ಜೆಆರ್‌ಡಿ ಟಾಟಾ, ರತನ್ ಟಾಟಾ, ಧೀರೂಭಾಯ್ ಅಂಬಾನಿಯ ನೀವೆಂದೂ ನೋಡಿರದ ಕ್ಲಾಸಿಕ್ ಕಾರುಗಳು
ಇತ್ತೀಚಿನ ಸಾಮಾಜಿಕ ಜಾಲತಾಣಗಳ ಸಹಾಯದಿಂದ ವಿಶ್ವದ ಯಾವುದೇ ಬಿಲಿಯೇನರ್ ಯಾವ ಕಾರನ್ನು ಓಡಿಸುತ್ತಿದ್ದಾನೆ ಎಂದು ತುಂಬಾ ಸುಲಭವಾಗಿ ತಿಳಿಯಬಹುದಾಗಿದೆ. ಅದಕ್ಕೆ ಕಾರಣ ಇಂದಿನ ಸಾಮಾಜಿಕ ಜಾಲತಾಣಗಳು ಮತ್ತು ಡಿಜಿಟಲ್ ಮೀಡಿಯಾಗಳು. ಇವುಗಳ ಸಹಾಯದಿಂದ ಕ್ಷಣ ಮಾತ್ರದಲ್ಲಿ ನಾವು ಮಾಹಿತಿಯನ್ನು ಕಲೆ ಹಾಕಬಹುದು.
ಡಿಜಿಟಲ್ ಮೀಡಿಯಾಗಿಂತಲೂ ಹಿಂದೆ ಬಿಲಿಯೇನರ್‌ಗಳು ದುಬಾರಿ ಕಾರುಗಳನ್ನು ಓಡಿಸುತ್ತಿದ್ದರು. ಆದರೆ ಆ ಮಾಹಿತಿಗಳನ್ನು ತಿಳಿಯುವುದು ಇಂದಿನಷ್ಟು ಸುಲಭವಾಗಿರಲಿಲ್ಲ. ಆಗಿನ ಕಾಲದಲ್ಲಿ ಭಾರತದಲ್ಲಿ ಜೆಆರ್‌ಡಿ ಟಾಟಾ, ಧೀರೂಭಾಯ್ ಅಂಬಾನಿ, ರತನ್ ಟಾಟಾ (Ratan TATA) ಅವರ ಬಳಿ ತುಂಬಾ ವಿರಳವಾದ ಐಷಾರಾಮಿ ಕಾರುಗಳಿದ್ದವು. ಈ ಲೇಖನದಲ್ಲಿ ನಾವಿಂದು ಅವುಗಳ ಬಗ್ಗೆ ತಿಳೀಯೋಣ.

ಜೆಆರ್‌ಡಿ ಟಾಟಾ- ಮೆರ್ಸಿಡಿಸ್ ಬೆಂಝ್ 190 D : ಇಂದು ಯಾರೂ ಬೇಕಾದರೂ ಮರ್ಸಿಡಿಸ್-ಬೆಂಝ್ ಕಾರನ್ನು ಕೊಳ್ಳಬಹುದಾಗಿದೆ. ಆದರೆ ೧೯೬೦ ರ ದಶಕದಲ್ಲಿಮರ್ಸಿಡಿಸ್-ಬೆಂಝ್ ಕಾರುಗಳನ್ನು ಕೊಳ್ಳುವುದು ಯೋಚಿಸಲೂ ಸಾಧ್ಯವಿರಲಿಲ್ಲ. ಆ ಸಮಯದಲ್ಲಿ ಜೆಆರ್‌ಡಿ ಟಾಟಾ ಅವರ ಬಳಿ ಮರ್ಸಿಡಿಸ್‌ನ ಈ ಕ್ಲಾಸಿಕ್ ಕಾರು ಇತ್ತು.
ಈ ಕಾರು ಎಕ್ಸ್‌ಕ್ಲ್ಯೂಸಿವ್ ಆಗಿ ಜರ್ಮನಿಯಲ್ಲಿ ತಯಾರಾಗುತ್ತಿತ್ತು ಮತ್ತು ಇದು ಭಾರತ ಉಪಖಂಡವನ್ನು ತಲುಪಲು ಸುಮಾರು ಆರು ತಿಂಗಳುಗಳ ಕಾಲ ಹಿಡಿಯುತ್ತಿತ್ತು. ಈ ಕಾರಿನಲ್ಲಿ ಆಗಿನ ಕಾಲದ ಫೀಚರ್‌ಗಳು ತುಂಬಿ ತುಳುಕುತ್ತಿದ್ದು, ಅವುಗಳಲ್ಲಿ ಅಡ್ಜಸ್ಟಬಲ್ ಸೀಟ್ಸ್, ಬೈ ಫೋಕಲ್ ಲೆಂತ್ ರೇರ್ ವ್ಯೂ ಮಿರರ್‌ಗಳು ಪ್ರಮುಖವಾದವು.

ರತನ್ ಟಾಟಾ-ಬುಯಿಕ್ ಸ್ಕೈಲಾರ್ಕ್: ರತನ್ ಟಾಟಾ ಅವರಿಗೆ ಆಟೋಮೊಬೈಲ್ ಬಗ್ಗೆ ಕ್ರೇಜ್ ಯುವಕನಾಗಿದ್ದಾಗ ಸ್ವಲ್ಪ ಹೆಚ್ಚಾಗಿಯೇ ಇತ್ತು. ತೀರಾ ಸಾಧಾರಣ ಲೈಫ್‌ಸ್ಟೈಲ್ ಯಿಂದ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದ ರತನ್ ಟಾಟಾ ಕಾರಿನ ವಿಷಯದಲ್ಲಿ ಕೊಂಚ ಹೆಚ್ಚು ಉತ್ಸುಕರಾಗಿದ್ದರು.1978 ರ ಮಾಸ್ಟರ್ ಪೀಸ್ ಆದ,5.0-liter ಎಂಜಿನ್‌ನ ಬುಯಿಕ್ ಸ್ಕೈಲಾರ್ಕ್ 178, ಆ ಕಾಲದಲ್ಲಿ ಅವರಲ್ಲಿದ್ದ ನೆಚ್ಚಿನ ಕಾರ್ ಆಗಿತ್ತು.
ಧೀರೂಭಾಯ್ ಅಂಬಾನಿ-ಬಿಎಂಡಬ್ಲ್ಯೂ 750i XL L7 ಲಿಮೋಸಿನ್: ಭಾರತ ಕಂಡ ಅತ್ಯುನ್ನತ ಬ್ಯುಸಿನೆಸ್‌ಮೆನ್ ಗಳಲ್ಲಿ ಧೀರೂಭಾಯ್ ಅಂಬಾನಿ ಹೆಸರು ಮರೆಯುವಂತಿಲ್ಲ. ಇವರು ಎಕ್ಸೋಟಿಕ್ ಕ್ಲಾಸಿಕ್ ಕಾರಾದ ಬಿಎಂಡಬ್ಲ್ಯೂ 750i XL L7 ಲಿಮೋಸಿನ್‌ನ ಒಡೆಯರಾಗಿದ್ದರು. 5.4-liter V12 ಪೆಟ್ರೋಲ್ ಎಂಜಿನ್ ಜೊತೆ ಬಂದಿದ್ದ ಈ ಕಾರು 322 Bhp ಪವರ್ ಮತ್ತು 490 Nm ಟಾರ್ಕನ್ನು ಬಿಡುಗಡೆ ಮಾಡುತ್ತಿತ್ತು.
ಆಗಿನ ದಶಕದಲ್ಲೇನಾದರೂ ಸಾಮಾಜಿಕ ಜಾಲತಾಣಗಳು ಈಗಿರುವಂತೆ ಪ್ರವರ್ಧಮಾನದಲ್ಲಿ ಇದ್ದಿದ್ದರೆ, ಈ ಎಲ್ಲಾ ಕಾರುಗಳ ಮಾಹಿತಿ ಆಗಿನ ಕಾಲದಲ್ಲೇ ತಿಳಿಯುತ್ತಿತ್ತು. ಬಹುತೇಕ ಎಲ್ಲಾ ಬ್ಯುಸಿನೆಸ್ ಮೆನ್‌ಗಳು ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿದ್ದು, ಈಗಲೂ ಸಹ ಕೆಲವೊಂದು ಕಡೆ ಅವರ ಕಾರುಗಳನ್ನು ಜೋಪಾನಗೊಳಿಸಲಾಗಿದೆ ಎಂಬುದು ಸಂತಸದ ಸಂಗತಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications