ಜೀವನೋಪಾಯಕ್ಕಾಗಿ ಬಸ್ ಓಡಿಸುತ್ತಿದ್ದ ಯುವತಿಗೆ ಕಾರು ಗಿಫ್ಟ್ ನೀಡಿ ಮಾನವೀಯತೆ ಮೆರೆದ ಕಮಲ್ ಹಾಸನ್

ಕಮಲ್ ಹಾಸನ್ (Kamal Haasan) ಖ್ಯಾತ ನಟ, ಚಲನಚಿತ್ರ ನಿರ್ಮಾಪಕ ಮತ್ತು ರಾಜಕಾರಣಿಯಾಗಿದ್ದಾರೆ. ಇವರಿಗೆ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ವಿಭಿನ್ನ ನಟನ ಕೌಶಲ್ಯ ಮತ್ತು ಕಲೆಗೆ ಬದ್ಧತೆಗೆ ಹೆಸರುವಾಸಿಯಾದ ಕಮಲ್ ಹಾಸನ್ ಅವರು ಸಿನಿಮಾ ಜಗತ್ತಿನಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ.

ಇತ್ತೀಚೆಗೆ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಕೊಯಮತ್ತೂರಿನ ಮೊದಲ ಮಹಿಳಾ ಬಸ್‌ ಚಾಲಕಿ ಶರ್ಮಿಳಾಗೆ ಹೊಚ್ಚ ಹೊಸ ಮಾರುತಿ ಸುಜುಕಿ ಎರ್ಟಿಗಾ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಕಮಲ್ ಹಾಸನ್ ಸುದ್ದಿ ಆಗಿದ್ದಾರೆ. ಚಾಲಕಿಯಾಗಿ ಶರ್ಮಿಳಾ ಉದ್ಯೋಗ ನಿರ್ವಹಿಸಿಕೊಂಡು ಹೋಗಲು ಸಹಾಯ ಮಾಡಲು ಕಮಲ್‌ ಅವರ 'ಕಮಲ್‌ ಪನ್ಬಟ್ಟು ಮೈಯಮ್‌' (ಕಮಲ್‌ ಕಲ್ಚರಲ್‌ ಸೆಂಟರ್‌) ವತಿಯಿಂದ ಕಾರನ್ನು ನೀಡಿದ್ದಾರೆ.

Kamal Haasan Gifts Car

ನಟ ಕಮಲ್ ಹಾಸನ್ ಅವರು ಶರ್ಮಿಳಾ ಅವರನ್ನು ಅವರ ಕುಟುಂಬದೊಂದಿಗೆ ಸೋಮವಾರ ಬೆಳಿಗ್ಗೆ ಅಲ್ವಾರ್‌ಪೇಟ್‌ನಲ್ಲಿರುವ ಅವರ ಚೆನ್ನೈ ಕಚೇರಿಗೆ ಆಹ್ವಾನಿಸಿದರು. ಅಲ್ಲಿ ಹೊಸ ಕಾರು ಮತ್ತು ಉದ್ಯಮಿಯಾಗಿ ಅವರ ಪ್ರಯಾಣಕ್ಕಾಗಿ ಚೆಕ್ ಅನ್ನು ಹಸ್ತಾಂತರಿಸಿದರು.ಇತ್ತೀಚೆಗೆ ಶರ್ಮಿಳಾ ಚಾಲಕಿಯಾಗಿದ್ದ ಬಸ್‌ನಲ್ಲಿ ಡಿಎಂಕೆ ಸಂಸದೆ ಕನಿಮೋಳಿ ಪ್ರಯಾಣಿಸಿದ್ದರು. ಈ ವೇಳೆ ಸಂಸದೆ ಕನಿಮೊಳಿ ಅವರಿಗೆ ಬಸ್‌ ಟಿಕೆಟ್‌ ತೆಗದುಕೊಳ್ಳುವಂತೆ ಕಂಡ್ಟರ್ ಹೇಳಿದ್ದರು.

ಇದಕ್ಕಾಗಿ ಮಹಿಳಾ ಬಸ್ ಕಂಡಕ್ಟರ್ ಜೊತೆ ವಾಗ್ವಾದಕ್ಕಿಳಿದಿದ್ದರು. ಈ ವೇಳೆ ಬಸ್‌ನ ಕಂಡಕ್ಟರ್‌ ಕನಿಮೊಳಿ ಬಳಿ ಹಣ ಪಡೆದು ಟಿಕೆಟ್‌ ನೀಡಿದ್ದರು. ಈ ವಿವಾದದ ಬಳಿಕ ತಮಿಳುನಾಡಿನ ಮೊದಲ ಮಹಿಳಾ ಬಸ್‌ ಚಾಲಕಿ ಶರ್ಮಿಳಾ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಶರ್ಮಿಳಾ ಹಾಗೂ ಕಂಡಕ್ಟರ್‌ ನಡುವೆ ಆದ ವಾಗ್ವಾದ ಬಳಿಕ ಬೇಸತ್ತು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

Kamal Haasan Gifts Car

ಡಿಎಂಕೆ ಸಂಸದೆ ಕನಿಮೊಳಿ ಅವರು ಖಾಸಗಿ ಬಸ್‌ನ ಚಾಲಕಿ 23 ವರ್ಷದ ಶರ್ಮಿಳಾ ಕೌಶಲ್ಯ ಮತ್ತು ಧೈರ್ಯವನ್ನು ಶ್ಲಾಘಿಸಿದ್ದರು. ಚಾಲಕರೂ ಆಗಿರುವ ಶರ್ಮಿಳಾ ಅವರ ತಂದೆ ಮುಂದೆ ಸಂಸದರು ಶರ್ಮಿಳಾ ಅವರಿಗೆ ವಾಚ್ ಉಡುಗೊರೆ ನೀಡಿದ್ದರು. ಬಸ್‌ನಲ್ಲಿದ್ದಾಗ ಕನಿಮೊಳಿ ಅವರೊಂದಿಗೆ ಅಸಭ್ಯವಾಗಿ ಮಾತನಾಡಿರುವ ಟ್ರೈನಿ ಬಸ್ ಕಂಡಕ್ಟರ್ ಬಗ್ಗೆ ದೂರು ನೀಡಲು ಹೋದಾಗ ಬಸ್‌ನ ಮಾಲೀಕರು ತನ್ನನ್ನು ಕೆಲಸದಿಂದ ತೆಗೆದುಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಕಮಲ್ ಹಾಸನ್ ಅವರು ನೀಡಿದ ಮಾರುತಿ ಎರ್ಟಿಗಾ ಕಾರಿನ ಬಗ್ಗೆ ಹೇಳುವುದಾದರೆ, ಮಾರುತಿ ಸುಜುಕಿ ತನ್ನ ಜನಪ್ರಿಯ ಎಂಪಿವಿಯು ಎರ್ಟಿಗಾವನ್ನು ನಾಲ್ಕು ರೂಪಾಂತರಗಳಲ್ಲಿ ನೀಡುತ್ತದೆ. ಈ ಕಾರಿನ ಆರಂಭಿಕ ಬೆಲೆಯು ರೂ.8.64 ಲಕ್ಷವಾಗಿದೆ. ಹೊಸ ಎರ್ಟಿಗಾ ವೈಶಿಷ್ಟ್ಯವನ್ನು ಪ್ಯಾಕ್ ಮಾಡಲಾಗಿದೆ ಮತ್ತು ಏರ್-ಕೂಲ್ಡ್ ಕ್ಯಾನ್ ಹೋಲ್ಡರ್‌ಗಳು, ಯುಟಿಲಿಟಿ ಬಾಕ್ಸ್‌ನೊಂದಿಗೆ ಮುಂಭಾಗದ ಸಾಲಿನ ಆರ್ಮ್‌ರೆಸ್ಟ್, ಹಿಂಭಾಗದ ಪ್ರಯಾಣಿಕರಿಗೆ ರೂಫ್-ಮೌಂಟೆಡ್ ಎಸಿ ಮತ್ತು ಆಟೋ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ.

ಇನ್ನು ಈ ಕಾರಿನಲ್ಲಿ ವಾಯ್ಸ್ ಕಾಮೆಂಡ್ ಹೊಂದಿರುವ 7-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಸಹ ಕಾರು ಪಡೆಯುತ್ತದೆ. ಈ ಕಾರಿನಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ 102bhp ಮತ್ತು 137Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪವರ್‌ಟ್ರೇನ್ ಅನ್ನು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಇನ್ನು ಪ್ಯಾಡಲ್ ಶಿಫ್ಟರ್‌ಗಳೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಲ್ಲಿಯೂ ಲಭ್ಯವಿದೆ. ಈ ಮಾರುತಿ ಸುಜುಕಿ ಎರ್ಟಿಗಾ ಕಾರಿನಲ್ಲಿ ಫ್ಯಾಕ್ಟರಿಯಲ್ಲಿ ಅಳವಡಿಸಲಾಗಿರುವ CNG ಕಿಟ್ ಅನ್ನು ಸಹ ನೀಡಲಾಗುತ್ತದೆ. ಈ ರೂಪಾಂತರದಲ್ಲಿ, 1.5-ಲೀಟರ್ ಎಂಜಿನ್ 87 bhp ಪವರ್ ಮತ್ತು 122Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೂಂದಿದೆ.

Article Published On: Tuesday, June 27, 2023, 11:51 [IST]
English summary
Kamal haasan gifts car to coimbatores first woman bus driver details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+