ಕರೋನಾ ಸೋಂಕಿತರಿಗೆ ನೆರವಾಗಲು ಆಂಬ್ಯುಲೆನ್ಸ್ ಚಾಲಕನಾದ ಸ್ಯಾಂಡಲ್ ವುಡ್ ನಟ

ಕರೋನಾ ವೈರಸ್ ಎರಡನೇ ಅಲೆಯಿಂದ ಭಾರತದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಈ ಸಮಯದಲ್ಲಿ ಹಲವು ಸೆಲೆಬ್ರಿಟಿಗಳು ಜನರ ನೆರವಿಗೆ ಧಾವಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಅಗತ್ಯವಿರುವವರಿಗೆ ಆಕ್ಸಿಜನ್, ಔಷಧಿಗಳನ್ನು ವಿತರಿಸುತ್ತಿದ್ದಾರೆ.

ಕರೋನಾ ಸೋಂಕಿತರಿಗೆ ನೆರವಾಗಲು ಆಂಬ್ಯುಲೆನ್ಸ್ ಚಾಲಕನಾದ ಸ್ಯಾಂಡಲ್ ವುಡ್ ನಟ

ಹಲವು ನಟರು ಲಕ್ಷಾಂತರ ರೂಪಾಯಿ ದೇಣಿಗೆ ನೀಡುತ್ತಿದ್ದಾರೆ. ಕರೋನಾ ಸೋಂಕಿತರಿಗೆ ನೆರವಾಗುವ ಸಲುವಾಗಿ ಸ್ಯಾಂಡಲ್ ವುಡ್ ನಟ ಅರ್ಜುನ್ ಗೌಡ ಆಂಬ್ಯುಲೆನ್ಸ್ ಚಾಲಕರಾಗಿದ್ದಾರೆ. ನಟ ಅರ್ಜುನ್ ಗೌಡ ಕರೋನಾ ಸೋಂಕಿತರನ್ನು ಆಸ್ಪತ್ರೆಗಳಿಗೆ ಕರೆದೊಯ್ಯುವುದು.

ಕರೋನಾ ಸೋಂಕಿತರಿಗೆ ನೆರವಾಗಲು ಆಂಬ್ಯುಲೆನ್ಸ್ ಚಾಲಕನಾದ ಸ್ಯಾಂಡಲ್ ವುಡ್ ನಟ

ಮೃತಪಟ್ಟವರ ಅಂತ್ಯಕ್ರಿಯೆಗೆ ನೆರವಾಗುವುದು ಸೇರಿದಂತೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಅರ್ಜುನ್ ಗೌಡರವರು, ನಾನು ಈಗ ಆಂಬ್ಯುಲೆನ್ಸ್ ಡ್ರೈವರ್ ಆಗಿದ್ದೇನೆ.

MOSTREAD: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಕರೋನಾ ಸೋಂಕಿತರಿಗೆ ನೆರವಾಗಲು ಆಂಬ್ಯುಲೆನ್ಸ್ ಚಾಲಕನಾದ ಸ್ಯಾಂಡಲ್ ವುಡ್ ನಟ

ಇದುವರೆಗೂ ಹಲವಾರು ಜನರಿಗೆ ಸಹಾಯ ಮಾಡಿದ್ದೇನೆ. ಅವರು ಎಲ್ಲಿಂದ ಬರುತ್ತಿದ್ದಾರೆ, ಯಾವ ಧರ್ಮವನ್ನು ಅನುಸರಿಸುತ್ತಿದ್ದಾರೆ ಎಂಬುದನ್ನು ನೋಡದೇ ನೆರವು ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಕರೋನಾ ಸೋಂಕಿತರಿಗೆ ನೆರವಾಗಲು ಆಂಬ್ಯುಲೆನ್ಸ್ ಚಾಲಕನಾದ ಸ್ಯಾಂಡಲ್ ವುಡ್ ನಟ

ಸದ್ಯದ ಪರಿಸ್ಥಿತಿ ತುಂಬಾ ಹದಗೆಟ್ಟಿರುವುದರಿಂದ ಮುಂದಿನ ಕೆಲವು ತಿಂಗಳು ಈ ರೀತಿ ನೆರವಾಗಲು ಅರ್ಜುನ್ ಗೌಡ ನಿರ್ಧರಿಸಿದ್ದಾರೆ. ಕರೋನಾ ವೈರಸ್ ಸೋಂಕಿತರಿಗೆ ಸಾಧ್ಯವಿರುವ ಎಲ್ಲಾ ರೀತಿಯ ನೆರವನ್ನು ನೀಡಬೇಕೆನ್ನುವುದು ಅವರ ಬಯಕೆ.

MOSTREAD: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಕರೋನಾ ಸೋಂಕಿತರಿಗೆ ನೆರವಾಗಲು ಆಂಬ್ಯುಲೆನ್ಸ್ ಚಾಲಕನಾದ ಸ್ಯಾಂಡಲ್ ವುಡ್ ನಟ

ನೆರವು ನೀಡಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಹಾಗೂ ತರಬೇತಿಯನ್ನು ತೆಗೆದುಕೊಂಡಿದ್ದೇನೆ ಎಂದು ನಟ ಅರ್ಜುನ್ ಗೌಡ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ.

ಕರೋನಾ ಸೋಂಕಿತರಿಗೆ ನೆರವಾಗಲು ಆಂಬ್ಯುಲೆನ್ಸ್ ಚಾಲಕನಾದ ಸ್ಯಾಂಡಲ್ ವುಡ್ ನಟ

ಅಭಿಮಾನಿಗಳು ನಟ ಅರ್ಜುನ್ ಗೌಡರವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ನಟ ಅರ್ಜುನ್ ಗೌಡ ಆಂಬ್ಯುಲೆನ್ಸ್ ಮುಂದೆ ನಿಂತು ಫೋಟೋ ತೆಗೆಸಿ ಕೊಂಡಿದ್ದಾರೆ.

MOSTREAD: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಕರೋನಾ ಸೋಂಕಿತರಿಗೆ ನೆರವಾಗಲು ಆಂಬ್ಯುಲೆನ್ಸ್ ಚಾಲಕನಾದ ಸ್ಯಾಂಡಲ್ ವುಡ್ ನಟ

ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕರೋನಾ ವೈರಸ್ ಸಾಂಕ್ರಾಮಿಕ ರೋಗವು ದಿನೇ ದಿನೇ ಹೆಚ್ಚಾಗುತ್ತಿದ್ದು ಆಂಬ್ಯುಲೆನ್ಸ್‌ಗಳ ಕೊರತೆ ಎದುರಾಗಿದೆ. ಜೊತೆಗೆ ಹಲವು ಆಂಬ್ಯುಲೆನ್ಸ್ ಚಾಲಕರು ಕರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ.

ಕರೋನಾ ಸೋಂಕಿತರಿಗೆ ನೆರವಾಗಲು ಆಂಬ್ಯುಲೆನ್ಸ್ ಚಾಲಕನಾದ ಸ್ಯಾಂಡಲ್ ವುಡ್ ನಟ

ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಲವಾರು ಆಂಬ್ಯುಲೆನ್ಸ್ ಚಾಲಕರು ಕೋವಿಡ್ 19 ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಆಂಬ್ಯುಲೆನ್ಸ್ ಚಾಲಕನಾಗಿ ಕರೋನಾ ಸೋಂಕಿತರ ನೆರವಿಗೆ ಧಾವಿಸಿರುವ ನಟ ಅರ್ಜುನ್ ಗೌಡರವರ ಕಾರ್ಯ ನಿಜಕ್ಕೂ ಶ್ಲಾಘನೀಯ.

Most Read Articles

Kannada
English summary
Kannada actor Arjun Gowda turned as ambulance driver. Read in Kannada.
Story first published: Friday, April 30, 2021, 19:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X