Kalki 2898 AD: ಥಿಯೇಟರ್ ಮುಂದೆ ಕಲ್ಕಿಯ ಬುಜ್ಜಿಯದ್ದೇ ಅಬ್ಬರ... ಹೇಗಿದೆ ಗೊತ್ತಾ?

ಜನಪ್ರಿಯ ನಟ ಪ್ರಭಾಸ್ ನಾಯಕನಾಗಿ ನಟಿಸಿ, ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 ಎಡಿ' (Kalki 2898 AD) ಸಿನಿಮಾ ಇಂದು ಬಿಡುಗಡೆಯಾಗಿದೆ. ಈ ಸಿನಿಮಾಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. 600 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಈ ಚಿತ್ರಕ್ಕೆ ಪ್ರೆಕ್ಷಕರು ಫಿಧಾ ಆಗಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಅವರು ನಟಿಸಿದ್ದಾರೆ. ಸೈನ್ಸ್​ ಫಿಕ್ಷನ್ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಈ ಸಿನಿಮಾ ಟ್ರೇಲರ್ ರಿಲೀಸ್ ಆದಾಗಲೇ ಜನರಿಗೆ ಸಾಕಷ್ಟು ನಿರೀಕ್ಷೆ ಇದು, ಆ ನಿರೀಕ್ಷೆ ಸುಳ್ಳಲಾಗಿಲ್ಲ.

ಕಲ್ಕಿ 2898 ಎಡಿ ಸಿನಿಮಾದಲ್ಲಿ ಬುಜ್ಜಿ ಎಂಬ ವಾಹನ ಬಾರೀ ಸುದ್ದಿ ಮಾಡಿದೆ. ಸಿನಿಮಾದಲ್ಲಿ ನಟ ಪ್ರಭಾಸ್ ನಿರ್ವಹಿಸಿದ ಭೈರವನ ಪಾತ್ರಕ್ಕೆ ರೈಡರ್ ಆಗಿ ಈ ವಿಶೇಷ ವಾಹನವನ್ನು ವಿನ್ಯಾಸಗೊಳಿಸಲಾಗಿದೆ. ಅದಕ್ಕೆ ಬುಜ್ಜಿ (Bujji) ಎಂದು ಹೆಸರನ್ನು ನೀಡಿದ್ದಾರೆ. ಈ AI-ಚಾಲಿತ ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನವು ಬ್ಯಾಟ್‌ಮ್ಯಾನ್ ಬ್ಯಾಟ್‌ಮೊಬೈಲ್ ಮತ್ತು ಐರನ್ ಮ್ಯಾನ್ ಜಾರ್ವಿಸ್ ಅನ್ನು ನೆನಪಿಸುತ್ತದೆ.

Kalki 2898 AD

ಟೀಸರ್ ಬಿಡುಗಡೆಯಾದಾಗಿನಿಂದ ಬುಜ್ಜಿ ಎಂಬ ವಾಹನ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ಸಿಮಿಮಾ ಬಿಡುಗಡೆಯ ಸಂದರ್ಭದಲ್ಲಿ, ಈ ದೈತ್ಯ ಪರಿಕಲ್ಪನೆಯ ಎಲೆಕ್ಟ್ರಿಕ್ ವಾಹನವನ್ನು ಹೈದರಾಬಾದ್‌ನ ಪ್ರಸಾದ್ ಅವರ ಮಲ್ಟಿಪ್ಲೆಕ್ಸ್‌ನ ಹೊರಗೆ ಪ್ರದರ್ಶಿಸಲಾಯಿತು. ಈ ಕಾರು ಸಿನಿಪ್ರೇಮಿಗಳ ಜೊತೆಗೆ ಸಾವಿರಾರು ಕಾರು ಪ್ರಿಯರನ್ನು ಆಕರ್ಷಿಸುತ್ತದೆ. ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಪ್ರಭಾಸ್ ಕಾರನ್ನು ನೋಡಲು ಜನ ಹಾಗೂ ಪ್ರಭಾಸ್ ಅಭಿಮಾನಿಗಳು ಉತ್ಸುಕರಾಗಿದ್ದರು. ಇದರಿಂದಾಗಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.

ಈ ಕಾರನ್ನು ನೋಡಿದವರೆಲ್ಲರೂ ಇದನ್ನು ಜರ್ಮನಿ ಅಥವಾ ಜಪಾನ್‌ನಲ್ಲಿ ತಯಾರಿಸಲಾಗಿದೆ ಎಂದು ಭಾವಿಸುತ್ತಾರೆ. ಹಾಗಿದ್ದಲ್ಲಿ, ನೀವು ತಪ್ಪು ತಿಳಿಕೊಂಡಿದ್ದಾರೆ. ಏಕೆಂದರೆ ಈ ಕಾರು ಸಂಪೂರ್ಣವಾಗಿ ನಮ್ಮ ಭಾರತದಲ್ಲಿಯೇ ತಯಾರಿಸಲ್ಪಟ್ಟಿದೆ. ಈ ಕಾರನ್ನು ಮಹೀಂದ್ರಾ ಮೋಟಾರ್ಸ್ ಮತ್ತು ಜಯಂ ಮೋಟಾರ್ಸ್ ಜಂಟಿಯಾಗಿ ತಯಾರಿಸಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಮಹೀಂದ್ರಾ ಸ್ಥಾವರದಲ್ಲಿ ತಯಾರಿಸಲಾಗಿದೆ.

Kalki 2898 AD

ರೂ. 7 ಕೋಟಿ ವೆಚ್ಚದಲ್ಲಿ ಮಹೀಂದ್ರಾ ಈ ಕಾರನ್ನು ತಯಾರಿಸಿದೆ. ಸಾಮಾನ್ಯ ಕಾರುಗಳಿಗಿಂತ ಭಿನ್ನವಾಗಿ, ಬುಜ್ಜಿ ವಿಭಿನ್ನ ಶೈಲಿಯ ಸ್ಟೀರಿಂಗ್ ವೀಲ್ ಅನ್ನು ಹೊಂದಿದ್ದು, ಮುಂಭಾಗದಲ್ಲಿ ಎರಡು ದೊಡ್ಡ ಟೈರ್ ಮತ್ತು ಹಿಂಭಾಗದಲ್ಲಿ ಮತ್ತೊಂದು ದೊಡ್ಡ ಟೈರ್ ಗಳನ್ನು ಹೊಂದಿವೆ. ಬುಜ್ಜಿ ವಾಹನದ ಮುಂಭಾಗದ ಟೈರ್ ರಿಮ್ ಗಾತ್ರ 34.5 ಇಂಚುಗಳು, ಉದ್ದ 6075 mm, ಅಗಲ 3380 mm ಮತ್ತು ಎತ್ತರ 2186 mm ಆಗಿದೆ

ಬುಜ್ಜಿ ಒಂದು ಹಾರುವ ಕಾರು ವೈಜ್ಞಾನಿಕ ಕಾಲ್ಪನಿಕ ಕಾರು. ಇದು ಮೊದಲು ಅನಾವರಣಗೊಂಡಾಗಿನಿಂದ, ಕಲ್ಕಿ ಅಭಿಮಾನಿಗಳಲ್ಲಿ ಸಾಕಷ್ಟು ಆಸಕ್ತಿಯನ್ನು ಹುಟ್ಟುಹಾಕಿದೆ. ಈ ಕಾರು ಮಿನಿ ಬಸ್ ಗಾತ್ರದಲ್ಲಿದೆ. ಇದು ಮೂರು ಮೀಟರ್ ಅಗಲ, ಎರಡು ಮೀಟರ್ ಎತ್ತರ ಮತ್ತು ಸುಮಾರು ಆರು ಟನ್ ತೂಕವನ್ನು ಹೊಂದಿದೆ. ಇದರ ತೂಕ ದೇಶದಲ್ಲಿ ಲಭ್ಯವಿರುವ ಕಾರುಗಳ ತೂಕಕ್ಕಿಂತ ಐದು ಪಟ್ಟು ಹೆಚ್ಚು ಇದೆ.

Kalki 2898 AD

ವಾಹನವು ಸಂಪೂರ್ಣ ಗಾಜಿನ ಮೇಲ್ಭಾಗವನ್ನು ಹೊಂದಿದೆ ಮತ್ತು ಒಂದೇ ಚಾಲಕ ಸೀಟನ್ನು ಹೊಂದಿದೆ. 47kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ ಮತ್ತು 94kW ಸಂಯೋಜಿತ ಪವರ್ ಮತ್ತು ಬೃಹತ್ 9,800Nm ಟಾರ್ಕ್ ಅನ್ನು ಉತ್ಪಾದಿಸುವ ಟ್ವಿನ್ ಏರ್-ಕೂಲ್ಡ್ ಕಿರ್ಲೋಸ್ಕರ್ ಇಂಡಕ್ಷನ್ ಮೋಟಾರ್‌ಗಳನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, June 27, 2024, 18:30 [IST]
English summary
Kalki 2898 ad movie bujji car showcased in hyderabad all details
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+