ ಪೆಟ್ರೋಲ್ ಪಂಪ್‌ಗೆ ತಲುಪಿದ್ದು, ಅಲ್ಲಿನ ನೌಕರರು ಅವರ ವಿಶಿಷ್ಟ ನೋಟವನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರು. ಉದ್ಯೋಗಿಗಳು ಮತ್ತು ಗ್ರಾಹಕರು ಅವರೊಂದಿಗೆ ಸೆಲ್ಫಿ ತೆಗೆದುಕೊಂಡು, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಬೈಕನ್ನು ನಂದಿಯಂತೆ ಮಾಡಿಫೈಗೊಳಿಸಿ ಶಿವನ ವೇಷದಲ್ಲಿ ಹರಿದ್ವಾರಕ್ಕೆ ಪಯಣ: ಸೆಲ್ಫಿಗಾಗಿ ಮುಗಿಬಿದ್ದ ಜನ

ಕನ್ವರ್ ಯಾತ್ರೆಯ ಬಗ್ಗೆ:

'ಕನ್ವರ್ ಯಾತ್ರೆ'ಯು ಶಿವನ ಭಕ್ತರಿಗೆ ವಾರ್ಷಿಕ ತೀರ್ಥಯಾತ್ರೆಯಾಗಿದೆ. ಕನ್ವಾರಿಯರು ಗಂಗಾ ನದಿಯ ಪವಿತ್ರ ನೀರನ್ನು ತರಲು ಉತ್ತರಾಖಂಡದ ಹರಿದ್ವಾರ, ಗೌಮುಖ ಮತ್ತು ಗಂಗೋತ್ರಿ ಮತ್ತು ಬಿಹಾರದ ಸುಲ್ತಂಗಂಜ್ ಮುಂತಾದ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ನಂತರ ಅಲ್ಲಿನ ನೀರಿನಿಂದ ದೇವರನ್ನು ಪೂಜಿಸುತ್ತಾರೆ.

ಬೈಕನ್ನು ನಂದಿಯಂತೆ ಮಾಡಿಫೈಗೊಳಿಸಿ ಶಿವನ ವೇಷದಲ್ಲಿ ಹರಿದ್ವಾರಕ್ಕೆ ಪಯಣ: ಸೆಲ್ಫಿಗಾಗಿ ಮುಗಿಬಿದ್ದ ಜನ

ಇದಾದ ಬಳಿಕ ಕವಾಡದ ಮೂಲಕ ಗಂಗಾ ಜಲವನ್ನು ತಮ್ಮ ಊರಿಗೆ ತಂದು ಶಿವನ ದೆವಸ್ಥಾನ ಹಾಗೂ ಮನೆಯಲ್ಲಿ ಅಭಿಷೇಕ ಮಾಡುತ್ತಾರೆ. ಕಳೆದ ಎರಡು ವರ್ಷಗಳಿಂದ ಕನ್ವರ್ ಯಾತ್ರೆ ನಡೆಯದ ಹಿನ್ನೆಲೆಯಲ್ಲಿ ಇಲ್ಲಿನ ಆಡಳಿತ ಮಂಡಳಿಯು ಪವಿತ್ರ ಯಾತ್ರೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಬೈಕನ್ನು ನಂದಿಯಂತೆ ಮಾಡಿಫೈಗೊಳಿಸಿ ಶಿವನ ವೇಷದಲ್ಲಿ ಹರಿದ್ವಾರಕ್ಕೆ ಪಯಣ: ಸೆಲ್ಫಿಗಾಗಿ ಮುಗಿಬಿದ್ದ ಜನ

ಜುಲೈ 26 ರಂದು ನಡೆದ ಭಗವಾನ್ ಶಿವನ 'ಜಲಾಭಿಷೇಕ'ಕ್ಕಾಗಿ ಗಂಗಾನದಿಯಿಂದ ನೀರನ್ನು ಸಂಗ್ರಹಿಸಲು ಹೆಚ್ಚಿನ ಸಂಖ್ಯೆಯ ಶಿವ ಭಕ್ತರು ಹರಿದ್ವಾರವನ್ನು ತಲುಪಿದ್ದರು. ಶ್ರಾವನ ಮಾಸ ಕೆವಲ ಮಳೆಗಾಲದ ಆರಂಭವನ್ನು ಮಾತ್ರ ಸೂಚಿಸುವುಲ್ಲ. ಬದಲಾಗಿ ಗಣೇಶ ಚತುರ್ಥಿ, ರಕ್ಷಾಬಂಧನ, ಜನ್ಮಾಷ್ಠಿಯಂತಹ ಸಾಲು ಸಾಲು ಹಬ್ಬಗಳನ್ನು ಬರಮಾಡಿಕೊಳ್ಳುತ್ತದೆ.

ಬೈಕನ್ನು ನಂದಿಯಂತೆ ಮಾಡಿಫೈಗೊಳಿಸಿ ಶಿವನ ವೇಷದಲ್ಲಿ ಹರಿದ್ವಾರಕ್ಕೆ ಪಯಣ: ಸೆಲ್ಫಿಗಾಗಿ ಮುಗಿಬಿದ್ದ ಜನ

ಕಾವಡ ಯಾತ್ರೆಯ ಮಾರ್ಗದಲ್ಲಿ ನಮಾಜ್ ಮಾಡುತ್ತಿದ್ದವರ ಬಂಧನ

ಇದೇ ಜುಲೈ 21ರಂದು ಹರಿದ್ವಾರ ತೀರ್ಥಕ್ಷೇತ್ರದಲ್ಲಿ ಕಾವಡ ಯಾತ್ರೆ ನಡೆಯುತ್ತಿದ್ದಾಗ, ಅದರ ಮೇಲೆ ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆಗೆ ಮಾಹಿತಿ ಲಭಿಸಿತ್ತು. ಅದೆ ರೀತಿ ರಾಣಿಪುರ ಪ್ರದೇಶದಲ್ಲಿರುವ ಶಿವಾಲಿಕ ನಗರದಲ್ಲಿ ಜುಲೈ 21ರ ಸಂಜೆ, ವಾರದ ಮಾರುಕಟ್ಟೆಯ ಬೀದಿಯಲ್ಲಿ 8 ಜನರು ಸಾಮೂಹಿಕ ನಮಾಜಿನಲ್ಲಿ ಭಾಗವಹಿಸದ್ದರು.

ಬೈಕನ್ನು ನಂದಿಯಂತೆ ಮಾಡಿಫೈಗೊಳಿಸಿ ಶಿವನ ವೇಷದಲ್ಲಿ ಹರಿದ್ವಾರಕ್ಕೆ ಪಯಣ: ಸೆಲ್ಫಿಗಾಗಿ ಮುಗಿಬಿದ್ದ ಜನ

ಈ ಮಾರ್ಗವಾಗಿ ಕವಾಡ ಯಾತ್ರೆ ಸಾಗುವುದಿತ್ತು. ನಮಾಜ ನಡೆಯುತ್ತಿರುವುದು ಪೊಲೀಸರಿಗೆ ತಿಳಿದ ತಕ್ಷಣ 8 ಜನರನ್ನೂ ಬಂಧಿಸಲಾಯಿತು. ಬಂಧಿತರಲ್ಲಿ ಮಹಮ್ಮದ ನಿಜಾಮ, ನಸೀಮ, ಮುರ್ಸಲೀನ, ಅಶ್ರಫ, ಅಶ್ರಫ ಅಸಗರ, ಮುಸ್ತಫಾ, ಸಜ್ಜಾದ ಅಹಮ್ಮದ ಮತ್ತು ಇಕ್ರಮ ಸೇರಿದ್ದಾರೆ.

ಬೈಕನ್ನು ನಂದಿಯಂತೆ ಮಾಡಿಫೈಗೊಳಿಸಿ ಶಿವನ ವೇಷದಲ್ಲಿ ಹರಿದ್ವಾರಕ್ಕೆ ಪಯಣ: ಸೆಲ್ಫಿಗಾಗಿ ಮುಗಿಬಿದ್ದ ಜನ

ಮಾಂಸದಂಗಡಿಗಳಿಗೆ ಬೀಗ

ಉತ್ತರ ಪ್ರದೇಶ ಸರ್ಕಾವು ಕಾವಡ ಯಾತ್ರೆಯ ಮಾರ್ಗದಲ್ಲಿನ ಮಾಂಸ ಮಾರಾಟದ ಮೇಲೆ ನಿರ್ಬಂಧ ಹೇರಿತ್ತು. ಬರುವ ಜುಲೈ 14 ರಿಂದ ಯಾತ್ರೆ ಆರಂಭವಾಗಿದ್ದ ಈ ಯಾತ್ರೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಈ ಕಾವಡ ಯಾತ್ರೆಯ ಮಾರ್ಗವನ್ನು ಸ್ವಚ್ಛಗೊಳಿಸಲು ಮತ್ತು ಅಲ್ಲಿ ಇತರ ಸೌಲಭ್ಯಗಳನ್ನು ಒದಗಿಸುವಂತೆ ಆಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಬೈಕನ್ನು ನಂದಿಯಂತೆ ಮಾಡಿಫೈಗೊಳಿಸಿ ಶಿವನ ವೇಷದಲ್ಲಿ ಹರಿದ್ವಾರಕ್ಕೆ ಪಯಣ: ಸೆಲ್ಫಿಗಾಗಿ ಮುಗಿಬಿದ್ದ ಜನ

ಈ ಕುರಿತು ಸ್ಥಳಿಯ ಆಡಳಿತಾಧಿಕಾರಿಗಳು, ಮಾಂಸ ಮಾರಾಟಗಾರರನ್ನು ಸಂಪರ್ಕಿಸಿ 'ಯಾತ್ರೆಯ ವೇಳೆ ಮಾಂಸ ಮಾರಾಟ ಮಾಡಕೂಡದೆಂದು', ಹೇಳಲಾಗುತ್ತಿದೆ. ವ್ಯಾಪಾರಿಗಳಿಂದ ಕೂಡ ಮಾಂಸ ಮಾರಾಟ ಮಾಡುವದಿಲ್ಲವೆಂದು ಆಶ್ವಾಸನೆ ನೀಡಿದ್ದರು.

Most Read Articles

Kannada
English summary
Journey to Haridwar dressed as Shiva on a bike modified like Nandi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X