1100 ಕೋಟಿ ಕಲೆಕ್ಷನ್.. ಪ್ರಭಾಸ್ ಚಿತ್ರದ ಸ್ಟಾರ್ ನಿರ್ದೇಶಕನಾದ್ರು ಬಳಸುವುದು ಮಾತ್ರ ಅಗ್ಗದ ಮಹೀಂದ್ರಾ ಕಾರು..!

ತೆಲುಗಿನ ಖ್ಯಾತ ನಟ ಡಾರ್ಲಿಂಗ್ ಪ್ರಭಾಸ್ (Prabhas) ಅಭಿನಯದ ಕಲ್ಕಿ 2898 ಎಡಿ (Kalki 2898 AD) ಸಿನಿಮಾ ಸೂಪರ್ ಹಿಟ್ ಆಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದೆ. ವಿಶ್ವದಾದ್ಯಂತ ಬರೋಬ್ಬರಿ ರೂ.1100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಬಗ್ಗೆ ಚಿತ್ರ ನಿರ್ಮಾಣ ಸಂಸ್ಥೆ 'ವೈಜಯಂತಿ ಮೂವೀಸ್ ಸಾಮಾಜಿಕ' ಜಾಲತಾಣದಲ್ಲಿ ಪೋಸ್ಟ್ ಮಾಡಿ, ಸಂತಸವನ್ನು ಹಂಚಿಕೊಂಡಿತ್ತು. ಇದೇ ಕಲ್ಕಿ ಸಿನಿಮಾದಲ್ಲಿ ಪ್ರಭಾಸ್ ಅವರೊಂದಿಗೆ ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಹಾಗೂ ಅಮಿತಾಬ್ ಬಚ್ಚನ್ ಕೂಡ ಸ್ಕ್ರೀನ್ ಶೇರ್ ಮಾಡಿದ್ದರು.

ಕಲ್ಕಿ ಚಿತ್ರಕ್ಕೆ ಪ್ರತಿಭಾವಂತ ನಿರ್ದೇಶಕ ನಾಗ್ ಅಶ್ವಿನ್ (Nag Ashwin) ಬೆನ್ನೆಲುಬಾಗಿದ್ದು, ಅದ್ಬುತವಾಗಿ ಆಕ್ಷನ್ ಕಟ್ ಹೇಳಿದ್ದರು. ನಾಗ್ ಅಶ್ವಿನ್ ಅವರು ಸರಳವಾಗಿ ಜೀವನ ನಡೆಸುತ್ತಿದ್ದಾರೆ. ಸಿನಿಮಾ ಹಿಟ್ ಆಗಿದ್ದರೂ ಹೊಸ ಕಾರು ಖರೀದಿ ಮಾಡದೆ, ಈಗಲೂ ಬದುಕಿನ ಕಷ್ಟ ಸುಖದಲ್ಲಿ ಜೊತೆಗಿದ್ದ ಮಹೀಂದ್ರಾ ಇ2ಒ ಪ್ಲಸ್ (Mahindra e2o PLUS) ಎಲೆಕ್ಟ್ರಿಕ್ ಕಾರನ್ನೇ ಬಳಕೆ ಮಾಡುತ್ತಿದ್ದಾರೆ.

Kalki 2898 AD Film Director Nag Ashwin Mahindra e2o PLUS Car Viral In Social Media Netizens Applaud

ಈ ಕುರಿತಂತೆ ಸ್ವತಃ ನಾಗ್ ಅಶ್ವಿನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಹೀಂದ್ರಾ ಇ2ಒ ಪ್ಲಸ್ ಎಲೆಕ್ಟ್ರಿಕ್ ಕಾರಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ 'ನನ್ನ ಮನೆಯ ಮೇಲಿನ ಸೋಲಾರ್ ಪ್ಯಾನೆಲ್‌ನಿಂದ ಉತ್ಪಾದನೆಯಾಗುವ ವಿದ್ಯುತ್‌ನಿಂದ ಈ ಕಾರನ್ನು ಚಾರ್ಜ್ ಮಾಡುತ್ತೇನೆ' ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ನಿರ್ದೇಶಕ ನಾಗ್ ಅಶ್ವಿನ್ ಅವರ ಈ ಪೋಸ್ಟ್‌ನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದು, 54,194ಕ್ಕೂ ಅಧಿಕ ಲೈಕ್ ಪಡೆದುಕೊಂಡಿದೆ. ಅದೇ ಕಲ್ಕಿ ಸಿನಿಮಾದಲ್ಲಿ ಬಳಕೆ ಮಾಡಿದ್ದ ನಾಗ್ ಅಶ್ವಿನ್ ಕಲ್ಪನೆಯ ಬೃಹದಾಕಾರ 'ಬುಜ್ಜಿ' ಎಲೆಕ್ಟ್ರಿಕ್ ಕಾರಿನ ತಯಾರಿಕೆ ರೂ.7 ಕೋಟಿ ಖರ್ಚು ಮಾಡಲಾಗಿತ್ತು. ಈ ಕಾರು, 47 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿತ್ತು.

ನಾಗ್ ಅಶ್ವಿನ್ ಬಳಿಯಿರುವ ಈ ಮಹೀಂದ್ರಾ ಇ2ಒ ಪ್ಲಸ್ ಎಲೆಕ್ಟ್ರಿಕ್ ಕಾರಿನ ಮಾರಾಟವನ್ನು ಕಂಪನಿಯು ಸ್ಥಗಿತಗೊಳಿಸಿ ವರ್ಷಗಳಾಗಿವೆ. ಕಡೆಯ ಬಾರಿಗೆ ಈ ಕಾರನ್ನು 2019ರಲ್ಲಿ ಉತ್ಪಾದಿಸಲಾಗಿತ್ತು. ಆಗ ರೂ.7.48 ಲಕ್ಷದಿಂದ ರೂ.11.49 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿತ್ತು. ಪಿ2, ಪಿ4, ಪಿ6 ಹಾಗೂ ಪಿ8 ಎಂಬ ರೂಪಾಂತರಗಳನ್ನು (ವೇರಿಯೆಂಟ್) ಪಡೆದಿತ್ತು.

ಮಹೀಂದ್ರಾ ಇ2ಒ ಪ್ಲಸ್ ಪುಟ್ಟ ಕಾರಾಗಿದ್ದರೂ ಆಕರ್ಷಕವಾದ ವಿನ್ಯಾಸವನ್ನು (ಡಿಸೈನ್) ಒಳಗೊಂಡಿತ್ತು. ಪಾರ್ಕಿಂಗ್ ಕ್ಯಾಮೆರಾ ಮತ್ತು ಅಲಾಯ್ ವೀಲ್‌ಗಳಂತಹ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿತ್ತು. 2258 ಎಂಎಂ ವೀಲ್ ಬೇಸ್ ಮತ್ತು 170 ಎಂಎಂ ಗ್ರೌಂಡ್ ಕ್ಲಿಯರೆನ್ ಅನ್ನು ಹೊಂದಿತ್ತು. ಇದರಲ್ಲಿ 4 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿತ್ತು.

ಈ ಮಹೀಂದ್ರಾ ಇ2ಒ ಪ್ಲಸ್ ಎಲೆಕ್ಟ್ರಿಕ್ ಕಾರು 10.08 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಒಳಗೊಂಡಿತ್ತು. ಸಂಪೂರ್ಣ ಚಾರ್ಜ್‌ನಲ್ಲಿ 140 ಕಿಲೋಮೀಟರ್‌ವರೆಗೂ ರೇಂಜ್ ನೀಡುತ್ತಿತ್ತು. ಜೊತೆಗೆ 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿತ್ತು. ಇದರ ಬ್ಯಾಟರಿಯೂ 6 ಗಂಟೆಯಲ್ಲಿ ಪೂರ್ತಿಯಾಗಿ ಚಾರ್ಜ್ ಆಗಿಬಿಡುತ್ತಿತ್ತು.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ400 ಎಲೆಕ್ಟ್ರಿಕ್ ಕಾರನ್ನು ಮಾರಾಟ ಮಾಡುತ್ತಿದೆ. ಇದು ರೂ.9.79 ಲಕ್ಷದಿಂದ ರೂ.19.19 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 34.5 ರಿಂದ 39.4 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 375 ರಿಂದ 456 ಕಿಲೋಮೀಟರ್‌ ಓಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, October 21, 2024, 17:08 [IST]
English summary
Kalki 2898 ad film director nag ashwin mahindra e2o plus car viral in social media netizens applaud
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+