ಕಲಬುರಗಿಯ ಕನ್ನಡಿಗ ವೈದ್ಯ ಮಹೀಂದ್ರಾ ಥಾರ್‌ನಲ್ಲಿ 8000 km ದೇಶ-ವಿದೇಶ ಸುತ್ತಿದ್ರು.. ವಯಸ್ಸು ಸಂಖ್ಯೆಯಷ್ಟೇ!

ಪ್ರತಿಯೊಬ್ಬರಿಗೂ ಜೀವನ ಒಮ್ಮೆಯಾದರೂ ದೇಶ-ವಿದೇಶ ಸುತ್ತಬೇಕೆಂಬ ಆಸೆಯಿರುತ್ತದೆ. ಕೆಲವೊಬ್ಬರು ಈ ಕನಸನ್ನು ಬೇಗನೇ ನನಸು ಮಾಡಿಕೊಳ್ಳುತ್ತಾರೆ. ಕೆಲವೊಬ್ಬರಿಗೆ ವರ್ಷಗಳೇ ಹಿಡುಯುತ್ತದೆ. ಅದರಲ್ಲೂ ಈಗಿನ ಯುವಕರು, ತಮ್ಮ ಕಾರುಗಳಲ್ಲಿಯೇ ವಿಶ್ವಪರ್ಯಟನೆಗೆ ಹೊರಟು ಬಿಡುತ್ತಾರೆ. ಆದರೆ, 50 ವರ್ಷ ಮೀರಿದವರೂ ಈ ರೀತಿಯ ಸಾಹಸಕ್ಕೆ ಕೈಹಾಕುವುದು ತೀರಾ ಅಪರೂಪ.

ಆದರೆ, ನಮ್ಮದೇ ಕಲಬುರಗಿ ವೈದ್ಯರೊಬ್ಬರು, ತಮ್ಮ 57ನೇ ವಯಸ್ಸಿನಲ್ಲಿ ಜನಪ್ರಿಯ ಆಫ್-ರೋಡ್ ಎಸ್‌ಯುವಿ ಮಹೀಂದ್ರಾ ಥಾರ್‌ನಲ್ಲಿ (Mahindra Thar) ಮೂರು ದೇಶಗಳಲ್ಲಿ ಸರಿ ಸುಮಾರು 8000 ಕಿಲೋಮೀಟರ್ ಸಂಚರಿಸಿದ್ದಾರೆ. ವಿಶೇಷವಾಗಿ ಚೀನಾವನ್ನು ಸುತ್ತಿದ್ದಾರೆ. ಸಿಯೆಟ್ ಲಿಮಿಟೆಡ್ ಹಾಗೂ ಮಹೀಂದ್ರಾ ಅಡ್ವೆಂಚರ್ ಸಹಯೋಗದೊಂದಿಗೆ ವಾಂಡರ್ ಬಿಯಾಂಡ್ ಬೌಂಡರೀಸ್ ಈ ಸವಾರಿಯನ್ನು ಏರ್ಪಡಿಸಿತ್ತು.

ಕಲಬುರಗಿ ಕನ್ನಡಿಗ ವೈದ್ಯ ಮಹೀಂದ್ರಾ ಥಾರ್‌ನಲ್ಲಿ 8000 km ದೇಶ-ವಿದೇಶ ಸುತ್ತಿದ್ರು.. ವಯಸ್ಸು ಸಂಖ್ಯೆಯಷ್ಟೇ!

ಕಲಬುರಗಿ ನಗರದ ನಿವಾಸಿಯಾಗಿರುವ ಖ್ಯಾತ ಡಾ.ಶರದ್ ತಂಗಾ ಅವರು, ಬೆಂಗಳೂರು, ಅಮೆರಿಕ, ಹೈದರಾಬಾದ್ ಮತ್ತು ಹುಬ್ಬಳ್ಳಿಯ ಒಟ್ಟು ಹತ್ತು ಮಂದಿ ಸ್ನೇಹಿತರೊಂದಿಗೆ 28 ದಿನ ರಸ್ತೆ ಮೂಲಕ ಪ್ರವಾಸಕ್ಕೆ ತೆರಳುವ ಮೂಲಕ ವಯಸ್ಸು ಕೇವಲ ಸಂಖ್ಯೆಯಷ್ಟೇ.. ಅದು ದೇಹಕ್ಕೆ ಮಾತ್ರ ಆಗುವುದು. ಮನಸ್ಸಿಗೆ ಅಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಕಳೆದ ಆಗಸ್ಟ್ 2ರಂದು ತಮ್ಮ ಸಂಗಡಿಗರೊಂದಿಗೆ ಡಾ.ಶರದ್ ತಂಗಾ ಅವರು, ಮುಂಬೈನಿಂದ ಪ್ರಯಾಣ ಆರಂಭಿಸಿ, ಉತ್ತರಪ್ರದೇಶದ ಗೋರಖ್‌ಪುರ ಮೂಲಕ 5ನೇ ದಿನಕ್ಕೆ ನೇಪಾಳದ ರಾಜಧಾನಿ ಕಠ್ಮಂಡುವನ್ನು ತಲುಪಿಸಿದ್ದಾರೆ. ಅಲ್ಲಿ ಒಂದಷ್ಟು ಪ್ರದೇಶಗಳನ್ನು ಸುತ್ತಿ, 9 ದಿನಕ್ಕೆ ಚೀನಾಕ್ಕೆ ಹೋಗಿದ್ದು, ಸುಮಾರು 20 ದಿನಗಳನ್ನು ಕಳೆದಿದ್ದಾರೆ.

ಕಲಬುರಗಿ ಕನ್ನಡಿಗ ವೈದ್ಯ ಮಹೀಂದ್ರಾ ಥಾರ್‌ನಲ್ಲಿ 8000 km ದೇಶ-ವಿದೇಶ ಸುತ್ತಿದ್ರು.. ವಯಸ್ಸು ಸಂಖ್ಯೆಯಷ್ಟೇ!

ಚೀನಾ ದೇಶದ 108 ಹೇರಪಿನ್ ರಸ್ತೆ ಹಾಗೂ ಎವರೆಸ್ಟ್ ಬೇಸ್ ಕ್ಯಾಂಪ್ ಸೇರಿದಂತೆ ಹಲವೆಡೆಯಲ್ಲಿ ಈ ತಂಡ ಸಂಚಾರ ನಡೆಸಿದೆ. 45 ಕಿಲೋ ಮೀಟರ್ ಸುರಂಗ ರಸ್ತೆಯಲ್ಲಿಯೂ ಪ್ರಯಾಣಿದ್ದಾರೆ. ಈ ಬಗ್ಗೆ ಸ್ವತಃ ಡಾ.ಶರದ್ ತಂಗಾ ಅವರೇ ಮಾತನಾಡಿದ್ದು, ಒಮ್ಮೆ 15 ಗಂಟೆ ಕಾರನ್ನು ಓಡಿಸಲಾಯಿತು. ಚೀನಾದಲ್ಲಿ ಒಳ್ಳೆಯ ರಸ್ತೆಗಳಿವೆ. ಅಲ್ಲಿನ ಜನರು ಉತ್ತಮವಾಗಿ ಸಮಯ ಪಾಲನೆ ಮಾಡುತ್ತಾರೆ ಎಂದು ಹೇಳಿದ್ದಾರೆ.

ಚೀನಿಯರ ಕಲೆ ಹಾಗೂ ಸಂಸ್ಕ್ರತಿ ಜೊತೆಯಲ್ಲಿ ಅವರ ಬದುಕಿನ ಕುರಿತು ತಿಳಿದುಕೊಳ್ಳಲು ಈ ರಸ್ತೆ ಪ್ರವಾಸ ಮಾಡಲಾಯಿತು ಅಂತೇ. ಇನ್ನು, ಭಾರತದಲ್ಲಿ ಖರೀದಿಗೆ ಸಿಗುವ ಮಹೀಂದ್ರಾ ಥಾರ್‌ ಬಗ್ಗೆ ಒಂದಷ್ಟು ವಿಚಾರಗಳನ್ನು ಮಾತನಾಡುವುದಾದರೆ, ಈ ಕಾರು, ಭಾರತೀಯ ಮಾರುಕಟ್ಟೆಯಲ್ಲಿ 3 ಡೋರ್ ಆಯ್ಕೆಯಲ್ಲಿ ರೂ.10.54 ಲಕ್ಷದಿಂದ ರೂ.16.78 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ.

ಕಲಬುರಗಿ ಕನ್ನಡಿಗ ವೈದ್ಯ ಮಹೀಂದ್ರಾ ಥಾರ್‌ನಲ್ಲಿ 8000 km ದೇಶ-ವಿದೇಶ ಸುತ್ತಿದ್ರು.. ವಯಸ್ಸು ಸಂಖ್ಯೆಯಷ್ಟೇ!

4 ಆಸನ ಆಯ್ಕೆಯಲ್ಲಿ ದೊರೆಯುವ ಮಹೀಂದ್ರಾ ಥಾರ್‌, 2-ಲೀಟರ್ ಟರ್ಬೊ ಪೆಟ್ರೋಲ್, 2.2-ಲೀಟರ್ ಡೀಸೆಲ್ ಎಂಜಿನ್ ಹಾಗೂ 6-ಸ್ವೀಡ್ ಮ್ಯಾನುವಲ್ ಅಥವಾ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ. 4WD (ಫೋರ್ ವೀಲ್ ಡ್ರೈವ್), RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದ್ದು, 15.2 kmpl ಮೈಲೇಜ್ ನೀಡುತ್ತದೆ.

ಮಹೀಂದ್ರಾ ಥಾರ್‌ ಪಡೆದುಕೊಂಡಿರುವ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಈ ಕಾರು, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಮ್ಯಾನ್ಯುವಲ್ ಎಸಿ ಮತ್ತು ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ ಒಳಗೊಂಡಂತೆ ಹಲವು ಫೀಚರ್ಸ್ ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ವಿವಿಧ ಸೇಫ್ಟಿ ಫೀಚರ್ಸ್ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, September 11, 2023, 16:58 [IST]
English summary
Kalaburagi doctor completes 8000 km mahindra thar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+