ಸ್ವಿಚ್ ದೆಹಲಿ ಅಭಿಯಾನಕ್ಕಾಗಿ ಕೇಜ್ರಿವಾಲ್'ಗೆ ಅಭಿನಂದನೆ ಸಲ್ಲಿಸಿದ ಕಮಲ್ ಹಾಸನ್

ಭಾರತದಲ್ಲಿ ವಾಯು ಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರವು 2021ರ ಬಜೆಟ್‌ನಲ್ಲಿ ಹಳೆಯ ವಾಹನಗಳಿಗಾಗಿ ಸ್ಕ್ರಾಪೇಜ್ ನೀತಿಯನ್ನು ಘೋಷಿಸಿದೆ.

ಸ್ವಿಚ್ ದೆಹಲಿ ಅಭಿಯಾನಕ್ಕಾಗಿ ಕೇಜ್ರಿವಾಲ್'ಗೆ ಅಭಿನಂದನೆ ಸಲ್ಲಿಸಿದ ಕಮಲ್ ಹಾಸನ್

ಈ ನೀತಿಯನ್ವಯ 15 ವರ್ಷ ಹಳೆಯ ಕಮರ್ಷಿಯಲ್ ಹಾಗೂ 20 ವರ್ಷ ಹಳೆಯ ಖಾಸಗಿ ವಾಹನಗಳನ್ನು ರಸ್ತೆಗಿಳಿಸುವಂತಿಲ್ಲ. ಇದರ ಜೊತೆಗೆ ಪೆಟ್ರೋಲ್, ಡೀಸೆಲ್ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಮಾತ್ರವಲ್ಲದೇ ರಾಜ್ಯ ಸರ್ಕಾರಗಳೂ ಸಹ ಈ ಕಾರ್ಯದಲ್ಲಿ ನಿರತವಾಗಿವೆ.

ಸ್ವಿಚ್ ದೆಹಲಿ ಅಭಿಯಾನಕ್ಕಾಗಿ ಕೇಜ್ರಿವಾಲ್'ಗೆ ಅಭಿನಂದನೆ ಸಲ್ಲಿಸಿದ ಕಮಲ್ ಹಾಸನ್

ಈ ನಿಟ್ಟಿನಲ್ಲಿ ದೆಹಲಿ ಸರ್ಕಾರವು ಉಳಿದ ರಾಜ್ಯಗಳಿಗಿಂತ ಒಂದು ಹೆಜ್ಜೆ ಮುಂದಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ವಿಚ್ ದೆಹಲಿ ಎಂಬ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸ್ವಿಚ್ ದೆಹಲಿ ಅಭಿಯಾನಕ್ಕಾಗಿ ಕೇಜ್ರಿವಾಲ್'ಗೆ ಅಭಿನಂದನೆ ಸಲ್ಲಿಸಿದ ಕಮಲ್ ಹಾಸನ್

ಈ ಅಭಿಯಾನದಲ್ಲಿ ಹೊಸ ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ವಿವಿಧ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತದೆ. ಇದರಿಂದ ಹೆಚ್ಚಿನ ಸಂಖ್ಯೆಯ ಜನರನ್ನು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಆಕರ್ಷಿಸಲು ಸಹಾಯವಾಗಲಿದೆ.

ಸ್ವಿಚ್ ದೆಹಲಿ ಅಭಿಯಾನಕ್ಕಾಗಿ ಕೇಜ್ರಿವಾಲ್'ಗೆ ಅಭಿನಂದನೆ ಸಲ್ಲಿಸಿದ ಕಮಲ್ ಹಾಸನ್

ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವು ಸಾರ್ವಜನಿಕ ಸಾರಿಗೆ ವಾಹನಗಳನ್ನು ಸಹ ಎಲೆಕ್ಟ್ರಿಕ್ ವಾಹನಗಳಾಗಿ ಬದಲಿಸಲು ಪ್ರಯತ್ನಿಸುತ್ತಿದೆ.ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳೊಂದಿಗೆ ಬದಲಿಸುವ ಪ್ರಯತ್ನವನ್ನು ದೆಹಲಿ ಸರ್ಕಾರವು ತೀವ್ರಗೊಳಿಸಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸ್ವಿಚ್ ದೆಹಲಿ ಅಭಿಯಾನಕ್ಕಾಗಿ ಕೇಜ್ರಿವಾಲ್'ಗೆ ಅಭಿನಂದನೆ ಸಲ್ಲಿಸಿದ ಕಮಲ್ ಹಾಸನ್

ದೆಹಲಿ ಸರ್ಕಾರವು ಆರು ತಿಂಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಘೋಷಿಸಿದೆ. ಈ ಕಾರ್ಯಕ್ಕಾಗಿ ಖ್ಯಾತ ನಟ ಹಾಗೂ ಪೀಪಲ್ಸ್ ಜಸ್ಟೀಸ್ ಸೆಂಟರ್ ಪಕ್ಷದ ಮುಖಂಡ ಕಮಲ್ ಹಾಸನ್ ಅರವಿಂದ್ ಕೇಜ್ರಿವಾಲ್ ರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸ್ವಿಚ್ ದೆಹಲಿ ಅಭಿಯಾನಕ್ಕಾಗಿ ಕೇಜ್ರಿವಾಲ್'ಗೆ ಅಭಿನಂದನೆ ಸಲ್ಲಿಸಿದ ಕಮಲ್ ಹಾಸನ್

ನನ್ನ ಸ್ನೇಹಿತ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 6 ತಿಂಗಳೊಳಗೆ ಸರ್ಕಾರಿ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಸಹಾಯಧನವನ್ನು ಘೋಷಿಸಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸ್ವಿಚ್ ದೆಹಲಿ ಅಭಿಯಾನಕ್ಕಾಗಿ ಕೇಜ್ರಿವಾಲ್'ಗೆ ಅಭಿನಂದನೆ ಸಲ್ಲಿಸಿದ ಕಮಲ್ ಹಾಸನ್

ಅವರು ಯೋಜನೆಯನ್ನು ಘೋಷಿಸಿ ಅದನ್ನು ಕಾರ್ಯಗತಗೊಳಿಸಲು ಸಿದ್ಧತೆಗಳನ್ನು ನಡೆಸಿದ್ದಾರೆ. ಇದಕ್ಕಾಗಿ ಅರವಿಂದ್ ಕೇಜ್ರಿವಾಲ್ ಅವರಿಗೆ ಅಭಿನಂದನೆಗಳು ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಸ್ವಿಚ್ ದೆಹಲಿ ಅಭಿಯಾನಕ್ಕಾಗಿ ಕೇಜ್ರಿವಾಲ್'ಗೆ ಅಭಿನಂದನೆ ಸಲ್ಲಿಸಿದ ಕಮಲ್ ಹಾಸನ್

ಕಮಲ್ ಹಾಸನ್ ಅವರ ಈ ಟ್ವೀಟ್ ಅವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ವೈರಲ್ ಆಗಿದೆ. ಹಲವರು ಕಮಲ್ ಹಾಸನ್ ರವರ ದೃಷ್ಟಿಕೋನಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಮಂಡಿಸಿದ್ದಾರೆ. ರೈತರ ಹೋರಾಟಕ್ಕಾಗಿ ತಮ್ಮ ಯೋಜನೆಗಳೇನು ಎಂದು ಹಲವಾರು ಜನರು ಪ್ರಶ್ನಿಸಿದ್ದಾರೆ.

Most Read Articles

Kannada
English summary
Kamal Hasan greets Arvind Kejriwal for starting switch Delhi campaign. Read in Kannada.
Story first published: Saturday, February 6, 2021, 17:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X